1. ಸತ್ಯ ಸಾಕ್ಷಾತ್ಕಾರಕ್ಕೆ ವಿಧಾನಗಳು ಹಲವಾರು; ಹಾಗೂ ಪ್ರತಿಯೊಂದು ತನ್ನ ಸಾಮರ್ಥವನ್ನು ಕುರಿತು ಪ್ರತಿಪಾದಿಸುತ್ತದೆ. ಆದರೆ ಯಾವುದಾದರೊಂದು ಪದ್ಧತಿಯನ್ನು ಅನುಸರಿಸುವ ಮೊದಲು, ಯಾವುದು ಅತ್ಯಂತ ಉತ್ತಮವಾದುದು ಎಂದು ನಾವು ಕಂಡುಕೊಳ್ಳಲೇಬೇಕಾದುದು ನಮ್ಮ ಕರ್ತವ್ಯ. ಜೀವನದ  ರಹಸ್ಯವನ್ನು ಬಿಡಿಸಲು ನಿಜವಾದ ಪದ್ಧತಿಯು ಲಭಿಸುವುದು , ನಮ್ಮ ವೈಯಕ್ತಿಕ ವಿವೇಚನೆ ಹಾಗೂ ಪರಮಾತ್ಮನ ಅನುಗ್ರಹ ಇವುಗಳ ಮೇಲೆ ಅವಲಂಬಿತವಾಗಿದೆ.
      2.  ಭಗವಂತನನ್ನು ತಲುಪಲು ಇರುವುದು ಒಂದೇ ಒಂದು ದಾರಿ. ಆತನನ್ನು ತಲುಪಲು ಇರುವ ಪದ್ಧತಿಯು ಕೂಡ ನೇರವಾಗಿಯೇ ಇರುವುದು. ನೀವು ಇದರ ಬಗ್ಗೆ ಗೌರವವಿದ್ದು ಸೂಕ್ಷತೆಯಿಂದ ಗಮನಿಸಿದರೆ ಅಲ್ಲಿರುವುದು ಇಂಥ ನೇರವಾದ ಒಂದು ಮಾರ್ಗೆ ದೈವೀಕತೆಯು ಒಂದು ಆಟವಾಗಿದೆ ಹಾಗೂ ದೈವತ್ವವು ಅದರ ದಾರಿ ME P 91 Divine play
      3. ಯಾರನ್ನು ಆದರ್ಶವೆಂದು ಭಾವಿಸಲಾಗುವುದೋ ಆತನೇ ಗುರು. ಆ ಆದರ್ಶವನ್ನು ಬಲಪಡಿಸುವವನೇ ಗುರು ಬಂಧು. ಧ್ರುವ ಪದವನ್ನು ತಲುಪಿದವನ ಸಹಚರ್ಯದಿಂದ ಹೃದಯವನ್ನು ಪ್ರಾಪಂಚಿಕ ತೊಂದರೆಗಳಿಂದ ಮುಕ್ತಗೊಳಿಸಬಹುದು.AB II Vol I P 58 30th June 1944
      4. ಸಾಧನ ಪದ್ಧತಿಯಲ್ಲಿ ಎರಡು ಪಾರ್ಶ್ವಗಳಿರುತ್ತವೆ. ಒಂದು ಸ್ವಯಂ ಸಾಧನೆ (ಅಭ್ಯಾಸ). ಮತ್ತೊಂದು ಗುರುವಿನ ಸಹಾಯ ಮತ್ತು ಆಸರೆ. ಅಗತ್ಯವಾದ ಅಂತ: ಸ್ಥಿತಿಯನ್ನು ಬೆಳೆಸಿಕೊಳ್ಳಬೇಕಾದರೆ ಸ್ವಪ್ರಯತ್ನ (ಅಭ್ಯಾಸ)ವೊಂದೇ ಸರ್ವಸ್ವವೂ ಅಲ್ಲ, ಅಥವಾ ಪರ್ಯಾಪ್ತವೂ ಅಲ್ಲ, ಅದು ದೈವೀಕೃಪೆಯಿಂದ ಪೂರಣಗೊಳ್ಳಬೇಕು; ಉದ್ದೇಶ ಸಾಧನೆಗೆ ಅತ್ಯವಶ್ಯವಾಗಿ ಬೇಕಾದುದು ಅದೇ ಸೈ.
      5. ಯಾವಾಗ ಕಲ್ಪನೆ(ಭಾವ) ಉಂಟಾಗುವುದೋ, ಆಗ ಅದರ ಪರಿಣಾಮ ರೂಪದಲ್ಲಿ ಕಾರ್ಯವೂ ಬರುವುದು. ಅರ್ಥವಿದ್ದಲ್ಲಿ ಶಬ್ದಗಳೂ ಇರುತ್ತವೆ. ನೀವು ಇವುಗಳನ್ನೆಲ್ಲ ನಿರ್ಮೂಲನೆಗೈದಾಗ ಸತ್ಯವು ಉದಯಿಸಲು ಆರಂಭಿಸುತ್ತದೆ. ಮತ್ತು ಅದು ಪೂರ್ಣವಾಗಿ ಬೆಳೆದು ಫಲ-ಪುಷ್ಪಗಳನ್ನು ಕೊಡಲಾರಂಬಿಸುವುದು.
      6. ಸತ್ಯಾನ್ವೇಶಕರಿಗೆ ನನ್ನ ಹಿತವಚನ- ಮನಸ್ಸು ಮನಸ್ಸನ್ನು ಅರಿಯಬಲ್ಲುದು. ಅಂತೆಯೇ ದೈವತ್ವವನ್ನು ದೈವತ್ವ ಅರಿಯಬಲ್ಲದು. ಅರ್ಥಾತ್ ದೈವಿಕತೆಯನ್ನು ಹೊಂದಲು ನಾವು ದೈವೀಶಕ್ತಿಯನ್ನೇ ಬಳಸಬೇಕು. ಸೂರ್ಯನು ಅಲ್ಲಿಯೇ ಇದ್ದಾನೆ, ಅವನ ಪೂರ್ಣ ಪ್ರಕಾಶವನ್ನು ಹೊಂದಲು ನೀವೇ ಸ್ವತ: ಮುಸುಕಿದ ಮೋಡಗಳನ್ನು ನಿವಾರಿಸಿಕೊಳ್ಳಬೇಕು
      7. ಜನರು ತಮ್ಮ ಮನಬಂದದ್ದನ್ನು ಅನುಸರಿಸುತ್ತ , ತಮಗಿಷ್ಟವಾದದ್ದನ್ನು ಮಾಡುತ್ತಾರೆ, ಆದರೆ ಅದರ ಪರಿಣಾಮ ಮಾತ್ರ , ನಾನು ಬಯಸಿದಂತೆ ಆಗಬೇಕೆಂದು ನಿರೀಕ್ಷಿಸುತ್ತಾರೆ.  ಹಾಗಾಗುವುದು ನನಗೂ ಅವರಿಗೂ  ಅತ್ಯಂತ ಪ್ರೀಯವಾದುದೇನೊ ಸರಿ. ಪರಿಣಾಮವೆಂದರೆ, ಒಂದು ರೀತಿ ಅಡ್ಡ ಗೋಡೆ ಏರ್ಪಡುವುದು. ಅನೇಕರ ಹೃದಯದಲ್ಲಿ ಇದು ನನಗೆ ಕಂಡು ಬರುತ್ತದೆ. ಇದು (ಈ ಅಡ್ಡಗೋಡೆಯು) ಸತ್ಯವಸ್ತುವನ್ನು ಮರೆಮಾಚಿ. ಅದನ್ನು ಅಭ್ಯಾಸಿಯ ಪಥದಿಂದ ದೂರವಿಡುತ್ತದೆ. ನೀವು ನನ್ನನ್ನು ಹೊಣೆಗಾರರನ್ನಾಗಿ ಮಾಡುವುದಾದರೆ , ನಾನು ಹೇಳುವುದನ್ನು ಅನುಸರಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.  ಜಪವನ್ನು ಮಾಡುವುದು ಹೇಗೆಂದು ಗೊತ್ತಿಲ್ಲದಿದ್ದರೂ , ಜನರು ಅದನ್ನು ಮಾಡುತ್ತಾರೆ. ಹಾಗೆಯೇ ಇತರ ಪೂಜಾ ಪದ್ಧತಿಗಳಿವೆ, ಜನರು ಅವುಗಳನ್ನು ಮಾಡುವುದು ತಮ್ಮ ತೃಪ್ತಿಗೊಸ್ಕರವೇ ಹೊರತು, ಭಗವಂತನನ್ನು ಮೆಚ್ಚಿಸಲಿಕ್ಕಲ್ಲ. ನಾನು ನಿಮ್ಮಲ್ಲಿ ಸ್ವಾಭಾವಿಕತೆಯನ್ನುಂಟು ಮಾಡಲು ಬಯಸುತ್ತೇನೆ. ಆದರೆ ನೀವು ಯಾಂತ್ರಿಕತೆಯನ್ನು ಹೆಚ್ಚು ಮೆಚ್ಚುತ್ತೀರೆ. ಹೀಗೆ ನೀವು ಕನ್ನಡಿಯನ್ನು ಅದರ ಹಿಂಭಾಗದಿಂದ ನೋಡುತ್ತೀರಿ.ME P 66 Ultimate solution
