(ನವೆಂಬರ್೨೭, ೧೯೬೮ರಂದು ವಿಜಯವಾಡದಲ್ಲಿ ನೀಡಿದ ಸಂದೇಶ)
ಜಗತ್ತಿನ ಎಲ್ಲ ಮತ ಧರ್ಮಗಳೂ ಭೌತಾತೀತ ಪರತತ್ವ ಅರ್ಥಾತ್ದೇವರ ಸಾಕ್ಷಾತ್ಕಾರಕ್ಕೋಸುಗ ಒಂದಿಲ್ಲೊಂದು ಮಾರ್ಗವನ್ನು ವಿಧಿಸಿವೆ. ಅವು ಉನ್ನತ ಜೀವನದ ಆದರ್ಶಗಳನ್ನೂ ನೀಡಿವೆ ; ಬಹಳಷ್ಟುಜನರುಅವುಗಳನ್ನುಅನುಸರಿಸುತ್ತಬಂದಿದ್ದಾರೆ. ಕಾಲಗತಿಸಿದಂತೆ, ಅವರು ಬೇರೆ ಕಡೆಗಳಲ್ಲೂ ಇಣುಕಲು ಆರಂಭಿಸಿದರು. ಯಾಕೆಂದರೆ ಕಾಲನ ಕುಠಾರವು ಅವುಗಳಲ್ಲಿ ಈ ತೆರನಾದ ಬದಲಾವಣೆಗಳನ್ನು ತಂದಿತು. ಅವರು ಜೀವಿಸುತ್ತಿರುವ ಜಗತ್ತಿನ ಪರಿಸರವು ಅವರನ್ನುಆಕರ್ಷಿಸಲಾರಂಭಿಸಿತು, ಮತ್ತು ಜೀವನದ ಆವಶ್ಯಕತೆಗಳೂ ಅವರು ಬೇರೆಮಾರ್ಗಗಳನ್ನು ತುಳಿಯುವಂತೆ ಒತ್ತಡ ತಂದವು. ಕಲೆ, ಮತ್ತು ಕರಕೌಶಲ್ಯಗಳು ಬೆಳೆದವು. ಹಾಗೂ, ಕಲಾಕಾರರು ವಿವಿಧ ದೇವತಾ ವಿಗ್ರಹಗಳನ್ನುಕಟೆದರು, ಮತ್ತುಜನರುಅವುಗಳನ್ನುಪೂಜಿಸತೊಡಗಿದರು.
ಆ ಕಾಲದ ಪ್ರಾಜ್ಞರು, ಆರಂಭದಲ್ಲಿ, ಜನರನ್ನುಅಂತಿಮವಾಗಿ, ಸಾಕ್ಷಾತ್ಕಾರದ ಖಚಿತ ಮಾರ್ಗವಾದ “ಯೋಗ’ಕ್ಕೆ ಕೊಂಡೊಯ್ಯಬಹುದಾದ ಉಪಾಸನಾ ಕ್ರಮಗಳನ್ನುವಿಧಿಸಬೇಕಾಯಿತು. ಆದರೆನಿಸರ್ಗದನಿಯಮದಂತೆ, ಉನ್ನತಿ ಮತ್ತು ಅವನತಿಗಳು ಒಂದನ್ನೊಂದು ಹಿಂಬಾಲಿಸುತ್ತವೆ. ಅವರ ಮನಸ್ಸು ನಿಜದ ಮಾರ್ಗದಲ್ಲಿ ಬಹು ದೂರ ಪಯಣಿಸಲಾಗದೆ, ಪರಿಣಾಮತಃ ವಿಗ್ರಹಗಳೇ ದೇವರಾಗಿ ಮೈತಳೆದು ನಿಂತವು. ಪೂಜೆಯ ನಿಜವಾದ ಕ್ರಮವೇ ಮರೆತುಹೋಯಿತು. ಅದರ ಫಲವನ್ನು ನಾವು