1. ಈ ರೀತಿ ಅವರ ಪ್ರತಿನಿಧಿಯೆಂಬ ಕಾರಣದಿಂದ ನನಗೆ ಪ್ರಕಟವಾದ ಅವರ ಇಚ್ಛೆಗನುಸಾರವಾಗಿ ಕಾಲದ ಅವಶ್ಯಕತೆಗಳನ್ನು ಪೂರೈಸಲು ‘ಸಹಜಮಾರ್ಗ’ವೆಂಬ ಹೆಸರಿನಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಸಮರ್ಥಗುರುಗಳು ಹೊಸದಾಗಿ ಸ್ಥಾಪಿಸಿದ ಸಹಜಮಾರ್ಗ ಪದ್ಧತಿಯ ಮೂಲಕ ಅವರ ವಿಚಾರಧಾರೆಯನ್ನು ಪ್ರಸಾರಮಾಡುವುದು ಹಾಗೂ ನಿದ್ರಿಸುತ್ತಿರುವ ಮಾನವತೆಯನ್ನು ದೈವಿಪ್ರಜ್ಞೆಯ ಬಗೆಗೆ ಎಚ್ಚರಗೊಳ್ಳುವಂತೆ ಮಾಡಿ ಅವರನ್ನು ಪ್ರಗತಿಪಥದ ಮೇಲೆ ಮುನ್ನಡೆಸುವುದೇ ಈ ಸಂಸ್ಥೆಯ ದ್ಯೇಯವಾಗಿದೆ. ಇದಕ್ಕಾಗಿ ಇಂದಿನ ಜೀವನದ ಪರಿಸರಕ್ಕೆ ಎಷ್ಟೂ ಹೊಂದಿಕೊಳ್ಳದ ಬಲವಂತದ ತಪಸ್ಸು ಹಾಗೂ ಕಠೋರತೆಗಳನ್ನೊಳಗೊಂಡ ಹಳೆಯ ಯಾಂತ್ರಿಕ ಪದ್ಧತಿಗಳನ್ನು ಬದಿಗಿರಿಸಿ , ಅವುಗಳ ಬದಲಾಗಿ ದೈಹಿಕ ಹಾಗೂ ಮಾನಸಿಕ ಅಸಾಮರ್ಥದಿಂದಾಗಿ ಅಲ್ಪಕ್ಷಮನೂ ಅಲ್ಪಾಯುಷಿಯೂ ಆದ ಮಾನವನಿಗೆ ಸರಿಹೊಗುವಂತಹ ಸುಲಭ ಹಾಗೂ ಸರಳ ಸಾದನಗಳನ್ನು ಬಳಸುವುದು ಅವಶ್ಯಕ. ಇದೂ ಅಲ್ಲದೆ, ನಿರಂತರ ಹೆಚ್ಚುತ್ತಲೇ ಇರುವ ವರ್ತಮಾನ ಜೀವನದ ಚಟುವಟಿಕೆಗಳೂ ಪುರಾತನ ಪದ್ಧತಿಯಲ್ಲಿ ವಿದೀಸಿದ ಕ್ಲೇಶಕರ ಸಾಧನಗಳೆ ಇಗೆ ಸಾಕಷ್ಟು ವೇಳೆಯನ್ನು ಒದಗಿಸಲಾರವು.
    ಮಾನವನ ಇಂದಿನ ಅವನತಿಯ ಕಾರಣದಿಂದ , ಅನೇಕ ದೃಷ್ಟಿಯಿಂದ ಅಪಾತ್ರರಾಗಿದ್ದರೂ, ಸಾಕ್ಷಾತ್ಕಾರದ ಬಗೆಗೆ ಹೊಂದಿರುವ ಆಂತರಿಕ ಉತ್ಕಂಠೆಯಿಂದ ಪ್ರೇರಿತರಾಗಿ ಸಾಧನೆಯನ್ನು ಕೈಕೊಳ್ಳುವುದರ ಬಲವುಳ್ಳವರಿಗೆ ಸಂದರ್ಭವೊದಗಿಸಲು ಈ ನಿಯಮವನ್ನು ತಿದ್ದುಪಡಿ ಮಾಡುವ ಅವಶ್ಯಕತೆಯಿದೆ. ಅಂತಹ ಪರಿಸ್ಥಿತಿಯಲ್ಲಿ ಪ್ರಶಿಕ್ಷಕನು ತನ್ನ ಸಂಕಲ್ಪ ಶಕ್ತಿಯಿಂದ ಅಭ್ಯಾಸಿಗೆ ಅಗತ್ಯವಾದ ಯೊಗ್ಯತೆಯನ್ನು ಆತನಲ್ಲಿ ಬೆಳೆಸಿ ಆತನ ಸಮಂಜಸ ರೂಪಣದ ಕಾರ್ಯವನ್ನು ಸಹ ಕೈಗೆತ್ತಿಕೊಳ್ಳುತ್ತಾನೆ.VR II 17-18
  2. ‘ಪ್ರಜ್ಞೆಯು ಜೀವನದ ಮೂಲ ಆಧಾರ’ ಎಂಬುದನ್ನುಇದು ತೋರಿಸಿಕೊಡುವುದು. VR II 227
  3. ಸರಳವಾದ ವಸ್ತುವನ್ನು ಪಡೆಯಲು ಸರಳ ದಾರಿಯನ್ನು ಅನುಸರಿಸಬೇಕು. ಸಿಧ್ಧಾಂತಗಳು ನಿಮಗೆ ಉಪಯುಕ್ತವಾಗಲಾರವು. ಮೂಲದವರೆಗೂ ಸಂಪೂರ್ಣ ದಾರಿಯನ್ನು ಕ್ರಮಿಸಿದ ಮಾರ್ಗದರ್ಶಿಯ ನೇತೃತ್ವದಲ್ಲಿ ಕೈಗೊಳ್ಳುವ ಪ್ರಾಯೋಗಿಕ ಸಾಧನವೇ ನಿಮ್ಮ ಅದೃಷ್ಟವನ್ನು ರೂಪಿಸುವುದು.VR II 21
  4. ಇದು ಆಂತರಿಕ ಸತ್ತೆಯು ತನ್ನ ನೈಜ ಸ್ವಭಾವಕ್ಕೆ ಕೇವಲ ರೂಪಾಂತರಗೂಳ್ಳವುದಾಗಿದೆ. ಆದುದರಿಂದ ಸಹಜಮಾರ್ಗವು ಅಸಂಗತ ಅತಿರೇಕಗಳನ್ನು ನಿರ್ಲಕ್ಷಿಸಿ ಇದನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತದೆ. ಈ ಪದ್ಧತಿಯಲ್ಲಿ ಬೋಧಿಸಲಾಗುವ ಆಚರಣೆಗಳು ಧ್ಯಾನಕ್ಕಾಗಿ ಕಣ್ಣುಮುಚ್ಚುವುದರೊಡನೆ ಸಂಬಂಧಪಟ್ಟ ಕೇವಲ ಔಪಚಾರಿಕ ಹಾಗೂ ಯಾಂತ್ರಿಕ ಆಚರಣೆಗಳಲ್ಲ ಅವುಗಳಿಗೊಂದು ನಿರ್ದಿಷ್ಟ ಗುರಿ, ಪ್ರಯೋಜನ ಹಾಗೂ ಅರ್ಥವಿದೆ. ಅದಕ್ಕೆ ಎರಡು ಮುಖಗಳಿವೆ. ಒಂದನೆಯದು ಅಭ್ಯಾಸ .ಎರಡನೇಯದು ಅಭ್ಯಾಸಿಯ ದಾರಿಯಲ್ಲಿರುವ ತೊಡಕು ತೊಂದರೆಗಳನ್ನು ತೆಗೆದುಹಾಕಿ ಆತನಪ್ರಗತಿಯನ್ನು ತ್ವರಿತಗೊಳಿಸುವ ಗುರುಗಳ ಯೌಗಿಕಪ್ರಾಣಾಹುತಿಯ ಆಸರೆ. VR II 24
  5. ಯಾವುದಾದರೊಂದು ಮಾರ್ಗವನ್ನು ,ಅದು ಕೇವಲ ಹಳೆಯದೆಂಬ ಕಾರಣದಿಂದ ಅನುಸರಿಸಬೇಡಿರಿ, ಏಕೆಂದರೆ ಆ ಹಳೆಯ ಮಾರ್ಗವು ಪ್ರಪಂಚದ ಹಾಗೂ ಸಮಾಜದ ಬದಲಾಯಿಸಿದ ಪರಿಸ್ಥಿತಿಗಳಿಗೆ ಸರಿಹೊಂದದೆ ಇರಬಹುದು. ಬಹು ಸಂಖ್ಯಾತ ಜನರು ಅನುಸರಿಸುವರೆಂಬ ಕಾರಣದಿಂದಲೂ ಯಾವುದಾದರೊಂದು ದಾರಿಯನ್ನು ಹಿಡಿಯಬೇಡಿರಿ, ಏಕೆಂದರೆ ಬಹುಸಂಖ್ಯಾತರು ಯಾವಾಗಲೂ ಸರಿಯಾದ ದಾರಿಯಲ್ಲಿರುವರೆಂಬ ನಿಯಮವಿಲ್ಲ. ಪ್ರಾಯ: ಅವರುಸ್ವತ: ತಪ್ಪುಮಾರ್ಗದರ್ಶನಕ್ಕೊಳಗಾದಕೆಲಜನರನ್ನುಅನುಸರಿಸುತ್ತಿರಬಹುದು. RD 67