      8. ಬಹುಮಟ್ಟಿಗೆ ಎಲ್ಲ ಸಾಧನ ಪದ್ಧಿತಿಗಳಲ್ಲಿಯೂ ಎರಡು ಪಾರ್ಶ್ವಗಳಿರುತ್ತವೆ. ಒಂದು ಸ್ವಯಂ ಸಾಧನೆ (ಅಭ್ಯಾಸ). ಮತ್ತೊಂದು ಗುರುವಿನ ಸಹಾಯ ಮತ್ತು ಆಸರೆ. ಅಗತ್ಯವಾದ ಅಂತ: ಸ್ಥಿತಿಯನ್ನು ಬೆಳೆಸಿಕೊಳ್ಳಬೇಕಾದರೆ ಸ್ವಪ್ರಯತ್ನ (ಅಭ್ಯಾಸ)ವೊಂದೇ ಸರ್ವಸ್ವವೂ ಅಲ್ಲ, ಅಥವಾ ಪರ್ಯಾಪ್ತವೂ ಅಲ್ಲ, ಅದು ದೈವೀಕೃಪೆಯಿಂದ ಪೂರಣಗೊಳ್ಳಬೇಕು; ಉದ್ದೇಶ ಸಾಧನೆಗೆ ಅತ್ಯವಶ್ಯವಾಗಿ ಬೇಕಾದುದು ಅದೇ ಸೈ.ME P 51
      9. ಇಂಥ ಸಂದರ್ಭಗಳಲ್ಲಿ ಮೇಲಕ್ಕೇರಬಯಸುವ ಪ್ರತಿಯೊಬ್ಬನೂ ಉನ್ನತಸ್ಥಿತಿಯಲ್ಲಿರುವ ಸಹಬಾಂಧವನೊಂದಿಗೆ ಶ್ರದ್ಧೆ-ಭಕ್ತಿಗಳಿಂದ ಹೊಂದಿಕೊಳ್ಳಬೇಕು. ಆತನ ಪ್ರಭಾವದಿಂದ ಕೆಳಮಟ್ಟದ ವಿಚಾರಗಳು ಪರಿಶುದ್ಧವಾಗುವವು. ಸಾಧಕನ ಆಕರ್ಷಣ-ವಿಕರ್ಷ ಣಗಳಿಂದ ಮುಕ್ತನಾಗುವನು. ಜೊತೆಗೆ, ದುಷ್ಟಜಾಲವನ್ನು ಕತ್ತರಿಸಲು ಸಹಾಯಕವಾಗುವಂಥ ಸದಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.TM 39
      10. ಸಾಧಕನ ಮನೋವೃತ್ತಿಗಳಲ್ಲಿ ಮಿತತ್ವವನ್ನು ಉಂಟುಮಾಡದ ಯಾವ ಸಾಧನವೂ ಪ್ರಯೋಜನಕಾರಿಯಲ್ಲ.VR 118
      11. ಮಾನಸಿಕ ಹಾಗೂ ಆತ್ಮಿಕ ಲಘುತ್ವದ ಸತತವಾದ ಬೆಳವಣಿಗೆಯು ಆಧ್ಯಾತ್ಮಿಕ ಪ್ರಗತಿಯ ನಿಶ್ಚಿತ ಪರಿಣಾಮವಾಗಿದೆ.RD 62
      12. ನಿಮ್ಮ ಸಾಧನೆಯ ಸಹಜ ಪರಿಣಾಮವಾಗಿ ಆಂತರಿಕ ಶಾಂತಿ, ಮಾನಸಿಕ ಸಮಾಧಾನ ಸರಳತೆ ಮತ್ತು ಲಘುತ್ವಗಳುಂಟಾಗದಿದ್ದರೆ ನೀವು ತಪ್ಪು ದಾರಿಯನ್ನು ಹಿಡಿದಿರುವಿರೆಂದೂ ನಿಮ್ಮ ತರಬೇತಿಯು ದೋಷಯುಕ್ತವಾಗಿದೆಯೆಂದೂ ನೀವು ನಿಶ್ಚಿತವಾಗಿ ತಿಳಿಯಿರಿ.RD 54
      13. ವಸ್ತುವನ್ನು ಪಡೆಯಲು ಅನುದಿನವೂ ಅಧಿಕವಾಗುವ ತಳಮಳವಾಗಲಿ, ಆತುರದಿಂದ ಕೂಡಿದ ಸ್ಥಿರಸಂಕಲ್ಪವಾಗಲಿ ನಮ್ಮ ಪ್ರಯತ್ನಗಳ ಬಲವನ್ನು ಹೆಚ್ಚಿಸುವುದರಿಂದ ನಮಗೆ ಅದೇ ಸತ್ಯವಸ್ತುವಿನ ಸತತವಾದ ಸಂಬಂಧವುಳಿದು ನಮ್ಮ ಆಧ್ಯಾತ್ಮಿಕ ಸುಸ್ಥಿತಿ ಪ್ರಗತಿಗಳಿಗೆ ಸಹಾಯಕವಾಗುವ ಪ್ರತಿಯೊಂದು ಸೂಚನೆಯನ್ನು ನಾವು ಗ್ರಹಿಸುತ್ತ ಹೋಗುತ್ತೇವೆ. ಸಾಧ್ಯವಾದಷ್ಟು ಅಲ್ಪ ಸಮಯದಲ್ಲಿ ಗುರಿಯನ್ನು ಮುಟ್ಟಬೇಕೆಂಬ ತವಕ ಅಥವಾ ಸತತ ಅಸ್ವಸ್ಥತೆಯು ಬಹು ಮುಖ್ಯವಾದ ಅಂಶವಾಗಿದ್ದು ನಮ್ಮ ತೀವ್ರ ಯಶಸ್ಸಿಗೆ ಸಹಾಯಕವಾಗುವುದು. RD 31
      14. ಸ್ಥೂಲ ಕಲ್ಪನೆಯು ನಿಮ್ಮನ್ನು ಅನಿವಾರ್ಯವಾಗಿ ಒಂದು ಸೀಮೆಯಲ್ಲಿ  ಮತ್ತು ಬಂಧನದಲ್ಲಿಯೆ ಇಡುವುದು. ಆದುದರಿಂದ ಅಂತಿಮ ಧ್ಯೇಯಸಿಧ್ಧಿಯು ಅಥವಾ ಕೇವಲ ಮುಕ್ತಿಯು ನಿಮಗೆಂದಿಗೂ ಸಾಧ್ಯವಾಗುವುದಿಲ್ಲ. ಆದುದರಿಂದಲೇ  ಅನೇಕ ವರ್ಷಗಳ ಸಾಧನೆಯ ಅನಂತರವೂ ಇವರು ಸಿಧ್ಧಿಯ ನಿಮ್ನಸ್ತರದಲ್ಲಿಯೇ ಉಳಿಯುವರು. ಜೀವಧಾರಣೆಗೆ ಅಗತ್ಯವಾದ ಪ್ರಾಣವಾಯುವು ಸಹ ಲಭಿಸದ, ನಿಂತ ನೀರಿನ ಹೊಂಡದಲ್ಲಿಯೇ ಎಲ್ಲವನ್ನೂ ಅರಸುವವರ ಗತಿ ಇವರದು. RD 11
      15. ಸಂಕ್ಷಿಪ್ತವಾಗಿ ಹೇಳುವುದಾದರೆ, ಖಚಿತವಾದ ಯಶಸ್ಸಿಗೆ ಬೇಕಾಗಿರುವುದು ಸತತ ಹಂಬಲ, ಸರಿಯಾದ ವಿಧಾನಗಳು ಮತ್ತು ಶ್ರದ್ಧೆಯಿಂದ ಪ್ರಯತ್ನ.ಆತನು ಪ್ರಪಂಚದ ಆಮಿಷಗಳ ಬಗೆಗೆ ಕುರುಡನಾಗಿರುವನು. ಒಂದೇ ಗುರಿ, ಒಂದೇ ಉದ್ದೇಶದಿಂದ ಪ್ರೇರಿತನಾಗಿರುವನು. ತನ್ನ ಧ್ಯೇಯ ಸಿದ್ಧಿಯಲ್ಲಿ ಸಹಾಯಕವಾಗಬಹುದಾದ ಒಂದನ್ನೇ ಕುರಿತು ಯಾವಾಗಲೂ ಚಿಂತಿಸುವನು.VR 21-22
      16. ಕಾಮ ಮತ್ತು ಕ್ರೋಧಗಳು ದೇವರ ಸೃಷ್ಟಿಯಾಗಿದೆ. ಲೋಭ  ಮೋಹಗಳು ಮಾನವನ ಸೃಷ್ಟಿಯಾಗಿವೆ. ದೇವರ ಸೃಷ್ಟಿಯನ್ನು ಯಾರೂ ನಾಶಗೊಳಿಸಲಾರರು.ಅವನ್ನು ರೂಪಾಂತರಗೊಳಿಸಬಹುದು, ಅಷ್ಟೇ.ಬದಲು ನಿಮ್ಮ ಸೃಷ್ಟಿಯನ್ನು ನಾಶಗೊಳಿಸಿರಿ.AB I P29.
