(ಜವರಿ ೯, ೧೯೭೦ ರಂದು ತಿರುಪತಿಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ  ನೀಡಿದ ಸಂದೇಶ)

ಆವಶ್ಯಕವೆನಿಸಿದ ಸಂದರ್ಭಗಳಲ್ಲಿ, ಜಗತ್ತಿನ ಎಲ್ಲ ಧಮ್ಮಗಳ ಉದಯವಾಯಿತು. ಅವುಗಳಲ್ಲಿ ಕೆಲವು ಅಸ್ತಿತ್ವದ ತಿರುಳಿನಿಂದ ಉಗಮ  ಹೊಂದಿದರೆ, ಮತ್ತೆ ಕೆಲವು ಅದರ ಹೊರಮೈಯಿಂದ ಉದ್ಭವಿಸಿದವು. ಆದರೂ, ಅವೆಲ್ಲವೂ, ಮತಧರ್ಮಕ್ಕೆ ಮಿಗಿಲಾದ ದೈವಿಕತೆಯನ್ನು ಮುಟ್ಟಲು ಪ್ರಯತ್ನ ಪಡುತ್ತವೆ. ‘ಸತ್ಯ’ದಲ್ಲಿ ಆಳವಾಗಿ ಮುಳುಗುವಂತೆ ಅವು ಜನತೆಯನ್ನು ಸಿದ್ಧಗೊಳಿಸುತ್ತವೆ. ಅನೇಕ ಸಂದರ್ಭಗಳಲ್ಲಿ ವು ಯಶಸ್ವಿಯಾದರೂ, ಬೇರೆ ಕೆಲವು ರೀತಿಯಲ್ಲಿ ಅವು ಸಾಲದಾಗುತ್ತವೆ. ಯಾಕೆಂದರೆ, ಮತಧಮ್ಮವು ಸಾಮಾನ್ಯ ಜನತೆಗಾಗಿ, ಆದರೆ, ಆಧ್ಯಾತ್ಮಿಕತೆಯು ಕೆಲವೇ ಆರಿಸಲ್ಪಟ್ಟವರಿಗಾಗಿ ತಮ್ಮ ತಮ್ಮ ವಿವೇಕ-ವಿವೇಚನೆಗಳ ನೆಲೆಗೆ ತಕ್ಕ ದೃಷ್ಟಿಕೋನವನ್ನು ಹೊಂದಿದ ಲಕ್ಷಾಂತರ ಜನರು ಧರ್ಮಗಳನ್ನು ಅನುಸರಣೆ ಮಾಡುತ್ತಾರೆ, ಆದ್ದರಿಂದಾಗಿಯೇ, ವಿವಿಧ ಮನೋಧರ್ಮ – ಗಳುಳ್ಳ ಜನರು ಅಂಗೀಕರಿಸುವುದರಿಂದ, ಅವು (ಧರ ಗಳು) ಅನೇಕ ಶಾಖೆಗಳಾಗಿ ಕವಲೊಡೆಯುತ್ತವೆ. ಒಂದು ಕಡೆ ಉಚ್ಚಮಟ್ಟದ ಚಿಂತನೆ ಇದ್ದರೆ, ಮತ್ತೊಂದು ಮಗ್ಗುಲಲ್ಲಿ ಜಡ ಚರಣೆಗಳಿವೆ. ಇವೆಲ್ಲವೂ, ತಾವು ರೂಪುಗೊಂಡ ವಲಯ ಗಳಲ್ಲಿ ತಮ್ಮದೇ ಪಾತ್ರ ವಹಿಸುವುವು. ಈಗ ಜಡತೆ (ಸ್ಥೂಲತೆ) ಮತ್ತು ಸೂಕ್ಷ್ಮತೆ ಇವೆರಡೂ ಇವೆಯೆನ್ನಿ -ಸೂಕ್ಷ್ಮತೆಯುಳ್ಳ ಮನಸ್ಸಿಗೆ ಉಚ್ಚತಮವಾದುದು ಗ್ರಹಿಕೆಗೆ ಬರುತ್ತದೆ, ಮತ್ತು ಸ್ಥೂಲತೆಯುಳ್ಳ ಜಡಮನಸ್ಸಿಗೆ, ಸ್ಥೂಲವಾದುದರ ಕಲ್ಪನೆ ಮಾತ್ರ ದೃಗ್ಗೋಚರವಾಗುತ್ತದೆ. ಇಂದು ಚಿಂತನೆಯು ಸ್ಥೂಲತರದ್ದಾಗಿ ಬಿಟ್ಟಿದೆ. ಅವರು ಸ್ಥೂಲವಾದ ವಿಷಯಗಳನ್ನು ಧರ್ಮದೊಂದಿಗೆ ಜೋಡಿಸುತ್ತಾರೆ. ಮತ್ತೆ, ಒಂದು ಸುಳ್ಳು ನೂರುಸಲ ಹೇಳಲ್ಪಟ್ಟಾಗ, ಅದೇ ಸತ್ಯವೆನಿಸಿಬಿಡುತ್ತದೆ !

