“……… ಆದರೆ, ಈ ಎಲ್ಲ ವಿಷಯಗಳನ್ನು ನನ್ನ ಪ್ರತಿನಿಧಿಗೆ ಅವರು ಯಾರೇ ಆಗಿರಲಿ, ನಾನು ಪ್ರಕಟಗೊಳಿಸಬಹುದು. ನಾನು ಬಹಳಷ್ಟು ಸಂಗತಿಗಳನ್ನು ಬಹಿರಂಗಗೊಳಿಸಬೇಕಾಗುವುದು. ಅವುಗಳಲ್ಲಿ ಕೆಲವು ನನ್ನ ಜೀವಿತ ಕಾಲದಲ್ಲಿ ಬೆಳಕಿಗೆ ಬರುವವು. , ಉಳಿದವುಗಳು ನನ್ನ ನಂತರ ಅರ್ಥಾತ್ ನಾನು ಭೌತಿಕ ರೂಪದ ಜೀವನದಿಂದ ಕಣ್ಮರೆಯಾದ ನಂತರ ಬೆಳಕಿಗೆ ಬರುವವು”
[ರಾಜಯೋಗದ ಪ್ರಭಾವ 1981 ಪುಟ. 31]
ಇಂಗ್ಲೀಷ್ ಬಲ್ಲ ಸಾರ್ವಜನಿಕರೆ, “ಶ್ರೀ ರಾಮಚಂದ್ರರ ಆತ್ಮಕಥೆ”ಯ ಗ್ರಂಥಗಳ ಮೂಲಕ, ನಮ್ಮ ಪೂಜ್ಯಗುರುಗಳು ತಾವಿತ್ತ ವಚನದಂತೆ ಬಹಿರಂಗಪಡಿಸಿದ ಬಹಳಷ್ಟು ವಿಷಯಗಳನ್ನು ತಿಳಿದುಕೊಳ್ಳುವ ಭಾಗ್ಯವನ್ನು ಒದಗಿಸಿದ, ಡಾ. ಎಸ್. ಪಿ. ಶ್ರೀವಾಸ್ತವ ಅಧ್ಯಕ್ಷರು ಶ್ರೀರಾಮಚಂದ್ರ ಮಿಷನ್, ಷಾಹಜಹಾನಪುರ (ಉ. ಪ್ರ. ಭಾರತ) ಇವರಿಗೆ ಧನ್ಯವಾದಗಳು. ನಮ್ಮ ಬಂಧುಗಳು ಅದೇ ಉತ್ಸಾಹದಿಂದ ಸಹಕಾರ ನೀಡಿದರೆ, ಮೂರನೆಯ ಸಂಪುಟವನ್ನೂ ಶೀಘ್ರ ಹೊರತರಬಹುದು. ಆದಷ್ಟು ಬೇಗ ಈ ಸಂಪುಟಗಳನ್ನು ಬೇರೆ ಭಾಷೆಗಳಲ್ಲಿಯೂ ಕೂಡ ಪ್ರಕಟಿಸಲು ನಾವು ಬಯಸುತ್ತೇವೆ. ಯಾವುದೇ ಸಂಕೋಚವಿಲ್ಲದೆ ನಮ್ಮ ಗುರುಗಳ ಎಲ್ಲ ಗ್ರಂಥಗಳನ್ನೂ ನಮಗೆ ಒದಗಿಸಿದುದಕ್ಕಾಗಿ, ನಮ್ಮ ಪ್ರಿಯ ಗುರುಗಳ ಮಕ್ಕಳಿಗೆ ನಾವು ಋಣಿಗಳಾಗಿದ್ದೇವೆ.
ಅವರ ‘ಸಹಜಮಾರ್ಗ’ದ ಆಗಮನದೊಂದಿಗೆ, ಮಾನವ ಕುಲದ ಆಧ್ಯಾತ್ಮಿಕ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ ಅಥವಾ ಹೊಸ ಯುಗವೊಂದು ತೆರೆದುಕೊಂಡಿದೆ. ಈ ಪದ್ಧತಿಯ ಸಂಸ್ಥಾಪಕರು ಪ್ರಾಣಾಹುತಿಯಿಂದ ನೀಡಲಾಗುವ ಆಧ್ಯಾತ್ಮಿಕ ತರಬೇತಿಯ ಅನೇಕ ತಂತ್ರಗಳನ್ನು ಬೆಳಕಿಗೆ ತಂದರು. ಅದರ ಮಹಾ ಸಾಧನೆಗಳ ಹಾಗೂ ಮಾನವನ ಆಧ್ಯಾತ್ಮಿಕ ವಿಕಾಸದಲ್ಲಿ ಪ್ರಕೃತಿಯ ಶಕ್ತಿಗಳನ್ನು ಕಾಯ್ದುಕೊಳ್ಳಲು ಮತ್ತು ಉಪಯೋಗಿಸಲು ಆವಶ್ಯಕವಾದ ಒಂದು ಚಿತ್ರಣವನ್ನು, ಲಕ್ಷ್ಯಪೂರ್ವಕ ಮಾಡುವ ಈ ಆತ್ಮಕಥೆಯ ಅಧ್ಯಯನವು ಓದುಗನಿಗೆ ನೀಡುವುದು. ನಮ್ಮ ಗುರುಗಳು ವಿವರಿಸಿದಂತೆ, ಕೇಂದ್ರಮಂಡಲದ ಎಲ್ಲ ವೃತ್ತಗಳನ್ನು ದಾಟಲು ಹೃದಯದ ಸಂಪೂರ್ಣ ಶುದ್ಧತೆ, ಹಾಗೂ ಅಹಂಕಾರನಿರಸನಗಳು ಅತ್ಯಾವಶ್ಯಕ ಸ್ಥಿತಿಗಳಾಗಿರುವಾಗ, ಕೇಂದ್ರದ ಸುತ್ತಲೂ ಇರುವ ವಿಶಾಲ ಸಾಗರವನ್ನು ಪ್ರವೇಶಿಸಲು ಮತ್ತು ಅದರಲ್ಲಿ ಈಜುವಂತೆ ಮಾಡಲು ಗುರುವಿನ ಪ್ರಾಣಾಹುತಿ ಶಕ್ತಿಯೊಂದೇ ಅಭ್ಯಾಸಿಗೆ ಸಹಾಯಕವಾಗುವುದು.