ಇಂದಿಗೂ ನೋಡುತ್ತಿದ್ದೇವೆ. ಸ್ಥೂಲತೆಯು ಎಷ್ಟೊಂದು ಬೆಳೆಯಿತೆಂದರೆ ದೈವಾನುಗ್ರಹಕ್ಕೆ ಅದೊಂದು ಅಡ್ಡಿಯಾಗಿ ನಿಂತಿದೆ. ಸ್ಥೂಲತೆಯು ಬೆಳೆಯುತ್ತ ಮುಂದುವರಿದರೆ, ಉನ್ನತಹಂತಗಳಿಗೇರುವುದುಅಸಾಧ್ಯದ ಮಾತಾಗುತ್ತದೆ. ಸಹಜಮಾರ್ಗದಸೊಗಸುಎಂದರೆ, ಅದುಆಸ್ಥೂಲತೆಯನ್ನುತೊಳೆದು, ಭಗವಂತನಅನುಗ್ರಹವುಹರಿದುಬರುವಂತೆಮಾಡುತ್ತದೆ. ಆದರೆಸ್ಥೂಲತೆಯಸಂಚಯವುಳಿದುದಾದರೆಅಭ್ಯಾಸಿಯುಪ್ರತಿಹೆಜ್ಜೆಯಲ್ಲಿಯೂಎಡವುತ್ತ, ತಡವುತ್ತಉಳಿಯುತ್ತಾನೆ.
ಇಲ್ಲಿ ಬರುವ ಇನ್ನೊಂದು ತೊಂದರೆಯೆಂದರೆ, ಈಗಿನ ಕಾಲದ ಜನರು‘ಯೋಗ’ವೆಂದರೇನೇ ಅಂಜಿಕೊಳ್ಳುವರು. ಏಕೆಂದರೆ, ‘ಯೋಗ’ದ ಮಾತು ಬಂದಾಗೆಲ್ಲ, ಅನೇಕರಿಗೆ ಹಾನಿಯನ್ನುಂಟು ಮಾಡಿರಬಹುದಾದ, ಹಠಯೋಗ, ದೀರ್ಘಶ್ವಾಸಾಭ್ಯಾಸ ಇತ್ಯಾದಿಗಳ ಕಡೆಗೆ ಅವರ ಮನಸ್ಸು ಹೊರಳುತ್ತದೆ. ರಾಜಯೋಗದಸುಧಾರಿತ ಪದ್ಧತಿಯಾದ ನಮ್ಮ ಸಹಜಮಾರ್ಗ ಪದ್ಧತಿಯ ಸಾಮರ್ಥ್ಯವನ್ನು ಪರೀಕ್ಷಿಸಿ ನೋಡಲೂ ಒಲ್ಲದ ಅನೇಕರಿದ್ದಾರೆ. ಏಕೆಂದರೆ ಅವರು ತಾವು ಮಾಡುತ್ತಿರುವುದರಲ್ಲಿಯೇ ತೃಪ್ತರು. ತಾವು ಬದ್ಧತೆಯಿಂದ ಅಂಗೀಕರಿಸಿದ ಪೂಜಾಪದ್ದತಿಯಲ್ಲಿ ಅವರು ತೃಪ್ತಿಕಾಣುತ್ತಿರುವುದು ರೂಢಿವಶರಾಗಿ, ಅದನ್ನೇಅವರುಆಧ್ಯಾತ್ಮಿಕಪ್ರಗತಿಯೆಂದುಭಾವಿಸುತ್ತಾರೆ, ಆದರೆವಾಸ್ತವವಾಗಿಅದುಅಲ್ಲಿ ಲುಪ್ತವಾಗಿದೆ. ಅವರುತೃಪ್ತಿಯನ್ನು ‘ಶಾಂತಿ’ಯೆಂದುಭಾವಿಸುತ್ತಾರೆ. ಆದರೆ ಮಾನಸಿಕ ತೃಪ್ತಿಯು ಸ್ಥೂಲತರವಾದ, ಇಂದ್ರಿಯ ಸಂಬಂಧಿತವಾಗಿದ್ದರೆ, ‘ಶಾಂತಿ’ಯು ಆತ್ಮಕ್ಕೆ ಸಮೀಪವಾದದ್ದು.