1. ಬಂಧನದಿಂದ ಬಿಡುಗಡೆ ಹೊಂದುವುದೇ ಮುಕ್ತಿ ಸ್ವರ್ಗತಿಯು ಶಾಶ್ವತ ಮುಕ್ತಿಗಿಂತ ಬೇರೆಯಾಗಿದ್ದು ಅದು ಪುನರ್ಜನ್ಮದ ಗತಿಯ ಕೊನೆಯಲ್ಲ. ಮೋಕ್ಷವು ಈ ಚಕ್ರಗತಿಯಲ್ಲಿ ತಾತ್ಪೂರ್ತಿಕ ವಿರಾಮ ಮಾತ್ರ. ಅದು ಜನನ ಮರಣ ಕ್ರಿಯೆಯನ್ನು ತಾತ್ಪೂರ್ತಕ ಕೆಲ ಕಾಲದವರೆಗೆ ಸ್ಥಗಿತಗೊಳಿಸುವುದು. ಅನಂತರ ಮತ್ತೆ ನಾವು ಭೌತಿಕ ಶರೀರವನ್ನು ಧರಿಸಲೇ ಬೇಕಾಗುವುದು. ನಾವು ಮುಕ್ತಿಯನ್ನು ಪಡೆದಾಗಲೇ ಅನಾದಿಯಾದ ಜನನ-ಮರಣದ ಚಕ್ರವು ಕೊನೆಗೊಳ್ಳುವುದು. ಆಗಲೇ ನಮ್ಮ ಎಲ್ಲ ದುಖ:ಗಳಿಗೂ ಕೊನೆ . ಮುಕ್ತಿಯ ಆಚೆ ಕ್ರಮಿಸಬೇಕಾದ ಮಾರ್ಗವು ಬಹಳವಾಗಿದ್ದರೂ ಮುಕ್ತಿಗಿಂತ ಕಡಿಮೆಯಾದ ಯಾವುದನ್ನೂ ಜೀವನದ ಗುರಿಯನ್ನಾಗಿಟ್ಟುಕೊಳ್ಳ ಕೊಡದು. ಆಧ್ಯಾತ್ಮದ ಸೋಪಾನದಲ್ಲಿ ತೀರ ಕೆಳಗಿನ ಮೆಟ್ಟಿಲಾದ ಮುಕ್ತಿಯನ್ನು ತಮ್ಮ ಜೀವನದ ಕೊನೆಯ ಗುರಿಯನ್ನಾಗಿಟ್ಟುಕೊಂಡ ಜನರು ಕೊಡ ತೀರ ವಿರಳ. ಈ ಮಟ್ಟಕ್ಕಿಂತ ನಾವು ಸ್ವಲ್ಪಾದರೂ ಕೆಳಗಿಳಿದರೆ ಸಮಸ್ಸೆಯು ಪೂರ್ತಿಯಾಗಿ ಬಿಡಿಸಲ್ಪಡದೇ ಹಾಗೆಯೇ ಉಳಿಯುತ್ತದೆ.
  2. ನಾನು ಮುಕ್ತಿಯನ್ನು  ಕುರಿತು ಹೇಳಿದರೆ , ಜನರು ಅದನ್ನು ಬಹು ದೂರದ ವಸ್ತುವೆಂದೂ ಅನೇಕ ಜನ್ಮಗಳಲ್ಲಿಯ ಸತತ ಪ್ರಯತ್ನದಿಂದ ದೊರಕಿಸಲು ಸಾಧ್ಯವೆಂದೂ ತಿಳಿಯುವರು. ಈ ಚಿತ್ರದಲ್ಲಿ ಮುಕ್ತಿಯು ಎರಡನೆಯ ಮತ್ತು ಮೂರನೆಯ ವೃತ್ತಗಳ ನಡುವಿದೆ. ಮುಕ್ತಿಯನ್ನು ಪಡೆಯಲು ನಾವು ಯಾವ ಯಾವ ವಿವಿಧ ಸ್ಥಿತಿಗಳನ್ನು ದಾಟಿಹೋಗಬೇಕಾಗುವುದೋ ಅವೆಲ್ಲವೂ ಸುಮಾರು ಒಂದೂವರೆ ವೃತ್ತದಲ್ಲಿಯೆ ಬಂದುಬಿಡುವುವು. ಸಾಮಾನ್ಯವಾಗಿ ನಿಜವಾಗಿಯೂ ಕಠಿಣವೆಂದು