ಸತ್ಯವಂತರಾಗಿರಿ. ಕಷ್ಟಗಳು ನಿಮ್ಮ ಹಿತಕ್ಕಾಗಿಯೆ ಬಂದ ದೈವೀ ಕೃಪೆಯೆಂದು ತಿಳಿದು ಕೃತಜ್ಞರಾಗಿರಿ.

ಸತ್ಯಹೇಳುವುದರ ಅರ್ಥವೇನೆಂದರೆ ನಾವಿದ್ದ ಸ್ಥಿತಿಯಲ್ಲಿ ನಮ್ಮನ್ನು ಪ್ರಕಟಗೊಳಿಸುವುದು. ಈ ಸ್ಥಿತಿಗೆ ಬಂದ ಮನುಷ್ಯನು “ಅದು ಏನಿದೆಯೋ ಇದೆ” ಎಂದು ವಿವಶನಾಗಿ ಹೇಳುವನು. ಶಬ್ದಗಳು ಈ ಸ್ಥಿತಿಯನ್ನು ಹೇಗೂ ವರ್ಣಿಸಲಾರವು. ನಿಜವಾಗಿ ಇದು ಮೂಲದ ಸ್ಥಿತಿ. ಇದನ್ನು `ಸ್ಥಿತಿ’ಯೆಂದು ಕರೆಯುವುದು ಸಹ ಅದರ ವೈಶಿಷ್ಟ್ಯವನ್ನು ಕೆಡಿಸಿದಂತೆಯೆ. ಈ ಶಬ್ದ – ಪ್ರಯೋಗವು ಅದರ ವರ್ಣನೆಗೆ ಉಚಿತವಾಗಲಾರದು. ವಾಸ್ತವವಾಗಿ, ಪ್ರಳಯಕಾಲದಲ್ಲಿ ಎಲ್ಲ ಶಕ್ತಿಗಳೂ ಸಂಹೃತವಾಗಿ ಕೇವಲ ಮೂಲಮಾತ್ರ ಉಳಿಯುವ ಬಿಂದು ಅದು. ‘ಮೂಲ’ವೆಂಬುದೂ ಅದರ ಸರಿಯಾದ ಅಭಿವ್ಯಕ್ತಿಯಾಗಲಾರದು. ಏಕೆಂದರೆ, ಅಲ್ಲಿ ಎಲ್ಲ ಸಂವೇದನೆಗಳೂ ಪೂರ್ಣ ಇಲ್ಲದಂತಾಗುವುವು. ಅದನ್ನು ‘ಶಕ್ತಿ’ಯೆಂದು ಕರೆದರೂ ಕೂಡ ಒಂದು ರೀತಿಯ ಭೌತಿಕತೆ ಅಭಿಪ್ರೇತವಾಗುವುದು, ಹಾಗಾದರೆ ಏನು ಹೇಳಬೇಕು ? ಅಭಿವ್ಯಕ್ತಿಯು ಇಲ್ಲದಂತಾಗುವುದು. ‘ಶೂನ್ಯ’ವೆಂದು ಕರೆದರೂ ಒಂದು ತರದ ‘ವಸ್ತು’ತ್ವದ ಗಂಧ ಬರುವುದು. ಅದನ್ನು ಸೂಚಿಸಲು ಈಗ ‘ಅಸ್ತಿತ್ವ’ವೆಂಬ ಶಬ್ದವೊಂದೇ ಉಳಿಯಿತು. ಇದರಿಂದ ಅಭಿವ್ಯಕ್ತಿ ಶಕ್ಯವಾಗಬಹುದು. ನಾವು ಈ ಶಬ್ದಾರ್ಥವನ್ನು ಕುರಿತು ಚಿಂತಿಸಿದ್ದಾದರೆ ಯಾವುದಾದರೊಂದು ಪದಾರ್ಥದ ಕಲ್ಪನೆ ಬಂದು ಮತ್ತೆ ಅದೇ ಸ್ಥೂಲತೆಯ ಬೋಧೆ- ಯಾಗುವುದು. ಇವೆರಡನ್ನೂ ನಮ್ಮ ಕಲ್ಪನೆಯಿಂದ ತಳ್ಳಿಹಾಕಿದರೂ ಕೂಡ ಏನಾದರೊಂದು ಶೇಷ ಉಳಿದೇ ಉಳಿಯುವುದು. ಈಗ, “ಅದೇ ಏನಿದೆಯೋ ಇದೆ” ಎಂಬಂದಕ್ಕಿಂತ ಬೇರೆ ಯೋಗ್ಯ ಅಭಿವ್ಯಕ್ತಿ ಯಾವುದಾಗಬಲ್ಲುದು ? ಪ್ರತಿಯೊಂದು ಕಲ್ಪನೆಯಿಂದ ದೂರ ಉಳಿಯುವುದೊಂದೇ ಅದನ್ನು ವರ್ಣಿಸುವ ಕಲ್ಪನೆಯಾಗಬಲ್ಲುದು. ಸದ್ವ್ಯವಹಾರದಿಂದ ತನ್ನನ್ನು ಅದರತ್ತ ಕೊಂಡೊಯ್ಯುವುದು ಅಭ್ಯಾಸವನ್ನವಲಂಬಿಸಿದೆ. ದೃಢತೆಯು ಇದರಲ್ಲಿ ಸಹಾಯಕವಾಗುವುದು. ಆದರೆ ಗಂತವ್ಯ ಮುಟ್ಟುವ ಮೊದಲೇ ಈ ದೃಢತೆಯು ಅಪ್ಪಣೆ ತೆಗೆದುಕೊಳ್ಳಬೇಕು. ಆಗ ಮೂಲದ ಭಾಸ- ವಾಗಬಲ್ಲುದು. ಈ ಭಾಸವೂ ಇಲ್ಲದಂತಾದಾಗ ನಾವು ಮೂಲಸ್ಥಿತಿಯನ್ನು ಹೊಂದಿರುವೆವೆಂದು ತಿಳಿಯಬಹುದು.

