ನಾವು ಈ ಚೇತನತೆಯೊಂದಿಗೆ ಸಂಪೂರ್ಣ ಬೆರೆತು ಹೋಗಿ ಅದರ ಪ್ರಭಾವವನ್ನು ನಮ್ಮಲ್ಲಿ ಅರಗಿಸಿಕೊಂಡು ಅದರಲ್ಲಿ ಲಯ ಹೊಂದುವುದೇ ವಾಸ್ತವವಾಗಿ ಜ್ಞಾನದ ಅವಸ್ಥೆ. ಈ ದಶೆಯನ್ನುಂಟು ಮಾಡಿಕೊಂಡು ಇದರಲ್ಲಿ ಲಯವಾದಾಗಲೇ ನಿಜಕ್ಕೂ ಆ ಗ್ರಂಥಿಯ ನಾಲ್ಕೂನಿಟ್ಟಿನ ಜ್ಞಾನವು ಪ್ರಾಪ್ತವಾಗಿ ಅಷ್ಟರ ಮಟ್ಟಿಗೆ ಜ್ಞಾನಿಗಳಾದೆವು.

    1.  ಮೊದಲನೆಯ ಗ್ರಂಥಿ
      ನಾವು ಯಾವಾಗ ಅದರಲ್ಲಿ ಲಯಾವಸ್ಥೆಯನ್ನು ಪಡೆದೆವೋ, ಅದರ ಆನಂದವನ್ನು ಸವಿದು ಹೃದಯವು ಮುಂದೆ ಹೋಗಲು ಕಾತರಿಸತೊಡಗಿತೋ, ಆಗ ನಮ್ಮಲ್ಲಿ ಉಂಟಾಗಿದ್ದ ಜ್ಞಾನದ ಸಂಬಂಧವು ನಮ್ಮನ್ನು ಉನ್ನತ ಸ್ಥಿತಿಗೆ ಕೊಂಡೊಯ್ಯಲು ವಿವಶಗೊಳಿಸಿತು. ಸಾಹಸ ಹೆಚ್ಚಿತು; ಮುಂದೆ ಹೋದ ಸಂತೋಷಕರ ಸುದ್ದಿಯು ಬಂದಿತು. ಪ್ರತಿಯೊಂದು ಲಯ ಅವಸ್ಥೆಯ ನಂತರ ಬರುವ ವಾಸ್ತವಿಕ ಜೀವನವು ನಮ್ಮಲ್ಲಿ ಮೂಡಿತು. ಇದು ನಮಗೆ ಮತ್ತಷ್ಟು ಸಹಾಯ ಮಾಡಿತು. ನಾವು ಇನ್ನೂ ಮುಂದುವರಿದೆವು. ಎರಡನೆಯ ಗ್ರಂಥಿ ಬಂದಿತು. ಈಗ ನಮ್ಮಲ್ಲಿ ಕಳವಳವೇನೋ ಇದೆ. ಆದರೆ, ಅದರೊಡನೆ ತತ್ಪರತೆ ಯೂ ಸಾಕಷ್ಟಿದ್ದು, ಅದರಲ್ಲಿ ಪರಿಶ್ರಮಪೂರ್ವಕ ತೊಡಗಿದರೆ, ಹಿಂದಿನ ಅವಸ್ಥೆಗಿಂತ ಶ್ರೇಷ್ಠ ದಶೆಯು ಬಂದೇ ಬರುವುದು. ಪ್ರತಿಯೊಂದು ವಸ್ತುವೂ ಸಮೀಪವೇ ಇದ್ದು, ನಾವು ಎ ಲ್ಲಿ ಗೆ ಹೋಗಬೇಕಾಗಿಲ್ಲವಾದರೂ ಅಂತಿಮದಶೆಯನ್ನಂತೂ ಮುಟ್ಟಲೇ ಬೇಕಾಗಿದೆ. ಒಂದು ವೇಳೆ ಯೋಗ್ಯ ಗುರುವು ದೊರೆತು ಈ ವಿಷವನ್ನು ಹೀರಿಕೊಂಡುಬಿಟ್ಟರೆ ವಿಷದ ಔಷಧಿ-ವಿಷಹಾರಿ ಮಾತ್ರವೇ ಬಾಕಿ ಉಳಿಯುವುದು. ತಮ್ಮ ಪ್ರಯತ್ನದಿಂದ ಜನರು ಬಹುದೂರ ಮುಟ್ಟುವರಾದರೂ ಸಮಯ ಬಹಳ ಬೇಕಾಗುವುದು. ಆದುದರಿಂದ ಈ ತಿರುಗಣಿಯ ಸುಳಿಯಲ್ಲಿ ಸಿಕ್ಕಿಬೀಳುವ ಅಂಜಿಕೆ ಸದಾ ಇರುವುದು, ಇದೇ ಪ್ರಕಾರ ಅ ಗ ಣಿತ ಗ್ರಂಥಿಗಳಿವೆ. ಮತ್ತು ಪ್ರತಿಯೊಂದು ಗ್ರಂಥಿಗೂ ಅವೇ ಲಯ ಹಾಗೂ ಸಾರೂಪ್ಯತೆಯ ಅವಸ್ಥೆಗಳು ಬರುತ್ತ ಹೋಗುವವು.

      ಈಗ ನಾನು ಮೊದಲನೆಯ ಗ್ರಂಥಿಯ ಅನಂತರ ಬರುವ ಚೇತನತೆಯನ್ನು ಕುರಿತು ಸ್ವಲ್ಪ ಹೇಳುವೆನು, ನಾವು ಆ ಗ್ರಂಥಿಯನ್ನು ದಾಟಿ ಈ ಚೇತನತೆಯನ್ನು ಹೊಂದಿದಾಗ ಜಗತ್ತು ಅವಶ್ಯವಾಗಿ ಸ್ವಲ್ಪ ಬದಲಾಯಿಸುವುದು. ನಾವು ಅದರಲ್ಲಿ ಲಯಾವಸ್ಥೆಯನ್ನು ಪಡೆದರೆ ಈಶ್ವರೀಯ ದಶೆಯು ಆರಂಭವಾಗುವುದು. ಇದರಲ್ಲಿ ಸಾರೂಪ್ಯ ಹೊಂದಿದಾಗ ಸಮಸ್ತ ಜಡಚೇತನ ಸಮುದಾಯವನ್ನು ಒಂದು ವಿಚಿತ್ರ ದಶೆಯು ಆವರಿಸಿದಂತೆ ನಮಗೆ ಕಂಡು ಬರುವುದು, ಅದರಲ್ಲಿ ಈಶ್ವರೀಯ ದಶೆಯ ಆಭಾಸವಾಗುವುದು. ಶಬ್ದಗಳಿಂದ ವ್ಯಕ್ತಮಾಡಲಾಗದ ಒಂದು ಉನ್ಮಾದ ಬರುವುದು, ಇಲ್ಲಿ ಒಂದು ವೇಳೆ ಯಾರಿಗಾದರೂ ಯೋಗ್ಯ ಗುರು ಸಿಗದಿದ್ದರೆ ಜನರು ಬಹುಶಃ ಈ ಮೊದಲನೆಯ ಅವಸ್ಥೆಯಲ್ಲಿಯೇ ಅವಧೂತರಾಗುವರು. ಆಗ ಅವರ ಪ್ರಯತ್ನವೆಲ್ಲ ನಿಂತು ಹೋಗುವುದು. ಜೀವನಾವಧಿಯೆಲ್ಲ ಇಲ್ಲಿಯೇ ಸಿಕ್ಕಿಬೀಳುವರು. ವಾಸ್ತವವಾಗಿ, ಜ್ಞಾನದ ಮೊದಲನೆಯ ಅಧ್ಯಾಯದ ಆರಂಭದಂತಿರುವ ಈ ಸ್ಥಿತಿಯು ತಾವು ಧುರಂಧರ ಜ್ಞಾನಿಗಳೆಂದು ಸಾರುವ ಜನರಿಗೆ ಎಂದಾದರೂ ಪ್ರಾಪ್ತವಾಗಿದೆಯೇ ಎಂಬುದನ್ನು ಕೇಳಿ ನೋಡಿರಿ, ಇದೇ ದಶೆಯನ್ನು ಧ್ಯಾನಿಸುತ್ತ ಕುಳಿತರೆ ವಾಸ್ತವಿಕತೆ ಹೊರಟುಹೋಗಿ ಕೃತ್ರಿಮತೆ ಬರುವುದು.

    2. ಎರಡನೆಯ ಗ್ರಂಥಿ
      ಈಗ ನಾವು ಎರಡನೆಯ ಗ್ರಂಥಿಯನ್ನು ತಲುಪಿದೆವು. ಇದರ ಸುತ್ತಲೂ ಇರುವ ಸ್ಥಿತಿಯು ಜ್ಞಾನದ ಎರಡನೆಯ ಅವಸ್ಥೆ, ಪ್ರೇಮ ಭಕ್ತಿಗಳು ನಮ್ಮನ್ನು ಒಂದು ವೇಳೆ ಅಲ್ಲಿಯವರೆಗೆ ಮುಟ್ಟಿಸಿದರೆ ಜ್ಯೋತಿರ್ಮಯ ದಿವ್ಯದಶೆಗಳ ರೂಪವೂ ಬದಲಾಗುವುದು. ಆ ವಸ್ತುವು ಹಗುರವಾಗಿ ಶ್ರೇಷ್ಟತರ ದಶೆಯು ಪ್ರಾಪ್ತವಾಗುವುದು. ಸಾರಾಂಶವಿಷ್ಟೆ: ಮೊದಲಿನ ಸ್ಥಿತಿಯು ಭಾರವಾಗಿದ್ದಿತು; ಇದು ಆದಕ್ಕಿಂತ ಹಗುರಾಗಿರುವುದು, ಈಗ ಈ ಎರಡನೆಯ ಗ್ರಂಥಿಯಲ್ಲಿ ಏನಿದೆ? ನಾಲ್ಕೂ ಕಡೆಗೂ ಈಶ್ವರೀಯ ದಶೆಯೇ ಕವಿದಿರುವಂತೆ ಅನುಭವವಾಗುವುದು, ಅಂಥ ದಶೆ ಅಥವಾ ದಿವ್ಯಪ್ರಕಾಶ ಇಲ್ಲಿದೆ. ಇಲ್ಲಿ ಸ್ವಲ್ಪ ಸರಳತೆಯ ಅಭಾಸವಾಗುವುದು. ನಾವು ಅದರ ಒಳಕ್ಕೆ ಇನ್ನಷ್ಟೂ ಪ್ರವೇಶಿಸಿದ್ದೇವೆಂದು ಇದರರ್ಥ, ಪ್ರತಿಯೊಂದು ಸ್ವರದಲ್ಲಿ ಲಯಾವಸ್ಥೆ ಮತ್ತು ಸಾರೂಪ್ಯತೆ ಬರುವುದು, ಯಾವುದನ್ನು ಎರಡನೆಯ ಅವಸ್ಥೆಯ ಜ್ಞಾನವೆನ್ನುವರೋ ಆ ದಶೆಯ ಪ್ರಾಪ್ತಿಯೇ ಸಾರೂಪ್ಯತೆ. ಈಗ ನಾವು ಇವರಲ್ಲಿ ಲಯ ಅವಸ್ಥೆಯನ್ನು ಪಡೆದೆವು. ಸಾರೂಪ್ಯತೆಯ ಸಂತೋಷ ವಾರ್ತೆಯು ಬಂದಿತು. ಅದರಲ್ಲಿ ನಾವು ಸಾಕಷ್ಟು ರಮಿಸಿದಾಗ ಮೂರನೆಯ ಗ್ರಂಥಿಯ ಕಡೆಗೆ ನಮ್ಮ ದೃಷ್ಟಿ ಹೊರಳಿತು,
    3. ಮೂರನೆಯ ಗ್ರಂಥಿ
      ಈಗ ನಮ್ಮ ಪ್ರೇಮವು ಬಲವತ್ತರವಾದರೆ ಅದರಲ್ಲಿಯೂ ಹೊಕ್ಕೆವು. ಪ್ರತಿಯೊಂದು ಗ್ರಂಥಿಯಲ್ಲಿ ಸ್ವಲ್ಪ ಭಾರದ ಅನುಭವವಾಗುವುದೆಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳತಕ್ಕದ್ದು, ಇದನ್ನು ನೋಡಿ ಬಹುತೇಕ ಜನರು ಅಭ್ಯಾಸವನ್ನು ಬಿಟ್ಟು ಕೊಡುವರು. ಆದರೆ, ಕಾಯಿಲೆಯ ನಂತರ ಆರೋಗ್ಯ ಲಭಿಸುವದೆಂಬ ಮಾತು ಮನವರಿಕೆಯಾದರೆ ಪ್ರತಿಯೊಂದು ಗ್ರಂಥಿಯನ್ನು ದಾಟುವ ಸಾಹಸವುಂಟಾಗುವುದು. ಈಗ ದಿವ್ಯ ದಶೆಗಳ ರೂಪು ಬೇರೆಯಾಯಿತು. ಭಾರದಿಂದ ಬಿಡುಗಡೆ ದೊರೆಯಿತು, ವಾಸ್ತವಿಕತೆಯ ಕೆಳ ಅಂತಸಿನ ಭಾನವುಂಟಾಯಿತು. ಲಘುತ್ವವು ಮತ್ತಷ್ಟು ಹೆಚ್ಚಿತು: ಸುತ್ತಲೂ ಸರಳತೆಯ ಪ್ರತೀತಿಯಾಗತೊಡಗಿತು. ಆದರೆ ನಿರ್ಮಲತೆ ಇನ್ನೂ ದೂರವಿದೆ. ಇದು ಮೂರನೆಯ ಗ್ರಂಥಿಯ ಅನಂತರದ ಮಾತು. ಇಲ್ಲಿ ಆತ್ಮದ ಸ್ವಲ್ಪ ಪ್ರಕಾಶವು ಅನುಭವಕ್ಕೆ ಬರುವುದು. ಈ ಸ್ಥಾನವನ್ನು ಜನರು ಆತ್ಮದ ಸ್ಥಾನ ವೆಂದು ಕರೆಯುತ್ತಾರೆ, ಏಕೆಂದರೆ, ಇಲ್ಲಿ ಇಂಥವೇ ದಿವ್ಯ ದಶೆಗಳ ಅನುಭವವುಂಟಾಗುವುದು, ಸ್ವಚ್ಛತೆ ಮತ್ತು ಸರಳತೆಗಳು ಈ ಅವಸ್ಥೆಯ ಜೀವಾಳವಾಗಿವೆ. ಬಹುಶಃ ಸಮಾಸಮ ದಶೆಯು ಪ್ರತೀತವಾಗುವುದು. ಇಂಥವೇ ಅಗಣಿತ ಗ್ರಂಥಿಗಳ ಶ್ರೇಣಿ ಇದೆ. ಅವುಗಳ ವರ್ಣನೆಯು ವ್ಯರ್ಥ. ಏಕೆಂದರೆ, ಇವುಗಳ ನಡುವಿನ ಅಂತರವು ಶಬ್ದಗಳಿಂದ ವ್ಯಕ್ತಮಾಡಲು ಬಾರದಷ್ಟು ಕಡಿಮೆಯಿದೆ. ತಾತ್ಪರ್ಯವೇನೆಂದರೆ, ಈಗ ಆತ್ಮಸ್ಥಾನದ ದಿವ್ಯ ದಶೆಗಳು ನಮ್ಮೆದುರು ಕಾಣಿಸಿಕೊಳ್ಳುತ್ತವೆ. ನಮಗೆ, ಈ ಸ್ಥಾನದ ಮಹತ್ವ ತಿಳಿದು ಬಂದು ನಾವದನ್ನು ಮನನಮಾಡಿ ಅದರಲ್ಲಿ ಲಯಹೊಂದುವೆವು. ಈಗ ಮೊದಲನೆಯ ಆವರಣವು ಸರಿಯುವುದು. ನಮಗೆ ಆತ್ಮದ ಸುಗಂಧ ತಟ್ಟುವುದು, ಅಂಥದೇ ದೃಶ್ಯವು ಒಳಗೂ ಹೊರಗೂ ಕಾಣಲಾರಂಭಿಸುವದು. ಒಂದುವೇಳೆ ಹೀಗಾಗದಿದ್ದರೆ ಅದನ್ನು ಜ್ಞಾನದ ದಶೆಯೆಂದು ಎಂದಿಗೂ ಹೇಳಲಾಗದು. ಇದನ್ನು ಧ್ಯಾನಿಸಿ ಪಡೆದುದಾದರೆ ಕೃತ್ರಿಮತೆ ತಲೆದೋರುವುದು. ತನ್ನ ವಿಚಾರಶಕ್ತಿಯ ಜೋರು ಕೊಡುವುದರಿಂದ ಒಳಗೊಳಗೇ ಅದರ ಚಮತ್ಕಾರಗಳ ಅನುಭವವಾಗತೊಡಗುವುದು. ಮುಂದೆ ಇದೇ ಒಂದು ಬಂಧನವಾಗುವುದು; ಮತ್ತು ಬಲೆಯಲ್ಲಿ ಎಷ್ಟರ ಮಟ್ಟಿಗೆ ಸಿಕ್ಕಿಬೀಳುವರೆಂದರೆ ಅದರಿಂದ ಬಿಡುಗಡೆ ಹೊಂದುವುದು ತುಂಬ ಕಷ್ಟವಾಗುವುದು, ಮೊದಲಿನಿಂದ ಕೊನೆಯವರಗೆ ಯೋಗ್ಯವಾದ ಅಭ್ಯಾಸವನ್ನು ಮುಂದುವರಿಸುವವನೇ ನಿಜವಾದ ಸಾಧಕನೆನಿಸುವನು.