      17. .ಈ ಸಾಧನ ಚತುಷ್ಟಯದಲ್ಲಿ ಮೊಟ್ಟಮೊದಲನೆಯದು ವಿವೇಕ. ನಾವು ಈ ಜಗತ್ತಿನಲ್ಲಿ ಅನೇಕ ಪದಾರ್ಥಗಳನ್ನು  ನೋಡುವೆವು. ಆದರೆ ಅವುಗಳ ಅಸ್ತಿತ್ವವನ್ನು ಕುರಿತು ಆಲೋಚಿಸಿದಾಗ ಅವು ಪರಿವರ್ತನಶೀಲವೆಂದು, ಅರ್ಥಾತ್ ನಾವು ಸಾಮಾನ್ಯವಾಗಿ ಮಾಯೆಯ ಬೇರೆ ಬೇರೆ ರೂಪಗಳೆಂದು ಕಂಡುಬರುವುದು. ನಾವು ಅವುಗಳ ಕಾರಣವನ್ನು ಶೋಧಿಸಲು ಆಳಕ್ಕೆ ಇಳಿಯಲು ಪ್ರೇರೆಪಿಸಲ್ಪಡುವೆವು. ನಮ್ಮ ದೃಷ್ಟಿಯು ಹೀಗೆ ಅನಿತ್ಯ ಪದಾರ್ಥಗಳಿಂದ ನಿತ್ಯ ಅಥವಾ ಶಾಶ್ವತ ವಸ್ತುವಿನ ಕಡೆಗೆ ಹೊರಳುವುದು. ಪ್ರಾಪಂಚಿಕ ವಸ್ತುಗಳು ತಮ್ಮ ಸ್ವಾರಸ್ಯವನ್ನು  ಕಳೆದುಕೊಳ್ಳತೊಡಗಿ ನಾವು ಅವುಗಳಿಂದ ಒಂದು ತರದ ಅಲಿಪ್ತತೆಯನ್ನು ಅನುಭವಿಸತೊಡಗುವೆವು. ಇದು ನಮ್ಮನ್ನು ಸಾಧನ ಚತುಷ್ಟಯದಲ್ಲಿ ಎರಡನೆಯದಾದ ವೈರಾಗ್ಯದ ಸ್ಥಿತಿಗೆ ತರುವುದು.
      18. ಆ ನೆಲೆಯನ್ನು ತಲುಪಲು  ನಾವೇ ನಿರ್ಮಿಸಿಕೊಂಡ ಎಲ್ಲ ಪದಾರ್ಥಗಳ  ಆತ್ಯಂತಿಕ ನಾಶವನ್ನು ಅಥವಾ ಪ್ರಳಯವನ್ನು ನಾವು ತಂದುಕೊಳ್ಳಬೇಕಾಗುವುದು .RD 21
      19. ಸೃಷ್ಟಿಯು ಈಗಿರುವ ರೂಪದಲ್ಲಿ ಪ್ರಕಟವಾದಾಗ ಅದರ ಕೇಂದ್ರ ಬಿಂದುವು ಎಲ್ಲರ ಹೃದಯದಲ್ಲಿಯೂ ನೆಲೆಗೊಂಡಿದ್ದಿತು. ಅನಂತದ ಒಂದು ಭಾಗವಾಗಿದ್ದ ಈ ಬಿಂದುವು ನಮ್ಮ ದೃಷ್ಟಿಯನ್ನು ಮೂಲದ ಕಡೆಗೆ ಹೊರಳಿಸಿತು.TM 28
      20. “ಪ್ರಪಂಚವನ್ನು ತ್ಯಜಿಸಬೇಕೆಂದು ನಾನು ಹೇಳುವುದಿಲ್ಲ . ಆದರೆ ಪ್ರತಿಯೊಂದು ಕೆಲಸವನ್ನೂ ದೇವರಲ್ಲಿ ಚಿತ್ತವಿಟ್ಟು ಮಾಡಬೇಕು” TM 19
      21. ಇದು ವೈಜ್ಞಾನಿಕ ವಿಷಯವಾಗಿದ್ದು, ಪೂಜೆ ಮತ್ತು ಸಂದ್ಯೆಯ ಸಲುವಾಗಿ ಕಾಲವನ್ನು, ಉಷ್ಣತೆ ಮತ್ತು ಶೈತ್ಯಗಳಿಗನುಸಾರವಾಗಿ, ವಿಭಾಗ ಮಾಡಲಾಗಿದೆ.TM 4
      22. ಸಾಧನೆಯಲ್ಲಿ ಉಪೇಕ್ಷೆಯು ವಿಷವಿದ್ದಂತೆ. ಅದು ಸರ್ವಥಾ ತ್ಯಾಜ್ಯ .VR 221
      23. ಇಂದಿನ ಅತ್ಯಲ್ಪ ತ್ಯಾಗ, ಅದ್ಭುತ ಪರಿಣಾಮವನ್ನು ತರಲು ಕಾರಣೀಭೂತವಾಗಬಹುದು. ನನ್ನಲ್ಲೆನೂ ಉಳಿಸಿಕೊಳ್ಳದೆ, ಎಲ್ಲವನ್ನೂ ನಿನಗೆ ಸುರಿಯುತ್ತಿರುವುದೇಕೆಂದರೆ, ನನ್ನನ್ನು ಸುಡುತ್ತಿರುವ ಹುಚ್ಚುತನದ ಬೆಂಕಿಯಂತಹುದೆ, ನಿನ್ನಲ್ಲೂ ಹುಟ್ಟಿಕೊಳ್ಳಲು ಪ್ರೇರಣೆಯಾಗಲಿ ಎಂದು. ಆದರೆ ಈ ವಿಷಯದಲ್ಲಿ, ದೇವರು ಯಾರನ್ನು ಮೇಲಕ್ಕೆಳೆದುಕೊಳ್ಳುತ್ತಾನೊ ಆತನೆ ಯಶಸ್ವಿಯಾಗುವನು.
      24. ನೀವು ಒಂದು ಸಮಸ್ಯೆಯ ಪರಿಹಾರವನ್ನು ಕುರಿತು ಆಲೋಚಿಸುತ್ತಿರುವಿರೆಂದು ತಿಳಿಯಿರಿ. ತತ್ಕಾಲಕ್ಕೆ ನಿಮಗೆ ಎನೋ ಸ್ವಲ್ಪ  ಹೊಳೆಯುತ್ತದೆ ; ಅದು ಸರಿಯಾಗಿಯೂ ಇರುತ್ತದೆ. ಅದೇ ವಿಚಾರವನ್ನು ನಿಮ್ಮ ಸುಪ್ತಚೇತನದಲ್ಲಿಟ್ಟುಕೊಳ್ಳಿರಿ; ಸಮಸ್ಯೆಗೆ ತಾನಾಗಿಯೆ ಪರಿಹಾರ ದೊರೆಯುವುದು.AB P 8
      25. ಎಲ್ಲ ವಿಷಯಗಳಲ್ಲಿಯೂ ಯಶಸ್ಸಿನ ಗುಟ್ಟನ್ನು ನಾನೀಗ ಹೇಳುವೆನು. ಸಂಶಯಗಳನ್ನು  ಬದಿಗಿರಿಸಿ ಆತ್ಮವಿಶ್ವಾಸವನ್ನು ಬೆಳೆಸಿಕೊಂಡುದುದಾದರೆ ನಿಮ್ಮ ಎಲ್ಲ ಉದ್ಯಮಗಳಲ್ಲಿಯೂ ಯಶಸ್ಸು ದೊರೆಯುವುದು.AB P9
      26. ಎಲ್ಲ ವಿಷಯಗಳಲ್ಲಿಯೂ ಯಶಸ್ಸಿನ ಗುಟ್ಟನ್ನು ನಾನೀಗ ಹೇಳುವೆನು. ಸಂಶಯಗಳನ್ನು ಬದಿಗಿರಿಸಿ ಆತ್ಮವಿಶ್ವಾಸವನ್ನು ಬೆಳೆಸಿಕೊಂಡುದುದಾದರೆ ನಿಮ್ಮ ಎಲ್ಲ ಉದ್ಯಮಗಳಲ್ಲಿಯೂ ಯಶಸ್ಸು ದೊರೆಯುವುದು . ನಿಜ ಹೇಳುವುದಾದರೆ, ನಿಮ್ಮ ಇಚ್ಛಾಶಕ್ತಿಯನ್ನು ಹಾಳು ಮಾಡಿಕೊಳ್ಳಬೇಕೆಂದಿದ್ದರೆ ಸಂಶಯಗಳನ್ನು ಹುಟ್ಟಿಸಿಕೊಳ್ಳಬಹುದು. ಪ್ರಾಮಾಣಿಕತೆ ಹಾಗೂ ತತ್ಪರತೆಗಳು ಎಲ್ಲ ಕಾರ್ಯಗಳಲ್ಲಿಯೂ ಸತ್ಪಲಗಳನ್ನು ತರುವವು.
      27. ದಿನಚರಿಯ ಮುಖ್ಯಪ್ರಯೋಜನವೆಂದರೆ, ಅಭ್ಯಾಸಿಯು ತನ್ನ ಸ್ಥಿತಿಯ ಕಡೆಗೆ ಗಮನವಿಟ್ಟಿರಬೇಕುಬೇಕೆಂಬುದು, ಅದನ್ನು ಅರಿತು ಕುರಿತು ಆತನು  ಬರೆಯಬೇಕಾಗುವುದು.