  6. ಜಗತ್ತಿನಲ್ಲಿಯ ನಮ್ಮ ಕ್ರಿಯೆಗಳು ದೈವೀ ವಲಯದ ಪರಿಸರದ ಮೇಲೆ ಯಾವ ಪರಿಣಾಮವನ್ನುಂಟು ಮಾಡುವವೆಂಬುದನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ ಹೃದಯದ ಭಾವನೆಗಳಿಂದ ಒಡಗೂಡಿದ ಕ್ರಿಯೆಗಳು ವಿಶ್ವದಲ್ಲಿ ತಮ್ಮ ಮುದ್ರೆಯನ್ನು ಒತ್ತುತ್ತವೆ ಹಾಗೂ ಅವು ಮಾನವನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಬ್ರಹ್ಮಾಂಡದ ಶಕ್ತಿಯುತ ಕ್ರಿಯೆಯಿಂದ ಹೆಚ್ಚು ಹೆಚ್ಚು ಪ್ರಭಾವಶಾಲಿಯಾಗಿ ಬೆಳೆಯುತ್ತವೆ. ಜನರ ಹೃದಯಗಳುಅವುಗಳಿಂದ ತಾಡಿತವಾದಾಗ ಅವುಗಳ ಪ್ರಭಾವವನ್ನು ತೆಗೆದುಕೊಂಡು ವಿಚಾರಗಳನ್ನು ಹೆಚ್ಚುಹೆಚ್ಚಾಗಿ ಹುಟ್ಟಿಸಲು ಪ್ರಾರಂಭಿಸುತ್ತವೆ. ಈ ರೀತಿ ನಾವು ಹುಟ್ಟಿದಂದಿನಿಂದ ಬ್ರಹ್ಮಾಂಡ ಮಂಡಲವನ್ನು ಕೆಡಿಸುತ್ತಲೇ ಇದ್ದೇವೆ. ಒಂದು ಕ್ಷಣವಾದರೂ ನಾವು ವಿಚಾರ ರಹಿತವಾಗಿ ಇರದಿರುವುದಕ್ಕೆ ಇದೇಕಾರಣ. ಆದರೆ  ಬ್ರಹ್ಮಾಂಡಮಂಡಲಕ್ಕಿಂತ ಮೇಲೇರಿದವರು ನಿಸ್ಸಂಶಯವಾಗಿಯೂ ವಿಚಾರರಹಿತವೆನ್ನಬಹುದಾದ ಸ್ಥಿತಿಯನ್ನು ಮುಟ್ಟಿರುತ್ತಾರೆ.  ಮನುಷ್ಯನ ದಿನನಿತ್ಯದ ಕಾರ್ಯವು ಎಂತಹುದೇ ಆಗಿರಲಿ, ತನ್ನ ಹೃದಯದ ಮೇಲೆ ಯಾವ ಸಂಸ್ಕಾರವನ್ನು ಮಾಡಿಕೊಳ್ಳದೆ ಅದನ್ನು ಕರ್ತವ್ಯ ದೃಷ್ಟಿಯಿಂದ ಮಾಡಿದ್ದಾದರೆ ಆತನು ತನ್ನನ್ನಾಗಲಿ ಬ್ರಹ್ಮಾಂಡವನ್ನಾಗಲಿಕೆಡಿಸುವುದಿಲ್ಲ. ಆದ್ದರಿಂದಲೇ ಭಗವಾನ್ ಶ್ರೀಕೃಷ್ಣನು ನಿಜವಾದ ಕರ್ತವ್ಯ ಭಾವನೆಯನ್ನು ಅರಿತುಕೊಳ್ಳುವಂತೆ ಒತ್ತಿ ಹೇಳಿದ್ದಾನೆ . VR II 61
  7. ವಾಸ್ತವದಲ್ಲಿ ಯಾವ ಮಾರ್ಗವು ನಿಮಗೆ  ಹತ್ತಿರವಿರುವುದೂ  ಅದೇ ಪರಮಾತ್ಮನನ್ನು ಸೇರುವ ಅತ್ಯಂತ ಸಮೀಪದ ಮಾರ್ಗವು ಆಗಿದೆ .ME P9.
  8. ಸ್ಥೂಲ ಹಾಗೂ ಅಪಾರದರ್ಶಕ ಪೊರೆಗಳನ್ನು ಹೊಂದಿದ ನಮ್ಮದೇ ಆದ ಪುಟ್ಟ ಸೃಷ್ಟಿಯನ್ನು ನಾವು ನಮ್ಮ ಭೌತಿಕ ಅಸ್ತಿತ್ವದ ರೂಪದಲ್ಲಿ ನಿರ್ಮಿಸಿಕೊಂಡಿದ್ದೇವೆ. ಈ ಅಪಾರದರ್ಶಕ ಪರದೆಗಳನ್ನು ಒಂದೊಂದಾಗಿ ಹರಿದೊಗೆದು (ಜಗತ್ತಿನ) ಸೃಷ್ಟಿಯ ಸಮಯದಲ್ಲಿ ನಾವು ಹೊಂದಿದಂತಹ ಪರಿಪೂರ್ಣಾವಸ್ಥೆಯನ್ನು (ಶುದ್ಧಾವಸ್ಥೆಯನ್ನು)ಪುನ: ತಾಳುವುದೇ ನಾವೀಗ ಮಾಡಬೇಕಾದದ್ದು ಇದೇ‘ಸಹಜ ಮಾರ್ಗ’ವೆಂದು ಕರೆಯಲಾದ ನಮ್ಮ ಪದ್ಧತಿಯ ತತ್ವದ ಸಾರಅಂದರೆ ನಮ್ಮದೇ ಆದ ಈ  ಪುಟ್ಟ ಸೃಷ್ಟಿಯನ್ನು  ಪ್ರಲಯಗೊಳಿಸಬೇಕು  ಅರ್ಥಾತ್ ನಮ್ಮನ್ನು ನಾವುಬಿಚ್ಚಿಕೊಳ್ಳಬೇಕು.ME P 11
  9. ಮತಧರ್ಮವು ಸಾಮಾನ್ಯ ಜನತೆಗಾಗಿ, ಆದರೆ ಆಧ್ಯಾತ್ಮಿಕತೆಯು ಕೆಲವೇ ಆರಿಸಲ್ಪಟ್ಟವರಿಗಾಗಿ. ME P 56
  10. ಶಾಸ್ತ್ರಗಳಲ್ಲಿ ವಿವರಿಸಿದಂತೆ ,ಅಂತ:ಕರಣವು ನಾಲ್ಕು ಅಂಗಗಳಿಂದ ಕೂಡಿದೆ- ಅವೆಂದರೆ ಮನಸ್ಸು , ಚಿತ್ತ , ಬುದ್ಧಿ ಮತ್ತು ಅಹಂಕಾರ , ಇವೆಲ್ಲವೂ ಪೂರ್ಣವಾಗಿ ಶುದ್ಧಗೊಂಡಾಗ ಮಾತ್ರ, ಅಂತ:ಕರಣವು ಕೇವಲ ಸರಿಯಾದ ಸಂಕೇತಗಳನ್ನು ನೀಡಬಲ್ಲುದು. ME P 70
  11. “ಎಲೈನಿದ್ರಾಮಗ್ನರೇ ,ಎಚ್ಚರ ಗೊಳ್ಳಿರಿ; ಉಷ:ಕಾಲ ಆರಂಭವಾಗಿದೆ” – ಎಂಬ ನಮ್ಮ ಸದ್ಗುರುಗಳ ಸಂದೇಶವನ್ನು ಸಾರುತ್ತ, ಸಹಜಮಾರ್ಗದ ಮೂಲಕ, ಈಗ ಪ್ರಚಲಿತವಿರುವ “ಆಧ್ಯಾತ್ಮಿಕರಾಹಿತ್ಯ”ದ ಸ್ಥಾನದಲ್ಲಿ, ಆಧ್ಯಾತ್ಮಿಕತೆಯನ್ನು ಸಂಸ್ಥಾಪಿಸುವುದೇ ನಮ್ಮಮಿಷನ್ನಿನ ಗುರಿಯಗಿದೆ. ME P 95
  12. ದೇವರನ್ನು ವಿವರಿಸುವುದು ಬಹುಕಷ್ಟ. ಏಕೆಂದರೆ ಆತನೊಂದಿಗೆ ಹೋಲಿಸಲು ಯಾವ ವಸ್ತುವು ಇಲ್ಲ. ಆದುದರಿಂದ ನಾವು ವ್ಯತಿರೇಕ ಪದ್ಧತಿಯನ್ನೇ ಅನುಸರಿಸಬೇಕಾಗುತ್ತದೆ.VR 271
  13. ಅಹಂಕಾರದಿಂದ ಪೂರ್ಣ ಮುಕ್ತರಾಗುವುದಂತೂ ಅಸಂಭವ. ಏಕೆಂದರೆ ,ಮನುಷ್ಯನ ಹಾಗೂ ಪರಮಾತ್ಮನ ನಡುವೆ ನಾಮಮಾತ್ರದ ಭೇದವನ್ನದರೂ ಉಳಿಸುವುದು ಅವಶ್ಯಕ. ವಸ್ತುಸ್ಥಿತಿ ಏನೆಂದರೆ ಮನುಷ್ಯನನ್ನು ಪರಮಾತ್ಮನಿಂದ ಪ್ರತ್ಯೇಕಿಸುವ ತೆರೆಯೆಂದರೆ ಅದೇ. VR I 227