ಬಗೆಯಲಾದ ಮುಕ್ತಿಯ ಸ್ಥಾನವನ್ನು ಸೇರಿದ ಅನಂತರವೂ ಏನು ಪಡೆವುದುಳಿಯುತ್ತದೆಂಬ ಬಗ್ಗೆ ಓದುಗರು ಸಾಮಾನ್ಯ ಕಲ್ಪನೆಯೊಂದನ್ನು ಮಾಡಿಕೊಳ್ಳಲು ಇದರಿಂದ ಸಾಹಾಯವಾಗುವುದು.RD 14-15 goal of life
  3. ನಾವು ಎಲ್ಲಿಯವರೆಗೆ ಯಾವುದಾದರೊಂದು  ಬಲೆಯಲ್ಲಿ ಸಿಕ್ಕಿಬೆದ್ದಿರುವೆವೋ ಅಲ್ಲಿಯವರೆಗೆ ಶಾಶ್ವತ ಬಂಧನದಿಂದ ಬಿಡುಗಡೆಹೊಂದವುದು ಸಾಧ್ಯವಿಲ್ಲ.RD – 15 goal of life
  4. ಮನುಷ್ಯನ ಪ್ರತಿಯೊಂದು ಕಾರ್ಯವೂ ಕಾರಣ ಶರೀರದೊಂದಿಗೆ ಸಂಪರ್ಕವನ್ನಿಟ್ಟುಕೊಂಡಿರುವ ಮಿದುಳಿನ ಮೇಲೆ ಮುದ್ರೆಯನ್ನೊತ್ತುತ್ತದೆ. ಆತ್ಮವು ಒಂದು ಶರೀರದಿಂದ ನ್ನೊಂದು ಶರೀರಕ್ಕೆ ವಲಸೆ ಹೋಗುವಾಗ ಈ ಸಾಮಗ್ರಿಯೂ ಅದರೊಡನೆ ಹೋಗುತ್ತದೆ. ಮನುಷ್ಯನು ಒಂದು ವೇಳೆ ಈ ಜನ್ಮದಲ್ಲಿ ಯಾವ ಸತ್ಕಾರ್ಯವನ್ನು ಮಾಡಿರದಿದ್ದರೆ, ಪೂರ್ವ ಜನ್ಮದ ಸಂಸ್ಕಾರಗಳು ಅನುಕೂಲ ವಾತಾವರಣವನ್ನು ಪಡೆದು ಭೋಗಕ್ಕೆ ಕಾರಣವಾಗುತ್ತದೆ. ಆಗ ಶೀಘ್ರವಾಗಿಯೆ ಈ ಜನ್ಮದ ಕೆಲವು ಕರ್ಮಗಳ ಸತ್ಫಲ ಮತ್ತು ದುಷ್ಫಲಗಳು ಕೈಗೂಡುತ್ತವೆ. ಇನ್ನುಳಿದ ಸಂಸ್ಕಾರಗಳು ಭವಿಷ್ಯತ್ತಿನ ಭೋಗಕ್ಕಾಗಿ ಮುಂದುವರೆಯುವವು. ಈ ಕ್ರಮವು ಮಹಾಪ್ರಳಯದವರೆಗೂ ಸಾಗುವುದು. ಭೋಗದ ಸರಪಳಿ ಕೊನೆಗೂಳ್ಳುವವರೆಗೆ ಒಂದರ ಬೆನ್ನ ಹಿಂದೆ ಇನ್ನೊಂದು ಭೋಗವು ಬರುತ್ತಲೇ ಹೋಗುವುದು. AB II VOL II P 16