      28. ಅಲ್ಲಿಯ ಇತರ ಅಭ್ಯಾಸಿಗಳ ಸ್ಥಿತಿ ನಿಮ್ಮ ಸತ್ಸಂಗದ ಸಂಚಾಲಕರ ಪತ್ರಗಳ ಮೂಲಕ ನನಗೆ ತಿಳಿದು ಬರುವುದು. ಒಬ್ಬ ವಿಶಿಷ್ಠ ವ್ಯಕ್ತಿಗೆ ಆಧ್ಯಾತ್ಮಿಕ ಸ್ಥಿತಿಗಳು ಪ್ರದಾನವಾಗುತಿದ್ದುದಕ್ಕಾಗಿ ನಾನು ಭಗವಂತನಿಗೆ ಕೃತಜ್ಞನಾಗಿದ್ದೇನೆ. ಆ ಸ್ಥಿತಿಗಳು ಸ್ಥಾಯಿಯಾಗುವಂತೆ ದೇವರು ಆತನನ್ನು ಅನುಗ್ರಹಿಸಲಿ. ಇತರರು ಒಂದೋ ಅವುಗಳನ್ನು  ವರ್ಣಿಸುವುದೇ ಇಲ್ಲ . ಅಥವಾ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಆದರೆ ನನಗೆನಿಸುವ ಮಟ್ಟಿಗೆ ಅವರಿಗೆ ಅವುಗಳ ಅನುಭವವಾಗುವುದಿಲ್ಲ. ಅವರಲ್ಲಿ ಅನೇಕರು ಶಾಸ್ತ್ರವಿಧಿಯೆಂಬಂತೆ ಪೂಜೆ ಮಾಡುತ್ತ ಹೋಗುವರು. ನಿಜವಾದ ಪ್ರವೃತ್ತಿ, ವ್ಯಾಕುಲತೆ ಮತ್ತು ಅಶಾಂತಿಗಳು ಅವರಲ್ಲಿರುವುದಿಲ್ಲ. ಒಂದು ವೇಳೆ ಇದ್ದಿದ್ದರೆ ಆ ಅವಸ್ಥೆಗಳ ಅನಿಭವ ಆವರಿಗೆ ನಿಶ್ಚಿತವಾಗಿ ಆಗುತ್ತಿದ್ದಿತಲ್ಲದೆ, ಪ್ರತಿದಿನ ಅವರಿಗೆ ಹೊಸ ಚೈತನ್ಯ ತುಂಬಿಕೊಳ್ಳುತ್ತಿತ್ತು. ಆದರೂ ಇದು ಕೂಡ ಬೇಕಾದಷ್ಟಾಯಿತು. ಏನೂ ಮಾಡದೆ ಇರುವುದಕ್ಕಿಂತ ಇದು ಸಾವಿರ ಪಾಲು ಮೇಲು. ಬಹುಶ: ನಿಮ್ಮ ಸಂಚಾಲಕರು ಅಧೈರ್ಯಗೊಳ್ಳುತ್ತಿರಬಹುದು. ಅವರನ್ನು ಸಮಾಧಾನ ಪಡಿಸಬೇಕು.
      29. ಅರ್ಥಾತ್‌, ನಾವು ನಮ್ಮ ಕರ್ತವ್ಯವನ್ನು ಗಮನಿಸಬೇಕೇ ಹೊರತು ಇತರರದನ್ನಲ್ಲ , ʼ ಅವರು ತಮ್ಮ ಕೆಟ್ಟ ಚಟಗಳನ್ನು ಬಿಡುವುದಿಲ್ಲವೆಂಬ ಕಾರಣದಿಂದ ನಾವು ನಮ್ಮ ಒಳ್ಳೆಯ ಚಟಗಳನ್ನೇಕೆ ಬಿಡಬೇಕು?ʼ
      30. ವಿಚಾರಗಳು ಗಾಳಿಯೊಡನೆ ಹಾರುವ ಧೂಳಿನಂತೆ. ಅದು ಕಟ್ಟಡವನ್ನು ನಿರ್ಮಿಸಲಾರದು. ಏಕೆಂದರೆ ಅವುಗಳಲ್ಲಿ ಬಲವಿಲ್ಲ, ನೀವು ಅವುಗಳಿಗೆ ಬಲ ಕೊಟ್ಟಾಗ ಗೆದ್ದಲು ಕಟ್ಟಿದ ಹುತ್ತಿನಂತೆ ಗಟ್ಟಿಯಾಗುತ್ತವೆ.
      31. ಈಗ , “ ತಿಳಿವಳಿಕೆ ಅಥವಾ ಕಲ್ಪನೆಯು ಭಗವಂತನ ವಲಯವನ್ನು ಪ್ರವೇಶಿಸಿದಾಗಲೇ ಆಧ್ಯಾತ್ಮದ ಆರಂಭವೆಂದು ತಿಳಿಯಬೇಕು” ಎಂಬ ವಿಚಾರವಿದೆ.
      32. ನನ್ನ ವಿನಮ್ರ ಸ್ವಭಾವವನ್ನು ನೀನು ಮೈಗೂಡಿಸಿಕೊಳ್ಳಬೇಕು ( ಪರಮಾತ್ಮನ ಬಾಗಿಲಲ್ಲಿ) ಒಬ್ಬ ದೀನ ಭಿಕ್ಷುಕನಂತಿರುವ ಗುಣವನ್ನು ಎಂದಿಗೂ ಬಿಡಬೇಡಿ. ಆದರೆ ರಾಜೋಚಿತ ಚರ್ಯೆ ಯನ್ನು ಇಟ್ಟುಕೂಳ್ಳಬೇಕು.AB II VOL I P6-7 ಆತ್ಮಕತೆ -ಭಾಗ-೨, ಸಂಪುಟ-೧ ಪುಟ -೩.
      33. M 1ನ್ನಿನ ಪ್ರಶ್ನೆ : ” ಶಿಷ್ಯನು ತನ್ನ ಗುರುವಿನ ಕುರಿತು ಅನಂತ ಪ್ರೇಮವನ್ನು ಹೇಗೆ ಬೆಳಸಿಕೊಳ್ಳಬಲ್ಲ?ಅದಕ್ಕೆ ಗುರುಗಳು ಉತ್ತರ (ಲಾಲಾಜಿ ಹೇಳಿದರು)–“ಗುರುಗಳ ನಿರಂತರ ಸ್ಮರಣೆ ಮಾಡುವುದರಿಂದ”.AB II VOL I P 7
      34. ಹೃದಯದ ಲಯಾವಸ್ಥೆಯೆಂದರೆ ವಿಚಾರಗಳು ಬಂದೇ ಬರುತ್ತವೆ.ಆದರೆ ತನ್ನನ್ನು ಕಳೆದುಕೊಂಡ ಭಾವ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಎಂತಹ ವಿಚಾರಗಳೇ ಇರಲಿ ಅವುಗಳ ಬಗ್ಗೆ ವಿಮುಖತೆಯಿರುತ್ತದೆ. ಆತ್ಮ ವಿಸ್ಮೃತಿಯ ಅವಸ್ಥೆ ವಿವಿಧ ಪ್ರಕಾರದ್ದಿರುತ್ತದೆ. ಪ್ರತಿಯೊಂದು ಘಟ್ಟದಲ್ಲಿಯೂ ಆತ್ಮವಿಸ್ಮೃತಿಯಿರುತ್ತದೆ. ಆದರೆ ಒಂದೊಂದು ಅವಸ್ಥೆಯೂ ಇನ್ನೊಂದರಿಂದ ಭಿನ್ನವಾಗಿರುತ್ತದೆ. ಮೊದಲನೇಯ ವಿಧದ ಆತ್ಮವಿಸ್ಮೃತಿಯನ್ನು ಹೃದಯದ ಶುಧ್ಧಿಕರಣವೆಂದು ಕರೆಯುವರು. ಇದರಲ್ಲಿ ಭಾವವಿರುವುದಿಲ್ಲ.ಇದು ಸ್ಥೂಲತೆಯಿಂದ ಮುಕ್ತ ಸ್ಥಿತಿ (ಸಾಮಾನ್ಯ ಜೀವನದಲ್ಲಿನ  ಪ್ರಚೋದನೆಗಳ ಕಡಿತದಿಂದ ಉಂಟಾಗುತ್ತದೆ.) AB II VOL I P 46
      35. ” ಹೃದಯವು ಅಥವಾ (ಅಂತಹ ಸ್ಥರದ ಆತ್ಮವು) ತಝ್ಕಕಿಯಾ-ಎ-ನಫ್ಸಾ) ಶುದ್ಧ ಗೊಂಡಾಗ (ಅಂದರೆ ವಿಕಾರಗಳು ಶುದ್ಧ ಗೊಂಡಾಗ) ವಿವೇಕ ಶಕ್ತಿ ವೃದ್ಧಿಸುತ್ತದೆ. ಮನಸ್ಸನ್ನು ಕೆಟ್ಟದೆಂದು ತೆಗಳುತ್ತಾರೆ. (ಹಣೆಯ ಕಡೆ ತೋರಿಸುತ್ತಾ)ಇದನ್ನು ತ್ರಿಕುಟಿ (ಭೂಮಧ್ಯ) ಎಂದು ಕರೆಯುತ್ತಾರೆ. ಇದಕ್ಕೆ ‘ದ್ವಿದಲ ಕಮಲ’ ಅಥವಾ ‘ಆಜ್ಞಾ ಚಕ್ರವೆನ್ನುವರು’. ಇದು ವಿಚಾರಗಳ ಉಗ್ರಾಣ (ಉಗಮ ಸ್ಥಾನ).AB II VOL I P 46
      36. ಎಲ್ಲಿಯವರೆಗೆ ಪ್ರಾಪಂಚಿಕ ಇಚ್ಛೆ ಗಳು ಆವೇಗಗಳ ಕ್ರಿಯೆ ಯಿಂದ ಸುಖಾನುಭವವಾಗುತ್ತಿರುವುದೋ ಅಲ್ಲಿಯವರೆಗೆ ಹೃದಯದ( ಜೀವಾತ್ಮ ಬಿಂದುವಿನ ) ಶುದ್ಧೀಕರಣ ಪರಿಪೂರ್ಣ ವಾದಂತಲ್ಲ. ಈ ಶುದ್ಧೀಕರಣ ಸಿದ್ಧಿಸಿದ ಮೇಲೆ (ದೈಹಿಕ ) ಸಂಗದಲ್ಲಿ ( ಮುಂತಾದವುಗಳಲ್ಲಿ ) ಸುಖ ಸಿಗುವುದಿಲ್ಲ. ಅದೊಂದು ನಿಷ್ಫಲ ಕರ್ಮದಂತೆ, ವೇತನವಿಲ್ಲದ ಕೆಲಸದಂತೆ ನಡೆಯುತ್ತದೆ. AB II VOL I P 47
      37. ಇದರ ಅರ್ಥವೆಂದರೆ ಪ್ರತಿಯೊಬ್ಬರೂ ಇತರರೊಂದಿಗೆ ಅಷ್ಟಾಗಿ ಬೆರೆಯದಂತಿರಬೇಕು. ಪ್ರಸಕ್ತ ವಿಷಯಕ್ಕೆ ತಕ್ಕಷ್ಟೇ ಮಾತನಾಡಬೇಕು. ಸಿಕ್ಕ ಸಿಕ್ಕವರ ಮುಂದೆ ತನ್ನ ವ್ಯಕ್ತಿಗತ ರಹಸ್ಯಗಳನ್ನು ಪ್ರಕಟಿಸಬಾರದು. ತನ್ನನ್ನು ದುರ್ಬಲನೆಂದು ಭಾವಿಸಬಾರದು. ಇತರರು ಒರಟಾಗುವಂತೆ ಯಾವ ಮಾತನ್ನು ಆಡಬಾರದು. ಇವೆಲ್ಲ ಆತ್ಮಗೌರವದ ವ್ಯಾಖ್ಯೆಯಲ್ಲಿ ಬರುವವು.AB II VOL I P 61.