ಅದೇ ರೀತಿ, ಆ ವಿಷಯಗಳು ಮತ್ತು ಅವುಗಳ ಪ್ರತಿಕೂಲಕರ ನಂಬುಗೆಗಳೇ ‘ಧರ್ಮ’ದ ಅಂಗಗಳೇ ಆಗಿಬಿಟ್ಟಿವೆ. ನಾವು ಬೆಳಕಿನಿಂದ ಹೊರಗುಳಿದಾಗ ಕತ್ತಲೆಯಲ್ಲಿ ಬೀಳುತ್ತೇವೆ ; ವಿವೇಕದಿಂದ ದೂರ ಹೊರಗುಳಿದಾಗ ಮೂರ್ಖರಾಗುತ್ತೇವೆ. ‘ಸತ್ಯ’ ಬಿಟ್ಟು ಹೊರಗುಳಿದಾಗ ಸೈತಾನರಾಗುತ್ತೇವೆ. ಇಂದು, ಅವರು ಸತ್ಯವಿಮುಖವಾದ ಸ್ಥಿತಿಗೆ ಅವನತಿ ಹೊಂದಿದ್ದಾರೆ. ‘ಸತ್ಯ’ಕ್ಕೆ ಸಮಶ್ರುತಿಯಲ್ಲಿಲ್ಲದ ವಿಷಯಗಳನ್ನು ಅವರು ಹೀರಿಕೊಳ್ಳಲಾರಂಭಿಸುತ್ತಾರೆ. ಅರ್ಥಾತ್, ಅವರಲ್ಲಿ ಪಶುತ್ವವು ಪಸರಿಸಲಾರಂಭಿಸುತ್ತಿದೆ, ಮತ್ತು ಅವರು ಪಶುಗಳಲ್ಲಿ ಇರುವ ಸ್ಥಿತಿಯಲ್ಲಿ ಇಣುಕುತ್ತಿದ್ದಾರೆ. ಕೆಲವೊಮ್ಮೆ ಅವರು ಹೀಗೂ ತಿಳಿಯುವರು, ಉದಾಹರಣೆಗೆ “ನಾನು ಈ ಹಸುವನ್ನು ಸಾಕಿದೆನಾದ್ದರಿಂದ ನನಗೆ ಸಾಕಷ್ಟು ಧನಲಾಭವಾಯಿತು. ಈ ಕುದುರೆಯನ್ನು ಸಲುಹಿದನಾದ್ದರಿಂದ ನನಗೆ ಮೊಮ್ಮಗನೊಬ್ಬ ಹುಟ್ಟಿದ.” ಇತ್ಯಾದಿ. ಇಂಥ ವಿಚಾರಗಳನ್ನು ಪೋಷಿಸಲಾಗುತ್ತಿದೆ. ಇಂಥ ಸ್ಥಿತಿಗಳು ಹೀಗೇ ಮುಂದುವರಿದಾಗ, ‘ಮೂಢನಂಬಿಕೆ’ಗಳೆಂದು ಕರೆಯಬಹುದಾದ ಅನೇಕ ಭಾವನೆಗಳನ್ನು ಹುಟ್ಟುಹಾಕುತ್ತವೆ. ಅವು ನಿರರ್ಥಕವೆಂಬುದು ಸ್ವಯಂ ಸೂಚ್ಯವಾಗಿವೆ. ಆದರೆ, ಇವು ಸ್ಥೂವಾದ ವಿಚಾರ ಸರಣಿಯ ಪರಿಣಾಮಗಳೇ ಸೈ, ಸ್ಥೂಲತೆಯ ಸೂಕ್ಷ್ಮವಾದ ಮಗ್ಗುಲನ್ನು ತೆಗೆದುಕೊಂಡು, ನಾವು “ಆಧ್ಯಾತ್ಮಿಕ’ರಾದೆವೆಂದು ತಿಳಿಯುತ್ತೇವೆ. – ಇದೂ ಒಂದು ಮೂಢನಂಬಿಕೆಯೇ ! ಅವರು ನಿಜದಲ್ಲಿ ತಾವು ಇರುವುದೇ ಬೇರೆ, ತಾವೇನಿದ್ದೇವೆಂದು ಕಲ್ಪಿಸಿಕೊಳ್ಳುವುದೇ ಬೇರೆ. ಹಾಲು ಮದ್ಯದಿಂದ ಕಲಬೆರಕೆಗೊಂಡಾಗ ಅದು ಹಾಲಾಗಿ ಉಳಿಯಲಾರದು.

