1. ಮನುಷ್ಯನು ತನ್ನಲ್ಲಿ ಈ ಹಂಬಲವನ್ನು ಹುಟ್ಟಿಸಿಕೊಂಡಾಗ ಆತನು ಪ್ರಾರ್ಥನೆಯ ಸ್ಥಿತಿಯಲ್ಲಿ ಇರುವನು. TM 29
  2. ಯಶಸ್ಸಿನ ಅತಿ ಮಹತ್ವವಾದ ಹಾಗೂ ಅಮೋಘವಾದ ಉಪಾಯವೆಂದರೆ ಪ್ರಾರ್ಥನೆ. ಯಾರನ್ನು ನಾವು ಪ್ರೇಮ ಭಕ್ತಿಗಳಿಂದ ಶರಣು ಹೋಗುವೆವೋ ಆ ಭಗವಂತನೊಂದಿಗೆ ಪ್ರಾರ್ಥನೆಯು ನಮ್ಮ ಸಂಬಂಧವನ್ನು ಬೆಳೆಸುವುದು. ಪ್ರಾರ್ಥನೆಯಲ್ಲಿ ನಾವು ದೇವರ ಸಮ್ಮುಖದಲ್ಲಿ ದೀನಯಾಚಕರಾಗಿ ನಿಂತು ನಮ್ಮ ನಿಜ ಸ್ಥಿತಿಯನ್ನು ಆತನೆದುರಿಗಿಟ್ಟು ನಮ್ಮನ್ನು ಪೂರ್ಣವಾಗಿ ಆತನ ಇಚ್ಛೆಗೆ ಒಪ್ಪಿಸಿಕೊಂಡು ಬಿಡುವೆವು.RD 34
  3. ಇದಕ್ಕಾಗಿ ನಮ್ಮ ವಿರಾಮಕಾಲದೊಳಗಿನ ಹಲವು ನಿಮಿಷಗಳನ್ನು ತೆಗೆದಿರಿಸಿಕೊಂಡು(ಮಲಗುವ ಮುಂಚೆಯಾದರೆ ಉತ್ತಮ)ಕರ್ತವ್ಯ ಮಾರ್ಗದಲ್ಲಿ ನಮಗೆ ದಾರಿ ತೋರುವಂತೆಯೂ ಸಹಾಯ ಮಾಡುವಂತೆಯೂ ನಿಷ್ಕಪಟ ಹೃದಯದಿಂದ ದೇವರನ್ನು ಪ್ರಾರ್ಥಿಸಬೇಕು. ಪ್ರೇಮ ಭಕ್ತಿಗಳಿಂದ ತುಂಬಿದ ಅಂತ:ಕರಣದಿಂದ ನಾವದನ್ನು ತಪ್ಪದೇ ಮಾಡಿದ್ದಾದರೆ ನಮ್ಮ ಪ್ರಾರ್ಥನೆಯು ಎಂದಿಗೂ ಆತನ ಕಿವಿಗೆ ಬೀಳದಿರುವುದಿಲ್ಲ.RD 73
  4. ಪ್ರಾರ್ಥನೆಯು ಭಕ್ತಿಯ ಕುರುಹು.ಪರಮಾತ್ಮನೊಂದಿಗೆ ನಮ್ಮ ಸಂಬಂಧವು ಸ್ಥಾಪಿತವಾದುದನ್ನು ಅದು ಸೂಚಿಸುತ್ತದೆ. ನಾವು ಯಾರನ್ನಾದರೂ ಒಡೆಯನೆಂದು ಒಪ್ಪಿಕೊಂಡ ಮೇಲೆ ಆತನ ಸೇವಕರಾದಂತೆಯೆ ಸರಿ.TM 17
  5. ಪ್ರಾರ್ಥನೆ ಮಾಡುವಾಗ ಹೃದಯವು ಪ್ರೇಮದಿಂದ ತುಂಬಿ ತುಳುಕಬೇಕೆಂದು ಹೇಳಿದುದರ ಕಾರಣವಿಷ್ಟೇ: ನಾವು ಪ್ರಾರ್ಥನೆಯ ಮೂಲಕ ನಮ್ಮ ಹೃದಯವನ್ನು ನಿರ್ವಿಷಯ ಮಾಡಿಕೊಳ್ಳುವುದರಿಂದ ದೈವೀಕೃಪೆಯ ಧಾರೆಗಳು ಆಕರ್ಷಿತವಾಗಿ ಅದರಲ್ಲಿ ನೇರವಾಗಿ ಹರಿದು ಬರುವವು.TM 18
  6. ಸತತಾಭ್ಯಾಸದಿಂದ ಸಾಧಕನು ತಾನು ಪ್ರಾರ್ಥನಾಮಯನಾದಂತೆ ಅನುಭವಿಸುವನು.TM 18
  7. ಪ್ರಾರ್ಥನೆಗಾಗಿ ಯಾವುದೊಂದು ವಿಶಿಷ್ಟ ಸಮಯವೇ ಬೇಕೆಂಬುದಿಲ್ಲ. ಬೇಕೆನಿಸಿದಾಗ ಅದನ್ನು ಮಾಡಬಹುದು.TM 19
  8. ತೀರ ಅಪವಾದಾತ್ಮಕ ಪ್ರಸಂಗಗಳನ್ನುಳಿದು, ಪ್ರಾಪಂಚಿಕ ಲಾಭಗಳಿಗಾಗಿ ಪ್ರಾರ್ಥಿಸುವುದು ಮೂರ್ಖತನ.TM 20
  9. ಇಂಥ ನೈಜದೃಷ್ಟಿಯೆ ಪ್ರಾರ್ಥನೆಯ ಸಾರವಾಗಿದೆ. ಇದೇ ಆರಂಭದ ಬಿಂದು. ಅನಾವಶ್ಯಕ ಸಂಗತಿಗಳನ್ನು ದೂರ ಮಾಡುವುದೇ ಮೊದಲನೇಯ ಹೆಜ್ಜೆ.TM 22
  10. ಪ್ರಾರ್ಥನೆಯನ್ನು ಆರಂಭಿಸುವ ಪ್ರತಿಯೊಬ್ಬನಲ್ಲಿಯೂ ಈ ಮೊದಲಿನ ಸ್ಥಿತಿಯಿದೆ. ಆದರೆ ಧ್ಯೇಯವು ದೃಷ್ಟಿಪಥದಲ್ಲಿದ್ದರೆ ಈ ಆರಂಭಾವಸ್ಥೆಯಲ್ಲಿಯೂ ಅದು ಪ್ರಭಾವವನ್ನು ಬೀರಿ ಕ್ರಮೇಣ ಅದೊಂದೇ ಬಿಂದುವು ಆತನ ಕಣ್ಣೆದುರಿನಲ್ಲಿ ಉಳಿದು ಅದರಲ್ಲಿ ನೆಲೆಸುವಂತಾಗುವುದು.TM 23
  11. ಇನ್ನು , ಬೇರೆಯವರ ಹಿತಕ್ಕಾಗಿ ಯಾವ ರೂಪದಲ್ಲಿ ಪ್ರಾರ್ಥನೆ ಮಾಡಬೇಕೆಂಬ ಪ್ರಶ್ನೆ ಬರುವುದು. ಪ್ರಾರ್ಥನೆ ಮಾಡುವಾಗ ತನ್ನ ಮನ:ಸ್ಥಿತಿ ಹೇಗಿರುವುದೋ ಅದೇ ಮಟ್ಟಕ್ಕೆ ಅವರನ್ನು ತರಬೇಕೆಂಬುದೇ ಅದಕ್ಕೆ ಉತ್ತರ. TM 20