1. ‘ಸಾರೂಪ್ಯ’ವನ್ನು ಕುರಿತು ಹೇಳುವುದಾದರೆ, ಮೊದಲು ಅದೊಂದು ಸೂಕ್ಷ್ಮ ಕಲ್ಪನೆಯಂತಿದ್ದು ಕ್ರಮೇಣ ವಿಚಾರವಾಗಿ ಬೆಳೆಯುವುದು. ಅದರ ಸರಿಯಾದ ಅರ್ಥವನ್ನು ತಿಳಿಸುವುದು ಬಹಳ ಕಷ್ಟ. ಅದೇನೇ ಇದ್ದರೂ ಮೂಲದ ಪ್ರಜ್ಞೆಯನ್ನು ನಮ್ಮ ಅಭಿಜ್ಞೆಯಲ್ಲಿ ಮೂಡಿಸುವುದೇ ಸಾರೂಪ್ಯವೆಂದು ತಿಳಿದುಕೊಳ್ಳಲು ಅಡ್ಡಿಯಿಲ್ಲ. VR I 228-229.
  2. ಸಾರುಪ್ಯವು ಮಹಾಪ್ರಳಯದವರೆಗೂ ಅಸ್ತಿತ್ವದಲ್ಲಿರುವುದು. ಆಗ ಅದು ತನ್ನ ಪೃಥಕ್ತ್ವವನ್ನು ಕಳೆದುಕೊಂಡು ಒಂದೇ ಸಾಮಾನ್ಯ ಸ್ವರೂಪದಲ್ಲಿ ಲಯಹೊಂದುವುದು. ಮುಂದೆ ಇದು ಇನ್ನೊಂದು ಸೃಷ್ಟಿಗೆ ಕಾರಣವಾಗುವುದು. ಹೀಗೆ , ಪೃಥಕ್ತ್ವವು ನಷ್ಟವಾಗುವುದೇ ಹೊರತು ಸಾರುಪ್ಯವು ನಷ್ಟವಾಗುವುದಿಲ್ಲ. ಮೂಲ ಕೇಂದ್ರದಲ್ಲಿಯ ಸುಪ್ತ. VR I-230
  3. ಸಾಯುವ ಸ್ಥಿತಿಯು ಅನಿಸಿಕೆಗಿಂತ ಪ್ರಬಲವಾದಾಗ ಎಲ್ಲ ಚಕ್ರಗಳಲ್ಲಿಯೂ ಆರಂಭವಾಗುವುದು. ಅಭ್ಯಾಸಿಯು ತನ್ನ ಸಾರೂಪ್ಯವನ್ನು ಕಳೆದುಕೊಂಡು ಆ ಕೇಂದ್ರದ ಅವಸ್ಥೆಯಲ್ಲಿ ಲೀನವಾಗಿರುವುದನ್ನು ಅದು ಸೂಚಿಸುತ್ತದೆ.AB I P 30
  4. ಆಕಾಶವು ದೇಶವಾಗಿದ್ದರೆ , ಅವಕಾಶವು ಕಾಲವಾಗಿದೆ. ಇವೆರಡೂ ಒಂದರಿಂದೊಂದು ಬಹಳ ಭಿನ್ನವಾಗಿವೆ. ಆಕಾಶದಿಂದ ಸೃಷ್ಟಿಯಾಗಿರುವ ಕಾಲವು ಆಕಾಶದ ಸ್ಥೂಲ ಅವಸ್ಥೆಯೆಂದು ತಿಳಿಯಬಹುದು. ವಸ್ತು ಸ್ಥಿತಿ ಏನೆಂದರೆ. ಈ ವಿಶ್ವವು ಅವಕಾಶದ ಪ್ರಾದುರ್ಭಾವವಾಗಿದೆ; ಮತ್ತು ಭಗವಂತನು ಆಕಾಶದ ಅಭಿವ್ಯಕ್ತಿ. ಒಳಗಿನ ವೃತ್ತವು ಭಗವಂತನ ಅವಿರ್ಭಾವಕ್ಕೆ ಕಾರಣವಾಗಿದ್ದರೆ, ಹೊರಗಿನ ವೃತ್ತವು ವಿಶ್ವದ ಪ್ರಕಾಶನಕ್ಕೆ ಕಾರಣವಾಯಿತು. ಈ ಮಧ್ಯದ ಭಾಗವೇ ಅವಧಿ. ಮಹಾಪ್ರಳಯದಲ್ಲಾಗುವಂತೆ ಹೊರಗಿನ ಆವರಣವು ಮಧ್ಯಭಾಗದೊಂದಿಗೆ ಕರಗಿಹೋದಾಗ ಆಕಾಶವೊಂದೇ ಉಳಿಯುವುದು. ಅರ್ಥಾತ್ ಸಾರುಪ್ಯವು ಆಕಾಶದಲ್ಲಿ ಪರಿವರ್ತನ ಹೊಂದುವುದು. ಎಂದರೆ ಸಾರುಪ್ಯವೇ ಆಕಾಶವೆಂದರ್ಥ. VR I 226-227.