      ಈ ಮೂರನೆಯ ಗ್ರಂಥಿಯು ಆತ್ಮದ ಸಮಗ್ರ ಕ್ಷೇತ್ರವನ್ನು ಒಳಗೊಳ್ಳುವುದು. ಇದರಲ್ಲಿ ಮತ್ತೆ ಅಸಂಖ್ಯವಾದ ಸಣ್ಣ ಸಣ್ಣ ಗ್ರಂಥಿಗಳಿವೆ. ಇವನ್ನೆಲ್ಲ ದಾಟಿದ ಮೇಲೆಯೇ ನಾವು ಈ ಕ್ಷೇತ್ರದಿಂದ ಹೊರಗೆ ಬರುವೆವು. ಮನುಷ್ಯನಲ್ಲಿ ಈ ವಸ್ತುಗಳು ಅನೇಕ ಪದರುಗಳಾಗಿ ಕುಳಿತಿವೆ. ಅದೇನೇ ಇರಲಿ, ಈಗ ನಾವು ಇದಕ್ಕಿಂತ ಮುಂದೆ ತಲುಪಲು ಯತ್ನಿಸುತ್ತೇವೆ, ಭಗವಂತನ ಸಹಾಯದಿಂದ ನಮಗೆ ಮುಂದಿನ ಸುವಾರ್ತೆ ದೊರೆಯುವುದು, ಇಲ್ಲಿಯವರೆಗಂತೂ ನಮಗೆ ಜ್ಞಾನವಾಗಿಯೇ ಬಿಟ್ಟಿತು. ನಾವು ದಿವ್ಯ ಅಥವಾ ಜ್ಯೋತಿರ್ಮಯ ವೃತ್ತವನ್ನು ಪ್ರವೇಶಿಸಿದುದೇ ಇದಕ್ಕೆ ಸಾಕ್ಷಿ. ಈಗ ಇದರ ಮುಂದಿನ ಗ್ರಂಥಿ ಬರುವುದು,

    4. ನಾಲ್ಕನೇಯ ಗ್ರಂಥಿ
      ಸೃಷ್ಟಿ ರಚನೆಯಲ್ಲಿ ಪ್ರತಿಯೊಂದು ವಸ್ತುವಿನ ಅಗತ್ಯವಿರುತ್ತದೆ. ಒಂದೊಂದು ತತ್ತ್ವವೂ ಇದಕ್ಕೆ ಸಾಕ್ಷಿಯಾಗಿದೆ. ಈಗ ನಾವು ಇದರ ಮುಂದಿನ ದಶೆಯನ್ನು ಮುಟ್ಟುವೆವು. ಅಲ್ಲಿ ದಿವ್ಯಪ್ರಕಾಶದ ಸಮೂಹವು ಒಂದು ಜ್ವಾಲೆಯ ರೂಪದಲ್ಲಿ ಕಾಣಿಸುವುದು. ಭಕ್ತನು ಈ ಕಾವನ್ನು ಪ್ರೇಮದ ಕಾವಿನೊಂದಿಗೆ ಸಂಬಂಧಿಸಿಕೊಳ್ಳುವನು. ಇನ್ನೊಂದು ಮಾತು: ಧಾರೆಗಳು ಪ್ರವಹಿಸತೊಡಗಿದಾಗ ಅವುಗಳ ಕೇಂದ್ರವು ತಣ್ಣಗಿದ್ದಿತು; ಏಕೆಂದರೆ ಅದರಲ್ಲಿ ಪದಾರ್ಥವು ( matter ) ಬೆರೆತಿರಲಿಲ್ಲ. ಧಾರೆಗಳು ಇಳಿಯುತ್ತಲೇ ಅವುಗಳಿಂದ ಆಘಾತಗಳು ಹೆಚ್ಚುತ್ತಲೇ ನಡೆದವು. ಇವು ವಾಸ್ತವವಾಗಿ ಸೃಷ್ಟಿಯು ಎಲ್ಲಿಂದ ಪ್ರಾರಂಭವಾಗಿದ್ದಿತೋ ಅಲ್ಲಿಯೇ ಹೆಚ್ಚಾಗಿ ಉಂಟಾದವು. ಇದನ್ನು ತಿಳಿದುಕೊಳ್ಳಲು ನಾವು ಮೂರು ಭಾಗಗಳನ್ನು ಕಲ್ಪಿಸಿಕೊಂಡರೆ ಈ ಮಾತು ಮತ್ತಷ್ಟು ಸ್ಪಷ್ಟವಾಗುವುದು. ಎಲ್ಲಿ ಶೀತಲತೆಯು ತನ್ನದೇ ಆದ ಕ್ರಿಯೆಯಿಂದ ಕಾವನ್ನು ಹುಟ್ಟಿಸಿಕೊಂಡಿದ್ದಿತೋ ಆ ಪ್ರದೇಶವನ್ನು ಹೊಕ್ಕಾಗ ಅದು ಅಲ್ಲಿಂದಲೇ ವ್ಯಕ್ತ ರೂಪವನ್ನು ತಳೆಯಿತು. ಇದು ನಡುವಿನ ಭಾಗವಾಗಿದ್ದಿತು. ಇದರಂತೆಯೇ ಈಗ ಅದೇ ಮಧ್ಯ ಭಾಗವು ಒಂದು ಗ್ರಂಥಿಯ ರೂಪದಲ್ಲಿ ನಮ್ಮೆದುರು ಬರುವುದು. ಅದರಲ್ಲಿ ನಮಗೆ ತಿರುಗುವ ಚಕ್ರಗಳಂತೆ ಕಾಣುವವು. ನಿಜಸಂಗತಿಯೇನೆಂದರೆ, ಅದೇ ಮೂಲತತ್ತ್ವವು ತಾನೇ ಒಂದು ಗ್ರಂಥಿಯಾಯಿತು. ಕ್ರಿಯೆ ಪ್ರತಿಕ್ರಿಯೆಗಳು ಹೆಚ್ಚಿದ ಕಾರಣ ಅದು ಪದಾರ್ಥದ ರೂಪವನ್ನು ಪಡೆಯುವಷ್ಟು ಗಟ್ಟಿಯಾಯಿತು. ಈ ಗ್ರಂಥಿಯಲ್ಲಿ ನಾವು ನಮ್ಮ ವಿಚಾರಗಳೊಂದಿಗೆ ಸಮಾವಿಷ್ಟರಾಗಿ ಮುಂದಿನ ದಶೆಯನ್ನು ಮುಟ್ಟುವ ಧ್ಯಾನದಲ್ಲಿಯೇ ಇದರಲ್ಲಿ ಭ್ರಮಣ ಮಾಡುತ್ತಿದ್ದೇವೆ. ನಮ್ಮ ದೃಢವಾದ ತತ್ಪರತೆಯಿಂದ ಯಶ ದೊರೆತಾಗ ಈ ಗ್ರಂಥಿಯ ವಾಸ್ತವಿಕ ದಶೆಗೆ ಬರುವೆವು. ಇಲ್ಲಿಯ ಪ್ರಕಾಶವು ಸ್ವಲ್ಪ ಅ ಗ್ನಿ ತತ್ತ್ವದೊಂದಿಗೆ ಸಂಬಂಧಪಟ್ಟಿದೆ.

      ಮನುಷ್ಯನು ಈ ಗ್ರಂಥಿಯಲ್ಲಿ ಲಯ ಅವಸ್ಥೆಯನ್ನು ಪಡೆದುದಾದರೆ ಅಗ್ನಿ ತತ್ತ್ವ ದ ಮೇಲೆ ಅಧಿಕಾರವುಂಟಾಗುವುದು. ಈ ಗ್ರಂಥಿಯಿಂದ ಹೊರಬಿದ್ದಾಗ ನಾವು ಇದರ ವಾಸ್ತವಿಕತೆಯನ್ನು ಮುಟ್ಟುವೆವು. ಇದು ನಮ್ಮ ಉನ್ನತಿಗೆ ಸೋಪಾನಪ್ರಾಯವಾಗಿದ್ದು ಆ ಸ್ಥಾನದ ದಶೆಯ ತಿಳಿವಳಿಕೆಯನ್ನುಂಟು ಮಾ ಡಿ ಕೊಡುವುದು. ಇದರಲ್ಲಿ ನಾವು ಲಯ ಅವಸ್ಥೆಯನ್ನು ಹೊಂದಿದಾಗ ಇ ಲ್ಲಿಯ ಜ್ಞಾನದ ದಶೆಯು ನಮ್ಮೊಳಗೆ ಉಂಟಾಗುವುದು. ಈಗ ಈ ವಸ್ತು ನಮ್ಮದಾ ಯಿ ತು. ಇದರ ಮೇಲೆ ನಮಗೆ ಪ್ರಭುತ್ವ ಬಂದಿತು. ಈ ಸೀಮೆಯವರೆಗೆ ನಾವು ಜ್ಞಾನಿಗಳಾದೆವು. ಅದರ ವೈಶಿಷ್ಟ್ಯವು ನನಗೆ ತಿಳಿಯಿತು ; ಅ ದರಲ್ಲಿ ನಾವು ಲ ಯ ಕೂಡ ಹೊಂದಿದೆವು. ವಾಸ್ತವವಾಗಿ ಜ್ಞಾನಿಯ ದಶೆ ಹೇಗಿರುವುದು? ಈ ಪದಾರ್ಥವೆಂಥದು? ಆ ಸ್ಥಾನದ ಲ ಯ ಅವಸ್ಥೆಯ ನಂತರ ಬರುವ ಸಾರೂಪ್ಯತೆಯ ದಶೆಯೇ ನಿಜವಾಗಿ ಆ ಸ್ಥಾನದ ಜ್ಞಾನ. ಈ ಅವಸ್ಥೆಯಲ್ಲಿ ನಾವು ಜಾಗೃತರಾಗುವೆವು. ಆದುದರಿಂದ ಅದನ್ನು ನಾವು ಆ ಸ್ಥಾನದ ಸಾರೂಪ್ಯತಾ-ಜೀವನವೆಂದು ಕರೆಯುವೆವು ಮತ್ತು ಸಜೀವ ವಸ್ತುವೇ ಈ ಜೀವನದ ಅನುಭವ ಪಡೆಯಬಲ್ಲದು. ಈಗ ನಮ್ಮ ಸಾಹಸ ಮತ್ತಷ್ಟು ಹೆಚ್ಚಿತು. ಇದಕ್ಕಿಂತ ಮುಂದಿನ ಜ್ಞಾನ ಪಡೆಯುವ ಹಂಬಲವುಂಟಾಯಿತು.