  5. ಪೂರ್ವ ಜನ್ಮದ ಸಂಸ್ಕಾಗಳು ಅನುಕೂಲ ವಾತಾವರಣವನ್ನು ಪಡೆದು ಭೋಗಕ್ಕೆ ಕಾರಣವಾಗುತ್ತವೆ. ನಿಸರ್ಗವು ಲೆಕ್ಕದ ಪುಸ್ತಕವನ್ನಿಡುವುದಿಲ್ಲ. ಮನುಷ್ಯನು ತನ್ನ ಅದೃಷ್ಟವನ್ನೂ ಭೋಗವನ್ನೂ ತಾನೇ ನಿರ್ಮಿಸುವನು. ಬಡ್ಡಿ , ಚಕ್ರಬಡ್ಡಿಗಳ ಪ್ರಶ್ನೆಯೆ ಇಲ್ಲ. ಪ್ರತಿಯೊದೂ ಉಷ್ಣತೆಯಿಂದ ಪೋಷಣೆ ಪಡೆಯುವುದು. ನಿಜವಾದ ಪ್ರೇಮದ ಉಷ್ಣತೆಯೊಂದಿಗೆ ಪೂರ್ವಾರ್ಜಿತ ಸಂಸ್ಕಾರಗಳು ಎಷ್ಟು ಹೆಚ್ಚು ಸಂಪರ್ಕ ಹೊಂದುವುವೋ ಅಷ್ಟೇ ತೀವ್ರ ಅವು ಭೋಗದ ರೂಪ ತಾಳುವವು. ಮತ್ತು ಅಭ್ಯಾಸಿಯಲ್ಲಿ ಭೋಗವನ್ನುಭೋಗಿಸಲು ಶಕ್ತಿಯು ಹೆಚ್ಚು ಇದ್ದಷ್ಟೂ ಸಂಸ್ಕಾರಗಳು ಕಡಮೆ ಪ್ರಮಾಣದಲ್ಲಿ ಮುಂದುವರಿಯುವವು. ನಮ್ಮ ಸಂಸ್ಥೆಯಲ್ಲಿ ಅಭ್ಯಾಸಿಯಲ್ಲಿ ನಿಜವಾದ ಪ್ರೇಮವಿದ್ದರೆ ವರ್ತಮಾನ ಸಂಸ್ಕಾರಗಳ ನಿರ್ಮಾಣವು ನಿಂಗತು ಹೋಗುವುದು. ಪುರಾಕೃತ ಕರ್ಮಫಲಗಳನ್ನಷ್ಟೇ ಬೋಗಿಸುವುದುಳಿಯುವುದು.AB II VOL II P 17
  6. ನೋವು- ದು:ಖಗಳಿಂದ ಪಾರಾಗುವುದಷ್ಟೇ ನಮ್ಮ ಮುಂದಿರುವ ಸಮಸ್ಸೆಯಾಗಿರದೆ ಅವುಗಳ ಅಂತಿಮ ಕಾರಣವಾಗಿರುವ ಬಂಧನದಿಂದ ಬಿಡುಗಡೆ ಹೋಂದುವುದೇ ಮುಕ್ತಿ.RD 14 goal of life
  7. ಮುಕ್ತಿಯ  ಅವಸ್ಥೆಯಲ್ಲಿ ಮನುಷ್ಯನು ಎಲ್ಲ ಪಂಚಕೋಶಗಳಿಂದಲೂ ಮುಕ್ತನಾಗುತ್ತಾನೆ. ಇಲ್ಲದಿದ್ದರೆ ತನ್ನ ಮೂಲಸ್ವರೂಪವನ್ನು ಕಾಣಲಾಗುವುದಿಲ್ಲ. ಈ ಎಲ್ಲ ಕೋಶಗಳಿಂದಲೂ ಪೂರ್ಣ ಮುಕ್ತನಾಗುವುದು ಸಾಕ್ಷಾತ್ಕಾರದ  ಅಗತ್ಯ ಲಕ್ಷಣವಾಗಿದ್ದು ಅದು ಮನುಷ್ಯನ ಜೀವಿತ ಕಾಲದಲ್ಲಿಯೆ ಸಾಧ್ಯವಿದೆ.VR I -248
  8. ಮೋಕ್ಷವು ಈ ಚಕ್ರಗತಿಯಲ್ಲಿ ತಾತ್ಪೂರ್ತಿಕ ವಿರಾಮ ಮಾತ್ರ. ಅದು ಜನನ ಮರಣ ಕ್ರಿಯೆಯನ್ನು ತಾತ್ಪೂರ್ತಕ ಕೆಲ ಕಾಲದವರೆಗೆ ಸ್ಥಗಿತಗೊಳಿಸುವುದು. ಅನಂತರ ಮತ್ತೆ ನಾವು ಭೌತಿಕ ಶರೀರವನ್ನು ಧರಿಸಲೇ ಬೇಕಾಗುವುದು.RD 14 goal of life