      38. ಯಾರು ತಮ್ಮ ದೃಷ್ಟಿಯ(ದರ್ಶನವ)ನ್ನು ನಿನ್ನತ್ತ ತೀರಿಗಿಸಿ ಕೊಳ್ಳುವುದಿಲ್ಲವೋ ಅವರಲ್ಲಿಯ ಆಧ್ಯಾತ್ಮಿಕ ಚಿಲುಮೆಯು ಬತ್ತಿ ಹೋಗುವುದು. ಮತ್ತು ಈ ಅಪರಾಧವು ಆತನದೇ ಸರಿ. ತನ್ನ ಮೂಲ ಸ್ತ್ರೋತದೊಂದಿಗೆ ಸಂಬಂಧ ವನ್ನು ಕಡಿದುಕೊಂಡ ನದಿಯು ಬತ್ತಿ ಹೋಗುವ ಸಾಧ್ಯತೆ ಇದೆ ಎಂಬುದು ಸ್ಪಷ್ಟ.AB II VOL I P 67
      39. ಬ್ರಾಹ್ಮಣ ಜನ್ಮವು ಸಹ ಆತ್ಯಂತಿಕ ಹಿತಕ್ಕೆ ಕಾರಣವಾಗಲಾರದು. ಯಾವ ವ್ಯಕ್ತಿ ಬ್ರಹ್ಮಾಂಡಮಂಡಲದಲ್ಲಿ ಸಂಚರಿಸುವನೋ ಮತ್ತು ಯಾರ ನಿಲುಕು ಅದರಾಚೆಗಿಲ್ಲವೋ ಅವನನ್ನೆ ಬ್ರಾಹ್ಮಣನೆಂದು ಕರೆಯುವರು. ಇದಕ್ಕಿಂತ ಉನ್ನತವಾದದ್ದು ಮಹಾ ಬ್ರಾಹ್ಮಣನ ಸ್ಥಾನ. ಅವನ ಆರೋಹಣವು ಪರಬ್ರಹ್ಮಾಂಡ ಮಂಡಲದವರೆಗಿದೆ. ಅದರಾಚೆಗೆ ಹೋಗುವವನು ಎಲ್ಲ ವರ್ಣಗಳನ್ನೂ ಮೀರಿ ಹೋಗುವನು. ಆದರೆ ಇಲ್ಲಿಯೂ ಆತ್ಯಂತಿಕ ಹಿತವು ಸಾಧಿಸುವುದಿಲ್ಲ. ಮಹಾ ಬ್ರಾಹ್ಮಣನಿಗೆ ಚಿತ್ತದ ಮೇಲೆ ಒಳ್ಳೆಯ ಹಿಡಿತವಿದ್ದು ಆತನು ಕರ್ಮಕಾಂಡದಿಂದ ಬದ್ಧನಾಗಿರುವುದಿಲ್ಲ.AB II VOL I P 72
      40. ತಾರತಮ್ಯ ಸಾಮರ್ಥ್ಯವೆಂದರೆ ಒಡೆಯನ ಮತ್ತು ಭಕ್ತನ ಸಂಪರ್ಕ  ಪ್ರವಾಹವನ್ನು ಗ್ರಹಿಸಲು ಪ್ರಯತ್ನಿಸುವುದು. ಇದು ವಿಷಯದ ತಿರುಳು. ಇದು ತಾರತಮ್ಯದ ಸಂಸ್ಕರಿಸಿದ ರೂಪದ ವ್ಯಾಖ್ಯಾನವಾಗಿದೆ.AB II VOL I P 175
      41. ಒಂದು ವೇಳೆ ಸುದೈವದಿಂದ ಒಬ್ಬ ಸಮರ್ಥ ಗುರು ದೊರೆತರೆ. ಆತನು ಸಂಗ್ರಹಿಸಿಕೊಂಡ ಗಾಢಾಂಧಕಾರವನ್ನು ಪ್ರಾಣಾಹುತಿಯ ಮೂಲಕ ತೊಲಗಿಸಿ ಬೆಳಕು ಬೀರಲಾರಂಭಿಸುವನು. ಕತ್ತಲೆಯಿಂದ ಮುಸುಕಿದ್ದ ಅಭ್ಯಾಸಿಯ ವಿಚಾರವು ಪರಿವರ್ತನೆ ಹೊಂದಿ ಬೆಳಗಲಾರಂಭಿಸುತ್ತದೆ. ಮೊಟ್ಟಮೊದನೆಯ ಪರಿಣಾಮವೆಂದರೆ ಕತ್ತಲೆಯನ್ನು ಸೆಳೆದುಕೊಳ್ಳುತ್ತಿದ್ದ ಶಕ್ತಿಯು ಈಗ ಈ ದಿಶೆಯಲ್ಲಿ ಸಹಕಾರ ನೀಡಲಾರಂಭಿಸುತ್ತದೆ. ಹೀಗೆ ಒಬ್ಬನ ಸುಧಾರಣೆಯು ಪರಿಣಾಮ ಹೊಂದುತ್ತ ಹೊಂದುತ್ತ(ಗುರಿಯನ್ನು ತಲುಪಿ) ಹಾಗೆಂದರೆ ಒಬ್ಬನು ಕತ್ತಲೆಯಿಂದ ಬೆಳಕಿನೆಡೆಗೆ ಚಲಿಸುತ್ತ ಮತ್ತು ಆತನ ಸ್ವಂತದ ಶಕ್ತಿಯು ಅದೇ ದಿಕ್ಕಿನಲ್ಲಿ ಕೆಲಸ ಮಾಡಲಾರಂಭಿಸುತ್ತದೆ.AB II VOL I P 191.
      42. ಒಂದು ಸಲಹೆ “ ಯಾವ  ವ್ಯಕ್ತಿಯು ಪ್ರತಿ ಕೆಲಸವನ್ನು ನಿರ್ವಹಿಸುತ್ತಲೂ ಪ್ರತಿ ಕೆಲಸದಿಂದಲೂ ಮುಕ್ತನಾಗಿರುತ್ತಾನೋ ಆತನೆ  ಶ್ರೇಷ್ಠನಾಗಿರುತ್ತಾನೆ”AB II VOL I P 192-193.
      43. ಭಗವಂತನ ಸಾಕ್ಷಾತ್ಕಾರದ ಹಾದಿಯಲ್ಲಿರುವ ಯಾತ್ರಿಕರು ಮಾಂಸಾಹಾರಕ್ಕೆ ಒಲವು ತೋರಬಾರದು; ಅವರಿಗೆ ಅದು ಹಾನಿಕಾರಕ.AB II VOL II P 18.
      44. ಸಂಸ್ಥೆಯ ಬೋಧ ಚಿನ್ಹೆಯ ಕುರಿತು ಚರ್ಚೆ ನಡೆಯುತ್ತಿದ್ದಾಗ ಸಮರ್ಥ ಗುರುಗಳು ಆ ಸಂಬಧಿತವಾಗಿ ಒಂದು ಪರ್ಶಿಯನ್ ಕವಿತೆಯನ್ನು ಉಲ್ಲೇಖಿಸಿದ್ದರು. “ಪ್ರಿಯತಮನ ಮುಖದ ಪ್ರಭೆಯಲ್ಲಿ ಪೂರ್ಣ ಮುಳುಗಿ ಪ್ರೀಯತಮನಿಗೆ ಸುಪರಿಚಿತನಾದಾಗ ನಿನಗೆ ನೀನೆ ಅಪರಿಚಿತನಾಗುವೆ.AB II VOL II P 142.