    5. ಐದನೆಯ ಗ್ರಂಥಿ
      ಈಗ ನಾವು ಇದಕ್ಕಿಂತ ಮೇಲಿನ ಗ್ರಂಥಿಯಲ್ಲಿ ಪ್ರವೇಶ ಮಾಡಿದೆವು. ಅಗ್ನಿಯ ಅಸ್ತಿತ್ವವು ಇಲ್ಲದಾಯಿತು, ಈಗ ಅದರ ವಿರುದ್ದ ದಶೆಯಲ್ಲಿ ಸಾ ಗಿ ದ್ದೇವೆಂದು ಇದರರ್ಥ, ಇದು ಜಲಸ್ಥಾನ, ಕೇವಲ ಇದೇ ಗ್ರಂಥಿಯಲ್ಲಿ ನಾವು ಲ ಯ ವನ್ನು ಪಡೆದು ಉಳಿದು ಕೊಂಡುದಾದರೆ ಸಾಕಷ್ಟು ಸುತ್ತಾಡಿದ ನಂತರವೂ ಇದೇ ತತ್ರ್ಯದ ಮೇಲಷ್ಟೇ ನಮಗೆ ಆಧಿಕಾರವುಂಟಾಗುವುದು. ಜ್ಞಾನವು ನಮಗೇನು ಸಹಾಯ ಮಾಡುವುದು ? ಅ ದು ನಮ್ಮೊಳಗೆ ಭಗವದನ್ವೇಷಣ ಬುದ್ದಿಯನ್ನು ಹುಟ್ಟಿಸುವುದು. ಈ ಮಾತು ಯಾರ ವಿಚಾರದಲ್ಲಿಯೂ ಬಾರದಿದ್ದರೆ, ಅಥವಾ ವಾಸ್ತವಿಕತೆಯನ್ನು ಹುಡುಕುವುದು ನಮಗೆ ಬೇಡವಾದರೆ ಇದೇ ಗ್ರಂಥಿಯಲ್ಲಿಯೇ ಸಿಕ್ಕಿಬೀಳುವೆವು; ಮತ್ತು ಚಮತ್ಕಾರಗಳನ್ನು ತೋರಿಸಲಾರಂಭಿಸುವೆವು. ನಮ್ಮ ತಳಮಳವು ನಮ್ಮ ಸಹಾಯಕ್ಕೆ ಬಂದು ಈ ಗ್ರಂಥಿ ಯಲ್ಲಿ ಲಯಹೊಂದಿದ ಮೇಲೆ ಸಾರೂಪ್ಯತೆಯ ದಶೆಯುಂಟಾದುದಾದರೆ ನಮಗೆ ಆ ಅವಸ್ಥೆಯ ಜ್ಞಾನವಾಗುವುದು. ನಮ್ಮ ಧ್ಯೇಯವು ವಾಸ್ತವಿಕತೆಯ ಮೇಲೆಯೇ ನೆಟ್ಟಿರುವುದಾದ್ದರಿಂದ ಆ ಗ್ರಂಥಿಯ ಮೇಲೆ ನಮಗೆ ಅಧಿಕಾರವುಂಟಾದರೂ ಆದರಿಂದ ಕೆಲಸ ತೆಗೆದುಕೊಳ್ಳುವುದರ ಕಡೆಗೆ ನಮ್ಮ ದೃಷ್ಟಿ ಹೊರಳುವುದಿಲ್ಲ. ನೀರನ್ನು ಕಂಡ ಮೇಲೆ ಅನುಭವಕ್ಕೆ ಬರುವ ಪ್ರಸನ್ನತೆಯಷ್ಟೇ ಶಾಂತಗುಣವು ಇದರದಿದೆ. ಈ ಗ್ರಂಥಿಯಲ್ಲಿ ಲಯ ಹೊಂದಿ ಸಾರೂಪ್ಯತೆಯ ದಶೆಯನ್ನು ಪಡೆದಾಗ ಆ ಸ್ಥಿತಿಯ ಜ್ಞಾನವುಂಟಾಗುವುದು

      ಪ್ರತಿಯೊಂದು ಗ್ರಂಥಿಯ ಅನಂತರ ಉಂಟಾಗುವ ಒಂದು ಸ್ಥಿತಿಯನ್ನು ಕುರಿತು ಬರೆಯುವುದೊಳಿತುಯಾವುದೇ ಗ್ರಂಥಿಯಲ್ಲಿ ಲಯಾವಸ್ಥೆಯನ್ನು ಪಡೆದ ಮೇಲೆ ನಾವು ಸಾರೂಪ್ಯತೆಯ ದಶೆಯನ್ನು ಮುಟ್ಟಿದಾಗ ಆ ದಶೆಯೇ ಅದರ ಕೊನೆಯಾಗುವುದಿಲ್ಲ. ಸಾರೂಪ್ಯತೆಯೂ ಲಯವಾಗಿ ಅದಕ್ಕಿಂತ ಉನ್ನತ ಸಾರೂಪ್ಯತೆಯು ದಶೆಯಲ್ಲಿ ಮಾರ್ಪಾಟು ಹೊಂದುವುದು, ಅದನ್ನು ಜ್ಯತೆಯೆಂದು ಕರೆಯುವರು. ಆಗ ಆ ದಶೆಯ ಜ್ಞಾನವನ್ನು ಪೂರ್ಣವಾಯಿತೆಂದು ತಿಳಿಯಬೇಕು

      ಒಳ್ಳೆಯದು, ಈ ಸಾಯುಜ್ಯತೆಯೂ ನಮ್ಮಲ್ಲುಂಟಾಯಿತು.ಈಗ ಇದರ ತರುವಾಯ ಬರುವ ಜ್ಞಾನವನ್ನು ಶೋಧಿಸುತ್ತೇವೆ. ‘ಶೋಧ’ ಮತ್ತು ‘ಹಂಬಲ’ ಗಳಲ್ಲಿ ಬಹಳ ಅಂತರವಿದೆ. ಆದಕಾರಣ ಇಲ್ಲಿ ‘ ಹಂಬಲ ‘ ವೆಂಬ ಶಬ್ದವೇ ಹೆಚ್ಚು ಯೋಗ್ಯ . ಈಗ ಈ ಹಂಬಲ ನಮ್ಮನ್ನು ಐದನೆಯ ಗ್ರಂಥಿಗೆ ಮುಟ್ಟಿಸಿ ಮೊದಲನೆಯ ನಾಲ್ಕೂ ಗ್ರಂಥಿಗಳಲ್ಲಿ ಅತ್ಯುತ್ತಮವಾದ ಸ್ಥಿತಿ ಯನ್ನು ತರುವುದು . ಈಗ ನಮ್ಮೊಳಗೆ ಆ ಗ್ರಂಥಿಯಲ್ಲಿ ಪ್ರವಾಸ ಮಾಡುವ ಅವಸ್ಥೆಯುಂಟಾಯಿತು . ಅಲ್ಲಿಯ ಸಂಗತಿಗಳು ನಮ್ಮ ಅನುಭವಕ್ಕೆ ಬರತೊಡ ಗಿದವು .   ನಾವು ಇಲ್ಲಿ ನಮ್ಮ ಆಸನವನ್ನು ಸ್ಥಿರಗೊಳಿಸಿದ್ದೆವೆ . ಆದುದರಿಂದ ನಮ್ಮ ಧ್ಯಾನದ ರೂಪವು ಆ ರೀತಿ ಆಯಿತು . ಹೀಗೆ ಇದು ಮುಂದುವರಿಯಿತು . ಕೊನೆಗೆ ಈ ಪ್ರವಾಸದಲ್ಲಿ ಲಯ ಅವಸ್ಥೆಯನ್ನುಂಟುಮಾಡಿ ಕೊಂಡೆವು . ಆಗ ನಮಗೆ ಇಲ್ಲಿಯ ವಿಚಿತ್ರ ದಶೆಯನ್ನನುಭವಿಸುವ ಸುಯೋಗವೊದಗಿತು . ಈ ಅವಸ್ಥೆಯಲ್ಲಿ ವಾಯು ತ ತ್ವ ದ ಮೇಲೆ ನಮಗೆ ಅಧಿಕಾರ ಬರುವುದು . ಆದರೆ ಆ ವಾಯು ಬದಲಾವಣೆ ಹೊಂದಿರುವುದು . ಅದು ಬಿರುಸಾಗಿ ಬೀಸುವುದಿಲ್ಲವಾದರೂ ಅದರಲ್ಲಿ ಹೆಚ್ಚು ಪ್ರಸನ್ನತೆಯನ್ನು ಕೊಡುವ ಯಾವುದೋ ಒಂದು ವಸ್ತುವಿರುವುದು . ಇಲ್ಲಿ ಅಭ್ಯಾಸಿಗೆ ಎರಡು ದಶೆಗಳುಂಟಾಗು ವವು . ಒಮ್ಮೊಮ್ಮೆ ಜ್ಞಾನಾವಸ್ಥೆಯಿಂದ ವಾಸ್ತವಿಕ ಜ್ಞಾನಾವಸ್ಥೆಯನ್ನು ತಲುಪಿ ದಾಗ ಸ್ವಲ್ಪ ದುಃಖವೆನಿಸಿದಂತೆ ಆಗಿ ಕಣ್ಣೀರು ಬರುವುದು . ಕೆಲವೊಮ್ಮೆ ಅಲ್ಲಿಯ ಗಾಳಿಯು ವರ್ತಮಾನ ದಶೆಯ ಅನುಭವಕೊಟ್ಟು ಒಂದು ರೀತಿಯ ಪ್ರಸನ್ನತೆಯನ್ನು ತರುವುದು . ಇದು ಒಮ್ಮೆ ಅಳುವಿನ ರೂಪದಲ್ಲಿ , ಒಮ್ಮೆ ನಗುವಿನ ರೂಪದಲ್ಲಿ ವ್ಯಕ್ತವಾಗುವುದು . ನಮ್ಮ ಸಾಧನ ಪದ್ದತಿಯಲ್ಲಿ ಅಭ್ಯಾಸಿಯನ್ನು ಈ ಅವಸ್ಥೆಯ ಮೇಲೆ ಹೆಚ್ಚು ಕಾಲ ತಡೆಯಲಾಗುವುದಿಲ್ಲ . ನಮ್ಮ ಇಚ್ಚಾಶಕ್ತಿ ಹಾಗೂ ಆತ್ಮಿಕ ಬಲದಿಂದ ಆ ಅವಸ್ಥೆಯ ವಾಸ್ತವಿಕ ಸಾರೂಪ್ಯತೆಯ ದಶೆಯನ್ನು ತಂದು ಕೊಟ್ಟು ಮುಂದಕ್ಕೊಯ್ಯುವೆವು . ಅಂತೂ ಈ ಸಮಯ ಬಂದಿತು . ನಾವು ಇದರಲ್ಲಿ ಸಂಪೂರ್ಣ ಸಾರೂಪ್ಯತೆಯನ್ನು ಪಡೆದು ಮುಂದೆ ಹೋದೆವು . ಈಗ ನಮಗೆ ಪಿಂಡದೇಶದ ಜ್ಞಾನವಾಯಿತು . ಪ್ರತಿಯೊಂದು ಗ್ರಂಥಿಯ ಮೇಲೆ ಧ್ವನಿಯಿದೆ ; ಮತ್ತು ಗ್ರಂಥಿಯು ಎಷ್ಟು ಉನ್ನತಾವಸ್ಥೆಯದಿರುವುದೋ ಧ್ವನಿಯೂ ಅಷ್ಟೇ ಮಧುರವಾಗುತ್ತ ಹೋಗುವುದು . ಪಿಂಡದೇಶದಲ್ಲಿ ಈ ಧ್ವನಿಯು ತೀವ್ರವಾಗಿರುತ್ತದೆ . ಯಾರಾದರೂ , ಕೇವಲ ಈ ಧ್ವನಿಗಳ ಮೇಲಾಗಲೀ , ಆವುಗಳ ಏರಿಳಿತಗಳ ಮೇಲಾಗಲೀ ಧ್ಯಾನ ಮಾಡಿದ್ದಾದರೆ ಆ ಸ್ಥಾನದ ಸಿದ್ದಿ ಗಳು ಅವರಲ್ಲಿ ಬಂದುಬಿಡುವುವು , ಐದೂ ಗ್ರಂಥಿಗಳಲ್ಲಿ ಧ್ವನಿ ಗಳು ಪರಸ್ಪರ ಸ್ವಲ್ಪ ಹೋಲುತ್ತಿದ್ದರೂ ಅವು ಬೇರೆ ಬೇರೆ ಪ್ರಕಾರದುವಾಗಿವೆ. ಇದನ್ನು ಪಂಚಾಗ್ನಿ ವಿದ್ಯೆಯೆನ್ನುವರು . ರಾವಣನಿಗೆ ಇದು ಸಂ ಪೂ ರ್ಣ ಸಿದ್ದಿ ಸಿತ್ತು . ಆದರೆ ನಾನಂತೂ ಯಾರನ್ನೂ ರಾಕ್ಷಸನನ್ನಾಗಿ ಮಾಡಬಯಸುವುದಿ ಲ್ಲ . ಚಮತ್ಕಾರಗಳ ಕಡೆಗೂ ಒಯ್ಯುವ ಇಚ್ಛೆಯಿಲ್ಲ . ಆದುದರಿಂದ ಈ ರಹಸ್ಯವನ್ನು ಬಿಚ್ಚುವುದಿಲ್ಲ . ಆ ಕಡೆಗೆ ಹೋಗ ಬಯಸುವವರು ಸ್ವಯಂ ಪ್ರಯತ್ನ ಮಾಡಲಿ . ಆ ಸ್ಥಳಗಳಲ್ಲಿಯ ಸ್ಪಂದನವೇ ಹಾಗಿದೆ . ಅದರಿಂದ ಧ್ವನಿಯ ಅನುಭವ ಬರುವುದು , ದಶೆಗೆ ತಕ್ಕಂತೆ ಧ್ವನಿಯು ತೀವ್ರವಾಗಲೀ , ಮಂದ ವಾಗ ಲೀ ಅವಶ್ಯ ಆಗುವುದು .

