- ರಾಜಯೋಗವು ಬಹು ಪ್ರಾಚೀನ ಶಾಸ್ತ್ರವಾಗಿದೆ. ಅದನ್ನು ದೊಡ್ಡ ದೊಡ್ಡ ಋಷಿ-ಮುನಿಗಳು ಆತ್ಮಸಾಕ್ಷಾತ್ಕಾರದಲ್ಲಿ ತಮಗೆ ಸಹಾಯವಾಗುವಂತೆ ಅನುಸರಿಸಿದರು. ಅದು ರಾಮಾಯಣ ಕಾಲಕ್ಕಿಂತ ಬಹಳ ಹಿಂದೆ ಭಾರತದಲ್ಲಿ ಪ್ರಚಲಿತವಾಗಿದ್ದಿತು. ಸೂರ್ಯವಂಶದ ದಶರಥ ಮಹಾರಾಜನಿಗಿಂತ ಎಪ್ಪತ್ತೆರಡು ತಲೆಮಾರುಗಳ ಹಿಂದೆ ಇದ್ದ ಮಹರ್ಷಿಯು ಅದನ್ನು ಪ್ರಚುರಪಡಿಸಿದನು, ಯಾವುದರಿಂದ ನಮ್ಮ ಜೀವನದ ಸಮಸ್ಯೆಗಳೆಲ್ಲ ಸುಲಭವಾಗಿ ಪರಿಹಾರವಾಗುವುವೋ ಅಂಥ ಮುಕ್ತಿಯನ್ನು ಪಡೆಯುವ ನೈಜ ಪದ್ದತಿಯನ್ನು ಕಂಡು ಹಿಡಿಯಲು ಆತನು ಬಹು ಕಾಲಚಿಂತಿಸಿದನು. ಈ ಪುಸ್ತಕದಲ್ಲಿ ವರ್ಣಿಸಲಾದಂತೆ ಆತನು ಕೇಂದ್ರ ಮಂಡಲದಲ್ಲಿ ತೀರ ಕೇಂದ್ರಕ್ಕೆ ಹೊಂದಿಕೊಂಡೇ ಈಜಾಡುತ್ತಿದ್ದನು. ಪ್ರಕೃತಿಯಲ್ಲಿ ಅಗತ್ಯವಾದ ಬದಲಾವಣೆಯನ್ನುಂಟು ಮಾಡಲು ದುಡಿಯುತ್ತಿರುವ ಇಂದಿನ ವಿಭೂತಿಯಂತೆಯೇ ಆತನ ಸ್ಥಿತಿಯಿದ್ದಿತು. ಈ ವಿಷಯವಾಗಿ ಸುದೀರ್ಘ ಚಿಂತನೆ ಮಾಡಿ, ಕಟ್ಟಕಡೆಗೆ ಆ ಮಹರ್ಷಿಯು ಒಂದು ಸಾಧನವನ್ನು ಕಂಡುಹಿಡಿದನು. ಅದೇ ಕಡೆಗೆ ರಾಜಯೋಗವಾಗಿ ಬೆಳೆಯಿತು, ಆತನು ಕೇಂದ್ರದ ನಿಕಟ ಸಂಪರ್ಕದಲ್ಲಿದ್ದಾಗ, ಅಸ್ತಿತ್ವದಲ್ಲಿರುವ ಜಗತ್ತಿನ ನಿಜಸ್ವರೂಪವನ್ನು ಅದರ ಮೂಲ ಕಾರಣ ಅಥವಾ ಶಕ್ತಿ ಸಹಿತವಾಗಿ ಕಂಡುಹಿಡಿದನು. ಕೇಂದ್ರದ ಅಡಿಯಲ್ಲಿರುವ ಯಾವುದೊ ಒಂದು ಶಕ್ತಿಯ ಕ್ಷೋಭವು ವರ್ತಮಾನ ಜಗತ್ತನ್ನು ಅಸ್ತಿತ್ವದಲ್ಲಿ ತಂದಿತೆಂದು ಅರಿತನು. ಅದನ್ನೇ ಬೇರೆ ಶಬ್ದಗಳಲ್ಲಿ ಉಪಾದಾನ ಕಾರಣವೆಂದೂ ಕ್ಷೋಭವೆಂದೂ ಕರೆಯಲಾಗಿದೆ. ಅದು ಮನುಷ್ಯನ ಚಿತ್ ಶಕ್ತಿಗೆ ಸಮಾನವಾಗಿರುವ ಅಥವಾ ಅದರಂತಿರುವ ಶಕ್ತಿಯ ಪರಿಣಾಮವೆಂಬುದನ್ನು ಆತನು ಕೊನೆಗೆ ನಿರ್ಣಯಿಸಿದನು .