ಈ ತೆರನಾದ ಪೂಜೆಯು ಒಂದು ದಿನದ ಮಟ್ಟಿಗೆ ಉಪೇಕ್ಷಿಸಲ್ಪಟ್ಟರೂ ಅವರು ಉದ್ವಿಗ್ನರಾಗುತ್ತಾರೆ. ಆದರೆ ಅಲ್ಲಿ ‘ಶಾಂತಿ’ ಇದ್ದಿತ್ತಾದರೆ ಉದ್ವಿಗ್ನತೆಯ ಪ್ರಶ್ನೆಯೇ ಬರುವುದಿಲ್ಲ. ನಾವು ಆಧ್ಯಾತ್ಮಿಕವಾಗಿ ಪ್ರಗತಿಹೊಂದಿದಂತೆಲ್ಲ ಶಾಂತಿಯ ಸ್ವರೂಪವೂ ಬದಲಾಗುತ್ತ ಹೋಗಿ, ಕೊನೆಯಲ್ಲಿ ಪರಿಣಾಮತಃ ಉಳಿಯುವುದು ‘ಶಾಂತಿ ರಹಿತ ಶಾಂತಿ’. ನಾವು ಆಧ್ಯಾತ್ಮಿಕವಾಗಿ ಪ್ರಗತಿ ಹೊಂದಬೇಕಾದರೆ, ಸಾಂತದಲ್ಲಿರುವಅನಂತತೆಯಿಂದಆರಂಭಿಸಬೇಕು. ಈ ರೀತಿ ನಾವು ಪರಮಸತ್-ವಸ್ತುವಿನೊಂದಿಗೆ ಸಂಬಂಧವನ್ನುಸ್ಥಾಪಿಸಿಕೊಳ್ಳುತ್ತೇವೆ.
ನಮ್ಮಮುಂದಿನಹೆಜ್ಜೆಯೆಂದರೆ, ಸೀಮಿತತೆಯ ಕಲ್ಪನೆಯೂ ತೊಳೆದುಹೋದಂತೆ, ನಾವುಅನಂತದಲ್ಲಿ ಲೀನರಾಗಲಾರಂಭಿಸುವೆವು. ಈಗ ದ್ವಾರವು ತೆರೆದು, ನಾವು (ಸರಿಯಾದ) ದಾರಿಗೆ ಬಂದಿದ್ದೇವೆ. ಸೀಮಿತತೆಯ ಮನಸ್ಸಿನಿಂದ ಅಳಿಸಿಹೋದಾಗ ಮಾರ್ಗವು ನಿಚ್ಚಳವಾಗುವುದು. ನಾವು ಅನಂತದಲ್ಲಿಯೇ ಅನಂತದತ್ತ ಸಾಗುತ್ತೇವೆ. ಇದರ ಪರಿಣಾಮವೆಂದರೆ ಅನಂತದ ಕಲ್ಪನೆ ಕೂಡ ತಲೆಯೆತ್ತುವುದಿಲ್ಲ. ಈಗ ಸತ್ಯೋದಯವಾಗುವುದು. ಮುಂದಕ್ಕೆ, ನಾವು ಸತ್ಯದಲ್ಲಿ (ಪರತತ್ವದಲ್ಲಿ ) ಧುಮುಕಿದಾಗ ಆಟ ಕೊನೆಗೊಳ್ಳುತ್ತದೆ, ನಿಜವಾದ ದೃಶ್ಯವು ಆರಂಭವಾಗುತ್ತದೆ. ಆದರೆ ಇದೇ ಕೊನೆಯಲ್ಲ. ಮುಂದೆ-ಮುಂದೆ ಸಾಗಿರಿ. ಇದೂಅಲ್ಲ, – ಇದೂಅಲ್ಲ, ನೇತಿ, ನೇತಿ.