    6. ಆರನೆಯ ಗ್ರಂಥಿ
      ಈಗ ನಾವು ಬ್ರಹ್ಮಾಂಡಮಂಡಲದ ಕಡೆಗೆ ಹೆಜ್ಜೆಯನ್ನಿಡುವೆವು . ನಮ್ಮ ಓಟವು ಈಗ ಆರನೆಯ ಗ್ರಂಥಿಯನ್ನು ತಲುಪಿತು . ಇಲ್ಲಿಂದಲೇ ಬ್ರಹ್ಮಾಂಡವು ಆರಂಭವಾಗುವುದು . ಇನ್ನೊಂದು ಮಾತನ್ನು ನಾನು ಬರೆದೇ ಬಿಡುವೆನು : ಪಿಂಡದೇಶದ ಈ ಅವಸ್ಥೆಯನ್ನು ತಲುಪಿದ ಅಭ್ಯಾಸಿಯು ಬ್ರಹ್ಮಾಂಡಮಂಡಲ ದಲ್ಲಿ ಕಾ ಲಿ ಟ್ಟಿದ್ದರೆ ಆತನು ಈ ಜಗತ್ತಿನಲ್ಲಿ ಪುನಃ ಜನಿಸುವುದಿಲ್ಲ . ಇದರ ಜ್ಞಾನ ದಿಂದ ಇಷ್ಟೇ ಲಾಭವಿದೆ . ಆರನೆಯ ಗ್ರಂಥಿಗೆ ಬರುತ್ತಲೇ ದಿವ್ಯ ಪ್ರಕಾಶದ ರೂಪವು ಬದಲಾಗುವುದು . ಮತ್ತು ಅದರಲ್ಲಿ ಪದಾರ್ಥದ ಪ್ರಭಾವ ಕಡಮೆ ಯಾಗುವುದು , ಇನ್ನೊಂದು ಮಾತು : ನಾವು ಆರನೆಯ ಗ್ರಂಥಿಯಲ್ಲಿ ಸ್ವಲ್ಪ ತಡೆದು ಮೊದಲಿನಂತೆ ಮುಂದುವರಿಯ ಬೇಕಾಗುವುದು , ಒಬ್ಬ ಒಳ್ಳೆಯ ಗುರು ದೊರೆತರೆ ಅತನು ಈ ಗ್ರಂಥಿಯಲ್ಲಿ ಬಹಳಕಾಲ ನಿಲ್ಲಗೊಡುವುದಿಲ್ಲ . ಅ ಲ್ಲಿಯ ದಶೆಯನ್ನು ಹುಟ್ಟಿಸಿ ಅಭ್ಯಾಸಿಯನ್ನು ಏಳನೆಯ ಗ್ರಂಥಿಗೆ ಒಯ್ದು ಬಿಡುವನು . ತಮ್ಮ ಪ್ರಯತ್ನದಿಂದ ಸಾಗುವವರು ಈ ಆರನೆಯ ಗ್ರಂಥಿಯ ಮೇ ಲೂ ಲ ಯ ಮತ್ತು ಸಾರೂಪ್ಯತೆಯನ್ನು ತಾವಾಗಿಯೇ ಪಡೆಯು ವರು . ಪರಿಣಾಮವೇನಾಗುವುದೆಂದರೆ , ಅಲ್ಲಿಯ ಚಮತ್ಕಾರಗಳ ಹಾಗೂ ಪ್ರಕಾಶದ ಆಕರ್ಷಣೆಯನ್ನು ಮೀರಿ ಅಭ್ಯಾಸಿಯ ಮನಸ್ಸು ಏಳನೆಯ ಗ್ರಂಥಿಗೆ ಹೋಗಬಯಸುವುದಿಲ್ಲ . ಈ ಆರನೆಯ ಗ್ರಂಥಿಯಲ್ಲಿ ಸಾಕಷ್ಟು ಪ್ರಕಾಶವಿದೆ ; ಸ್ವಲ್ಪ ಹೊಗೆ ಬಣ್ಣದ ಅನುಭವವೂ ಬರುವುದು , ಆದರೆ ನಾವು ಈ ಗ್ರಂಥಿಯ ಮೇಲಿನ ಸಾರೂಪ್ಯತೆಯ ದಶೆಯನ್ನು ಪಡೆದಾಗಲೇ ಹೊಗೆಬಣ್ಣದ ಆಭಾಸವು ಇಲ್ಲದಂತಾಗುವುದು, ಪ್ರಕಾಶವೇ ಎಲ್ಲೆಡೆಗಳೂ ಕಾಣತೊಡಗುವುದು . ವಾಸ್ತವ ವಾಗಿ ಶಕ್ತಿಯ ವಿತರಣ ಮಾಡುವ ಸ್ಥಾನವೇ ಇದಾಗಿದೆ . ಮೇಲಿನಿಂದ ಬಂದ ಶಕ್ತಿಯನ್ನು ಪಿಂಡದೊಳಗೆ ಮುಟ್ಟಿಸುವುದೂ ಇದೇ .
    7. ಏಳನೆಯ ಗ್ರಂಥಿ
      ಈಗ ನಾ ವು ಏಳನೆಯ ಗ್ರಂಥಿಯ ಕಡೆಗೆ ಸಾಗುವೆವು . ಈ ಸ್ಥಾನವು ಬ್ರಹ್ಮಾಂಡದೇಶದೊಳಗಡೆಯೇ ಇದೆ . ಇದನ್ನು ವಿರಾಟ್ ದೇಶವೆಂದು ಹೇಳು ವರು . ಇದನ್ನು ಕುರಿತು ಹೇಳುವುದೇನಿದೆ ? ಭಗವಂತನು ಈ ಸ್ಥಿತಿಯನ್ನು ಎಲ್ಲರಿಗೂ ಕರುಣಿಸಲಿ . ಮುಂದುವರಿದ ಸುವಾರ್ತೆಯು ದೊರಕುವಂತಾಗಲಿ . ಇಲ್ಲಿ ಪವಿತ್ರತೆಯ ಅನುಭವವು ಬಹಳಷ್ಟಾಗುವುದು . ಆದರೂ ಇನ್ನೂ ಪದಾರ್ಥದ ಪ್ರಭಾವವಿದ್ದೇ ಇದೆ . ಮಹಾಭಾರತದಲ್ಲಿ ಪ್ರಯೋಗವಾಗಿದ್ದ ಅ ಣುವಿನ ಶಕ್ತಿ ಇಲ್ಲಿ ಅಧಿಕವಾಗಿದೆ . ಯೋ ಗಿಯು ಈ ದಶೆಯ ಮೇಲೆ ಪೂರ್ಣವಾಗಿ ಪ್ರಭುತ್ವ ಪಡೆಯುವುದೊಳ್ಳೆಯ ದು . ಭಾರತದ ಯೋಗಿಗಳು ಇದರ ಮೇಲೆ ಪೂರ್ಣ ಅಧಿ ಕಾರ ಪಡೆದಿದ್ದರು . ಇಲ್ಲಿ ವಿದ್ಯುತ್ ಶಕ್ತಿಯ ಅನುಭವವು ವಿಶೇಷವಾ ಗಿ ಉಂಟಾಗುವುದು . ಬಹುತೇಕ ಜನರಿಗೆ ಇದು ಪ್ರಿಯವಾಗುವುದಾದ್ದರಿಂದ ಅವರು ಇದರಲ್ಲಿಯೇ ಸಿಕ್ಕಿಬೀಳುತ್ತಾರೆ . ಇದರ ಪರಿಣಾಮವಾಗಿ ಅವರ ಪ್ರಗ ತಿಯು ಕುಂಠಿತವಾಗುವುದು . ಈ ಸ್ಥಿತಿಯು ಪ್ರಶಂಸನೀಯವಾಗಿದ್ದರೂ ಇದು ಮಕ್ಕಳಾಟಿಕೆಯ ವಸ್ತುವೇ . ಈ ಸ್ಥಾನದ ಶಕ್ತಿಯಿರದ ಭಾರತ ವರ್ಷದ ಪ್ರಾಚೀನ ಋಷಿಗಳು ತೀರ ಕಡಮೆ . ದೂರ್ವಾಸ ಋಷಿಗಳಲ್ಲಿ ಈ ಸ್ಥಾನದ ಶಕ್ತಿ ಬಹಳ ಹೆಚ್ಚಿದ್ದಿತು. ಎರಡನೆಯವರನ್ನು ಅಳುವಂತೆ ಮಾಡುವ – ರೌದ್ರ ಶಕ್ತಿಯೂ , ಚಕಿತಗೊಳಿಸುವ ಶ ಕ್ತಿ ಯೂ , ಹಾಗೂ , ತಲೆಯಲ್ಲಿ ಗೊಂದಲ ವೆಬ್ಬಿಸುವ ಶಕ್ತಿಯೂ ಪ್ರಧಾನವಾಗಿರುವ ಕೇಂದ್ರದೊಡನೆ ಅವರ ಸಂಬಂಧ ವುಂಟಾಗಿದ್ದಿತು . ನಮ್ಮ ಭಾರತವರ್ಷದಲ್ಲಿ ಋಷಿಗಳನ್ನು ಎಷ್ಟರ ಮಟ್ಟಿಗೆ ಗೌರವಿಸಲಾಗುತ್ತಿದ್ದಿತೆಂದರೆ ದೂರ್ವಾಸರನ್ನು ರುದ್ರನ ಅವತಾರವೆಂದು ತಿಳಿಯಲಾಗಿತ್ತು . ದುರ್ವಾಸರಿಗೆ ಈ ಸ್ಥಿತಿ ಉಂಟಾಗಿದ್ದುದರಿಂದ ಆಧ್ಯಾತ್ಮಿಕ ಕ್ಷೇತ್ರ ದಲ್ಲಿ ಅವರ ಮಟ್ಟವು ಎಷ್ಟಿದ್ದಿ ತೆಂಬ ಬಗೆಗೂ , ಮಾನವ ಜೀವನದ ಗುರಿಯನ್ನು ಸಾಧಿಸುವುದರಲ್ಲಿ ಅವರು ಎಷ್ಟರ ಮಟ್ಟಿಗೆ ಸಫಲರಾದರೆಂಬುದನ್ನೂ ನಾನಿಲ್ಲಿ ಪ್ರಸ್ತಾಪಿಸ ಬಯಸುವುದಿಲ್ಲ .

