- ಮನುಷ್ಯನು ತನ್ನಲ್ಲಿ ಈ ಹಂಬಲವನ್ನು ಹುಟ್ಟಿಸಿಕೊಂಡಾಗ ಆತನು ಪ್ರಾರ್ಥನೆಯ ಸ್ಥಿತಿಯಲ್ಲಿ ಇರುವನು. TM 29
- ಯಶಸ್ಸಿನ ಅತಿ ಮಹತ್ವವಾದ ಹಾಗೂ ಅಮೋಘವಾದ ಉಪಾಯವೆಂದರೆ ಪ್ರಾರ್ಥನೆ. ಯಾರನ್ನು ನಾವು ಪ್ರೇಮ ಭಕ್ತಿಗಳಿಂದ ಶರಣು ಹೋಗುವೆವೋ ಆ ಭಗವಂತನೊಂದಿಗೆ ಪ್ರಾರ್ಥನೆಯು ನಮ್ಮ ಸಂಬಂಧವನ್ನು ಬೆಳೆಸುವುದು. ಪ್ರಾರ್ಥನೆಯಲ್ಲಿ ನಾವು ದೇವರ ಸಮ್ಮುಖದಲ್ಲಿ ದೀನಯಾಚಕರಾಗಿ ನಿಂತು ನಮ್ಮ ನಿಜ ಸ್ಥಿತಿಯನ್ನು ಆತನೆದುರಿಗಿಟ್ಟು ನಮ್ಮನ್ನು ಪೂರ್ಣವಾಗಿ ಆತನ ಇಚ್ಛೆಗೆ ಒಪ್ಪಿಸಿಕೊಂಡು ಬಿಡುವೆವು.RD 34
- ಇದಕ್ಕಾಗಿ ನಮ್ಮ ವಿರಾಮಕಾಲದೊಳಗಿನ ಹಲವು ನಿಮಿಷಗಳನ್ನು ತೆಗೆದಿರಿಸಿಕೊಂಡು(ಮಲಗುವ ಮುಂಚೆಯಾದರೆ ಉತ್ತಮ)ಕರ್ತವ್ಯ ಮಾರ್ಗದಲ್ಲಿ ನಮಗೆ ದಾರಿ ತೋರುವಂತೆಯೂ ಸಹಾಯ ಮಾಡುವಂತೆಯೂ ನಿಷ್ಕಪಟ ಹೃದಯದಿಂದ ದೇವರನ್ನು ಪ್ರಾರ್ಥಿಸಬೇಕು. ಪ್ರೇಮ ಭಕ್ತಿಗಳಿಂದ ತುಂಬಿದ ಅಂತ:ಕರಣದಿಂದ ನಾವದನ್ನು ತಪ್ಪದೇ ಮಾಡಿದ್ದಾದರೆ ನಮ್ಮ ಪ್ರಾರ್ಥನೆಯು ಎಂದಿಗೂ ಆತನ ಕಿವಿಗೆ ಬೀಳದಿರುವುದಿಲ್ಲ.RD 73
- ಪ್ರಾರ್ಥನೆಯು ಭಕ್ತಿಯ ಕುರುಹು.ಪರಮಾತ್ಮನೊಂದಿಗೆ ನಮ್ಮ ಸಂಬಂಧವು ಸ್ಥಾಪಿತವಾದುದನ್ನು ಅದು ಸೂಚಿಸುತ್ತದೆ. ನಾವು ಯಾರನ್ನಾದರೂ ಒಡೆಯನೆಂದು ಒಪ್ಪಿಕೊಂಡ ಮೇಲೆ ಆತನ ಸೇವಕರಾದಂತೆಯೆ ಸರಿ.TM 17
- ಪ್ರಾರ್ಥನೆ ಮಾಡುವಾಗ ಹೃದಯವು ಪ್ರೇಮದಿಂದ ತುಂಬಿ ತುಳುಕಬೇಕೆಂದು ಹೇಳಿದುದರ ಕಾರಣವಿಷ್ಟೇ: ನಾವು ಪ್ರಾರ್ಥನೆಯ ಮೂಲಕ ನಮ್ಮ ಹೃದಯವನ್ನು ನಿರ್ವಿಷಯ ಮಾಡಿಕೊಳ್ಳುವುದರಿಂದ ದೈವೀಕೃಪೆಯ ಧಾರೆಗಳು ಆಕರ್ಷಿತವಾಗಿ ಅದರಲ್ಲಿ ನೇರವಾಗಿ ಹರಿದು ಬರುವವು.TM 18
- ಸತತಾಭ್ಯಾಸದಿಂದ ಸಾಧಕನು ತಾನು ಪ್ರಾರ್ಥನಾಮಯನಾದಂತೆ ಅನುಭವಿಸುವನು.TM 18
- ಪ್ರಾರ್ಥನೆಗಾಗಿ ಯಾವುದೊಂದು ವಿಶಿಷ್ಟ ಸಮಯವೇ ಬೇಕೆಂಬುದಿಲ್ಲ. ಬೇಕೆನಿಸಿದಾಗ ಅದನ್ನು ಮಾಡಬಹುದು.TM 19
- ತೀರ ಅಪವಾದಾತ್ಮಕ ಪ್ರಸಂಗಗಳನ್ನುಳಿದು, ಪ್ರಾಪಂಚಿಕ ಲಾಭಗಳಿಗಾಗಿ ಪ್ರಾರ್ಥಿಸುವುದು ಮೂರ್ಖತನ.TM 20
- ಇಂಥ ನೈಜದೃಷ್ಟಿಯೆ ಪ್ರಾರ್ಥನೆಯ ಸಾರವಾಗಿದೆ. ಇದೇ ಆರಂಭದ ಬಿಂದು. ಅನಾವಶ್ಯಕ ಸಂಗತಿಗಳನ್ನು ದೂರ ಮಾಡುವುದೇ ಮೊದಲನೇಯ ಹೆಜ್ಜೆ.TM 22
- ಪ್ರಾರ್ಥನೆಯನ್ನು ಆರಂಭಿಸುವ ಪ್ರತಿಯೊಬ್ಬನಲ್ಲಿಯೂ ಈ ಮೊದಲಿನ ಸ್ಥಿತಿಯಿದೆ. ಆದರೆ ಧ್ಯೇಯವು ದೃಷ್ಟಿಪಥದಲ್ಲಿದ್ದರೆ ಈ ಆರಂಭಾವಸ್ಥೆಯಲ್ಲಿಯೂ ಅದು ಪ್ರಭಾವವನ್ನು ಬೀರಿ ಕ್ರಮೇಣ ಅದೊಂದೇ ಬಿಂದುವು ಆತನ ಕಣ್ಣೆದುರಿನಲ್ಲಿ ಉಳಿದು ಅದರಲ್ಲಿ ನೆಲೆಸುವಂತಾಗುವುದು.TM 23
- ಇನ್ನು , ಬೇರೆಯವರ ಹಿತಕ್ಕಾಗಿ ಯಾವ ರೂಪದಲ್ಲಿ ಪ್ರಾರ್ಥನೆ ಮಾಡಬೇಕೆಂಬ ಪ್ರಶ್ನೆ ಬರುವುದು. ಪ್ರಾರ್ಥನೆ ಮಾಡುವಾಗ ತನ್ನ ಮನ:ಸ್ಥಿತಿ ಹೇಗಿರುವುದೋ ಅದೇ ಮಟ್ಟಕ್ಕೆ ಅವರನ್ನು ತರಬೇಕೆಂಬುದೇ ಅದಕ್ಕೆ ಉತ್ತರ. TM 20