ಸ್ವಾಭಾವಿಕವಾಗಿಯೇ ಚಿತ್ಶಕ್ತಿಯು ಇಂತಹ ಪರಿಣಾಮವನ್ನುಂಟು ಮಾಡಬಹುದೆಂದುನ್ನೂ ಅದರ ಶಕ್ತಿಯು ಅನಂತವಾಗಿದೆ ಎಂಬುದನ್ನೂ ಅವನು ಊಹಿಸಿದನು. ಆಮೇಲೆ ಅವನು ಆ ಚಿತ್ಶಕ್ತಿಯಿಂದ ಕೆಲಸ ತೆಗೆದುಕೊಂಡು ಅದರಿಂದ ತರಬೇತಿಯನ್ನು ಆರಂಭಿಸಿದನು. ಆ ಕೆಲಸವು ಮುಂದೆ ನಮ್ಮ ಪಾಲಿಗೆ ಬಂದಿತು. ಅದೇ ರಾಜಯೋಗದ ಮೂಲವಾಗಿದೆ. ನಮ್ಮಲ್ಲಿರುವ ಶ್ರೇಷ್ಠ ವಸ್ತುವೆಂದರೆ ಸಂಕಲ್ಪ ಶಕ್ತಿಯೇ. ಅದು ಬೆಳೆಯುತ್ತ ಹೋಗಿ ಕಟ್ಟಕಡೆಗೆ ನಮ್ಮನ್ನು ಗುರಿಗೆ ಮುಟ್ಟಿಸುವುದು. ಅನೇಕ ಮಹರ್ಷಿಗಳು ,ಒಬ್ಬರ ತರುವಾಯ ಒಬ್ಬರು ಅದನ್ನು ಸುಧಾರಿಸಿ ಬೆಳೆಸಿದ್ದಾರೆ. ಸಂಕಲ್ಪವೆ ಕೊನೆಗೆ ಸದ್ರೂಪವನ್ನು ತಾಳಿ ಮೂಲರೂಪದಲ್ಲಿ ಕಾಣೀಸಿಕೊಳ್ಳುವುದು. ಇದೆಲ್ಲವನ್ನೂ ಶ್ರೇಷ್ಠವಾದ ಅಂತರ್ದೃಷ್ಟಿವುಳ್ಳವರು ಪ್ರಮಾಣಿಸಿ ನೋಡಬಹುದು. ಈ ಶಾಸ್ರವನ್ನು ಬೋಧಿಸುವ ಪದ್ಧತಿಗಳು ಬೇರೆ ಬೇರೆಯಾಗಿದ್ದರೂ ಮೂಲಭೂತತತ್ವವು ಮಾತ್ರ ಇದೆ. ಈ ಶಕ್ತಿಯಿಂದ ನಾವು ದೇವರೊಡನೆ ಸಂಬಂಧವನ್ನು ಜೋಡಿಸುತ್ತೇವೆ. ERY-1-2-3
- ಈ ವಿಷಯದಲ್ಲಿ ಸ್ವಾಮಿ ವಿವೇಕಾನಂದರ ವಿವೇಚನಾಯುಕ್ತ ಅಭಿಪ್ರಾಯವನ್ನು ನಾನು ಒಂದು ಸುಳುಹು ಎಂದು ಸ್ವೀಕರಿಸುತ್ತೇನೆ-“ಮಾನವನನ್ನು ಅತ್ಯುನ್ನತ ಸ್ಥಿತಿಯವರೆಗೆ ಕೊಂಡೊಯ್ಯಬಲ್ಲುದು ರಾಜಯೋಗ ಮಾತ್ರ, ತನ್ನದೇ ಆಂತರಿಕ ಶಕ್ತಿಯನ್ನು ಪ್ರಾಣಾಹುತಿಯ ಮೂಲಕ ಉಪಯೋಗಿಸುವ ಸಾಮರ್ಥ್ಯವುಳ್ಳವನಲ್ಲದೆ ಮತ್ತಾರೂ ಗುರುವಾಗಲು ಅಥವಾ ಮಾರ್ಗದರ್ಶಕನಾಗಲು ಸಮರ್ಥರಲ್ಲ.”ಹಠ ಯೋಗದ ಮೂಲಕ ಆಜ್ಞಾಚಕ್ರದ ಆಚೆಗೆ ಹೋಗಲು ಸಾಧ್ಯವಿಲ್ಲವೆಂದು ನಾನು ನಿಮಗೆ ಖಂಡಿತವಾಗಿ ಸೂಚಿಸಬಲ್ಲೆ. ಅದಲ್ಲದೆ ಅದರಲ್ಲಿ ಮತ್ತೊಂದು ಗಂಭೀರ ದೋಷವಿದೆ.