      ಪಿಂಡದಲ್ಲಿದ್ದ ಪ್ರತಿಯೊಂದು ವಸ್ತುವಿಗೂ ಅಲ್ಲಿಂದಲೇ ಶಕ್ತಿಯು ದೊರೆ ಯುವುದು . ಅ ಲ್ಲಿ ಅಗಣಿತ ಶಕ್ತಿಗಳಿವೆ . ಈ ಗ್ರಂಥಿಯ ಲ್ಲಿ ನಾವು ಲಯಾ ವಸ್ಥೆಯನ್ನು ಪಡೆದಂತೆಲ್ಲ ಹೆಜ್ಜೆ ಹೆಜ್ಜೆಗೂ ಅಸೀಮ ಶಕ್ತಿಯ ಅನುಭವವುಂಟಾ ಗುವುದು . ವಿದ್ಯುತ್ತಿನ ತೀಕ್ಷತೆ ಎಲ್ಲೆಡೆಯಲ್ಲಿಯೂ ದೃಷ್ಟಿಗೋಚರವಾಗು ವುದು . ಇಲ್ಲಿ ಪ್ರತಿಯೊಂದು ವಸ್ತುವೂ ಬೀಜ ರೂಪದಲ್ಲಿರುವುದು , ನಾವು ಇದರ ತಿಳಿವಳಿಕೆಯನ್ನುಂಟು ಮಾಡಿಕೊಂಡುದೇ ಆದರೆ ನಮಗೆ ಪ್ರತಿಯೊಂದು ಶ ಕ್ತಿಯ ಚೇತನವು ಪ್ರಾಪ್ತವಾಗುವುದು . ಈ ಗ್ರಂಥಿಯ ಲ್ಲಿ ನಾವು ಲಯ ಹೊಂದಲಾರಂಭಿಸಿದಾಗ ನಮ್ಮ ವಿಸ್ತಾರವು ಹೆಚ್ಚುತ್ತ ನಡೆದು , ನಾವು ಪ್ರಪಂ ಚದ ತುಂಬ ವ್ಯಾಪಿಸಿದ ಅನುಭವವುಂಟಾಗುವುದು . ಏಕೆಂದರೆ , ಅ ಲ್ಲಿಯ ಪ್ರಸಾರದ ಅವಸ್ಥೆಯ ಪ್ರಭಾವದಿಂದಲೇ ನಾವು ಪಿಂಡದೇಶದಲ್ಲಿ ಪ್ರಸಾರ ಹೊಂದುವೆವು , ಯೋಗಿಗಳು ಇಲ್ಲಿಯ ಶಕ್ತಿಗಳನ್ನು ಬಳಸಿಕೊಂಡು ಪ್ರಕೃತಿ ನಿಯಮವನ್ನು ಕೆಲಕಾಲ ಸ್ಥಗಿತಗೊಳಿಸಬಹುದು . ನಾವು ಪೂರ್ಣರೂಪದಿಂದ ಲಯಾವಸ್ಥೆಯನ್ನು ಹೊಂದಿದುದಾದರೆ ಈ ಶಕ್ತಿಯನ್ನು ನಾವು ಬೇಕಾದಷ್ಟು ದೊಡ್ಡ ಕಾರ್ಯದಲ್ಲಿ ಪ್ರಯೋಗಿಸಬಹುದು . ಇಲ್ಲಿಯ ಶಕ್ತಿಯಿಂದ ಮದ್ದು – ಗುಂಡುಗಳ ಶಕ್ತಿಯನ್ನು ಜಯಿಸಬಹುದು. ಈ ಪ್ರಪಂಚದಲ್ಲಿ ಜರುಗುವ ಎಲ್ಲ ಘಟನೆಗಳೂ ಮೊಟ್ಟ ಮೊದಲು ಇಲ್ಲಿಯೇ ಸಂಭವಿಸುವುವು ; ಮತ್ತು ಅವು ಘಟಿಸುವ ಮುಂಚೆಯೇ ಅವನ್ನು ನಾವು ತಿಳಿದುಕೊಳ್ಳಬಹುದು , ನಮ್ಮ ಅನುಭವವು ತೀವ್ರವಾಗಿದ್ದರೆ , ನಮಗೆ ಬ್ರಹ್ಮಾಂಡದೇಶದ ಸಣ್ಣ ಸಣ್ಣ ಕೇಂದ್ರ ಗಳಲ್ಲಿ ಆಯಾ ಬಿಂದುಗಳಿಗೆ ಸಂಬಂಧಪಟ್ಟ ಭೂಭಾಗಗಳ ಮೇಲೆ ಪ್ರಭಾವ ಬೀರುವ ವಿಭಿನ್ನ ಶಕ್ತಿಗಳು ದೊರೆಯುವುವು. ವೈಜ್ಞಾನಿಕ ರೀತಿಯಿಂದ ಈ ಶಕ್ತಿಗಳ ಅನುಸಂಧಾನ ಮಾಡಿದ್ದಾದರೆ ಅವನ್ನು ಶಸ್ತ್ರಾಸ್ತ್ರಗಳಲ್ಲಿ ಬಳಸಬಹುದು . ಆದರೆ ಕೇವಲ ಪಾಶ್ಚಾತ್ಯ ನಾಗರಿಕತೆಯನ್ನುಳ್ಳ ಜನರಷ್ಟೇ ಈ ರೀತಿಯ ಅನುಭವವನ್ನು ಬೆಳೆಸಿಕೊಳ್ಳಬಲ್ಲರು. ಏಕೆಂದರೆ , ಅವರ ದೃಷ್ಟಿಯು ಈಶ್ವರ ಪ್ರಾಪ್ತಿಯ ಕಡೆಗಿರದೆ ಭೌತಿಕ ಪದಾರ್ಥಗಳ ಕಡೆಗಿರುತ್ತದೆ . ನಮ್ಮಲ್ಲಿಯ ಯೋ ಗಿ ಗಳು ಈ ಕಡೆಗೆ ಲಕ್ಷ ಕೊಡುವುದಿಲ್ಲ . ಏಕೆಂದರೆ ಅವರ ಧ್ಯೇಯವು ಭಗ ವತ್‌ ಪ್ರಾಪ್ತಿಯಾಗಿದ್ದು , ಪ್ರಪಂಚದ ಕಲ್ಯಾಣಕ್ಕಾಗಿ ಆ ಶಕ್ತಿಯನ್ನುಪಯೋಗಿ ಸುವರು . ಆದರೆ , ಯಾವ ಸ್ಥಿತಿಯಲ್ಲಿ ನಿಯತಿಯು ಪ್ರಪಂಚದಲ್ಲಿ ವಿನಾಶಕಾರಿ ಪ್ರಯೋಗವನ್ನಪೇಕ್ಷಿಸಿ ನಾಶವನ್ನುಂಟುಮಾಡುತ್ತ ಹೋಗುವುದೋ ಆ ಸ್ಥಿತಿ ಗಳು ಮಾತ್ರ ಅಪವಾದಾತ್ಮಕವಾಗಿವೆ . ಈ ಸ್ಥಾನವು ಎಷ್ಟು ದೊಡ್ಡದಿದೆ ಯೆಂದರೆ ಸಾವಿರಾರು ವರ್ಷ ಇದರಲ್ಲಿ ಸಂಚರಿಸಿದರೂ ಸಾಲದು . ಯೋಗ್ಯ ಮಾರ್ಗದರ್ಶಕನು ದೊರೆತು ತನ್ನ ಶಕ್ತಿಯಿಂದ ತೀವ್ರ ಸಂಚಾರ ಮಾಡಿಸಿದರೆ ಮಾತ್ರ ಇದು ಸಾಧ್ಯವಾಗುವುದು . ಆದುದರಿಂದಲೇ ನಮ್ಮನ್ನು ಈಯೆಲ್ಲ ಗ್ರಂಥಿಗಳಿಂದ ದಾಟಿಸಿ ಧ್ಯೇಯದವರೆಗೆ ತಲುಪಿಸುವ ಗುರುವಿನ ಅವಶ್ಯಕತೆ ಇದೆ . ಚಂದ್ರ ಹಾಗೂ ನಕ್ಷತ್ರಗಳ ಪ್ರಕಾಶ ಇಲ್ಲಿಯೇ ಇದೆ , ಸೂರ್ಯನೂ ಇಲ್ಲಿಯೇ ಬೆಳಗುವುದರಿಂದ ಆ ತನ ಪ್ರಕಾಶವು ಭೂಮಿಯವರೆಗೆ ತಲುಪುವುದು . ಈಗ ನಾವು ನಮ್ಮನ್ನು ಈ ಗ್ರಂಥಿಯಲ್ಲಿ ಲಯಗೊಳಿಸುವ ಅಗತ್ಯವುಂಟಾಗುವುದು. ನಮಗೆ ಸ್ವಲ್ಪ ಹೆಚ್ಚಿನ ಜ್ಞಾನವುಂಟಾಗಬೇಕೆಂಬ ದೃಷ್ಟಿಯಿಂದ ನಾವು ಇದರಲ್ಲಿ ಸಂಚರಿಸಿ ಲಯ ಹೊಂ ದಿದ ಮೇಲೆ ಅದರ ಸಾರೂಪ್ಯತೆಯ ದಶೆಯನ್ನು ಪಡೆ ಯಲು ಯತ್ನಿಸುವೆವು . ಈ ಬಿಂದುವಿನಲ್ಲಿ ಸಾಧಕರು ಅವಧೂತರಾಗಿ ಬಿಡು ವರು . ಇಲ್ಲಿಯ ದಶೆಯು ಮುಂದೆ ಹೋಗಲು ಮನಸ್ಸಾಗದಷ್ಟು ಚಿತ್ತಾಕರ್ಷಕ ವಾಗಿದೆ . ಆದರೂ ನಾವು ಹೇಗೋ ಲಯಾವಸ್ಥೆಯನ್ನು ಪಡೆದು ಅದರ ಸಾರೂಪ್ಯ ತೆಯ ದಶೆಯಲ್ಲಿ ಪ್ರವೇಶಿಸಿದಾಗ ದೃಶ್ಯವು ಬದಲಾಗಿ ನಮಗೆ ಆ ಸ್ಥಾನದ ಜ್ಞಾನ ಬರುವುದು . ಇಲ್ಲಿ ಶುದ್ಧತೆಯಿದ್ದರೂ ಅದರಲ್ಲಿ ಸ್ವಲ್ಪ ಮಟ್ಟಿಗೆ ತೀವ್ರತೆ ಯಿರುತ್ತದೆ . ಆದುದರಿಂದ ಅದರಲ್ಲಿ ಸ್ವಲ್ಪ ಶಕ್ತಿ ಇದ್ದೇ ಇರುತ್ತದೆ . ಈ ಕಾಲದ ಜ್ಞಾನಿಗಳಿಗೆ ಅವರ ಜ್ಞಾನದ ಮಟ್ಟ ಎಷ್ಟೆಂಬುದನ್ನು ಕೇಳಿರಿ . ನಿಜವಾಗಿ ನೋಡಿದರೆ ವಾಸ್ತವಿಕ ಜ್ಞಾನದ ದ ಶೆಯು ಇನ್ನೂ ಅವರ ಲ್ಲಿ ಬಂದಿಲ್ಲ . ತಮ್ಮನ್ನು ತಾವು ಅವಾಸ್ತವ ರೂಪದಲ್ಲಿ ಜನತೆಯ ಮುಂದೆ ಪ್ರದರ್ಶಿಸಿಕೊಳ್ಳುವುದು ಶೋಚನೀಯ ಸಂಗತಿ . ಒಂದು , ಅವರು ಈ ವಸ್ತುವನ್ನು ತಪ್ಪು ತಿಳಿದು ಕೊಂಡಿದ್ದಾರೆ ; ಇಲ್ಲವೇ ತಮ್ಮ ಪ್ರತಿಷ್ಠೆಯನ್ನು , ಮೆರೆಯಲು ಹೀಗೆ ಹೇಳುತ್ತಾರೆ . ಏಕೆಂದರೆ , ಕಣ್ಣಿದ್ದವರು ಕ್ವಚಿತ್ತಾಗಿಯೇ ದೊರೆಯುವರೆಂಬುದು ಅವರಿಗೆ ಗೊತ್ತು . ಒಂ ದುವೇಳೆ ಈ ವಸ್ತುಗಳನ್ನು ನೋಡುವವನು ದೊರೆತರೂ ಆತನನ್ನು ನಂಬು ವವರಾರು ? ಆ ಜನರೇ ಎಲ್ಲರೂ ಕೂಡಿ ಅವನ ಮಾತನ್ನು ಅಲ್ಲಗಳೆಯಲು ಸಿದ್ದರಾಗಬಹುದು .

      ಬಂಧು , ಇದು ಎಂತಹ ಸೊಗಸಾದ ಸ್ಥಾನ ! ಈ ಗ್ರಂಥಿಯ ಪ್ರಶಂಸೆ ಯನ್ನು ಎಷ್ಟೊಂದು ಮಾಡಬೇಕು ! ಈ ದಶೆಯ ವರ್ಣನೆಯನ್ನು ವಿಸ್ತಾರವಾಗಿ ಬರೆದುದಾದರೆ ವಿಷಯವು ಬಹಳ ದೀರ್ಘ ವಾಗುವುದು . ಆದುದರಿಂದ ಸಂಕ್ಷೇಪವಾಗಿ ಬರೆಯುವೆನು , ಕೃಷ್ಣ ಚಕ್ರದ ವಿಷಯವಾಗಿ ಗ್ರಂಥಗಳಲ್ಲಿ ಬಹಳಷ್ಟು ಹೇಳಲಾಗಿದೆ . ಅದರಲ್ಲಿ ಇದೇ ಶಕ್ತಿಯಿದ್ದಿತು . ಈಗ ನಾನು ಈ ಗ್ರಂಥಿಯನ್ನು ಭೇದಿಸಿ ಕೆಲವು ಸಂಗತಿಗಳನ್ನು ಹೇಳುವೆನು , ಅಭ್ಯಾಸಿಯು ಈ ರಹಸ್ಯದ ಲ್ಲಿ ಕಾಲಿಟ್ಟಾಗ ಚಕ್ರದಂಥ ಏನನ್ನೂ ಅನುಭವಿಸುವನು . ಇವರಲ್ಲಿ ಎಷ್ಟು ಶಕ್ತಿ ಯಿದೆ ಎಂದರೆ , ಅದನ್ನು ಅತ್ಯಂತ ದೊಡ್ಡ ವಸ್ತುವಿನ ಮೇಲೆ ಪೂರ್ಣವಾಗಿ ಪ್ರಯೋಗಿಸಿದರೆ ಅದು ಬರೀ ಅಲ್ಲಾಡುವುದಷ್ಟೇ ಅಲ್ಲ , ಚೂರು ಚೂರಾಗು ವುದು . ಅಭ್ಯಾಸಿಯು ಈ ದಶೆಗೆ ಬಂದಾಗ ಅವನಿಗೆ ಇದರಲ್ಲಿ ಎಷ್ಟೋ ಸಂಗತಿಗಳು ತಿಳಿಯುವವು . ಈಗ , ಈ ಶಕ್ತಿಯು ಹೇಗೆ ಹುಟ್ಟಿಕೊಂ ಡಿತು ? ಬೇರೆ ಬೇರೆ ಗ್ರಹಗಳು ಒಂದೆಡೆ ಸೇರಿದಾಗ ಅವುಗಳನ್ನು ತಮ್ಮ ತಮ್ಮ ಸ್ಥಾನ ದಲ್ಲಿ ಹಿಡಿದು ನಿಲ್ಲಿಸುವ ಒಂದು ಶಕ್ತಿಯುಂಟಾಗುತ್ತದೆ . ಈ ಬಿಂದುವಿನ ಮೇಲೆ ಪೂರ್ಣ ಅಧಿಕಾರ ಪಡೆದಾಗ ಇಂಥ ಶಕ್ತಿಯು ಲಭಿಸುವುದು . ಪೂರ್ಣ ಅಧಿಕಾರ ಪಡೆಯುವುದೆಂದರೆ ಇದರಲ್ಲಿ ನಮ್ಮನ್ನು ಲಯಗೊಳಿಸುವುದೇ ಹೊರತು ಮತ್ತೇನೂ ಅಲ್ಲ ; ಅದೂ ಔಷಧವು ಶರೀರದಲ್ಲಿ ಹೇಗೆ ಬೆರೆತು ಹೋಗುವುದೋ ಹಾಗೆ , ಇಷ್ಟನ್ನು ಮಾಡಿದ ನಂತರ ಇದಕ್ಕಿಂತ ಮೇಲೆಯೂ ಒಂದು ವಸ್ತು ದೊರೆಯುವುದು , ತಿಳಿವಳಿಕೆಗೋಸ್ಕರ ಅದನ್ನು ಮಹಾಕಾಲಚಕ್ರವೆಂದು ಕರೆಯು ವೆನು . ಇದರ ಪ್ರಭಾವದಿಂದ ಎಲ್ಲ ನಕ್ಷತ್ರಗಳೂ ತಮ್ಮ ಸ್ಥಳದಲ್ಲಿ ಅಚಲ ವಾಗಿ ನಿಲ್ಲುವಂತಹ ಒಂದು ಕ್ಷೇತ್ರವು ಸಿದ್ಧವಾಯಿತು . ಇದು ಸುದರ್ಶನ ಚಕ್ರಕ್ಕಿಂತ ಲೂ ಹೆಚ್ಚು ಶಕ್ತಿಶಾಲಿಯಾಗಿದೆ . ಕಾಲವನ್ನು ಪರಿವರ್ತಿಸುವುದರಲ್ಲಿ ಈ ಅಸ್ತ್ರವು ಅತ್ಯಂತ ಪ್ರಬಲ ಸಾಧನವಾಗಿದೆ . ಈ ವಸ್ತುವು ಏಳನೆಯ ಗ್ರಂಥಿಯು ಕೊನೆಗೊಳ್ಳುವ ಸ್ಥಾನದಲ್ಲಿದೆ . ಜನರು ನನ್ನನ್ನು ಕ್ಷಮಿಸುವುದಾದರೆ , ಶ್ರೀಕೃಷ್ಣನಿಗೆ ಇದರ ಅಗತ್ಯವಿರದ ಕಾರಣ ಆತನಿಗೂ ಈ ಅಸ್ತ್ರವು ದೊರೆತಿರುವ ಸಂಭವ ವಿಲ್ಲವೆಂದು ಹೇಳಬಯಸುತ್ತೇನೆ . ಆದರೆ ಈಗ ಅದರ ಅವಶ್ಯಕತೆಯಿದ್ದ ಕಾರಣ ನಿಯತಿಯು ಅದನ್ನು ಯಾರಿಗಾದರೂ ಕೊಟ್ಟಿರುವ ಸಂಭವವಿದೆ .

