- ‘ಸಹಜ ಮಾರ್ಗದ’ ಉದಯವಾಗಿರುವುದು ಆಕಸ್ಮಿಕವಾಗಿ ಅಲ್ಲ. ಉತ್ಕಟ ಪ್ರತೀಕ್ಷೆಯಲ್ಲಿ ಕಾಯುತ್ತಿದ್ದ ಮಾನವ ಕೋಟಿಗೆ ಅದನ್ನು ಅನುಗ್ರಹಿಸಲಾಗಿದೆ. ಸಹಜ ಮಾರ್ಗ ಪದ್ಧತಿಯು ದೈವಸಾಕ್ಷಾತ್ಕಾರಕ್ಕಾಗಿ ಸ್ವಾಭಾವಿಕವಾದ ವಿಧಾನಗಳನ್ನು ಅನುಸರಿಸುತ್ತದೆ. ಮತ್ತು ನಿತ್ಯಜೀವನದಲ್ಲಿ ಆ ವಿಧಾನವನ್ನು ಅಳವಡಿಸಿಕೊಳ್ಳಲು ಧ್ಯಾನದಿಂದ ಆರಂಭಿಸಲಾಗುತ್ತದೆ. ಈ ಧ್ಯಾನವೇ ಆ ಪರಾತ್ಪರನ ಹೃದಯ ಮಂದಿರದಲ್ಲಿ ಅಡಗಿರುವ ಅನುಗ್ರಹವನ್ನು ಆಹ್ವಾನಿಸುವುದಕ್ಕೆ ಬೇಕಾದ ಪ್ರಮುಖ ಸಾಧನ. ಸೃಷ್ಟಿಯ ಆರಂಭದಲ್ಲಿ . ಸೃಷ್ಟಿಯ ಅಂತ್ಯವೇ ಆರಂಭವಾಗಿ ಪರಿಣಮಿಸಿತು. ME P 59 Tryst with God
- ಮಾನವ ಜೀವನದ ಭಾಗ ಮಾತ್ರದಷ್ಟು ಕ್ಷಿಪ್ರಕಾಲದಲ್ಲಿಯೇ ಇಂತಹ ಪರಮೋಚ್ಚ ಫಲವನ್ನು ಕೊಡುವ ಸಾಧನ ಮಾರ್ಗವಾಗಲಿ, ಉಪಾಸನಾ ಕ್ರಮಗಳಾಗಲೀ, ಸಹಜಮಾರ್ಗದ ಹೊರತಾಗಿ ಭೇರಿಲ್ಲವೆಂದು ನಾನು ಧೈರ್ಯದಿಂದ ಹೇಳುತ್ತೇನೆ. “ಸಹಜ ಮಾರ್ಗ”ವಿರುವುದೇ ಇದಕ್ಕಾಗಿ. ME P efficacy of sahaj marg
- ನಾನಿಂದು ಸಹಜ ಮಾರ್ಗಾನುಸಾರ ನಮ್ಮ ರಾಜಯೋಗ ಪದ್ಧತಿಯ ಅತ್ಯದ್ಭುತವನ್ನು ತೋರಿಸಿಕೊಡುವೆನು. ಈ ಪದ್ಧತಿಯ ಪ್ರಭಾವವನ್ನು ತೀರ ಕೆಲಜನರು ಮನಗೊಂಡಿದ್ದಾರೆ. ನಾವು ಒಂದೇ ಒಂದು ವಸ್ತುವನ್ನು ದೈವೀಗುಣವನ್ನು ಮಾತ್ರ ಕುರಿತು ಚಿಂತನೆ ಮಾಡುವೆವು. ಅದನ್ನು ನಾವು ಗುರುವೆಂದಾಗಲಿ ಧ್ಯೇಯ ವಸ್ತುವೆಂದಾಗಲಿ ಕರೆಯುವೆವು. ಈಗ ಪುರುಷೋತ್ತಮನಾದಂಥ ವ್ಯಕ್ತಿಯನ್ನು ಕುರಿತಾದ ಒಂದೇ ಒಂದು ವಿಚಾರವು ನಮ್ಮಲ್ಲಿದೆ. ನಾವು ಶೀಘ್ರವಾಗಿಯೇ ಆ ರೂಪದಲ್ಲಿ ಎಷ್ಟರ ಮಟ್ಟಿಗೆ ಆಸಕ್ತರಾಗುವೆವೆಂದರೆ ಅನ್ಯ ವಸ್ತುಗಳು ಗೌಣವಾಗಿ ಕಾಣ ತೊಡಗುವವು. ERY P 6 sahaj marg