  14. ಮಿಷನ್ನಿನಲ್ಲಿ ಅನುಸರಿಸಲಾಗುತ್ತಿರುವ ಸಹಜಮಾರ್ಗ ಸಾಧನ ಪದ್ದತಿಯು ಪರವಸ್ತುವನ್ನು ಪಡೆದುಕೊಳ್ಳುವಸುಲಭವೂ  ಸಹಜವೂ  ಆದ  ಮಾರ್ಗವೊಂದನ್ನುಪ್ರಸ್ತುತ  ಪಡಿಸುತ್ತಿದೆ. ಮನುಷ್ಯನ ನಿತ್ಯ ಜೀವನದಲ್ಲಿ ಅನುಸರಿಸಲು  ಅಸಾಧ್ಯವೆನಿಸುವ ಒರಟು  ವಿಧಾನ ಗಳನ್ನು ಸಹಜಮಾರ್ಗವುಸೂಚಿಸುವುದಿಲ್ಲ. ಸಹಜಮಾರ್ಗ ಪದ್ಧತಿಯ ಆಧ್ಯಾತ್ಮಿಕ ಶಿಕ್ಷಣದಲ್ಲಿ ಇಂದ್ರಿಯಗಳು ತಮ್ಮ  ಸಹಜಮೂಲ ಸ್ಥಿತಿಯನ್ನು ಪಡೆಯುವಂತೆ ಅವುಗಳಕಾರ್ಯಗಳು  ಕ್ರಮಗೊಳಿಸಲ್ಪಡುತ್ತವೆ.ಅಂದರೆ ಮೊಟ್ಟಮೊದಲಿಗೆ ಮಾನವರೂಪವನ್ನು ಪಡೆದಾಗ ಅವು ಇದ್ದ ಸ್ಥಿತಿಗೆ  ನೇರ್ಪಡಿಸಲ್ಪಡುತ್ತವೆ  ಎಂದು  ಅರ್ಥ, ಅಷ್ಟೇ ಅಲ್ಲ ತಮಗೆ ತಾವೇ ನಿರಂಕುಶವಾಗಿ ವರ್ತಿಸುತ್ತಿರುವ ನಿಮ್ನ  ವೃತ್ತಿಗಳು  ಉನ್ನತ   ಪ್ರಜ್ಞಾನಕ್ಕೆ   ಅಧೀನಗೊಳಿಸಲ್ಪಡುತ್ತವೆ. ಆ ಮೂಲಕ  ಅವುಗಳ  ವಿಕೃತ ವೈಪರೀತ್ಯದ  ಕ್ರಿಯೆಗಳು   ನಿಲ್ಲಿಸಲ್ಪಡುತ್ತವೆ. ಎಲ್ಲ ಉಚ್ಚಸ್ತರದ ಕೇಂದ್ರಗಳು  ದೈವೀ ಕೇಂದ್ರಗಳ ಅಧೀನದಲ್ಲಿ ಬರುತ್ತವೆ.ಮತ್ತು ಈ ರೀತಿಯಲ್ಲಿ  ವ್ಯಷ್ಟಿ ಸತ್ತೆಯ  ಇಡೀ  ಮಂಡಲವು  ದೈವೀಕರಣಗೊಳ್ಳಲಾರಂಭಿಸುತ್ತದೆ.  SMP 5
  15. ಈ ವಿಚಾರಗಳನ್ನು ಕೇವಲ ಉಪದೇಶ ಮಾಡುವದಾಗಲಿ ಪ್ರಚಾರಮಾಡುವದಾಗಲಿ  ನಮ್ಮ  ಅರ್ಥವಲ್ಲ. ಬದಲಿಗೆ, ಅಭ್ಯಾಸ ಮಾಡಿ,  ಪ್ರತ್ಯಕ್ಷ ಅನುಷ್ಠಾನಕ್ಕೆ ತರುವುದಾಗಿದೆ. ದೈವೀಪ್ರಜ್ಞೆ  ಕುರಿತು ನಿದ್ರಿಸುತ್ತಿರುವ   ಜನತೆಯನ್ನು ಎಚ್ಚರಗೊಳಿಸಿ ಪ್ರಗತಿ ಪಥದಲ್ಲಿ  ಸರಿಯಾಗಿ  ನಡೆಯುವಂತೆ ಮಾಡುವುದು ಮಿಷನ್ನಿನ ಉದ್ದೇಶ.SMP 7
  16. ಸಾಧಕನು ಇದೇ ಒಂದೇ ಜನ್ಮದಲ್ಲಿಯೇ ಮುಕ್ತಿಯನ್ನು ಪಡೆಯಬಲ್ಲ. ಅಷ್ಟೇ  ಅಲ್ಲ, ಆತನು ತತ್ಪರ ಸಾಧನಾ ನಿಷ್ಠನಾಗಿದ್ದರೆ ಮತ್ತು ಒಬ್ಬ ನಿಜವಾದ  ಮಾರ್ಗದರ್ಶಿ ದೊರೆತರೆ, ಇನ್ನೂ  ಕಡಿಮೆ  ಅವಧಿಯಲ್ಲಿಯೇ ಅಂಥ ಸ್ಥಿತಿಯನ್ನು   ಪಡೆಯಬಹುದು   ಎಂದು   ನಮ್ಮಗುರುಗಳು  ಸಾರಿ  ಹೇಳಿದ್ದಾರೆ. SMP 6
  17. ಸರ್ವಸಾಮಾನ್ಯವಾಗಿ ಅಂಗೀಕೃತವಾದ ಭಾವನೆಯೆಂದರೆ ಅವನು  ‘ಚಿರಂತನಶಕ್ತಿ’ ಎಂಬುದು. ವಾಸ್ತವಿಕವಾಗಿ  ದೇವರು ಸಗುಣನೂ  ಅಲ್ಲ, ನಿರ್ಗುಣನೂ  ಅಲ್ಲ; ಅವೆರಡಕ್ಕೂ ಅತೀತನಾಗಿದ್ದಾನೆ.’ ಅವನುಎಂತಿರುವನೋ ಅಂತೆಯೇ  ಇದ್ದಾನೆ.’ ನಿರ್ಗುಣ’ ಎಂದು ಅವನನ್ನುಕಲ್ಪಿಸುವವರು ನಾವು; ಮತ್ತು  ಅವನನ್ನು ‘ಸಗುಣ’ನನ್ನಾಗಿ ಮಾಡುವವರೂ  ನಾವೇ. ಈ ವಿವಾದಗಳಿಂದ  ಪಾರಾಗಲು ನಾವು ಮಾಡಬೇಕಾದುದೇನೆಂದರೆ, ಅದು  ಸಗುಣವೇ ಇರಲಿ, ನಿರ್ಗುಣವೇ ಇರಲಿ,’ಆದಿತತ್ವ’ದ ಮೇಲೆ ನಮ್ಮ ದೃಷ್ಟಿಯನ್ನು ಸ್ಥಿರಗೊಳಿಸಬೇಕು. ಅದು ಏನೇ ಇರಲಿ, ಅದನ್ನು  ನಾವು  ಪ್ರೀತಿಸಬೇಕು. SMP 12
  18. ಖಚಿತವಾಗಿ  ಹೇಳುವುದಾದರೆ ಒಂದು ಪುಟ್ಟ ಸೃಷ್ಟಿಯನ್ನು  ಅದಕ್ಕೆ ಆಧಾರವಾಗಬಹುದಾದ ದೃವ್ಯವನ್ನೊದಗಿಸಿ, ಕಟ್ಟಿ  ನಿಲ್ಲಿಸಿದವರು ನಾವೇ. ಕ್ಷೋಭವನ್ನುಂಟುಮಾಡಿದ ದೈವಿ ಸಂಕಲ್ಪದ  ಮೂಲಾಘಾತವನ್ನು ಬಿಟ್ಟರೆ,  ಇದರಲ್ಲಿ ದೇವರ ಕಾರ್ಯ  ನಾಮಮಾತ್ರವೆನ್ನಬಹುದು. ಭೂಮಿಯೊಳಗಿರುವ  ಕಬ್ಬಿಣದಅದಿರು ಎಲ್ಲ ಯಂತ್ರಗಳಿಗೂ ಮೂಲವಾಗಿರುವ ಹಾಗೆಯೇ, ಅಸ್ಥಿತ್ವದಲ್ಲಿರುವ ಎಲ್ಲ ವಸ್ತುಗಳ ಮೂಲವುಸಾರರೂಪದಲ್ಲಿರುವ  ಭೂತ-ದ್ರವ್ಯ(Matter)ವಾಗಿತ್ತುಸಂಕಲ್ಪದ ಆಘಾತವು ತೀವ್ರವೇಗವುಳ್ಳದ್ದಾಗಿತ್ತು; ಅದುಇನ್ನೂ  ಹಾಗೆಯೇ  ಇದೆ, ಹಾಗೂ ಕೊನೆಯವರೆಗೂ ಮುಂದುವರಿಯುತ್ತದೆ.  SMP 26
  19. ದೊಡ್ಡ ವ್ಯಕ್ತಿಯೇ ಮಹಾತ್ಮನೆಂಬ ಜನಪ್ರಿಯ ಅರ್ಥವು ನನ್ನ ಮನಸ್ಸಿಗೆ ಮುಟ್ಟುವುದಿಲ್ಲ. ಮಹಾತ್ಮನೆಂದರೆ, ಸಂಪೂರ್ಣ ಆತ್ಮನಿರಸನದ ಸ್ಥಿತಿಯಲ್ಲಿ ಸದಾಕಾಲ ನೆಲೆಸಿದ್ದು, ದೊಡ್ಡತನ, ಜಂಬ, ಅಹಂಕಾರಗಳ ಭಾವನೆಯನ್ನು ಮೀರಿ ನಿಂತ, ಅತ್ಯಂತ ನಗಣ್ಯ ಅಥವಾ ಉಪೇಕ್ಷಿತ(ಕಣ್ಣಿಗೆ ಬೀಳದ)ವ್ಯಕ್ತಿಯೆಂದು ನಾನು ವ್ಯಾಖ್ಯೆ ಮಾಡಿಯೇನು. SMP 83
  20. ಇಂದಿನ ಧರ್ಮವೆಂದರೆ ಕೇವಲ ಒಂದು ಗತಕಾಲದ ಅವಷೇಶವಾಗಿ, ಇಲ್ಲವೇ ಮೃತರ ಅಸ್ಥಿಗಳಾಗಿ ಉಳಿದುಕೊಂಡಿದೆಯೆಂದು ಹೇಳಿದರೆ ತಪ್ಪಾಗದು. ನಾವು ನಿಜವಾದ ಧರ್ಮವನ್ನು ಗೋರಿಯಲ್ಲಿ ಹುಗಿದುಬಿಟ್ಟಿದ್ದೇವೆ. ಧರ್ಮದ ಹೇಸರಿನಲ್ಲ ಚಪ್ಪಾಳೆ ತಟ್ಟುವುದನ್ನುಳಿದು ನಾವು ಮತ್ತೇನನ್ನುಮಾಡುವುದಿಲ್ಲ. ನಿಜವಾದ ಸತ್ವವು ಅಳಿದುಹೋಗಿ, ಅದರ ಸ್ಥಾನದಲ್ಲಿ ಬಾಹ್ಯಾಚಾರಗಳು ಮಾತ್ರ ಉಳಿದಿವೆ.RD 1.