ಮೇಲೆ ವಿವರಿಸಲಾದಂತೆ, ನಮ್ಮ ಎಲ್ಲ ವ್ಯವಹಾರಗಳೂ ನಿಸರ್ಗದಲ್ಲಿರುವ ಹಾಗೆ ನಡೆಯಬೇಕೆಂಬುದೇ ನಾವು ಸತ್ಯವನ್ನಾಡುವುದರ ಉದ್ದೇಶ. ಇಲ್ಲಿಂದ ಭಕ್ತಿಯು ಆರಂಭವಾಯಿತು. ಭಕ್ತನಿಗೆ ಸ್ವಾಮಿಭಕ್ತಿಯ ಅರಿವಾಗಿ ಆತನ ಸ್ಮರಣೆಯು ಸದಾ ಹೃದಯದಲ್ಲಿ ನೆಲೆಸತೊಡಗುವುದು. ಪ್ರಿಯತಮನ ಕಠೋರ ವರ್ತನೆಯ ಪ್ರೇಮಿಗೆ ರುಚಿಸುವುದು; ಏಕೆಂದರೆ ಅದರಲ್ಲಿ ಒಂದು ತರದ ಪ್ರೀತಿ ಸುರಿಯುವುದು. ಇದರಿಂದ ಆತನಕಡೆಗೆ ಮತ್ತಷ್ಟು ಆಕರ್ಷಣೆ ಯುಂಟಾಗುವುದು. ಆತನ ಬೈಗಳಾದರೂ ಪ್ರಿಯವಾಗಿಯೆ ತೋರಿ ಒಂದು ತರದ ಆನಂದವಾಗುವುದು. ಈ ಬೈಗಳ ಒರಟುರೂಪವನ್ನು ತೆಗೆದುಕೊಂಡುದಾದರೆ ಅದರ ಸ್ವರೂಪವೇ ಬೇರೆಯಾಗಿ ಕಾಣುವುದು. ಜನರು ಅದನ್ನು “ದುಃಖಗಳೆಂದು ಕರೆಯುವರು. ಆದರೆ ಭಕ್ತನು ಅವುಗಳ ಅತ್ಯಂತ ಸ್ಥೂಲ ರೂಪದಲ್ಲಿ ಸಹ ಅವನ್ನು ಸಹಿಸಬಲ್ಲನು. ಈ ಸ್ಥಿತಿಯು ಪ್ರಾಪ್ತವಾದಾಗ ಅದರ ಅಡಿಯಲ್ಲಿ ಕೃತಜ್ಞತೆಯ ಭಾವನೆಯಿರುವುದು. ಅವನು ದುಃಖಗಳನ್ನು ಎಷ್ಟು ಚೆನ್ನಾಗಿ ಸ್ವಾಗತಿಸುವನು ! ಹಾಗು, ಅವು ಪ್ರಿಯತಮನಿಂದ ಬಂದಿವೆ ಯೆಂಬ ಕಾರಣದಿಂದ ಅವುಗಳಿಂದ ಅದೆಷ್ಟು ಸಂತುಷ್ಟನಾಗುವನು !

