(ಇಂಗ್ಲಿಷ್ ಮೂಲದಿಂದ)
ಈ ಪುಸ್ತಕವು ಪ್ರಜ್ಞಾನದ ಸ್ಥಿತಿಯಲ್ಲಿ ಬರೆಯಲಾಗಿದೆ. ಇದರಲ್ಲಿ ವಿವರಿಸಲಾದ ಸಂಗತಿಗಳು ಕೇವಲ ದಿವ್ಯಾನುಭವ ಅಥವಾ ದಿವ್ಯದೃಷ್ಟಿಯನ್ನವಲಂಬಿವೆ. ಓದುಗರು ಆಯಾ ಸ್ಥಿತಿಗಳನ್ನು ಪ್ರತ್ಯಕ್ಷವಾಗಿ ಹೊಂದಿದಾಗಲೇ ಅವುಗಳ ವಾಸ್ತವಿಕತೆಯನ್ನು ಚೆನ್ನಾಗಿ ಮನಗಾಣುವರು. ಪುಸ್ತಕದಲ್ಲಿ ಉಲ್ಲೇಖಿಸಲಾದಂತೆ,(ನಿಸರ್ಗದಲ್ಲಿ)ಬದಲಾವಣೆಗಾಗಿ ಕೆಲಸ ಮಾಡುತ್ತಿರುವ ವಿಭೂತಿಯು ಉತ್ತರ ಭಾರತದಲ್ಲಿ ಒಂದು ಕಡೆಗೆ ವಾಸಿಸುತ್ತಿದ್ದು ಅದಕ್ಕಾಗಿ ಉತ್ಕಂಟೆಯಿಂದ ಧ್ಯಾನ ಮಾಡುವವರಿಗಾಗಲಿ ಅವರೊಂದಿಗೆ ಯೌಗಿಕ ಸಂಪರ್ಕ ಪಡೆಯುವವರಿಗಾಗಲಿ ಅವನ ಸುಳುವು ದೊರೆಯುವುದು.
ಈ ಪುಸ್ತಕವು ೧೯೪೭ನೆಯ ಇಸ್ವಿಯ ಮಾರ್ಚ ತಿಂಗಳ೩೧ರ ಸಮಯಕ್ಕೆ ಪೂರ್ಣವಾಗಿದ್ದಿತ್ತು.ಆದರೆ ಕಾಗದದ ಕೊರತೆ ಹಾಗೂ ಮುದ್ರಣದ ತೊಂದರೆಗಳಿಂದಾಗಿ ನಾವೆಷ್ಟು ಪ್ರಯತ್ನ ಪಟ್ಟರೂ ಇದು ತೀವ್ರ ಪ್ರಕಾಶಪಗೊಳ್ಳಲಿಲ್ಲ.ಇದಕ್ಕಾಗಿ ನಾವು ಹಾರ್ದಿಕವಾಗಿ ವಾಚಕರ ಕ್ಷಮೆ ಬೇಡುತ್ತೇವೆ. ಪುಸ್ತಕದ ಕೊನೆಗೆ, ಇದರಲ್ಲಿ ಬರುವ ಸಂಸ್ಕೃತ ಶಬ್ದಗಳ ಅರ್ಥವನ್ನು ಅನುಬಂಧದಲ್ಲಿ ಕೊಡಲಾಗಿದೆ.*
– ಪ್ರಕಾಶಕರು
*ಕನ್ನಡ ಅನುವಾದದಲ್ಲಿ ಅನುಬಂಧದ ಅಗತ್ಯವು ಕಂಡುಬರಲಿಲ್ಲ ವಾದುದರಿಂದ ಅದನ್ನು ಬಿಟ್ಟುಕೊಡಲಾಗಿದೆ.