  21. ಗೀತೆಯು ಈಗಿರುವ ರೂಪದಲ್ಲಿ ನಿಜವಾಗಿಯೂ ಮಹಾಭಾರತ ಯುದ್ಧದ ದಿನ ಶ್ರೀಕೃಷ್ಣನು ಅರ್ಜುನನಿಗೆ ಮಾಡಿದ ಉಪದೇಶಕ್ಕೆ ವ್ಯಾಖ್ಯಾನವಾಗಿದೆ. ತಾನು ಬಾಯಿಂದ ಮಾತನಾಡಿ ತಿಳಿಸಿದ ಸ್ಥಿತಿಗಳನ್ನು ಶ್ರೀಕೃಷ್ಣನು ಅರ್ಜುನನಿಗೆ ಸಾಕ್ಷಾತ್ತಾಗಿ  ಕರುಣಿಸಿದ್ದನು. ಅದರ ಪರಿಣಾಮವಾಗಿ ಅರ್ಜುನನಿಗೆ ಒಳಗೂ-ಹೊರಗೂ ಎಲ್ಲ ಕಡೆಗೂ ಶಬ್ದಶಃ ಆಯಾ ಸ್ಥಿತಿಗಳ  ಅನುಭವವಾಯಿತು.RD 44
  22. ಹಠಯೋಗವು ಹೆಚ್ಚಾಗಿ ಶಾರೀರಿಕ ಸಾಧನೆಗಳನ್ನು ಯೋಚಿಸುವುದು ಅವುಗಳಲ್ಲಿ ಕೆಲವಂತೂ ಅನೇಕಜನರಿಗೆ ತೀರಕಠಿಣಹಾಗೂ ತ್ರಾಸದಾಯಕವಾಗಿದೆ .ಸಹಜಮಾರ್ಗ ಪದ್ಧತಿಯಲ್ಲಾದರೂ ಅದುಗುರುವಿನಿಂದ ಸಂಚರಣಗೊಳಿಸಲಾಗುವ ಶಕ್ತಿಯ ಸಹಾಯದಿಂದ ಸುಲಭವಾದ ಮಾನಸಿಕ ಅಭ್ಯಾಸಗಳ ಮೂಲಕ ಪಡೆಯಲಾಗುತ್ತದೆ.RD 59
  23. ಇದಕ್ಕಾಗಿ ಅನುಸರಿಸಲಾಗುವ ಕ್ರಮವನ್ನು ಸಾಮಾನ್ಯವಾಗಿ ಮೂರು ಪ್ರಕರಣಗಳಲ್ಲಿ ವರ್ಗೀಕರಿಸಲಾಗಿದೆ ಕರ್ಮ, ಉಪಾಸನೆ (ಭಕ್ತಿ) ಮತ್ತು  ಜ್ಞಾನ. ಇವು ಬೇರೆಬೇರೆಯಾದ ಎಲ್ಲಾ ಧರ್ಮ ಪಂಥಗಳಿಗೂ ಸಾಮಾನ್ಯ ತಳಹದಿಯಾಗಿವೆ.RD 89
  24. ಸಹಜ ಮಾರ್ಗ ಪದ್ಧತಿಯಲ್ಲಿ ವಿವೇಕ ವೈರಾಗ್ಯಗಳನ್ನು ಪ್ರತ್ಯೇಕ ಸಾಧನಗಳೆಂದು ಗಣಿಸದೆ ಸಾಧಕನ ಪ್ರಗತಿಯಲ್ಲಿ ತಾವಾಗಿಯೇ ಬೆಳೆದು ಬರಬೇಕೆಂಬ ದೃಷ್ಟಿಯಿಂದ ಅವುಗಳನ್ನು ಬದಿಗಿರಿಸಲಾಗುವುದು.RD 91
  25. ನಾವು ಮೊಟ್ಟಮೊದಲು ಸೃಷ್ಟಿಯಲ್ಲಿ ಬಂದಾಗ ಪರಿಪೂರ್ಣರಾಗಿಯೂ ಸರ್ವಶಕ್ತನಾದ ಭಗವಂತನಿಗೆ ಹತ್ತಿರವಾಗಿಯೂ ಇದ್ದೇವೆಂದು ಹಿಂದೂ ಜನರಲ್ಲಿ ಒಂದು ನಂಬುಗೆಯಿದೆ, ಇದು ನಿಜ. ಕಾಲ ಕಳೆದಂತೆಲ್ಲ ಅವನತಿಯು ಆರಂಭವಾಗಿ ನಾವೀಗ ಮಾನವತೆಯ ಕೆಳಗಿನ ಸ್ತರದಲ್ಲಿ ನಮ್ಮನ್ನು ಕಾಣುತ್ತಿದ್ದೇವೆ. ನಮ್ಮಲ್ಲಿ ಇದನ್ನೆಲ್ಲ ಯಾರು ಉಂಟುಮಾಡಿದರು? ಬೇರೆ ಯಾರು ಅಲ್ಲ, ನಾವೇ ನಾವೇ ನಮ್ಮನ್ನು ಅವನತಿಯತ್ತ ಒಯ್ದೆವು; ನಾವೇ ನಮ್ಮನ್ನು ದೇವರ ರಾಜ್ಯದಿಂದ ಬಹು ದೂರವಾದ ಅಂಧಕಾರದ ಪ್ರದೇಶದಲ್ಲಿ ಎಸೆದುಕೊಂಡಿದ್ದೇವೆ ನಮ್ಮ ದುಷ್ಟ ವಿಚಾರಗಳ  ಎಳೆಗಳಿಂದ ಬಲೆಯನ್ನುನಿರ್ಮಿಸಿ ನಾವೇ ಅನರ್ಥವನ್ನುಂಟು ಮಾಡಿದ್ದೇವೆ.ERY 17-18
  26. ಈ ಜಗತ್ತು ದೇವರ ಜೀವಂತ ಪ್ರತಿರೂಪವಾಗಿದ್ದು. ಎಲ್ಲೆಡೆಯೂ ಆತನ ಶಕ್ತಿಯೇ ಕಾರ್ಯಮಾಡುತ್ತದೆ ನಿಸರ್ಗದ  ಈ ಕಾರ್ಯಾಗಾರವು ಕೆಲಸಕ್ಕೆ ಬೇಕಾದ ಎಲ್ಲಾ ಸಾಧನಗಳಿಂದ ಸಜ್ಜಾಗಿದೆ ಯಂತ್ರಗಳನ್ನು ಚಾಲನೆಯಲ್ಲಿಡಲು ಕೇಂದ್ರದಿಂದ ಶಕ್ತಿಯು ಹರಿದು ಬರುತ್ತದೆ. ಪ್ರತಿಯೊಂದು ವಿಧದಕಾರ್ಯಕ್ಕೂಪ್ರತ್ಯೇಕ ಯಂತ್ರಸಮೂಹವಿದೆ. ಇಛ್ಛೆ ಉದ್ದೇಶ ಘಟನೆಗಳು ಇವುಗಳಯಾವಅರಿವೂ ಇಲ್ಲದೆ ಶಕ್ತಿಯು ಹರಿದು ಬರುತ್ತಲೇ ಇದ್ದು ಕೊನೆಗೆ ನಿಯತ ಕ್ರಮದಲ್ಲಿ ನಿಶ್ಚಿತ ಫಲಗಳನ್ನು ಕೊಡುತ್ತದೆ. ಬಾಹ್ಯ ಕಾರಣಗಳಿಂದ ಇದರ ದಾರಿಯಲ್ಲಿ ಬರಬಹುದಾದ ಅಡೆತಡೆ ಅಪಘಾತದ ಬಗೆಗಾಗಲಿ ಅಥವಾ ಯಂತ್ರದಯಾವುದೇ ಭಾಗದ ದೋಷಯುಕ್ತ ಕಾರ್ಯದ ಪರಿಣಾಮದ ಬಗೆಗಾಗಲಿ ಅದುಲಕ್ಷ ಕೊಡುವುದೇ ಇಲ್ಲ. ಯಂತ್ರದಸಕ್ಷಮ ಕಾರ್ಯಕ್ಕೆ ಎಲ್ಲ ಭಾಗಗಳು ಸುವ್ಯವಸ್ಥಿತವಾಗಿದ್ದುಯಾವುದೂ ಸಡಿಲ ಅಥವಾ ಕೆಟ್ಟ ಸ್ಥಿತಿಯಲ್ಲಿ ಇರಕೂಡದು ಇದಕ್ಕಾಗಿ ಮೇಸ್ತ್ರಿ ಮೇಲ್ವಿಚಾರಕರು ಹಾಗೂ ನಿಯಂತ್ರಕರಾಗಿ ಕೆಲಸ ಮಾಡುವ ಕೆಳಗಿನ ಅಧಿಕಾರಿಗಳಿರುತ್ತಾರೆ ಅವರ ಕರ್ತವ್ಯವೆಂದರೆ ಪ್ರತಿಯೊಂದು ಭಾಗದ ಕಾರ್ಯಗಳ ಹೊಂದಾಣಿಕೆ ಮತ್ತು ಕ್ರಮಬದ್ಧತೆಯನ್ನು ನೋಡಿಕೊಳ್ಳುವುದು ಈ ಕಾರ್ಯ ನಿರ್ವಾಹಕ ಮಂಡಳಿ ಯಾರಿರಬಹುದು?  