      45. ಮಾತನಾಡುವ ಶೈಲಿ ನನ್ನಂತಿರಬೇಕು ಉದಾಹರಣೆಗೆ ಮಾತಿನಲ್ಲಿ ಏರಿಳಿತಗಳಿಲ್ಲದೆ ಸೃಷ್ಟಿ ಪೂರ್ವದ ದೈವೀ ಧಾರೆಯಂತೆ ಎಕತಾನದಿಂದ ಕೂಡಿರಬೇಕು. ನಾನು ಅದನ್ನೇ ಅಳವಡಿಸಿಕೊಂಡಿರುವೆ.AB I VOL II P 159.
      46. ಢಾಣಾ ಡಂಗುರವಾಗೆ ನಾನು ಎಲ್ಲರಿಗೂ ಹೇಳುವುದೇನೆಂದರೆ , ಪ್ರತಿಯೊಬ್ಬರೂ ತಮ್ಮ ತಮ್ಮ ನೈತಿಕ ಮಟ್ಟವನ್ನು ಮೊಟ್ಟ ಮೊದಲಿನಿಂದಲೂ ಸುಧಾರಿಸಿಕೊಳ್ಳುಲು ಪ್ರಯತ್ನಿಸಬೇಕು.AB II VOL III P 34
      47. ಯಾರನ್ನು ಆತ ಆಯ್ಕೆ ಮಾಡಿಕೊಳ್ಳುತ್ತಾನೋ ಅವನನ್ನು ಆತ ತನಗೆ ಬೇಕಾದಂತೆ ರೂಪಿಸಿಕೊಳ್ಳುತ್ತಾನೆ. ಸಾಧ್ಯವಿದ್ದಷ್ಟುಮಟ್ಟಿಗೆ ‘ಆತನ’ ಸಂತೋಷವನ್ನು ಕಾಪಾಡಿಕೊಂಡು ಹೋಗಬೇಕು. ಇದನ್ನು ಆಧ್ಯಾತ್ಮದಲ್ಲಿ ಗಣನೀಯವಾಗಿ ತೆಗೆದುಕೊಳ್ಳದಿದ್ದಲ್ಲಿ ಅದು ಪುಸ್ತಕಕ್ಕೆ ಸೀಮಿತವಾಗುತ್ತದೆ.AB II VOL III P 73.
      48. ಸಾಮಾನ್ಯವಾಗಿ ಜನರು ಅದನ್ನು ಅತ್ಯಂತ ಕಠಿಣವೆಂದೂ ತೊಡಕಿನದೆಮದೂ ತಿಳಿಯುವರು. ನಾವು ದೊರಕಿಸಬೇಕಾದ ವಸ್ತುವು ನಿಜವಾಗಿಯೂ ಅತಿ ಸರಳವಾಗಿದ್ದು ಸುಲಭಪ್ರಪ್ಯವಾಗಿದೆ. ನಿಜ ಹೇಳಬೇಕಾದರೆ ಈ ಸರಳ ವಸ್ತುವನ್ನು ದೊರಕಿಸಲು ಅನುಸರಿಸಲಾಗಿರುವ ಕಠಿಣ ಮಾರ್ಗಗಳು ಅದನ್ನು ವಕ್ರವಾಗಿಯೂ ತೊಡಕಿನದನ್ನಾಗಿಯೂ ಮಾಡಿವೆ ಇದು ಒಂದು ಉದಾಹರಣೆಯಿಂದ ಸ್ಪಷ್ಟವಾಗಬಹುದು. ಸೂಜಿಯೊಂದು ನೆಲದ ಮೇಲೆ ಬಿದ್ದಿತೆಂದು ತಿಳಿಯಿರಿ. ಅದನ್ನು ಕೈಯಿಂದ ಸುಲಭವಾಗಿ  ಎತ್ತಬಹುದು. ಅದೇ ಒಂದು ಭಾರವನ್ನೆತ್ತುವ ಯಂತ್ರವನ್ನಾಗಲಿ ಬೇರೆ ಯಾವುದಾದರೊಂದು ಅದ್ಭುತ ಯಂತ್ರವನ್ನಾಗಲೀ ಉಪಯೋಗಿಸಿದರೆ ಆ ಸೂಜಿಯನ್ನೆತ್ತಲು ಕಠಿಣವಾಗುವುದು ಮತ್ತು ನಿಮ್ಮ ಪ್ರಯತ್ನವೆಲ್ಲ ನಿಷ್ಫಲವಾಗಬಹುದು. ERY 74-75
      49. ಇಚ್ಛೆಗಳು ನಾಶವಾದರೆ ಸಂಸ್ಕಾರಗಳ ನಿರ್ಮಾಣವು ನಿಂತಂತೆಯೇ. ಈಗ ಉಳಿಯುವುದೆಂದರೆ, ನಮ್ಮ ಜೀವನಾವಧಿಯಲ್ಲಿ ಪೂರ್ವನಿರ್ಮಿತ ಸಂಸ್ಕಾರಗಳ ಪರಿಣಾಮವನ್ನು ಭೋಗಿಸುವುದೊಂದೆ. ಕಾರಣ ಶರೀರದಿಂದ ನಮ್ಮ ಆಚಾರ ವಿಚಾರಗಳ ಸಂಸ್ಕಾರಗಳನ್ನು ತೆಗೆದು ಹಾಕುವುದರಲ್ಲಿ ನಿಸರ್ಗವೂ ನಮಗೆ ಸಹಾಯವಾಗಿ ಭೋಗ ಭೂಮಿಯನ್ನು ನಿರ್ಮಿಸುವುದು. RD 26
      50. ಈ ಸಮಸ್ಯೆಯ ಅಮೋಘ ಪರಿಹಾರವೆಂದರೆ ಅವುಗಳನ್ನು ಒಬ್ಬ ಮಹಾತ್ಮನ ವಶಕ್ಕೆ ಕೊಟ್ಟು ನೀವು ಅವುಗಳಿಂದ ಪೂರ್ಣ ಅಲಿಪ್ತರಾಗಿಬಿಡುವುದು ಆಗ ಚಿಂತೆ ಕಳವಳ ಮತ್ತು ಕ್ಷೇಶಗಳು ಕಡಮೆಯಾಗಿ ಕೇವಲ ಕರ್ತವ್ಯವೊಂದೇ ಕಣ್ಣೆದುರಿನಲ್ಲಿ ಉಳಿಯುವುದು ಇಡೀ ಸಾಧನೆಯ ಸಾರವಾದ ಸಮರ್ಪಣದ ಭಾವವನ್ನು ಅದು ತೋರಿಸಿಕೊಡುವುದು VR I 53
      51. ಮೊಟ್ಟ ಮೊದಲ ಬಾರಿಗೆ ಗುರುಗಳು ಪ್ರಾಣಾಹುತಿ ಕೊಟ್ಟ ದಿನವೇ ನನ್ನಲ್ಲಿ ಗುರು ಸ್ಮರಣೆಯು ಜಾಗೃತವಾಯಿತು. ಅದರಂತೆ ನಾನು ಅದನ್ನು ಮೂರು ಸಂಗತಿಗಳೊಂದಿಗೆ ಮುಂದುವರಿಸಿದೆ.ಅ. ನಿರಂತರ ಗುರುಗಳ ಸ್ಮರಣೆಆ. ನನ್ನ ಗುರುಗಳಂತೆಯೆ ನನ್ನಲ್ಲಿ ಲಯಾವಸ್ಥೆಯನ್ನು ತಂದುಕೊಳ್ಳಲು ಯತ್ನಿಸುವುದು.ಇ. ಮತ್ತು ನಾನಿದ್ದ ಮಂಡಲದಲ್ಲಿ ಬರುವ ಅನುಭವಗಳನ್ನೆಲ್ಲ ಲಕ್ಷಪೂರ್ವಕವಾಗಿ ಅಭ್ಯಸಿಸುವುದು.
      52. ಅನೇಕ ವರ್ಷಗಳ ಅಭ್ಯಾಸದ ನಂತರ ಧ್ಯಾನವು ಬಲಿತು ಊರ್ಧ್ವಗತಿಯ ಕಲ್ಪನೆ ಆರಂಭವಾದಾಗ ಸಾಧಕನು ʼನಾನೇ ಶಕ್ತಿʼ ಎಂದು ಅನುಭವಿಸುವ ಬಿಂದುವಿಗೆ ಬರುವನು. ಜೀವವು ದೈವೀ ದರ್ಶನದ ಸಂಪರ್ಕದಲ್ಲಿ ಬಂದಾಗ ಹೀಗಾಗುವುದು. ಅದು ತನ್ನ ಗುಣವನ್ನು ಕಳೆದುಕೊಂಡು ದೈವೀ ಗುಣವನ್ನು ಪಡೆಯುವುದು ಆಗ “ಅಹಂ ಬ್ರಹ್ಮಾಸ್ಮಿ” ಎಂಬ ಅನುಭವ ಬರ ತೊಡಗುವುದು ನಾನು ʼಸೂರತ್ʼ ಅರ್ಥವನ್ನು ಹೀಗೆ ಮಾಡುವೆನು; ಸಂಕಲ್ಪವು ಆತ್ಮದ ಸಂಪರ್ಕದಲ್ಲಿ ಬಂದಾಗ ಮೂರನೆಯ ವಸ್ತುವಾದ ಕಿಡಿಯೊಂದು ಉಂಟಾಗುವುದು ಅದೇ ʼಸೂರತ್ʼ ಎಂದು ಕರೆಯಲ್ಪಡುವುದು. ಅದು ಅತ್ಯುನ್ನತ ವಸ್ತುವಿನರಡತಗೆ ಕೊಂಡೊಯ್ಯುವುದು. ವಿಚಾರಗಳು ಹಿಂದೆ ಉಳಿಯುವುವು ದೈವಿಕತೆಯ ವಲಯದಲ್ಲಿ ಅವುಗಳಿಗೆ ಸ್ಥಾನವಿಲ್ಲ
      53. ಮುಂಜಾನೆಯ ಪೂಜೆಯ ಸಮಯದಲ್ಲಿ ವಿಷಯಾಸಕ್ತಿಗೆ ಸಂಬಂಧಪಟ್ಟ ವಿಚಾರಗಳು. ಮುಕ್ತಿಮಾರ್ಗದಲ್ಲಿ ಮನುಷ್ಯನು ಮುನ್ನಡೆಯುವಾಗ ತ್ರಿಕುಟಿ ಸ್ಥಾನ ಅಥವಾ ಗುಹಾಚಕ್ರವನ್ನು ತಲುಪಲು ಈ ಅವಸ್ಥೆ ಬರುವುದು. ಅಭ್ಯಾಸಿಯು ಸುತ್ತಮುತ್ತಲೂ, ಬಿಸಿಲಿನಲ್ಲಿಯೂ ಕೂಡ ಕತ್ತಲೆಯನ್ನು ಅನುಭವಿಸುವನು, ಇದೇ ಅಲ್ಲಿ ತಲುಪಿದುದರ ಲಕ್ಷಣ.