      ಒಂದು ಆಶ್ಚರ್ಯಕರ ಸಂಗತಿಯನ್ನು ಬರೆಯುವೆನು . ಕೆಲ ಜನರಿಗೆ ಇದರಿಂದ ಆಘಾತವುಂಟಾಗುವ ಸಂಭವವಿದ್ದರೂ ನಿಜ ಸಂಗತಿ ಪ್ರಕಟವಾಗಲೇ ಬೇಕು . * ಅಹಂ ಬ್ರಹ್ಮಾಸ್ಮಿ ‘ ಯ ಸ್ಥಿತಿಯು ಎಲ್ಲಕ್ಕೂ ದೊಡ್ಡದೆಂದೂ , ಅದನ್ನು ಪಡೆದವನು ಜ್ಞಾನಿಯೆಂದೂ ತಿಳಿಯಲಾಗುತ್ತದೆ , ಆದರೆ ಯಾರಾದರೂ ತಮಗೆ ಈ ದಶೆಯುಂಟಾಗಿದೆಯೆಂದು ಎದೆತಟ್ಟಿ ಹೇಳಬಲ್ಲರೋ ? ಗೋಧಿಯ ರುಚಿ ಕೇಳಿದರೆ ಜನರು ಸ್ವಲ್ಪ ಸಿಹಿ ಎಂದು ಹೇಳಿಬಿಡುವರು . ಆದರೆ ಅದನ್ನು ತಿನ್ನುವ ವರೆಗೆ ಅದರ ನಿಜವಾದ ಸ್ವಾದದ ಅರಿವಾಗಲಾರದು . ಬಹುಶಃ ನಮ್ಮ ಲ್ಲಿ ಯ ಜ್ಞಾನಿಗಳ ಗತಿ ಇದೇ ಆಗಿದೆ . ವಸ್ತುವನ್ನು ಆಸ್ವಾದಿಸಲಾರದೆಯೇ ಓ ದಿ , ಓದಿಸಿ ವರ್ಣಿತ ಪರಿಣಾಮದ ತಿಳಿವಳಿಕೆಯನ್ನು ಪಡೆಯುವರು . ‘ ಸತ್ಯೋ ದಯ ‘ ದಲ್ಲಿ ಈ ದಶೆಯನ್ನು ಕುರಿತು ಸಾಕಷ್ಟು ಹೇಳಲಾಗಿದೆ . ಇಲ್ಲಿ ಸಂಕ್ಷೇ ಪವಾಗಿ ಇಷ್ಟು ಹೇಳಬಹುದು : ಆತ್ಮ ಮತ್ತು ಶರೀರದ ಮಿಲನ ಬಿಂದುವಿನ ಮೇಲೆ ಪ್ರತಿಯೊಂದು ಗ್ರಂಥಿಯಲ್ಲಿಯೂ ಹೆ ಚ್ಚು ಕಡಮೆ ಇದರ ಅನುಭವ ಬರುವುದು , ಆದರೆ ಈ ಗ್ರಂ ಥಿಯಲ್ಲಿ ಬಂದ ನಂತರವೇ ಈ ಅನುಭವವು ಸ್ಪಷ್ಟವಾಗಿಯೂ , ನಿಚ್ಚಳವಾಗಿಯೂ ಇರುವಂಥ ಮನಃಸ್ಥಿತಿ ಉಂಟಾಗುವುದು , ಸೂರ್ಯನಲ್ಲಿ ಪ್ರಕಾಶ   ಹಾಗೂ ಉಷ್ಣತೆ , ಚಂದ್ರನಲ್ಲಿಯ ತೇಜ ಮತ್ತು ಶೀತಲತೆ , ನಕ್ಷತ್ರಗಳಲ್ಲಿಯ ಹೊಳಪು – ಇವೆಲ್ಲ ನನ್ನದೆಂದೇ ಅನುಭವವಾಗು ವುದು , ಯಾರಾದರೂ ರಾಮ , ಕೃಷ್ಟ ಅಥವಾ ಮೇಲಿನ ದೊಡ್ಡ ಆತ್ಮ ಗಳ ಬಗೆಗೆ ಚರ್ಚಿಸಿದರೆ ಆ ಚರ್ಚೆ ನನ್ನದೆಂದೇ ನಿಸ್ಸಂದೇಹವಾದ ಅನುಭವ ಬರು ವು ದು . ಈ ಗ್ರಂ ಥಿಯಲ್ಲಿ ಸಂಚರಿಸುತ್ತ ಈ ದಶೆಯು ಪೂರ್ಣವಾದಾಗ ಬೇರೆ ರಹಸ್ಯ ಹೊಳೆಯುವುದು , ಅರ್ಥಾತ್ , ನಾವು ಈ ದಶೆಯೊಂದಿಗೆ ಸಮರಸ ವಾದಾಗ , ಇಲ್ಲವೇ ಈ ಅನುಭವವನ್ನು ಲಯಗೊಳಿಸಿದಾಗ ಮೇಲೆ ಕಾಣ ತೊಡಗುವುದು . ಆಗ ಇರುವುದೆಲ್ಲ ಅದೇ ಎಂಬ ಪ್ರತೀತಿ ಬಲವತ್ತರವಾಗುವುದು , ಪ್ರತಿಯೊಂದು ಲಯಾವಸ್ಥೆಯ ನಂತರ “ ಇದ್ದುದೆಲ್ಲ ಅದೇ ‘ ‘ ಎಂಬ ದಶೆಯು ಸಂಕೇತರೂಪದಲ್ಲಿ ಅವಶ್ಯ ಉಳಿಯುವುದು , ಆದರೆ ಇಲ್ಲಿ ಆ ವಸ್ತುವು ಸ್ಪಷ್ಟ ರೂಪದಲ್ಲಿ ಬರುವುದು ; ಏಕೆಂದರೆ , ಈಗ ನಾವು ಈಶ್ವರೀಯ ಮಂಡಲದ ದೊಡ್ಡ ಕ್ಷೇತ್ರದಲ್ಲಿರುವೆವು . ನಾವು ಇನ್ನೂ ಮುಂದುವರಿದು ‘ ‘ ಇದ್ದುದೆಲ್ಲ ಅದೇ ‘ ಎಂಬ ಸ್ಥಿತಿಯಲ್ಲಿ ಲಯ ಹೊಂ ದಿದಾಗ ನಮಗೆ ಎಲ್ಲವೂ ಅವನಿಂದಲೇ ‘ ‘ ( ಸರ್ವಂ ಬ್ರಹ್ಮಣಃ ) ಎಂಬ ಅನುಭವದ ಹೊರತಾಗಿ ಬೇರೆ ಯಾವ ಅನುಭವವೂ ಆಗುವುದಿಲ್ಲ .

      ಇದು ಬಹು ದೊಡ್ಡ ಗ್ರಂಥಿ . ಇದರಲ್ಲಿ ಯಾವ ಯಾವ ದಶೆಗಳ ಸಾರವಿದೆಯೋ ತಿಳಿಯದು , ಈ ಸ್ಥಾನದ ವಿಶೇಷದಶೆಯೊಂದನ್ನು ಬರೆದು ಬಿಡುವೆನು . ಅ ಭ್ಯಾಸಿಯು ಇಲ್ಲಿಗೆ ಬಂದು ಪ್ರಗತಿ ಹೊಂದಿದಾಗ ಅವನು ಪದಾರ್ಥಗಳನ್ನು ನೋಡಿದರೂ ಅ ವುಗಳ ಅ ಸ್ಮಿತ್ರದ ಭಾನವಿರುವುದಿಲ್ಲ . ಈ ಪದಾರ್ಥಗಳ ಅಸ್ತಿತ್ವದ ಪ್ರಭಾವವು ಹೃದಯದ ಮೇಲೆ ಎಳ್ಳಷ್ಟೂ ಆಗು ವುದಿಲ್ಲ . ನಾನು ಇದರ ಮುಖ್ಯಾಂಶಗಳನ್ನಷ್ಟೇ ವಿವರಿಸಿದ್ದೇನೆ . ಈ ಗ್ರಂಥಿಯ ಬಗೆಗೆ ಅಭ್ಯಾಸಿಗೆ ಅಭಿರುಚಿಯಿದ್ದುದಾದರೆ , ಹಾಗೂ ಜೊತೆ ಗೆ ಸಮರ್ಥ ಮಾರ್ಗದರ್ಶಿ ದೊರೆತುದಾದರೆ ಲಯಾವಸ್ಥೆ ಮತ್ತು ಸಾರೂಪ್ಯತೆಯ ನಂತರ ಅದರ ಕೊನೆಯ ಅವಸ್ಥೆ ಬರುವುದು . ಆಗ ಮುಂದಿನ ಗ್ರಂಥಿಗೆ ಹೋದ ಶುಭ ಸೂಚನೆ ದೊರೆಯುವುದು ,