ದೇವ ದೇವತೆಗಳು ಇರಬೇಕೆಂದು ಯಾರಾದರೂ ಹೇಳಬಹುದು ಖಂಡಿತವಾಗಿಯೂ ಅಲ್ಲ. ಯಂತ್ರದ ಬೇರೆ ಬೇರೆ ಭಾಗಗಳಿರುವಂತೆ ದೇವ-ದೇವತೆಗಳುವಾಸ್ತವಿಕವಾಗಿ ನಿಸರ್ಗದ ವಿವಿಧ ಶಕ್ತಿಗಳು. ಅವರು ಬೇರೆ ಯಾವುದರ ಪರಿವೆಯೂ ಇಲ್ಲದೆ  ತಮಗೆ ನಿಶ್ಚಿತವಾದ ನಿತ್ಯ ಕಾರ್ಯಗಳನ್ನು ಮಾಡುತ್ತಾ ಹೋಗುತ್ತಾರೆ. ಅದರಿಂದಾಚೆ ಒಂದಂಗುಲವೂ ಸರಿಯುವ ಶಕ್ತಿಅವರಿಗಿಲ್ಲ. ಇವೆಲ್ಲಕ್ಕೂ ಕಾರಣೀಭೂತನಾದ ಮಾನವನೇನಿಜವಾದ ಕಾರ್ಯನಿರ್ವಾಹಕ. ಆತ ನಿಸರ್ಗ ಯಂತ್ರದ ಸರಿಯಾದ ನಿರ್ವಹಣೆಯನ್ನು ನೋಡಿಕೊಳ್ಳುವವನೂ ಹಾಗೂ ಅದರ ಭಾಗಗಳ ಸರಿಯಾದ ಕಾರ್ಯವನ್ನು ನಡೆಸಿಕೊಂಡು ಹೋಗುವವನು ಆತನೇ. VR II 114-115
  27. ಪ್ರಕೃತಿಯಾಗಲಿ, ಪ್ರಪಂಚವಾಗಲಿ, ಆಧಾರವಿಲ್ಲದೆ ನಿಲ್ಲಲಾರದು.’ ಅಸ್ತಿತ್ವಕ್ಕೆ(ಇರವು)ಒಂದು ಆಶ್ರಯವಿರಲೇ ಬೇಕು. ಆ  ಆಶ್ರಯವೇ  ದೇವರು. ಬ್ರಹ್ಮ ಅಥವಾ ‘ಪರತತ್ವ’ ಅದೇ  ‘ಭೂಮಾ’; ವಸ್ತುರಹಿತ  ವಸ್ತು, ಶಕ್ತಿರಹಿತ  ಶಕ್ತಿ.SMP 14
  28. ಒಬ್ಬನು ಮಾಡುವ ಇಲ್ಲವೆ ಮಾಡಿದ ವಿಚಾರಗಳು ಬ್ರಹ್ಮಾಂಡಮಂಡಲದಲ್ಲಿ ತೇಲುತ್ತ ಶಕ್ತಿಯಾಗಿ ಪರಿವರ್ತನೆ ಹೊಂದುತ್ತವೆ.ಕೆಲವು ವೇಳೆ ಅವು ಮನುಷ್ಯನ ಹೃದಯವನ್ನು ತಟ್ಟಿ ಅವನ ಸ್ವಭಾವ ಹಾಗೂ ಸಾಮರ್ಥ್ಯಗಳಿಗನುಗುಣವಾಗಿ ತಮ್ಮ ಸಂಸ್ಕಾರಗಳನ್ನುಂಟು ಮಾಡುತ್ತವೆ. ಆದರೆ ಆತನು ಅವುಗಳ ಕಡೆಗೆ ಲಕ್ಷ್ಯಕೊಡದೆ ಹೋದರೆ ಅವುಗಳ ತೀಕ್ಷಣತೆ ಕಳೆದು ಹೋಗಿ ಅವು ಪ್ರಭಾವಹೀನವಾಗುತ್ತವೆ.VR 151-152
  29. ಪ್ರತಿಯೊಂದು ಕ್ರಿಯೆಯ ಅತೀತಕ್ರಿಯಾಕೇಂದ್ರವು ಯಾವಾಗಲೂ ನಿಷ್ಕ್ರೀಯವೇ ಆಗಿರುತ್ತದೆ. ಇದು ನಿಸರ್ಗದ ನಿಯಮವಾಗಿದ್ದು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ.VR 275
  30. ಲಯಾಸ್ಥೆಯು ನಿಜಾರ್ಥದಲ್ಲಿ ಬೇರೇನೂ ಆಗಿರದೇ ಸ್ಥೂಲ ಅಥವಾ ಧನಾತ್ಮಕ ರೂಪದ ರಚನೆಗೆ ಕಾರಣವಾಗಿದ್ದ  ಶಕ್ತಿಯನ್ನು  ತಟಸ್ಥ ಗೊಳಿಸುವುದು ಆಗಿದೆ ಬೇರೆ ಶಬ್ದಗಳಲ್ಲಿ ಹೇಳುವುದಾದರೆ ಧನಾತ್ಮಕತೆ ಯು ಕಳೆದು ಹೋಗಿದೆ.VR II 69
  31. ಒಬ್ಬನು ಧನಾತ್ಮಕ ಅಥವಾ ಋಣಾತ್ಮಕವಾಗಿರದೆ ಇವೆರಡರ  ಆಚೆಗಿರುತ್ತಾನೆ ನಾನು ನನ್ನ ಗುರುಗಳನ್ನು ಕೇವಲ ಈ ಅರ್ಥದಲ್ಲಿ  ಗ್ರಹಿಸಿದೆ ಹಾಗೂ  ಮಿತ್ರನೇ ಆಗಿರಲಿ ಅಥವಾ ಶತ್ರುವೇ ಆಗಿರಲಿ ಪ್ರತಿಯೊಬ್ಬರ ಹೃದಯದಲ್ಲಿ  ಆತನ  ಪ್ರಕಾಶವೇ ಬೆಳಗುತ್ತಿರುವುದನ್ನುಅನುಭವಿಸಿದೆ. ಇದರ ಪರಿಣಾಮವಾಗಿ ಕೊನೆಗೆ ನನ್ನ ಆತ್ಮವೇ ಪ್ರತಿಯೊಂದು ಜೀವಿಯಲ್ಲಿದೆ ಎಂಬುದನ್ನು ಅನುಭವಿಸಲು ಪ್ರಾರಂಭಿಸಿದೆ. ಒಂದು ನಾಯಿಯೂ ಸಹ ನನಗೆ ಸಂಬಂಧಿಯಂತೆ ಕಂಡಿತು.ಭೇದಬಾವ ಸಂಪೂರ್ಣವಾಗಿ ಅಳಿಸಿ ಹೋದಂತಿತ್ತು.(ಒಂದು ಬಂಗಾರದ ಗಟ್ಟಿ ಹಾಗೂ ಮಣ್ಣುಮುದ್ದೇನನಗೆ ಒಂದೇ ಆಗಿದ್ದವು) ಸಾಪೇಕ್ಷತೆಯ ಭಾವನೆ ನಷ್ಟ ಪ್ರಾಯವಾಗಿ ಅನುಬಂಧದ ಕೊಂಡಿ ಮುರಿದು ಹೋದಂತಿತ್ತು. ನನ್ನಯಾವ ಸಂಬಂಧಿಕರನ್ನು ನಾನು ಆಪ್ತತ್ವದ ಭಾವದಿಂದ ಎಂದಿಗೂ ಕಾಣಲಿಲ್ಲ.VR II 70
  32. ಅಂತ: ಪ್ರೇರಣೆಯು ಬರುವುದು ದೈವೀ ಭಾಂಡಾರದಿಂದಲೋ, ಮೂಲದಿಂದಲೋ ಅಥವಾ ಇನ್ನಾವುದಾದರೂ ಸ್ತರದಿಂದಲೋ? ಎಂಬ ಪ್ರಶ್ನೆ ಸಂದಿಗ್ಧವಾಗಿದೆ. ಇದಕ್ಕೆ ಉತ್ತರವಾಗಿ, ‘ನೀವು ಉಸಿರಾಡಿಸಲು ಗಾಳೀಯನ್ನು ಎಲ್ಲಿಂದ ಪಡೆಯುವಿರಿ?’ ಎಂದು ಮರುಪ್ರಶ್ನೆ ಮಾಡಿದರೆ ನೀವು ಅದಕ್ಕೆ ಸರಿಯಾದ ಉತ್ತರ ಕೊಡಲಾರಿರಿ. ವಾಸ್ತವವಾಗಿ ಈ ಪ್ರಶ್ನೆಯಪೂರ್ತಿ ಉತ್ತರವು ಸಹಜಮಾರ್ಗದ ಇಡೀ ತತ್ವಜ್ಞಾನವನ್ನು ಒಳಗೊಳ್ಳಬಹುದು. ಮೂಲದಿಂದಾಗಲಿ ಬೇರೆ ಯಾವಸ್ತರದಿಂದಲೇ ಆಗಲಿ, ಅಂತ: ಪ್ರೇರಣೆಯನ್ನೆಳೆಯುವದು ಜಿಜ್ಞಾಸುವಿನ ವೈಯಕ್ತಿಕ ಸಾಮರ್ಥ್ಯವನ್ನವಲಂಬಿಸಿದ್ದು ಅದನ್ನು ಪ್ರತ್ಯಕ್ಷ ನಿರೀಕ್ಷಣೇಯಿಂದಲೇ ನಿರ್ಣಯಿಸಲು ಸಾಧ್ಯವಾಗುತ್ತದೆ.VR I 256