ಯಾವುದಾದರೊಂದು ಧರ್ಮವು ಹಳತಾಗುತ್ತ ಹೋದಂತೆ ಇಂಥ ಸಂಗತಿಗಳು ನುಸುಳುತ್ತವೆ. ಗ ಅದನ್ನು ಸರಿಪಡಿಸಲು ಸಂತರ ಆಗಮನವಾಗುತ್ತದೆ. ಆದರೆ, ದುರ್ದೈವದ ಸಂಗತಿಯೆಂದರೆ, ಅಂಥ ಸಂತರು ಎಲ್ಲ ಕಾಲಗಳಲ್ಲಿಯೂ ಬರುವುದಿಲ್ಲ. ಅದೇಕೆಂದರೆ, ಅದಕ್ಕೋಸ್ಕರ ನಾವು ಅವರನ್ನು ಕೂಗಿ-ಕರೆಯುವುದಿಲ್ಲ. ನಾವೇಕೆ ಅವರನ್ನು ಆಹ್ವಾನಿಸುವುದಿಲ್ಲವೆಂದರೆ, ಜನರ ಮನಸ್ಸಿನಲ್ಲಿ ಮೂಢನಂಬಿಕೆಗಳೇ ‘ಧರ್ಮ’ವಾಗಿಬಿಟ್ಟಿವೆ. ಅದಕ್ಕಿಂತ ಮೇಲಕ್ಕೆ ಏನುಂಟು ಎಂಬುದನ್ನು ಚಿಂತಿಸಲೂ ಆಗದಷ್ಟು, ಅವರು ಅದರಲ್ಲಿಯೇ ಮುಳುಗಿಬಿಟ್ಟಿದ್ದಾರೆ. ನಿಜವಾಗಿಯೂ, ‘ಸಂತ’ರನ್ನು ಆಹ್ವಾನಿಸಬಲ್ಲ ಆ ಒಂದು ಶಕ್ತಿಯು, ಮೂಢನಂಬಿಕೆಗಳಿಗಿಂತ ಮೇಲಿನದ್ದಾಗಿದೆ. ಹಾಗೂ ಇಡೀ ಜಗತ್ತಿನ ಜೀವಿಗಳಲ್ಲೆಲ್ಲ ಪರಿವರ್ತನೆಯನ್ನುಂಟು ಮಾಡಲು ಆವಶ್ಯಕವಾದ ಒಂದು ಅಂತಃಸತ್ವವೇ ಅದು. ವೈದ್ಯನೋರ್ವನು ರೋಗವನ್ನು ಗುಣಪಡಿಸಬಲ್ಲನೇ ಹೊರತು, ಕುರುಬನೊಬ್ಬ ಅದನ್ನು ಮಾಡಲಾರ. ಇಂದಿನ ಕಾಲದ ಕರೆಯಾದರೂ ಏನು ? – ದು ‘ಕೇಂದ್ರ’ದಿಂದ ನೇರವಾಗಿ ಉದ್ಗ ಮಿಸುವ ‘ಶಕ್ತಿಯೇ ಹೊರತು ಬೇರೆಯಲ್ಲ. ಒಂದು, ಅದು ನಮ್ಮನ್ನು ಭಸ್ಮಗೊಳಿಸಬೇಕು, ಅಥವಾ, ನಮ್ಮನ್ನು ಅಪ್ಪಿ ಆವರಿಸಬೇಕು. ನಾವು ನಮ್ಮ ಪರಿವರ್ತನೆಯನ್ನು ಹಾರೈಸುವುದಾದಲ್ಲಿ ಹೀಗಿರಬೇಕು ನಮ್ಮ ವಿಚಾರ, ಮತ್ತು ಅದಕ್ಕೋಸ್ಕರ ರಣರಂಗದಲ್ಲಿರುವ ಯೋಧರಂತೆ, ನಮ್ಮ ಶೌರ್ಯವನ್ನು ಪರೀಕ್ಷೆಗೊಡ್ಡುವುದಕ್ಕೆ, ಧೈಯಬದ್ಧರಾಗಿ ನಾವು ಮುಂದೆ ಬರಬೇಕು.

***