    8. ಎಂಟನೆಯ ಗ್ರಂಥಿ
      ಭಾಗ್ಯೋದಯವಾಗಿ ಅಭ್ಯಾಸವು ಸಹಾಯ ಮಾಡಿದಾಗ ನಾವು ಎಂಟನೆಯ ಗ್ರಂಥಿಗೆ ಬಂದೆವು. ಈಗ ಇಲ್ಲಿ ದೃಶ್ಯವೇ ಬದಲಾಯಿತು . ಏಳನೆಯ ಗ್ರಂ ಥಿ ಯಲ್ಲಿ ಪ್ರಾಪ್ತವಾದ ದಶೆಗಳ ಸೂಕ್ಷ್ಮ ರೂಪವು ಇಲ್ಲಿ ದೊರೆ ಯುವುದು . ಇಲ್ಲಿ , ಅಭ್ಯಾಸಿಗೆ ‘ಸಂಸಾರವು ಸ್ವಪ್ನದಂತೆ ‘ ಎಂಬ ಅನುಭವ ಬರುವದು . ಇದು ಪ್ರಕೃತಿಯ ಕ್ರೀಡಾ ಸ್ಥಳ . ಇಲ್ಲಿಗೆ ಬಂದ ಮೇಲೆ ವೈರಾ ಗ್ಯವು ಸುದೃಢವಾಗುವುದು . ಇಲ್ಲಿಂದ ಮುಂದೆ ವೈರಾಗ್ಯದ ಸುಳಿವಿಲ್ಲವಾದರೂ ಅದರ ರೂಪವು ಬದಲಾಗುವುದು . ಇಲ್ಲಿ ವೈರಾಗ್ಯವು ಪರಿಪಕ್ವವಾಗುವುದು . ಪ್ರತಿಯೊಂದು ವಸ್ತುವೂ ಹಗುರಾಗಿ ಕಾಣುವುದು , ವಿಚಾರದಲ್ಲಿ ಭಾರವಿರುವು ದಿಲ್ಲ . ಅಭ್ಯಾಸಿಯು ಶಾಂತಿ , ಸ್ಥಿರತೆ ಹಾಗೂ ಸಮಾಧಾನಗಳನ್ನನುಭವಿಸುವನು . ಈ ಶಾಂತಿಯು ಹೆಚ್ಚು ಹೆಚ್ಚುತ್ತ ಕೊನೆಗೆ ವಾಸ್ತವಿಕತೆಯಲ್ಲಿ ಪರಿವರ್ತನ ಹೊಂದುವ ದಶೆಯ ಆನಂದವನ್ನು ಸವಿಯುವನು , ಆದರೆ , ಬಂಧು , ಯಾರಲ್ಲಿ ಶಾಂತಿಯೊಂದಿಗೆ ವೇದನೆ ಹಾಗೂ ಅಸಮಧಾನಗಳಿವೆಯೋ ಆತನೇ ನಿಜವಾದ ಅಭ್ಯಾಸಿ . ಈ ವಸ್ತುವು ಕಸ – ಕಡ್ಡಿ , ಗಿಡ – ಗಂಟಿಗಳನ್ನು ಸ್ವಚ್ಛ ಮಾಡಿ ಮುಂದು ವರಿಯಲು ಬಯಲನ್ನುಂಟುಮಾಡುವುದು , ಸಂಸಾರವು ಕನಸಿನಂತೆ ಎಂಬುದನ್ನು ನಾವು ಕೇಳಿದ್ದೇವೆ ; ಅದನ್ನು ಹಾಗೆಯೇ ಭಾವಿಸಬೇಕೆಂಬುದನ್ನೂ ಓದಿದ್ದೇವೆ , ಆದರೆ ನನಗೆನಿಸುವ ಮಟ್ಟಿಗೆ , ಕೇವಲ ಓದುವವರಿಗೆ ಆ ರೀತಿಯ ಪ್ರತೀತಿಯೇ ಆಗಿಲ್ಲ . ಹೇಳುವವರಾದರೂ ಯಾವಾಗಲೂ ಇದನ್ನೇ ಒತ್ತಿ ಒತ್ತಿ ಹೇಳುವರು . ಇದಂತೂ ನಿಯಮಿತ ರೂಪದಿಂದ ಅಭ್ಯಾಸ ಮಾಡುತ್ತ ಮಾ ಡುತ್ತ ಇ ಲ್ಲಿಯವರೆಗೆ ಬಂದ ಮೇಲೆ ವಿಕಾಸ ಹೊಂದುವ ಸ್ಥಿತಿಯಾಗಿದೆ . ಒಂದುವೇಳೆ ನಾವು   “ ಸಂಸಾರವು ಕನಸಿನಂತೆ ” ಎಂಬ ವಿಚಾರವನ್ನು ಬಲ ಪೂರ್ವಕ ದೃಢಮಾಡಿ ಕೊಂಡುದಾದರೆ ಅದು ಕೃತ್ರಿಮವಾಗುವುದೇ ಹೊರತು ವಾಸ್ತವಿಕ ಸ್ಥಿತಿ ಬರಲಾರದು . ಇದಂತೂ ದಾರಿಕಾರನಿಗೆ ಆತನ ದಾರಿಯಲ್ಲಿ ಸಿಕ್ಕುವ ವಿಶೇಷ ಸ್ಥಾನದ ದಶೆಯಾಗಿದೆ . ಇದನ್ನು ಕೃತ್ರಿಮ ಉಪಾಯಗಳಿಂದ ಪರಿಪಕ್ವಗೊಳಿಸಿಕೊಂಡೆವಾದರೆ ನಮ್ಮಷ್ಟಕ್ಕೆ ನಾವು ಮೋಸ ಹೋದಂತೆಯೇ . ಈ ಸ್ಥಾನದ ನಿಜವಾದ ದಶೆಯು ಶಾಂತಿಯದು . ನಾವು ಇದರಲ್ಲಿ ಲಯಹೊಂದಿದಾಗ ಇಲ್ಲಿಯ ದಶೆಯನ್ನು ಆತ್ಮಸಾಕ್ಷಾ ತ್ಕಾರ ಮಾಡಿಕೊಂಡಿರುವೆವೆಂದರ್ಥ . ಇಲ್ಲಿಂದ ಹೊರಗೆ ಬಂದು ಸಾರೂಪ್ಯತೆಯ ದಶೆಯಲ್ಲಿ ಪ್ರವೇಶಿಸಿದೆವೆಂದರೆ ಆ ಸ್ಥಿತಿಯ ಅನುಭವವಾಗುವುದು. ಈ ಸ್ಥಿತಿಯಲ್ಲಿ ಒಂದು ಹೊಸಚೈತನ್ಯವಿರುವುದು , ಬೇಸಗೆಯ ದಿನಗಳಲ್ಲಿ ಬಿಸಿಲಿನ ಜಳದಿಂದ ಪೀಡಿತನಾದ ಮನುಷ್ಯನೊಬ್ಬನು ನದಿಯಲ್ಲಿ ಮುಳುಗಿ ಸ್ನಾನಮಾಡಿ ಬಂದ ನಂತರ ಹೇಗೆ ಸ್ಫೂರ್ತಿಯನ್ನನುಭವಿಸುವನೋ ಹಾಗೆ ಈ ಸ್ಥಿತಿಯಿದೆ . ಈಗ ನಾವು ಸಾರೂಪ್ಯತೆಯ ದಶೆಯಲ್ಲಿ ಬಂದೆವು ಅಥವಾ ಇಲ್ಲಿಯ ಜೀವನದಲ್ಲಿ ಜೀವಪಡೆದೆ ವೆಂದು ಹೇಳಬಹುದು . ಈ ಜೀವನವನ್ನೂ ಲಯಗೊಳಿಸಿದಾಗ ಉಂಟಾಗುವ ಸ್ಥಿತಿಯು ನಾವು ಒಂಬತ್ತನೆಯ ಗ್ರಂಥಿಯನ್ನು ಮುಟ್ಟಿದ ಶುಭ ಸಂದೇಶವನ್ನಿ ಯುವುದು .
    9. ಒಂಬತ್ತನೆಯ ಗ್ರಂಥಿ
      ಈಗ ನಾವು ಒಂಬತ್ತನೆಯ ಗ್ರಂ ಥಿಯ ನ್ನು ಪ್ರವೇಶಿಸುವೆವು . ನಮ್ಮ ಅನುಭವದ ರೂಪವೂ ಬದಲಾಯಿತು . ಎಲ್ಲಿಂದ ಭೂಮಾದ ವಾಸ್ತವಿಕ ಸಂಬಂಧ ಪ್ರಾರಂಭವಾಗುವುದೋ ಆ ದಶೆಗೆ ಬಂದೆವು . ಯಾವುದೋ ಒಂದು ಬೇರೆ ಪ್ರಪಂಚದಲ್ಲಿ ನಮ್ಮ ಹೊಸ ಜನ್ಮವಾಯಿತೆಂಬುದನ್ನು ಅನುಭವಿಸುವ ಲೋಕವನ್ನು ನಾವೀಗ ಪ್ರವೇಶಿಸುವೆವು . ಇದರಲ್ಲಿ ಪ್ರಸಾರ ಹೊಂದಿ ರಸಾಸ್ವಾದನ ಮಾಡುತ್ತ , ಮಾಡುತ್ತ ನಾವು ಪುನರ್ಜನ್ಮ ಹೊಂ ದಿ ದ ಲೋ ಕವು ಯಾರದೆಂಬುದರ ಅರಿವಾಗುವುದು , ಅದರ ಗುರುತನ್ನೂ , ಅನುಮಾನವನ್ನೂ ಹೃದಯವು ತೋರಿಸತೊಡಗುವುದು . ಒಡೆಯನ ಇರುವಿಕೆಯನ್ನು ಗ್ರಹಿಸತೊಡಗುವುದು , ಆತನ ಮಹಿಮೆಯು ಎಷ್ಟು ಆಳವಾದ ಪ್ರಭಾವವನ್ನುಂಟು ಮಾಡುವುದೆಂದರೆ ತಾನಾಗಿಯೇ ಆತನ ಪೂಜೆಯು ಆರಂಭವಾಗುವುದು. ಈ ದಶೆಯಲ್ಲಿ ಬರುವ ಮುನ್ನ ಸಾಂಸಾರಿಕ ಕ್ರಿಯಾ ಶೀಲತೆಯು ಹೆಚ್ಚು ಕಡಿಮೆ ಮುಕ್ತಾಯಹೊಂದು ವುದು . ಸ್ವಾಮಿ ಮತ್ತು ಸೇವಕ – ಈ ಸಂಬಂಧವೇ ನಮ್ಮ ಮುಂದೆ ಇರುವುದು . ಆತನು ಸ್ವಾ ಮಿ , ನಾವು ಸೇವಕರು ಎಂಬ ಅನುಭವವೇ ಈ ಗ್ರಂಥಿಯಲ್ಲಿರುವುದು . ಒಡೆಯನ ಇರುವಿಕೆ ಮತ್ತು ಸಂಮಾನ ಪ್ರತಿಯೊಂದು ಸ್ಥಾನದಲ್ಲಿಯೂ ದೃಷ್ಟಿ ಪಥದಲ್ಲಿರುವುದು , ಒಂದು ವಿಚಿತ್ರ ರೀತಿಯ ಅಧೀನತೆಯ ದಶೆಯು ನಮ್ಮದಾಗು ವುದು ಸ್ವಭಾವದ ಲ್ಲಿ ಒಂದು ವಿಲಕ್ಷಣವಾದ ಮಾರ್ದವವಿರುವುದು , ದ್ವೇಷಭಾವವು ನಷ್ಟವಾಗುವುದು . ವಾಸ್ತವವಾಗಿ ಇಲ್ಲಿ ಈಶ್ವರನನ್ನು ಗುರುತಿಸುವ ಮೊದಲನೆಯ ಮೆಟ್ಟಲು ಆರಂಭವಾಗುವುದು . ಈ ಸ್ಥಾನದಿಂದ ನಮ್ಮ ಅಸ್ತಿತ್ವ ವು ಅಳಿಸಿ ಹೋಗಲು ಮೊದಲಾಗುವುದು . ಇದರಲ್ಲಿ ನಾವು ಆಳವಾಗಿ ಪ್ರವೇಶಿಸಿದಷ್ಟೂ ಅಸ್ತಿತ್ವವನ್ನು ಲಯಗೊಳಿಸುವುದರಲ್ಲಿ ಸಫಲತೆ ಸಿಗುವುದು . ದರ್ಶನದ ಸುಳುವು ಇಲ್ಲಿಂದಲೇ ಆರಂಭವಾಗುವುದು. ಈಗ ನಮ್ಮ ದಶೆಯು ಹೇಗಿರುವುದು ? ಹೆಚ್ಚು ಕಡಮೆ ಹನುಮಂತನ ಅವಸ್ಥೆಯೊಂದಿಗೆ ಹೊಲವುದೆಂದು ಹೇಳಬಹುದು . ಯಾರಾದರೂ ಆತನಿಗೆ ಆತನ ಶಕ್ತಿಯ ಬಗ್ಗೆ ಎಚ್ಚರ ತಂದುಕೊಟ್ಟರೆ ಮಾತ್ರ ಆತನ ಉತ್ಸಾಹ ಜಾಗೃತವಾಗುತ್ತಿತ್ತು . ಇಲ್ಲವಾದರೆ ಆತನು ವಿಸ್ಕೃತನಂತೆ ಇದ್ದನು . ಇನ್ನೂ ಮುಂದೆ ನಡೆಯಿರಿ , ಪ್ರತಿಯೊಂದು ಸ್ಥಾನದಲ್ಲಿ ಯೂ ಲ ಯಾ ವಸ್ಥೆ ಮತ್ತು ಸಾರೂಪ್ಯತೆಯ ಸಂಬಂಧವಿದೆ . ಕೆಲವೆಡೆ ಲಯಾವಸ್ಥೆಯಿದ್ದರೆ ಮತ್ತೆ ಕೆಲವೆಡೆ ಸಾರೂಪ್ಯತೆಯಿದೆ . ಈಗ ಅವಸ್ಥೆಗಳು ಕ್ರಮವಾಗಿ ಲಯಹೊಂದಿ ನಮ್ಮನ್ನು ಸಾರೂಪ್ಯತೆಯಲ್ಲಿ ಒಯ್ಯುವವು . ಸಾರೂಪ್ಯತೆಯ ಲಯಾವಸ್ಥೆಗೆ ಬಂದಾಗ ಹತ್ತನೆಯ ಗ್ರಂಥಿಯನ್ನು ತಲುಪಿದ ಶುಭ ಸಮಾಚಾರ ದೊರೆಯುವುದು .
    10. ಹತ್ತನೆಯ ಗ್ರಂಥಿ