  33. ಸಾಧಾರಣವಾಗಿ ಜನರು ‘ಸತ್’ ಎಂಬುದು ಪರವಸ್ತುವೆಂದು ಭಾವಿಸಿ ದೇವರ ಕುರಿತ ಜ್ಞಾನವನ್ನು ಅಳೆಯುವ ಅಳತೆಗೋಲಾಗಿ ವರ್ಣಿಸುತ್ತಾರೆ. ವಾಸ್ತವದಲ್ಲಿ ಅದು ‘ತಮದ’, ಕೇವಲ ತಮದ ಮಂಡಲವೇ ಆಗಿದೆ ನಿಜವಾದ ಯೋಗಿಗೆ ಸಂಪಾದಿಸಲು ಯೋಗ್ಯವಾದ ಏಕೈಕ ವಸ್ತುವೆಂದರೆ ಅದೇ. ಆ ಮಟ್ಟದವರೆಗೆ ಪ್ರವೇಶ ಪಡೆಯುವುದು ಅತ್ಯಂತ ಕಠಿಣವೆಂಬುದರಲ್ಲಿ ಸಂದೇಹವಿಲ್ಲ.’ಸತ್’ನ್ನು ಪಡೆಯುವುದು ಸುಲಭದ ಕೆಲಸ. ಆದರೆ ‘ತಮ’ ಎಂದು ಕರೆಯಲಾದ ಸ್ಥಿತಿಯು ಸುಲಭ ಸಾಧ್ಯವಲ್ಲ. ಅದನ್ನು ಮೀರಿದುದಾವುದೂ ಇಲ್ಲ. ಜನರು ಅದನ್ನು ಕುರಿತು ಬಹಳಷ್ಟು ಮಾತನಾಡುತ್ತಾರೇನೋ ಸರಿ, ಆದರೆ ಅದರವರೆಗೆ ಪ್ರವೇಶ ಪಡೆಯಲು ಪ್ರಯತ್ನಪಡುವವರು ಇಲ್ಲವೆಂದರೂ ಸರಿಯೆ. ಅಲ್ಲಿ ಶುದ್ಧತೆ,   ಸರಳತೆ,   ಶಾಂತಿಗಳು.  ಕೂಡ ಇಲ್ಲ. (ಲುಪ್ತವಾಗಿಹೋಗುತ್ತವೆ).ನಿಜವಾಗಿ ಅದು ಇವೆಲ್ಲವುಗಳಿಗೂ ಆಚೆಗೆ ಇದೆ. ಜನ್ಮಜನ್ಮಗಳ, ಬಹುವರ್ಷಗಳ ನಿರಂತರ ಪರಿಶ್ರಮದಿಂದ ಸಂಪಾದಿಸಬಹುದಾದ ವಸ್ತು ಇದೇ. ಪ್ರಪಂಚದ ಅತಿ ದೊಡ್ಡ ಸಂತರೂ ಕೂಡ ಈ ವಿಷಯದಲ್ಲಿ ಆ ಮಟ್ಟಕ್ಕೆ ಏರಲಾಗಿರಲ್ಲಿಲ್ಲವೆಂದು.ನಾನು ಧೈರ್ಯದಿಂದ ಹೇಳಬಲ್ಲೆ.ಸಾಧಕನು ಪಡೆಯಲು ತಪಿಸುವ ಆತ್ಮನಿರಸನದ ಸ್ಥಿತಿ ಅದರಲ್ಲಿದೆ.ಅದೇ ನಿಜವಾದ ಜೀವನ.ಆ ಬಿಂದುವನ್ನು ತಲುಪುವುದಕ್ಕೂ ಮುಂಚಿತವಾಗಿಯೇ ಎಲ್ಲ ಕ್ರಿಯೆಗಳೂ ಕೊನೆಗೊಳ್ಳುತ್ತವೆ ಅದು ಕೇಂದ್ರೀಯ ಬಿಂದು,’ಸತ್ತೆ’ಯ ನೈಜ ಸ್ಥಿತಿ ಅದೇ. SMP 14
  34. ಮನುಷ್ಯನಲ್ಲಿ ಬಲವಿದೆ. ಆ ಬಲವು, ಮೂಲ ವಸ್ತುವಿನೊಡನೆ ಸಂಬಂಧಪಟ್ಟ ನಿಲುಗಡೆಯಿಂದಾಗಿ ಲಭಿಸಿದೆ. TM 8
  35. ಸೃಷ್ಟಿಯ ಸಮಯದಲ್ಲಿ ಪ್ರತಿಯೊಂದು ವಸ್ತುವು ಒಂದು ಬಗೆಯ ಅಸ್ತಿತ್ವವನ್ನು ತಾಳಲಾರಂಭಿಸಿತು. ಮನುಷ್ಯನೂ ತನ್ನ ವೈಯಕ್ತಿಕ ಅಸ್ತಿತ್ವವನ್ನು ಪಡೆದನು. ಮನುಷ್ಯನ ರಚನೆಯಲ್ಲಿ ವ್ಯಕ್ತಿತ್ವದ ಅರಿವು ಮೊಟ್ಟಮೊದಲಿನ ಆವರಣವಾಯಿತು. ಮುಂದೆ ಅವು ಒಂದರಮೇಲೊಂದು ಹೆಚ್ಚುತ್ತಹೋದವು. ಅಹಂಕಾರವು ಬೆಳೆಯುತ್ತ ಹೋಗಿ ಕೊನೆಗೆ ಸ್ಥೂಲರೂಪವನ್ನು ಪಡೆಯಿತು. ಮನಸ್ಸಿನ ಇಂದ್ರಿಯಗಳ ಹಾಗೂ ಬುಧ್ದಿಶಕ್ತಿಯ ಕಾರ್ಯಗಳು ಸ್ಥೂಲತೆಯಲ್ಲಿ ಪಾಲುಗೂಡಿದವು. ದೇಹ ಮತ್ತು ಮನಸ್ಸಿನ ಕಾರ್ಯಗಳು ಸಂಸ್ಕಾರ ರಚನೆಗೆ ಕಾರಣವಾದವು. ಕೊನೆಗೆ, ಈಗ ಮನುಷ್ಯನ ಹೊರಗಿನ ಸ್ಥೂಲಶರೀರ, ಒಳಗಿನ ಸೂಕ್ಷಮ ದೇಹ ಮತ್ತು ಆವರಣಗಳಿಂದೊಡಗೂಡಿದ ಸ್ಥೂಲತಮರೂಪದಲ್ಲಿದ್ದಾನೆ. ಅಸ್ತಿತ್ವದ ಈ ಬಾಹ್ಯ ಸ್ಥೂಲತೆಯ ಅವಸ್ಥೆಯಿಂದ ಒಂದರಹಿಂದೊಂದು ಸೂಕ್ಷಾವಸ್ಥೆಗಳನ್ನು ದಾಟುತ್ತ ಕೇಂದ್ರದ ಕಡೆಗೆ ಈಗ ನಾವು ಸಾಗುವೆವು. ಸ್ಥೂಲಶರೀರದಿಂದ ನಾವು ಸೂಕ್ಷ್ಮಶರೀರಕ್ಕೆ ಬರುವೆವು. ಅಲ್ಲಿಂದ ಹೆಜ್ಜೆಹೆಜ್ಜೆಗೂ ಸೂಕ್ಷ್ಮವಾಗುತ್ತ ಕಾರಣ ಶರೀರಕ್ಕೆ ಬಂದು ಬೇರೆ ಆವರಣಗಳನ್ನು ಕಳಚುತ್ತ ಮುಂದಕ್ಕೆ ಸಾಗುವೆವು. RD 88
  36. ಬೇರೆ ವಿಧದಲ್ಲಿ ಹೇಳುವುದಾದರೆ, ನಾವು ಅಸ್ತಿತ್ವದ ಈ ಸ್ಥೂಲರೂಪಕ್ಕೆ ಬರುವವರೆಗೆ ಕಲ್ಪನಾತೀತವಾದ ಸೂಕ್ಷ್ಮತಮ ಕೇಂದ್ರಬಿಂದುವಿಗೆ ಅಸಂಖ್ಯ ವೃತ್ತಗಳು ತಮ್ಮ ಸಮೀಪದ ಹೊರಗಿನ ವೃತ್ತಕ್ಕೆ ಕೇಂದ್ರವಾಗುತ್ತ ಹೋಗುವವು. ನಾವೀಗ ಮಾಡಬೇಕಾದುದೇನೆಂದರೆ, ಸದ್ಯದ ಅಸ್ತಿತ್ವದ ಸ್ಥೂಲರೂಪದಿಂದ ಮಾನವನು ಮುಟ್ಟಲು ಸಾಧ್ಯವಾದ ದೂರದವರೆಗೆ ಸೂಕ್ಷ್ಮಾತಿಸೂಕ್ಷ್ಮವಾದ ಹಿಂದೆನ ರೂಪಕ್ಕೆತಿರುಗಿಹೋಗಬೇಕು.RD 86-87