“ದುಃಖಗಳಿಗಾಗಿ ನೀ ದೂರಬೇಡ;

ದುಃಖವಿಲ್ಲದೆ ಸುಖವು ಸಿಗದು ನೋಡ !”

ಇದರ ಪರಿಣಾಮವೇ ಆನಂದ. ಈಗ ಆತನು ಆನಂದದ ವಲಯದಲ್ಲಿ ನೆಲೆಸತೊಡಗುವನು. ಸಾಕಷ್ಟು ಅಭ್ಯಾಸವಾದ ನಂತರ ಇದು ಆತನ ಪ್ರಕೃತಿಯಾಗಿ ಪರಿಣಮಿಸುವುದು. ಇದರ ಅರಿವು ಸಹ ಮಾಯವಾಗುವುದು. ಮುಂದುವರಿದಂತೆಲ್ಲ ಆ ವಲಯದಲ್ಲಿ ಯಾವ ಆಕರ್ಷಣೆಯೂ ಉಂಟಾಗುವು-ದಿಲ್ಲ. ಈ ಅವಸ್ಥೆ ಬಂದಮೇಲೆ ಕೇಳುವುದೇನು ? ಸತ್ಯದ ವಲಯದಲ್ಲಿ ಈಜುವುದೊಂದೇ ಉಳಿಯುವುದು. ಬರಬರುತ್ತ ಈಜುವ ಕಲ್ಪನೆಯೂ ಇಲ್ಲದಾಗುವುದು. ಸಹನಶೀಲತೆಯಿಂದುಂಟಾದ ಶಕ್ತಿಯು ಈ ಕಾರ್ಯದಲ್ಲಿ ಸಹಾಯ ಮಾಡುವುದು. ಆಗ ಸಾಧಕನು ಮೇಲೆ ಹೇಳಿದ ವಲಯದಲ್ಲಿ ಪ್ರವೇಶಿಸುವನು. ಅಲ್ಲಿಂದ ಮುಂದೇನಾಗುವುದೆಂಬುದರ ವಿವರಣೆ ಸಾಕಷ್ಟು ಮಾಡಲಾಗಿದೆ. ಪ್ರಿಯತಮನ ಬೈಗಳೂ ಪ್ರೇಮಿಗೆ ಪ್ರಿಯವಾಗಿಯೇ ಕಂಡು ಅದರಿಂದ ಒಂದಂತರದ ಆನಂದವಾಗುವುದು.


ನಮ್ಮ ಸಾಧನ ಪ ದ್ಧತಿಯಲ್ಲಿ ಅಭ್ಯಾಸಿಗೆ ಅನೇಕವೇಳೆ ಈ ಸ್ಥಿತಿ ಬರುವುದು. ಇದರಿಂದ ಆತನಿಗೆ ಆನಂದವುಂಟಾಗಿ ಅದು ರುಚಿಸತೊಡಗುವುದು. ಮೇಲೆ ಹೇಳಲಾದ ವಲಯದಲ್ಲಿ ಆತನು ಪ್ರವೇಶಿಸಲು ಇದರಿಂದ ಸಹಾಯವಾಗುವುದು. ಅಲ್ಲಿ ಆತನಿಗೆ ಒಂದು ತರದ ಮನ : ಶಾ ತಿ ಲಭಿಸುವುದು. ಆಗ, ತನ್ನ ಹಿತವೇ ಬೈಗಳ ಹಾಗು ದುಃಖಗಳ ರೂಪತಾಳಿ ಬಂದಂತೆ ಆತನಿಗೆ ಅನುಭವವಾಗುವುದು. ‘ವರ’ಗಳೆಂದು ಕರೆಯಬಹುದಾದ ಈ ಕಷ್ಟಗಳು ಅದೆಷ್ಟು ಅಮೂಲ್ಯವಾಗಿವೆಯೆಂಬುದನ್ನು ಗಮನಿಸಿ. ಇದರಿಂದ ಸಂತುಷ್ಟನಾದವನು ಧನ್ಯತೆಯ ಭಾವನೆಗಳನ್ನಲ್ಲದೆ ಏನು ತಾನೆ ವ್ಯಕ್ತಮಾಡ- ಬಲ್ಲನು ?