‘ಸಹಜಮಾರ್ಗ’ವು ಆಗಮಿಸುವ ಪೂರ್ವದಲ್ಲಿ ಅಧ್ಯಾತ್ಮ ವಿಜ್ಞಾನವನ್ನು ಒಂದು ರಹಸ್ಯಮಯ, ಗೂಢ ಅಥವಾ ಗೌಪ್ಯ ಜ್ಞಾನವೆಂದು ಪರಿಗಣಿಸಲಾಗುತ್ತಿತ್ತು. ಜಿಜ್ಞಾಸುಗಳಿಗೆ ಅದನ್ನು ಇಂಗಿತ ಸೂಚನೆಗಳ ಮೂಲಕ, ಸಂಕೇತಗಳ ಮೂಲಕ ಅಥವಾ ಜಟಿಲ ಕರ್ಮಾನುಷ್ಠಾನ ಅಥವಾ ಅಭ್ಯಾಸಗಳ ಮೂಲಕ ನೀಡಲಾಗುತ್ತಿತ್ತು. ಚಿತ್-ತತ್ತ್ವದ (Power of thought) ಕೇಂದ್ರೀಯ ಶಕ್ತಿಯನ್ನು ಸಹಜ ಮಾರ್ಗದಲ್ಲಿ ಕೊಡಲಾದಷ್ಟು ನಿರಾತಂಕವಾಗಿ, ಮುಕ್ತವಾಗಿ, ಉದಾರವಾಗಿ ಕೊಡಲಾಗುತ್ತಿರಲಿಲ್ಲ. ಅಧ್ಯಾತ್ಮ ಮಾರ್ಗದಲ್ಲಿ ಬರುವ ಎಲ್ಲವನ್ನೂ ನಮ್ಮ ಗುರುಗಳ ಆತ್ಮ ಚರಿತ್ರೆಯು ನಿರಾತಂಕವಾಗಿ, ಮುಕ್ತವಾಗಿ ವ್ಯಕ್ತಗೊಳಿಸುತ್ತದೆ. ವಾಸ್ತವವಾಗಿ, ಮೊದಲಿನ ಎಲ್ಲ ಇಂಗಿತ ಸೂಚನೆಗಳ, ಚಿಹ್ನೆಗಳ, ಕರ್ಮಾಚರಣೆಗಳ ಹಾಗೂ ಅಭ್ಯಾಸಗಳ ಸಾರವನ್ನು ಗುರುಗಳು ತಮ್ಮದೇ ವಿಶಿಷ್ಟವಾದ ಸರಳ, ನಿಷ್ಕಪಟ, ನಿಗರ್ವ ಶೈಲಿಯಲ್ಲಿ ಬಹಿರಂಗಗೊಳಿಸಿದ್ದಾರೆ. ಇದನ್ನು ಓದಿದಾಗ ಹೃದಯವು ಆನಂದದಿಂದ ಕುಣಿಯುತ್ತದೆ ಮತ್ತು ಬುದ್ಧಿಯು ಗುರುಗಳ ವಿಚಾರದ ನೇರ ಪ್ರವೇಶಕ್ಕೆ ಯಾವುದೇ ತಡೆಯನ್ನುಂಟುಮಾಡಲು ಧೈರ್ಯ ಸಾಲದೆ ದಿಟ್ಟೂಢವಾಗಿ ನಿಲ್ಲುತ್ತದೆ. ಇಲ್ಲಿ ಸತ್ಯವು ಪ್ರಕಾಶಮಾನವಾಗಿ ರಾರಾಜಿಸುತ್ತದೆ ಹಾಗೂ ತಾರ್ಕಿಕ ವಿವೇಚನಾ ಶಕ್ತಿಯು ಪ್ರಕಾಶಿತವಾಗಲು ಪುನರ್ವ್ಯವಸ್ಥಿತಗೊಳ್ಳಲಾರಂಭಿಸುತ್ತದೆ. ಹೀಗೆ ಪ್ರಕಾಶಿತಗೊಂಡಾಗ, ಬುದ್ದಿಯು ಪ್ರತಿ ಕಣದಲ್ಲಿಯೂ ಗುರುಗಳ ಅಂಕಿತವನ್ನು ಗುರುತಿಸುವ ನೈಜ ವಿಜ್ಞಾನವನ್ನು ಸೂತ್ರೀಕರಿಸಬಲ್ಲುದು ಮತ್ತು