  37. ಸಾಮಾನ್ಯವಾಗಿತತ್ವ ಜ್ಞಾನಿಗಳು ಪದಾರ್ಥಗಳ ಅಂತರಾಳವನ್ನು ತರ್ಕದ ಮೂಲಕ ತಲುಪಲು ಯತ್ನಿಸುವರೇ ಹೊರತು ದಿವ್ಯದೃಷ್ಟಿಯಿಂದಲ್ಲ.ಸಾಮಾನ್ಯವಾದತರ್ಕವು ತಪ್ಪಾಗಿರುವ ಸಂಭವವಿದ್ದು ನಮ್ಮನ್ನು ದಾರಿ ತಪ್ಪಿಸಬಹುದು.ಅದೇ ಅನಾವಶ್ಯಕವಾದ ತರ್ಕದಮಾಧ್ಯಮವಿಲ್ಲದೆ ಅಂತರ್ ದೃಷ್ಟಿಯಿಂದ ವಸ್ತುಗಳನ್ನು ನೋಡಿದುದಾದರೆಯಾವ ದೋಷವೂ ಇಲ್ಲದೆ ಅವು ಮೂಲ ರೂಪದಲ್ಲಿ ಗೋಚರಿಸುವವು ERY 3-4
  38. ಅರ್ಜುನನು ಶ್ರೀ ಕೃಷ್ಣನನ್ನು ಕುರಿತು, “ನಿನ್ನನ್ನು ಪೂಜಿಸುವವರು ಹಾಗೂ ಅವ್ಯಕ್ತವನ್ನು ಪೂಜಿಸುವವರು-ಇವರಲ್ಲಿ ಯಾರು ಶ್ರೇಷ್ಠಯೋಗಿಗಳು?” ಎಂದು ಕೇಳಿದನು. ಶ್ರೀ ಕೃಷ್ಣನು ಹೇಳಿದ:’ಯಾರು ನನ್ನನ್ನು ಅತ್ಯಂತ ಶ್ರದ್ಧೆಯಿಂದ ಸತತವಾಗಿ ಪೂಜಿಸುವರೋ, ಅವರೇ ಶ್ರೇಷ್ಠ ಯೋಗಿಗಳು. ಸರ್ವಶಕ್ತವೂ , ಸರ್ವವ್ಯಾಪಿಯೂ , ಸರ್ವಜ್ಞವೂ ಆದ ಅವ್ಯಕ್ತ ಕೇವಲವನ್ನು ಆಶ್ರಯಿಸಿ ಪೂಜಿಸುವವರ ಪರಿಶ್ರಮವು ಹೆಚ್ಚಿನದಾಗಿದೆ ERY 13
  39. ಯಾವ ದೇವತೆಯೂ ಈ ವೃತ್ತವನ್ನು ಎಂದೂ ದಾಟಿಲ್ಲ.‌ಸಾಧನ, ಸಾಮರ್ಥ್ಯಗಳುತನ್ನ ಅಂಕಿತದಲ್ಲಿರುವಮನುಷ್ಯನಿಗೆ ಮಾತ್ರ ಇದು ಸಾಧ್ಯವಾಗಿಆತನು ದೇವತೆಗಳಿಗಿಂತಲೂ ಎಷ್ಟೋ ಮುಂದುವರಿಯುವನು. ನಿಜವಾಗಿಯೂ ನಾವೇ ನಮ್ಮಲ್ಲಿರುವ ಸಾಮರ್ಥ್ಯದಿಂದಅವರಿಗೆ ಶಕ್ತಿಯನ್ನು ಕೊಡುವೆವು ERY 29
  40. ಜನರು ತಮ್ಮ ಅಲ್ಪ ಜೀವನಾವಧಿಯಲ್ಲಿ ದೇವರ ನ್ಯಾಯದಂಡವನ್ನು ಲೆಕ್ಕಿಸದೇ ಅನೇಕ ಕೆಟ್ಟಕೆಲಸಗಳನ್ನು ಮಾಡುವರು.AB | P 13
  41. ತೃಪ್ತಿಯು ಮಾನವ ನಿರ್ಮಿತವಾಗಿದ್ದರೆ ಶಾಂತಿಯು ಈಶ್ವರ ನಿರ್ಮಿತವಾಗಿದೆ. AB I P 28
  42. ಸಹನಶೀಲತೆ ಹಾಗೂ ಸೌಮ್ಯತೆಗಳನ್ನು ಕಲಿಯಲು ಮನೆಯು ಒಳ್ಳೆಯ ಪಾಠಶಾಲೆ. ಒಂದು ದೃಷ್ಟಿಯಿಂದ, ಇಂಥ ಸಂದರ್ಭಗಳಲ್ಲಿ ತಾಳ್ಮೆಯಿಂದಿರುವುದು ಉಳಿದ ಬಗೆಯ ತಪಸ್ಸಿಗಿಂತಲೂ ಮಿಗಿಲಾದ ತಪಸ್ಸು. ಆದುದರಿಂದ ದು:ಖ ಕೋಪಗಳ ಬದಲಾಗಿ ತಾನೇ ತಪ್ಪಿತಸ್ಥನೆಂಬ ಭಾವನೆಯನ್ನು ತಾಳಬೇಕು ಬೇರೆಯವರು ನಿಷ್ಠುರವಾಗಿ ಬೈದರೂ ತನ್ನದೇ ತಪ್ಪೆಂದು ತಿಳಿಯುವ ಮನೋಭಾವವೇ ಪಶ್ಚಾತಾಪ. ಆಗ ತಾಳ್ಮೆಯನ್ನು ಆಶ್ರಯಿಸಲೇಬೇಕಾಗುವುದು. ಇತರರಿಗೆ ಅರಣ್ಯವಾಸ, ವಿರಕ್ತತೆ ಮತ್ತು ಏಕಾಂತತೆಗಳು ಪ್ರಪಂಚದ ತುಮುಲಗಳಿಂದ ಬಿಡುಗಡೆಹೊಂದುವ ಹಾಗೂ ಸಹನೆ-ತಿತಿಕ್ಷೆಗಳನ್ನು ಸಾಧಿಸುವ ಮಾರ್ಗಗಳಾಗಿರಬಹುದು. ನಮಗೆ ಮಾತ್ರ ನಮ್ಮ ಕುಟುಂಬದವರ, ಗೆಳೆಯರ ಹಾಗೂ ಪ್ರಪಂಚದ ಜನರನಿಂದೆ-ಮೂದಲಿಕೆಗಳೆ ನಿಜವಾದ ತಪಸ್ಸು. AB I P71
  43. ಮುಂಜಾನೆ 10 ಗಂಟೆಗೆ, ಪ್ರತಿಯೊಂದು ಕಣವೂ ಪ್ರತಿಯೊಂದು ಎಲೆಯೂ ಭಗವತ್ಸ್ಮರಣೆಯಲ್ಲಿ ತೊಡಗಿದಂತೆ ಅನುಭವವಾಯಿತು. ಆದರೆ ಗೌರವಾರ್ಹ ಮನುಷ್ಯ ಮಾತ್ರ ಹೀಗೆ ಸ್ಮರಣೆ ಮಾಡುವುದಿಲ್ಲ.AB I 119
  44. ಜನರು ಸಾಮಾನ್ಯವಾಗಿ ಕಷ್ಟಗಳಿಂದ ಪಾರಾಗಲು ಆಧ್ಯಾತ್ಮಿಕ ಸಾಧನಗಳನ್ನು ಕೈಕೊಳ್ಳುತ್ತಾರೆ. ಆದರೆ, ಸಂತರು ತಾವು ಸುಖಪಡದೆ ಇತರರಿಗೆ ಸುಖಕೊಡಬೇಕೆಂಬುದು ನನ್ನ ಅಭಿಪ್ರಾಯ. AB I 179
  45. ಸೂಚನೆ“ ನಮ್ಮ ನಿರೀಕ್ಷೆಗಿಂತ ಕೆಳಗಿರುವ ಯಾರೂ ನಮ್ಮಸತ್ಶಂಗವನ್ನು ಸೇರುವುದು ನನಗಿಷ್ಟವಿಲ್ಲ” AB II VOL I P 52
  46. ” ಫತೆಹ್ ಗಡದಲ್ಲಿ ಸಮಾಧಿಯ ಮುಂದೆ ಹಾಡುವುದು ನಿಷಿದ್ಧ. “ಈ ಸೂಚನೆಯನ್ನು ಪಾಲಿಸಬೇಕೆ?” ಎಂಬ ವಿಚಾರ ಬಂದಿತು.ಲಾಲಾಜಿ ಹೇಳಿದರು  “ಯಾರಾದರೂ ಯಾವುದಾದರೊಂದು ಸ್ಥಳಕ್ಕೆ ಹೋದರೆ, ಗುರುವಿನ ಆದೇಶಗಳನ್ನಾಗಲಿ, ಆ ಸ್ಥಾನದ  ಮೇಲ್ವಿಚಾರಕನ ಆದೇಶಗಳನ್ನಾಗಲಿ ಪಾಲಿಸಬೇಕು. ಅವು ಸರಿಯಿರಲಿ, ತಪ್ಪಿರಲಿ. AB II V I P 5-6