      54. ಕೆಲ ವೇಳೆ ಆಧ್ಯಾತ್ಮಿಕತೆಯು ಆರಂಭವಾಗಿದ್ದ ಅನುಭವವಾಗುವುದೆಂಬುದು ನಿಜ. ಆದರೆ, ಮತ್ತೆ ಕೆಲವೇಳೆ ಇವೆಲ್ಲ ಮಾರ್ಗದಲ್ಲಿಯ ಘಟನೆಗಳೆಂದೂ, ಆಧ್ಯಾತ್ಮಿಕತೆಯು ಇನ್ನೂ ಆರಂಭವೇ ಆಗಿಲ್ಲವೆಂದೂ ಸಂಶಯ ಬರುತ್ತದೆ.ಈ ಸಂಶಯಗಳಿಂದಾಗಿ ಈ ಎರಡು ಸಂಗತಿಗಳಲ್ಲಿ ಯಾವುದೊಂದೂ ಅಂತರ್ಯದಲ್ಲಿ ದೃಢವಾಗಿ ಅಂಟಿಕೊಳ್ಳದಂತಾಗಿದೆ.
      55. ʼಸಮಾಧಿ ಶಬ್ದಕ್ಕೆ ನನ್ನದೇ ಆದ ರೀತಿಯಲ್ಲಿ ಅರ್ಥ ಮಾಡುತ್ತೇನೆ. ʼಸಮ+ಆಧಿʼ. ʼಸಮʼವೆಂದರೆ ಸಮತ್ವದ ಸ್ಥಿತಿ ʼಆಧಿʼ ಎಂದರೆ ʼಮೊದಲು ಇದ್ದುದುʼ ; ಅರ್ಥಾತ್‌, ನಾವು ಈ ಸೃಷ್ಟಿಯಲ್ಲಿ ಮೊಟ್ಟಮೊದಲ ಬಾರಿಗೆ ಬಂದಾಗ ಇದ್ದ ಸ್ಥಿತಿ.
      56. ನಿರ್ದೇಶನಗಳು.
        ಜಲಪಕ್ಷಿಯಂತೆ ನಿನ್ನ ಜೀವನವನ್ನು ರೂಪಿಸಿಕೊಳ್ಳಬೇಕು. ಅದು ನೀರಿನಿಂದ ಹೊರಗೆ ಬಂದಾಗ ಅದರ ರೆಕ್ಕೆಗಳು ಸ್ವಲ್ಪವೂ ತೊಯ್ದಿರುವುದಿಲ್ಲ.
        ಸತ್ಸಂಗಿ ಬಾಂಧವರೊಂದಿಗೆ ಪ್ರೇಮ ಮತ್ತು ನಿತ್ಯದ ನಡೆ-ನುಡಿಗಳಲ್ಲಿ ಮಾಧುರ್ಯ ಕೋಮಲತೆಗಳು ತುಂಬಿರಬೇಕು.
        ಗೆಳೆಯರೊಂದಿಗೂ , ಹಗೆಗಳೊಂದಿಗೂ ಸಮಾನ ವರ್ತನೆಯಿರಲಿ. ಇಬ್ಬರಿಗೂ ಒಳ್ಳೆಯದನ್ನು ಬಗೆಯಿರಿ.AB II VOL I P 11
      57. ಪ್ರಶ್ನೆ: ಗುರುವಿನ ಪ್ರತಿಯೊಂದು ಕಣವೂ ಅಂತಿಮ ಸತ್ಯದಲ್ಲಿ ಲಯವಾದಾಗ ಮತ್ತು ‘ಅದೇ’ ಆದಾಗ, ಆತನ ರೂಪದ ಕಲ್ಪನೆ ಯನ್ನು ಕೊನೆಯವರೆಗೂ ಮುಂದುವರಿಸಬೇಕೇ?
        ಉತ್ತರ:- ನಾನು ಹೀಗೆಯೇ ಮಾಡಿದ್ದೇನೆ. (ರೂಪದ ಕಲ್ಪನೆಯನ್ನು ಮಾಡಿಕೊಳ್ಳದೇ ದೇವರ ಕಲ್ಪನೆಯೂ ಅಸಾಧ್ಯ ವಾದದ್ದು.)AB II VOL I P 32
      58. ಬೇರೊಬ್ಬರ ದೋಷವನ್ನು ಗಮನಿಸಿದರೆ. ಆ ಕುರಿತು ನೋವಿನ ಅನುಭವ ಸ್ವಲ್ಪ ಸಮಯ ಇದ್ದರೆ, ದೋಷದ ಬೀಜ ರೂಪವು ಗಮನಿಸುವವನಲ್ಲಿ ಇದೆಯೆಂದು ಹೇಳಬೇಕಾಗುವುದು. ನೋವು ಕ್ಷಣಿಕವಾಗಿದ್ದರೆ ಅದು ಮೋಹದಿಂದಾಗಿದ್ದು.AB II VOL I P 68
      59. ತ್ಯಾಗ ವಾಗಿರುವುದು ನಿನ್ನೊಬ್ಬನೊಂದಲೇ. ನಿನ್ನಲ್ಲಿ ಯಾವ ಇಚ್ಛೆಯೂ ಇಲ್ಲ. ಇದೇ ನಿಜವಾದ ತ್ಯಾಗ.AB II VOL I P 71.
      60. ನನ್ನ ಜೀವನದ ತತ್ವವೇನೆಂದರೆ ಯಾರು ಸಹನೆಯಿಂದ ದೇವರ ಮೇಲೆ ಅವಲಂಬಿತರಾಗಿದ್ದಾರೋ ಮತ್ತು ಆತನಲ್ಲಿ ತೃಪ್ತಿಯಿಂದಿರುವರೋ ಅವರಿಗೆ ದೇವರ ಕೃಪೆಯ ಲಾಭವಿದೆ.AB II VOL I P 182
      61. ಅವರನ್ನು ನನ್ನ ಆರಾಧ್ಯ ವಸ್ತುವಾಗಿ ನನ್ನ ಹೃದಯದಲ್ಲಿರಿಸಿಕೊಂಡೆ. ಅಲ್ಲದೆ, ಬೇರೊಬ್ಬರನ್ನು ಎಂದೂ ನನ್ನ ದೃಷ್ಟಿಯಲ್ಲಿರಿಸಿಕೊಳ್ಳಲಿಲ್ಲ ; ಇಂದಿಗೂ ಕೂಡ. ನನ್ನ ಈ ಭಾವನೆಯನ್ನು ಭಗವಂತನು ಸದಾ ಕಾಲಕ್ಕೂ ಇರುವಂತೆ ಮಾಡಲಿ. ನನ್ನ ಗುರುಗಳ ಹೊರತಾಗಿ ಬೇರೊಬ್ಬರನ್ನು ನಾನು ಸ್ವೀಕರಿಸಲಿಲ್ಲ. ಬೇರೊಬ್ಬರತ್ತ ದೃಷ್ಟಿ ಹೊರಳಿಸಲಿಲ್ಲ. ಇದು ನಿಜವಾದ ಶಿಷ್ಯನೆನಿಸಿಕೊಂಡವನ ಆದ್ಯ ಕರ್ತವ್ಯವೆಂಬುದು ಸಾಮಾನ್ಯ ನಿಯಮ, ಮತ್ತು ಯಶಸ್ಸಿನ ಏಕೈಕ ಕೀಲಿಕೈ, ಹೃದಯದಲ್ಲಿಯ ಕಲ್ಮಷಗಳನ್ನು ದೂರಗೊಳಿಸುವ ಹಾಗೂ ಮಾರ್ಗದಲ್ಲಿನ ಅಡೆತಡೆಗಳನ್ನು ದಾಟಲು ನೆರವಾಗುವ ಸಾಧನವೆಂದರೆ ಇದೊಂದೇ. ಗ್ರಂಥಿಗಳು ತೆರೆದುಕೊಳ್ಳುವುದೂ ಇದರ ಪರಿಣಾಮದಿಂದಲೇ. ಎಲ್ಲ ಸಾಧನೆಗಳ ನಿಜವಾದ ಸಾರವೂ ವಾಸ್ತವಿಕವಾಗಿ ಇದೇ ಆಗಿದೆ.
