- ಭೋಗವೆಂದರೆ ನಾವು ಹಿಂದೆ ಮಾಡಿದ ಕರ್ಮಫಲಗಳನ್ನು ಅನುಭೋಗಿಸುವುದಷ್ಟೇ ಅಲ್ಲ; ವಸ್ತುತ: ಅದರರ್ಥವು, ನಾವು ಮುಟ್ಟಿರುವ ಸ್ಥಾನದ ತೊಡಕುಗಳನ್ನು ಬಿಡಿಸುವ ಅವಸ್ಥೆಯೊಳಗಿಂದ ಹಾಯ್ದುಹೋಗುವುದು. ಎಷ್ಟೋ ವೇಳೆ, ಭೋಗಕ್ಕಾಗಿ ಈ ಸ್ಥಾನಗಳಲ್ಲಿಯ ನಮ್ಮ ವಾಸ್ತವ್ಯವು ಸುದೀರ್ಘವಾಗಿರುವುದಲ್ಲದೇ ಅನೇಕ ಸಂಗತಿಗಳಲ್ಲಿ ಕೇವಲ ಸ್ವಪ್ರಯತ್ನದಿಂದಲೇ ಅಲ್ಲಿಂದ ಹೊರಬರುವುದು ಅಸಾಧ್ಯವಾಗುವುದು. ಇಂಥ ಪರಿಸ್ಥಿತಿಯಲ್ಲಿ ಯೋಗ್ಯ ಗುರುವು ನಮ್ಮನ್ನು ಬಲವಾಗಿ ಮುಂದಕ್ಕೆ ನೂಕಿದಾಗಲೇ ನಾವು ಈ ಸುಳಿಯಿಂದ ಹೊರಗೆ ಬರುವೆವು.RD 38 Guru
- ಎಲ್ಲ ಸಂಸ್ಕಾರಗಳೂ ತಮ್ಮ ಸ್ಥಳವನ್ನು ಬಿಟ್ಟು ಹೃದಯದ ಹತ್ತಿರ ಒಟ್ಟಾಗಿ ನಾನು ಕರ್ಮಫಲವನ್ನು ಅನುಭೋಗಿಸುವಂತೆ ಮಾಡುತ್ತಿವೆ ಎಂದೆನಿಸಿತು. ಕಳೆದ ಸುಮಾರು ಎಂಟು ತಿಂಗಳಿಂದ ಸಂಗತಿ ಇದ್ದರೂ ಅದನ್ನು ನಾನು ಪರಿಗಣಿಸಲಿಲ್ಲ. ಅದು ಕೊನೆಗೊಳ್ಳುತ್ತ ಬಂದಾಗ ಅದರ ಅನುಭವವಾಯಿತು. ಇದೇ ಕಾರಣದಿಂದ ಒಂದು ದಿನವಾದರೂ ವೇದನಾರಹಿತವಾಗಿರಲಿಲ್ಲ.AB II P 112