  47. ರೋಗದಿಂದ ಪಾಡುಪಡುವವರೆಲ್ಲ ಅದನ್ನು ದ್ವೇಷಿಸುತ್ತಾರೆ. ಆದರೆ ಮೂಲತ: ಅದು ಬಹಳ ಶುಧ್ಧಿಕಾರಕವಾಗಿದೆ. ಅಶುಧ್ಧ ಸಂಸ್ಕಾರಗಳು ಭೋಗಕ್ಕೆ ಬಂದಾಗ. ಆ ಸೃಷ್ಟಿಕರ್ತನ ದೃಷ್ಟಿಯುನಮ್ಮತ್ತರುತ್ತದೆ. ಅದು ಮಗುವನ್ನು ತೂಗುವ ತೊಟ್ಟಿಲಿನಂತೆ. ಮತ್ತು ಅದರಿಂದ ನಾವು ಪುಷ್ಟಿಯನ್ನು ಪಡೆಯುತ್ತೇವೆ. ಸತ್ಸಂಸ್ಕಾರಗಳ ಭೋಗ ಉಂಟಾಗುವಾಗಲೂ ಭಗವಂತನ ದೃಷ್ಟಿ ನಮ್ಮಕಡೆಗಿರುತ್ತದೆ. ಅಂದರೆ ,ರೋಗವು ತನ್ನೊಂದಿಗೆ ದುಷ್ಟ ಸಂಸ್ಕಾರಗಳನ್ನು ಕೊಂಡೊಯ್ಯುವದರಿಂದ, ನಾವು ಅದರಿಂದ ಉಪಕೃರೇ ಆಗುತ್ತೇವೆ. ಎಲ್ಲವೂ ಆ ಭಗವಂತನ ಲೀಲೆ. ‘ಪ್ರೇಮ’ ಮತ್ತು ‘ದ್ವೇಷ’ ಎರಡೂ ಒಂದೇ ಎಂದು ನಾನೆಂದರೆ, ನಿವೇನೂ ಆಶ್ಚರ್ಯ ಪಡಬೇಕಾಗಿಲ್ಲ. ಪ್ರೇಮವೆಂಬುದು ವಿಧಾಯಕ ಭಾವನೆಯಾದರೆ ,ದ್ವೇಷವೆಂಬುದು ನಕಾರಾತ್ಮಕ ಭಾವನೆ.ME 71
  48. ಭಾವರೂಪದ ಹಾಗೂ ಅಭಾವರೂಪದ ಎರಡೂ ತರದ ಕಲ್ಪನೆಗಳಿಂದ ನಾವು ಮುಕ್ತರಾದಾಗಲೇ ಕೃತಕತೆಯನ್ನು ಕಳೆದುಕೊಳ್ಳಬಹುದು. ಅಭಾವರೂಪದಲ್ಲಿ ನೀವು ಎನನ್ನೊ ಕಳೆದುಕೊಳ್ಳುವಿರಿ. ಬಾವರೂಪದಲ್ಲಿ ಎನನ್ನೋ ಪಡೆಯುವಿರಿ. ಆದುದರಿಂದ .ಲಾಭ – ನಷ್ಟಗಳಿದ್ದಾಗ ನೀವು ಮಾಯೆಯೊಡನೆ ಒಂದಾಗುವಿರಿ. AB I P 178
  49. ಭಗವಂತನು ಭಕ್ತನ ಪ್ರತಿಯೊಂದು ಪ್ರಶ್ನೆಗೂ ಉತ್ತರದ ಬಾಗಿಲನ್ನು ಮುಚ್ಚಿರುವನು. ಈ ಬಾಗಿಲು ಏನೆಂಬುದನ್ನು ವಿಚಾರಮಾಡಿದಾಗ, ಈ ತೆರೆ ಜ್ಞಾನಕ್ಕೆ ಸಂಬಂಧಪಟ್ಟುದೆಂದು ತಿಳಿದುಬರುವುದು. ಈಗ ಈ ತೆರೆಯನ್ನು ಕುರಿತು ಕೇಳಿ. ಭಗವಂತನ ಮೂಲ ರಹಸ್ಯವನ್ನು ತಿಳಿಯಲು ಅಡ್ಡಬರುವ ತೆರೆಯಾವುದು? ನಾವು ಭಗವಂತನ ಕುರಿತು ವಿಚಾರಮಾಡಿದಾಗ ನಮ್ಮ ತಿಳುವಳಿಕೆಯು ತನ್ನ ಸುತ್ತಲೂ ಒಂದು ವೃತ್ತವನ್ನು ನಿರ್ಮಿಸಿಕೊಳ್ಳುವುದು. ನಮ್ಮ ಪ್ರತಿಯೊಂದು ಪ್ರಶ್ನೆಗೂ ಉತ್ತರ ದೊರೆಯದಿರಲು ಇದೇ ಗ್ರಂಥಿಯೆ ಕಾರಣ. TM 15-16
  50. ಸರಳತೆ ನಿಸರ್ಗದಜೀವಾಳ. ಅದು ಪರತತ್ತ್ವದಲ್ಲಿ ಸುಪ್ತವಾಗಿದ್ದ ಸ್ಥಿತಿಯ ಛಾಯೆ. ಬೆಳವಣಿಗೆಗೆ ಅದೇ ಕಾರಣ. ಅದನ್ನು ಆತ್ಮದ ಸಾರಸರ್ವಸ್ವವೆಂದರೆ ಹೆಚ್ಚು ಸಮಂಜಸವಾದೀತು. ವಾಸ್ತವವಾಗಿ ಇದು ನಿಸರ್ಗದ ಜೀವಸತ್ವ. ಇಲ್ಲಿಂದಲೇ ಎಲ್ಲ ಕ್ರಿಯೆಯೂ ಆರಂಭವಾಗುವುದು. ಇದೇ ನಿಜತತ್ತ್ವ ಇಲ್ಲಿಂದ ಮುಂದೆ ಮಾಯೆಯ ವಲಯವಿದೆ. ಸಾಮಾನ್ಯವಾಗಿ ಜನರು ಮಾಯೆಯ ಕ್ಷೇತ್ರದಲ್ಲಿಯೇ ಇದ್ದು ಅದರಂತೆ ಕಾರ್ಯಮಾಡುವರು. ಮಾಯೆಯು ಸೃಷ್ಟಿಯ ನಾಮ-ರೂಪಗಳಿಗೆ ಕಾರಣವಾಯಿತೆನ್ನಬಹುದು.TM 34
  51. ದೈವಕೃಪೆಯುನ್ಮಾದಕೆಳಸುತಿಹಸದ್ಭಕ್ತ!
    ಮೊದಲುನಿಜಹೃದಯವನುಬರಿದುಮಾಡು;

    ಪೂರ್ತಿಬರಿದಾಗಿರುವಬಟ್ಟಲೊಳುಮಧುಪಾತ್ರೆ

    ಬಾಗುವುದು, ಇಂತದರಗುಟ್ಟುನೋಡು. TM 18

  52. ಪ್ರತಿಬಿಂಬವನ್ನೆಸೆಯುವ ಜಗತ್ತೆಂದರೆ ಇಲ್ಲಿ ಬ್ರಹ್ಮಾಂಡಮಂಡಲವೆಂದು ನನ್ನ ಅಭಿಪ್ರಾಯ. ಈ ಜಗತ್ತಿನಲ್ಲಿ ಪ್ರಕಟವಾಗುವ ಪ್ರತಿಯೊಂದುವಸ್ತುವು ಮೊದಲು ಬ್ರಹ್ಮಾಂಡಮಂಡಲದಲ್ಲಿ ಸೂಕ್ಷ್ಮರೂಪದಿಂದ ಕಾಣಿಸಿಕೊಳ್ಳುವುದು. TM 47
  53. ಈ ನಿಯಮದಲ್ಲಿ ಅಡಕವಾಗಿರುವ ತತ್ತ್ವಜ್ಞಾನವು ಭೌತಿಕತೆಯಿಂದ ಆರಂಭವಾಗಿ ನಾವು ಮುಟ್ಟಬೇಕಾದ ಅಂತಿಮಸ್ಥಿತಿಯಲ್ಲಿ ಕೊನೆಗಾಣುವುದು. TM 51
  54. ಪ್ರಾಣ ಶಕ್ತಿಯು ಎಲ್ಲ ಕಡೆಗೂ ವ್ಯಾಪಿಸಿರುವದರಿಂದ ಯಾವ ವಸ್ತುವೂ ಅದರಿಂದ ಹೊರತಾಗಿಲ್ಲ. ಅದು ಆಹಾರದ ಒಳಗೂ ಹೊರಗೂ ಇರುವುದು. TM 52