ಮಾನವನ ಮುಂದಿನ ವಿಕಾಸಕ್ಕೆ ನೆರವಾಗಲು, ಹೀಗೆ ದೊರಕಿದ ಮಾಹಿತಿಯನ್ನು ಮರು ವಿಂಗಡಣೆ ಕೂಡ ಮಾಡಬಲ್ಲುದು. ಈ ಗ್ರಂಥವನ್ನು ಓದುವವನು ಗುರುಗಳ ಸಾನ್ನಿಧ್ಯದ ಪ್ರತ್ಯಕ್ಷ ಅನುಭವ ಪಡೆಯಬಲ್ಲನು ಮತ್ತು ಹಾಗೆ ಬಯಸಿದರೆ, ತನ್ನನ್ನು ತಾನು ಶೀಘ್ರಗ್ರಾಹಿಯಾಗಿ ಮಾಡಿಕೊಳ್ಳುವ ಮೂಲಕ ಗುರುಗಳ ಸಹಾಯವನ್ನೂ ಪಡೆಯಬಲ್ಲನು.
ಪತಂಜಲಿ ಋಷಿಯು ಹೇಳುವಂತೆ (ಯೋಗ ದರ್ಶನ, ಅಧ್ಯಾಯ 2, ಸೂತ್ರಗಳು 1, 32 ಮತ್ತು 44) ಸ್ವಾಧ್ಯಾಯವು ಅರ್ಥಾತ್ ಜ್ಞಾನಪ್ರಾಪ್ತಿ ಹೊಂದಿದವರ ಗ್ರಂಥಗಳ ಅಧ್ಯಯನವು, ಒಬ್ಬ ಅಭ್ಯಾಸಿಯನ್ನು ಪ್ರೀತಿಪಾತ್ರನಾದ ಜ್ಞಾನಿಯೊಂದಿಗೆ ಐಕ್ಯ ಸಾಧಿಸುವೆಡೆಗೆ ಕರೆದೊಯ್ಯುವುದು, ಸಹಜಮಾರ್ಗದ ಅಭ್ಯಾಸಿಗಳಿಗೆ ಪೂಜ್ಯ ಬಾಬೂಜಿಯವರ ಗ್ರಂಥಗಳ ಹೊರತಾಗಿ ಬೇರಾವ ಗ್ರಂಥಗಳ ಅಧ್ಯಯನವು ನಮ್ಮ ಪ್ರಿಯ ಗುರುಗಳೊಂದಿಗೆ ಆಸಕ್ತಿಯನ್ನು ಪುನಃಪ್ರಜ್ವಾಲಿತಗೊಳಿಸಲಾರದು ಹಾಗೂ ಉದ್ದೀಪಿಸಲಾರದು. ಮತ್ತೆ, ಗುರುಗಳ ಆತ್ಮಕಥೆಯ ಅಧ್ಯಯನವು ಅವರೊಂದಿಗೆ ಐಕ್ಯ ಸಾಧಿಸಲು ನಿಶ್ಚಿತ ಮಾರ್ಗವಾಗಿದೆ. ಗುರುಗಳ ಗ್ರಂಥಗಳನ್ನು ನಿರಂತರವಾಗಿ ಮತ್ತು ವಿಶೇಷತಃ ಅವರ ಆತ್ಮಕಥೆಯ ಈ ಗ್ರಂಥಗಳನ್ನು ಅಧ್ಯಯನ ಪದೇ ಪದೇ ಮಾಡಬೇಕೆಂದು ನಾನು ನಿಮ್ಮೆಲ್ಲರನ್ನೂ ಪ್ರೇರೇಪಿಸುತ್ತೇನೆ.
ಸರ್ವಜ್ಞನೂ ಸರ್ವಶಕ್ತನೂ ಆದ ಪರಮಗುರುವನ್ನೇ ನಾವು ಯಾವಾಗಲೂ ಪ್ರೇಮ-ಶರಣಾಗತಿಗಳಲ್ಲಿ ಲೀನವಾದ ಮನಸ್ಸಿನಿಂದ, ನಮ್ಮನ್ನು ಸಹ ಮರೆತು ಪ್ರಾರ್ಥಿಸಬೇಕು. ಇದೇ ಪ್ರಾರ್ಥನೆ ಮಾಡುವ ಸಲಯಾದ ವಿಧಾನ.
– ಶ್ರೀ ಬಾಬೂಜಿ
ಸತ್ಯೋದಯ 39)
(