      ಈಗ ನಾವು ಹತ್ತನೆಯ ಗ್ರಂಥಿಗೆ ಬಂದೆವು . ಒಂಬತ್ತನೆಯ ಗ್ರಂಥಿಯ ದಶೆಯು ಬದಲಾಗಿ ಅದರ ದಾರಿ ಬೇರೆ ಕಡೆಗೆ ತಿರುಗಿತು . ಸೇವೆಯು ಎಷ್ಟು ಮಟ್ಟಿಗೆ ಮೈಗೂಡಿತೆಂದರೆ ಒಡೆಯನ ಮನೆಯನ್ನು ನಮ್ಮ ಮನೆಯೆಂದು ತಿಳಿಯ ತೊಡಗಿದೆವು . ಅರ್ಥಾತ್ , ನಮ್ಮಲ್ಲಿ ಸ್ವಾಮಿತ್ವದ ಗಂಧವು ಸ್ವಲ್ಪಮಟ್ಟಿಗೆ ಬರ ತೊಡಗಿತೆಂದು ಹೇಳಲಡ್ಡಿಯಿಲ್ಲ . ಆದರೆ ಇದು ಕೃತ್ರಿಮವೇನಲ್ಲ . ಈ ದಶೆಯು ಹತ್ತನೆಯ ಗ್ರಂಥಿಯದು . ಅಲ್ಲಿಗೆ ಮುಟ್ಟಿದ ನಂತರ ಇದು ತಾನಾಗಿ ಬರಲೇ ಬೇಕು . ಸ್ವಾಮಿಯ ಸಾಮೀಪ್ಯ ಹೆಚ್ಚುವುದರಿಂದ ಆತನ ಪ್ರಭಾವವು ನಮ್ಮ ಲ್ಲಿ ಅನುಭವಕ್ಕೆ ಬರತೊಡಗುವುದು . ಯಾವ ರೀತಿ ನದಿಯ ಹತ್ತಿರ ಹೋದ ಬಳಿಕ ಅದರ ಪ್ರವಾಹವನ್ನು ಕಂಡು ನಮ್ಮೊಳಗೆ ತಾನಾಗಿಯೇ ತರಂಗಗಳೇಳು ವುವೋ , ಅದೇ ದಶೆಯು ನಮ್ಮದಾಗುವುದು . ಅಭ್ಯಾಸಿಯು ತನ್ನ ಸಮ್ಮಾನ ವನ್ನು ತಾನೇ ಮಾಡಿಕೊಳ್ಳುವನು , ಅಥವಾ ಹೀಗೆ ಹೇಳಬಹುದು ; ಚಂದನದ ಸುಗಂಧಕ್ಕಾಗಿ ನಾವು ಮರದ ಬಳಿ ಹೋಗಬೇಕಾಗುವುದು , ಆದರೆ ಅದೇ ಚಂದನವನ್ನು ತೇದು ಹಣೆಗೆ ಹಚ್ಚಿಕೊಂಡಾಗ ಸುಗಂಧವು ನಮ್ಮ ಸಮೀಪವೇ ಇರುವುದರಿಂದ ನಾವು ಇದ್ದ ಲ್ಲಿ ಯೇ ಅದರ ಆನಂದವನ್ನು ಸವಿಯತೊಡಗುವೆವು . ಈಗ ನಾವು ಆತನ ಮನೆಯನ್ನು ತಲುಪಿದೆವು ; ಅಲ್ಲಿಯ ತಂಪು ಸೋಂಕ ಹತ್ತಿತು . ಯಾವನೋ ಸೇವಕನೊಬ್ಬ ತನ್ನ ಪ್ರತೀಕ್ಷೆಯಲ್ಲಿರುವನೆಂದು ಸ್ವಾಮಿಗೂ ಈಗ ಅನುಭವ ಬರತೊಡಗಿತು . ಸಾಮೀಪ್ಯವು ಇನ್ನೂ ದೂರವಿದ್ದರೂ ಸಮರೂಪತೆಯು ಹೆಚ್ಚತೊಡಗಿತು . ಈಶ್ವರನ ಕಾರ್ಯ ಇಲ್ಲಿಗೆ ಮುಗಿಯಿತು . ಇಲ್ಲಿಂದ ಮುಂದೆ ಆತನದೂ ಪ್ರವೇಶವಿಲ್ಲ . ಮುಂದುವರಿದಂತೆ ಭೂಮಾದ ಸಂಬಂಧವು ಆರಂಭವಾಗುವುದು ; ಹಾಗೂ ಬಂಧನದಿಂದ ಬಿಡುಗಡೆ ದೊರೆಯು ವುದು . ಈ ಸ್ಥಾನದಲ್ಲಿ ತೀರ ವಿರಳ ಜನರೇ ಬರುವರು . ಇಲ್ಲಿ ಗಾಳಿಯ ಸುಳಿವಿಲ್ಲ . ಆದರೆ ಬಹಳ ಪರಿಶ್ರಮ ಹಾಗೂ ಅಭ್ಯಾಸದ ನಂತರ ದೊರೆಯುವ ಗಾಳಿಯಿದೆ . ಇಲ್ಲವೇ ಗಾಳಿ ಬದಲಾಗುವುದೆಂದೂ ಹೇಳಬಹುದು . ಗಾಳಿಯ ಮೂಲತತ್ವ ಮಾತ್ರ ಉಳಿಯುವುದು , ನಾವು ಅದರೊಂದಿಗೆ ಮುಂದುವರಿಯ ಬೇಕಾಗಿದೆ . ಆ ತತ್ತ್ವ ವೆಂಥದು ? ‘ ಶೂನ್ಯ’ ‘ ವೆನ್ನುವುದು ಉಚಿತವಾಗಲಿಕ್ಕಿಲ್ಲ . “ ಭೂಮಾದ ನೆರಳೆ ಂದರೂ ಯೋಗ್ಯ ವರ್ಣನೆಯಾಗಲಾರದು . ಕಾರಣವೆಂದರೆ ಅ ದೂ ಭಾರವೇ ಆಗುವುದು . “ ಭೂಮಾ ಇದೆ ; ಅದರ ಇರುವಿಕೆಯ ಅನು ಭವವೂ ಇದೆ . ಯಾವುದೋ ಒಂದು ಅವಿನಾಶಿ , ಹಾಗೂ ಅಖಂಡ ಅ ಸ್ತಿತ್ವ ವಿದ್ದು   ನಾವು ಅದರ ಕಡೆಗೆ ಹೋಗ ಬೇಕಾಗಿದೆ ” ಎಂ ದಿ ಷ್ಟೇ ಅನುಭವವಿರುವು ದೆಂದು ಹೇಳುವುದೇ ಉಚಿತವೆಂದು ತೋರುತ್ತದೆ . ಆ ಗ ನಾವು ಮುಂದಿನ ಗ್ರಂಥಿಗೆ ಆರೋಹಣ ಮಾಡಿರುವೆವೆಂದು ತಿಳಿಯತಕ್ಕದ್ದು .
    11. ಹನ್ನೊಂದನೆಯ ಗ್ರಂಥಿ
      ಸ್ಥಿತಿಯು ಹೀಗಿದ್ದಾಗ ನಾವು ಹನ್ನೊಂದನೆಯ ಗ್ರಂಥಿಯಲ್ಲಿ ಕಾಲಿಟ್ಟೆವು . ಈಗ ಆವರಣ ತಿರುವುಮುರುವಾ ಯಿ ತು ; ನಿಜತ್ವದ ಸುಳುವು ತೋರ ತೊಡ ಗಿತು , ಅಂತಃಕರಣವು ವಿವಶ ವಾ ಯಿತು . . . ಒಮ್ಮೆ ಮಿಡಿತ , ಒಮ್ಮೆ ನೋವು . ಯಾವಾಗಲೂ ಅವನನ್ನೇ ಪಡೆಯುವ ಶೋಧವಿದೆ . ಆ ತನಿಲ್ಲದೆ ಶಾಂತಿ ಸಮಾಧಾನಗಳೆಲ್ಲಿ ? ನಿಜ ಹೇಳಬೇಕಾದರೆ , ಶಾಂತಿಯೂ ಈಗ ಅಪ್ಪಣೆ ತೆಗೆದು ಕಂಡಿತು , ಆ ಸ್ಥಾನದಲ್ಲಿ ಈಗ ಏನಿದೆ ? ಶಾಂತಿಯ ದಶೆಯೊಳಗಿಂದ ಶಾಂತಿ ಯನ್ನು ಸೆಳೆದುಕೊಂಡರೆ ಯಾವ ಅನುಭವ ಬರುವುದೋ ಅದೇ ಸ್ಥಿತಿ ಈ ಗ್ರಂಥಿಯನ್ನು ತಲುಪಿದಾಗ ಬರುವುದು . ನಮಗೆ ಈ ಅನುಭವ ಬಂದು ಅದನ್ನೂ ಲಯಗೊಳಿಸಿದೆವು . ಈಗ ಎಲ್ಲವೂ ವಿಸ್ಮೃತವಾಯಿತು . ನಾವು ಎಲ್ಲಿ ಧುಮುಕಿದ್ದೇವೆಂಬ ಜ್ಞಾನವೂ ನಮಗಿಲ್ಲ . ಆದರೂ ನಾವು ಮುಳುಗಿ ಎದ್ದಾಗ ಅದರ ಲಯಾವಸ್ಥೆಯನ್ನು ದಾಟಿದೆವೆಂದು ಹೇಳಬಹುದು . ಈಗ ಅಲ್ಲೇನಿದೆ ? ಎಲ್ಲವೂ ಹೊರಟು ಹೋದರೂ ನೋವು ಮಾತ್ರ ಇನ್ನೂ ಇದೆ . ಈ ನೋವು ನಮ್ಮನ್ನು ಗುರಿಯವರೆಗೆ ತಲುಪಿಸಲು ಸಹಾಯಕವಾಗುವುದು , ನಾವು ಮೂ ಲ ದಶೆ ಯಲ್ಲಿ ಬೆರೆತು ಹೋದಾಗ ಇದು ಇಲ್ಲದಂತಾಗುವುದು .
    12. ಹನ್ನೆರಡನೆಯ ಗ್ರಂಥಿ
      ಈಗ ನಾವು ಸಾರೂಪ್ಯತೆಯ ಅ ವಸ್ಥೆಯಲ್ಲಿರುವೆವು . ಬರುಬರುತ್ತ ಆದರದೂ ಲಯವಾದಾಗ ನಾವು ತಿಳಿಯಾದ ಸಾರೂಪ್ಯತೆಯ ದಶೆಯನ್ನು ಸೇರುವೆವು . ಇದು ಹನ್ನೆರಡ ನೆಯ ಗ್ರಂಥಿಯನ್ನು ಮುಟ್ಟಿದ ಸೂಚನೆ ಕೊಟ್ಟಿತು .
    13. ಹದಿಮೂರನೆಯ ಗ್ರಂಥಿ
      ನಾವೀಗ ಹದಿಮೂರನೆಯ ಗ್ರಂಥಿಗೆ ಬಂದೆವು . ಇಲ್ಲಿ ಜೀವನವೇ ಜೀವನ . ನಾನು ಕೇವಲ ದೊಡ್ಡ ದೊಡ್ಡ ಗ್ರಂಥಿಗಳನ್ನು ಕುರಿತು ಹೇಳಿದ್ದೇನೆ. ಸಣ್ಣ ಸಣ್ಣ ಗ್ರಂಥಿಗಳು ಅಗಣಿತವಾಗಿದ್ದು , ಅವುಗಳ ನಡುವಿನ ಅಂತರವನ್ನು ವರ್ಣಿಸಲು ಸಾಧ್ಯವಿಲ್ಲ . ಇಲ್ಲಿಯವರೆಗಿನ ಅನುಭವವನ್ನಂತೂ ಶಬ್ದ ಗಳ ತಿರುವು ಮುರುವು ಹೇಳಿಕೊಟ್ಟಿತು . ಮುಂದೆ, ಈ ಅ ವಸ್ಥೆಯನ್ನು ವರ್ಣಿಸಲು ಶಬ್ದ ಗಳು ಸಿಗುವುದಿಲ್ಲ . ಆದರೂ ನಮ್ಮ ಯಾತ್ರೆ ಸಾಗುತ್ತಲೇ ಇರುತ್ತದೆ . ಇಂಥ ಅಸಂಖ್ಯ ಗ್ರಂಥಿಗಳು ಸಿಗುವುವು ; ಮತ್ತು ಲಯ , ಹಾಗೂ ಸಾರೂಪ್ಯ ತೆಯ ಅವಸ್ಥೆಗಳು ಜೊತೆ ಜೊ ತೆಗೇ ನಡೆಯುವುವು . ಈ ಗ್ರಂಥಿಗಳಲ್ಲಿ ಮುಂದು ವರಿದಮೇಲೆ ಮಾಯೆಯ ಸ್ಪರ್ಶವೂ ಇಲ್ಲದಂತಾಗುವುದು. ನಾವು ಇನ್ನೂ ದೂರ ನಡೆದು ಒಂದು ಗ್ರಂಥಿಯನ್ನು ಮುಟ್ಟುವೆವು . ಅ ಲ್ಲಿ ಲಯ ಮತ್ತು ಸಾರೂಪ್ಯತೆಯನ್ನು ಹೊಂದಿದಮೇಲೆ ಬಹುಶಃ ಅಹಂಭಾವ ಸಮಾಪ್ತವಾಗು ವುದು . ಅಲ್ಲಿಂದ ಮುಂದೆ ಸ್ವರೂಪವೇ ಬದಲಾಗುವುದು . ಸಾವಿರಾರು ವರ್ಷ ಗಳಲ್ಲಿ ಎಲ್ಲೋ ಒಮ್ಮೆ ಈ ಅವಸ್ಥೆ ಬರುವುದು . ಯಾರಾದರೂ ಸದ್ಗುರು ದೊರೆತರೆ ಮಾತ್ರ ಮುಂದುವರಿಯಲು ಸಾಧ್ಯ . ಯಾರಿಗೆ ಸದ್ಗುರು ದೊರೆ ತಿರುವನೋ ಅವರು ಪ್ರತಿಯೊಂದು ಗ್ರಂಥಿಯ ಯಾತ್ರೆಯನ್ನೂ ಮಾಡಿ , ಕೊನೆಗೆ ಜ್ಞಾನವು ಎಲ್ಲಿ ಪರಿಸಮಾಪ್ತಿ ಹೊಂದುವುದೋ ಆ ಸಮುದ್ರದ ದಡ ವನ್ನು ತಲುಪಿದ್ದಾರೆ. ಜನರು ಇದನ್ನೋದಿ ತಮ್ಮನ್ನು ತಾವು ತೂಗಿ ಕೊಳ್ಳಲಿ . ಆಗ, ಜ್ಞಾನವೆಂದರೇನು , ಅದರ ಕೆಲಸ ಎಲ್ಲಿ ಮುಗಿಯುವುದು ಎಂಬುದು ತಿಳಿದು ಬರುವುದು . ಎಲ್ಲಿ ಜ್ಞಾನದ ಅನುಭವವು ಕೊನೆಗೊಳ್ಳು ವುದೊ ಅಲ್ಲಿಗೆ ಅದರ ಕಾರ್ಯ ಮುಗಿಯಿತು . ಆಗ ಏನೂ ತಿಳಿಯದ ಒಂದು ಹಸುಗೂಸಿನ ಅ ವಸ್ಥೆ ಬರುವುದು . ಈ ಅಪಾರ ಸಾಗರದ ಸಮೀಪ ಹೋದಾಗಲೇ ಈ ದಶೆಯು ಪ್ರಾಪ್ತವಾಗುವುದು . ಈ ಸ್ಥಿತಿಯು ಅಜ್ಞಾನದ ಪರಿಧಿಯಲ್ಲಿ ಬರುವುದು . ಇದೇ ವಾಸ್ತವಿಕ ಜ್ಞಾನ , ಹಾಗೂ ನಿಜಾವಸ್ಥೆ .