      62. ಅವರ ಪದ್ದತಿಗಳು ಎಷ್ಟು ಸರಳವಾಗಿವೆಯೆಂದರೆ, ಅವುಗಳ ಸರಳತೆಯೇ ಜನಸಾಮಾನ್ಯರ ತಿಳಿವಳಿಕೆಗೆ ಒಂದು ತೆರೆಯಾಗಿದೆ. ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ‘ಸತ್ತೆ’ಯನ್ನು (ಪರಮಾತ್ಮನನ್ನು) ಸಾಕ್ಷಾತ್ಕರಿಸಿಕೊಳ್ಳಲು ಸರಳ ಹಾಗೂ ಸೂಕ್ಷ್ಮ ಸಾಧನಗಳ ಆವಶ್ಯಕತೆಯಿದೆ.
      63. ನಾವೀಗ ಮಾಡಬೇಕಾದುದಿಷ್ಟೆ : ಅವೆಲ್ಲವನ್ನೂ ಮತ್ತೆ ಅವುಗಳ ಮೂಲಸ್ಥಿತಿಗೆ ಹಿಂತಿರುಗಿಸುವುದು.ಅರ್ಥಾತ್, ದೈವಿಕತೆಯೊಂದಿಗಿನ ಅವುಗಳ ಸಂಬಂಧವನ್ನು ಸುಸ್ಥಿರವಾಗಿರುವಂತೆ, ಅವನ್ನು ಸಂತುಲಿತವಾದ ಶಾಂತ ಸ್ಥಿತಿಗೆ ಪುನಃ ಸ್ಥಾಪಿಸುವುದು. ಅದನ್ನು ಸಾಧಿಸುವ ಏಕೈಕ ರೀತಿಯೆಂದರೆ, ಅವುಗಳಲ್ಲಿ ಯುಕ್ತ ರೀತಿಯ ಮಿತತ್ವವನ್ನುಂಟು ಮಾಡುವುದು. ಮತ್ತು, ಸಾಕ್ಷಾತ್ಕಾರದ ಸ್ವಾಭಾವಿಕ ಪಥವಾದ “ಸಹಜ ಮಾರ್ಗ’ದಲ್ಲಿ ನಾವು ಅದನ್ನೇ ಮಾಡುತ್ತೇವೆ.ಇದೊಂದು ಪ್ರಕೃತಿಯ ರಹಸ್ಯ , ಮಾನವನ ಸಂಪೂರ್ಣ ದೈವೀಕರಣದ ನಿಜವಾದ ಅರ್ಥವನ್ನು ಜನತೆಯ ಪೂರ್ಣಗ್ರಹಿಕೆಗೆ ತರಲೋಸುಗ ನಾನು ಇಲ್ಲಿ ಇದನ್ನು ವಿವರಿಸಿದ್ದೇನೆ.
      64. ಸೃಷ್ಟಿಯ ಸಂಕಲ್ಪವು , ಕೇಂದ್ರದ ಸನಿಹದಲ್ಲಿ ಸಂಚಲನೆಗೊಂಡಿತು , ಹಾಗೂ , ಶಕ್ತಿಯು ಪ್ರವಹಿಸಲಾರಂಭಿಸಿತು . ಅದೇನಿದ್ದಿತು ? ಅದೇ ಶುದ್ದವೂ , ಸರಳವೂ ಆದ ಆದಿಮನಸ್ಸು . ಅದೇ ನಮ್ಮೆಲ್ಲರ ರೂಪ ರಚನೆಗಳನ್ನು ನೆಯ್ದಿದೆ . ಅದು ತನ್ನೊಂದಿಗೆ ಪರಿಶುದ್ಧತೆಯನ್ನು ತಂದಿತು ; ಆ ಪರಿಶುದ್ಧತೆ ಇನ್ನೂ ಉಳಿದುಕೊಂಡು ಬಂದಿದೆ . ಆದುದರಿಂದ , ನಾವು ತಪ್ಪು ಸೂಚನೆಗಳನ್ನು ಕೊಡಲಾರಂಭಿಸಿದರೆ , ಮನಸ್ಸು ತಾನು ಪೂರ್ಣತಃ ಶುದ್ದವಿರುವುದರಿಂದ , ತನ್ನ ನಿರಂತರ ಶುದ್ಧತೆಯನ್ನು ಕಾಯ್ದು ಕೊಳ್ಳುವುದಕ್ಕೋಸ್ಕರ , ಅವನ್ನು ಹೊರದೂಡುತ್ತದೆ . ಆಲೋಚನೆಗಳು ಉದ್ಭವಿಸುವುದಕ್ಕೆ ಅದೇ ಕಾರಣ . ವಾಸ್ತವವಾಗಿ , ತನ್ನಲ್ಲಿರುವ ಅಂಶಗಳನ್ನು ಹೊರಗೆಡವುತ್ತದೆ , – ಅವು , ಯಾವುದೋ ಮೇ ಲ್ಮ್ಯೆಯನ್ನು ಆವರಿಸಿರುವ ಮಂಜಿನಂತೆ ತೋರುವುವು – ಅವನ್ನೇ ನಾವು ಆಲೋಚನೆಗಳನ್ನು ತ್ತೇವೆ . ಆಲೋಚನೆಗಳು ನಾವು ಗಮನ ಕೊಟ್ಟಂತೆಲ್ಲ ಅವುಗಳ ಶಕ್ತಿಯು ವರ್ಧಿಸುತ್ತ ಹೋಗುತ್ತದೆ . ನೀವು ಯಾರಾದರೂ ದೈವೀ ವಿಚಾರಗಳನ್ನು ಹುಟ್ಟಿಸಿಕೊಂಡರೆ , ಮನಸ್ಸು ಅವನ್ನು ಗ್ರಹಿಸುವುದು , ಹೊರತು , ಹೊರದೂಡುವುದಿಲ್ಲ – ಯಾಕೆಂದರೆ , ಸತ್ಯದ ಧಮನಿಯಿಂದ ಬಂದಿರುವ ಮನಸ್ಸಿನ ನಿಜ ಸ್ವಭಾವವೇ ಅದಾಗಿದೆ .
      65. ನಾವು ಆಧ್ಯಾತ್ಮಿಕವಾಗಿ ಪ್ರಗತಿ ಹೊಂದಬೇಕಾದರೆ , ಸಾಂತದಲ್ಲಿರುವಅನಂತತೆಯಿಂದಆರಂಭಿಸಬೇಕು. ಈ ರೀತಿ ನಾವು ಪರಮಸತ್-ವಸ್ತುವಿನೊಂದಿಗೆ ಸಂಬಂಧವನ್ನು ಸ್ಥಾಪಿಸಿಕೊಳ್ಳುತ್ತೇವೆ. ನಮ್ಮಮುಂದಿನಹೆಜ್ಜೆಯೆಂದರೆ , ಸೀಮಿತತೆಯ ಕಲ್ಪನೆಯೂ ತೊಳೆದುಹೋದಂತೆ, ನಾವು ಅನಂತದಲ್ಲಿ ಲೀನರಾಗಲಾರಂಭಿಸುವೆವು. ಈಗ ದ್ವಾರವು ತೆರೆದು, ನಾವು (ಸರಿಯಾದ) ದಾರಿಗೆ ಬಂದಿದ್ದೇವೆ. ಸೀಮಿತತೆಯ ಮನಸ್ಸಿನಿಂದ ಅಳಿಸಿಹೋದಾಗ ಮಾರ್ಗವು ನಿಚ್ಚಳವಾಗುವುದು. ನಾವು ಅನಂತದಲ್ಲಿಯೇ ಅನಂತದತ್ತ ಸಾಗುತ್ತೇವೆ. ಇದರ ಪರಿಣಾಮವೆಂದರೆ ಅನಂತದ ಕಲ್ಪನೆ ಕೂಡ ತಲೆಯೆತ್ತುವುದಿಲ್ಲ. ಈಗ ಸತ್ಯೋದಯವಾಗುವುದು. ಮುಂದಕ್ಕೆ, ನಾವು ಸತ್ಯದಲ್ಲಿ (ಪರತತ್ವದಲ್ಲಿ ) ಧುಮುಕಿದಾಗ ಆಟ ಕೊನೆಗೊಳ್ಳುತ್ತದೆ, ನಿಜವಾದ ದೃಶ್ಯವು ಆರಂಭವಾಗುತ್ತದೆ. ಆದರೆ ಇದೇ ಕೊನೆಯಲ್ಲ. ಮುಂದೆ-ಮುಂದೆ ಸಾಗಿರಿ. ಇದೂಅಲ್ಲ, – ಇದೂಅಲ್ಲ, ನೇತಿ, ನೇತಿ.
      66. ‘ಪರಿವರ್ತನ ರಹಿತ’ (changeless) ಸ್ಥಿತಿಯು ಸದಾ ಇದ್ದೇ ಇದೆ. ಆದರೆ ನಾವು ಪರಿವರ್ತನಶೀಲ ವಸ್ತುಗಳೊಂದಿಗೆ ತಳಕುಹಾಕಿಕೊಂಡಿದ್ದೇವೆ. ಮತ್ತು ಒಂದೋ ನಾವು ಅದರಲ್ಲಿ ಆಸಕ್ತಿ ಹೊಂದಿದ್ದೇವೆ, ಅಥವಾ ಅದನ್ನು ತಿರಸ್ಕರಿಸುತ್ತೇವೆ. ಆದರೆ ಇವೆರಡೂ ಬಂಧನದ ಕೊಂಡಿಗಳೇ
      67.