ನಾವು ಹಠಯೋಗದ ಶಾರೀರಿಕ ಅಭ್ಯಾಸಗಳಿಂದ ಪ್ರಾರಃಭಿಸಿದಾಗ,ದೈಹಿಕ ಪ್ರಯತ್ನಗಳ ಮತ್ತು ಅದರೊಟ್ಟಿಗೆ ಅಹಂತೆಯ ಅರಿವು ಉದ್ದಕ್ಕೂ ಅದರ ಹಿನ್ನೆಲೆಯಲ್ಲಿ ಇರುತ್ತದೆ. ಹೀಗೆ ಅಹಂಕಾರವು ಕ್ಷೀಣಗೊಳ್ಳುತ್ತ ಹೋಗುವದರ ಬದಲಾಗಿ,ಹೆಚ್ಚುತ್ತಹೋಗುತ್ತದೆ SMP-45
- ಮಾನವನ ವಿಚಾರ ಶಕ್ತಿಯು ಭಗವಂತನ ಸಮೀಪದಲ್ಲಿದೆ ಎಂದು ಒಪ್ಪಿಕೊಳ್ಳಲಾಗಿದೆ. ME 35
- ನಾನು ರಾಜಯೋಗದ ಪ್ರಭಾವವನ್ನು ತೋರಿಸಿಕೊಟ್ಟುದಾಯಿತು. ಅದೃಷ್ಟವನ್ನು ರೂಪಿಸಬಲ್ಲ ವಸ್ತುವೆಂದರೆ ಅದೊಂದೇ. ಅದು ಸ್ವಯಂಪೂರ್ಣವಾಗಿದೆ. ಅಭ್ಯಾಸ ಹಾಗೂ ಅನುಭವಗಳೇ ಇದನ್ನು ತೋರಿಸಿಕೂಡಬಲ್ಲವು. ನಾನು ಹೇಳಿದುದನ್ನು ಕುರುಡರಂತೆ ನಂಬಿರೆಂದು ನಾನೆನ್ನುವುದಿಲ್ಲ. ಆದರೆ ಮನ: ಪೂರ್ವಕ ಅಭ್ಯಾಸ ಮಾಡಿ ಮನಗಾಣಬೇಕೆಂದು ಕಳಕಳಿಯಿಂದ ಪ್ರಾರ್ಥಿಸಿಕೊಳ್ಳುತ್ತೇನೆ. ರಾಜಯೋಗವನ್ನು ಅಭ್ಯಾಸ ಮಾಡಲು ಬೇರೆ ಪದ್ಧತಿಗಳೂ ಇವೆ. ಆದರೆ ಈ (ಪುಸ್ತಕದಲ್ಲಿವಿವರಿಸಲಾದ) ಪದ್ಧಿತಿಯೇ ಅತ್ಯಂತ ಯೋಗ್ಯವಾದುದು. ಇದರಲ್ಲಿ ಸಿದ್ಧಿ ಪಡೆದವರನ್ನೇ ಹುಡುಕಬೇಕೆಂದು ಓದುಗರಿಗೆ ನನ್ನ ಹೃತ್ಪೂರ್ವಕ ಸೂಚನೆಯಿದೆ. ಇಂಥವರನ್ನೂ ಹುಡುಕುವುದು ಕಠಿಣವಾದರೂ ಈ ಪ್ರಪಂಚದಲ್ಲಿ ನಿಸ್ಸಂದೇಹವಾಗಿ ಅಂತಹವರಿದ್ದಾರೆ. ERY 69-70
- ರಾಜಯೋಗವೋಂದೇ ನಿಮ್ಮನ್ನು ಚರಮಗುರಿಯತ್ತ ,ಅಥವಾ ಯಾವುದನ್ನು ಮುಟ್ಟಿ, ನೀವು ನಿಮ್ಮ ಕೇವಲ ಶುದ್ಧ ಸ್ವರೂಪವನ್ನು ಹೊಂದಿ, ನಿಸರ್ಗದೊಂದಿಗೆ ಪೂರ್ಣ ಸಮರಸವಾಗುವಿರೋ ಅಂಥ ಮಾನವನ ಅತ್ಯುಚ್ಚನೆಲೆಯ ಕಡೆಗೆ ಕರೆದೊಯ್ಯಬಲ್ಲುದು. RD 3