ಹಲೋ, ಬಾಂಧವರೆ, ಸಹಜಮಾರ್ಗ ಪದ್ಧತಿಯಲ್ಲಿ ಭಾಷಣಕ್ಕಿಂತ ಮೌನವೇ ಹೆಚ್ಚು ಪರಿಣಾಮಕಾರಿ, ಭಾಷಣ, ಸಂಕೀರ್ತನ, ಪ್ರವಚನ ಇವೆಲ್ಲಾ ಕಥಾಕಾಲಕ್ಷೇಪ. ಹನ್ನೆರಡುವರೆಗೆ ಊಟ ಅಂತ ಹೇಳಿದ್ದಾರೆ. ಅಲ್ಲಿತನಕ ಹೊತ್ತು ಕಳೀಬೇಕು. ಧ್ಯಾನದಾಗ ಕೂಡಲಿಕ್ಕೆ ಆಗೋದಿಲ್ಲ. ಸೈಲೆಂಟಾಗಿ ಕೂಡಂದರೆ ಆಗೋದಿಲ್ಲ. ಸಾಕಪ್ಪೋ ಸಾಕು ಅಂತ. ಅಭ್ಯಾಸಿಲ್ಲ, ಅದಕ ಏನಾದರೂ ಒದರಿಕೋತ ಇರಂತ. ಒಂದಿಷ್ಟು ಹಾಡನ ಹಚ್ಚು, ಒದರಲಿಕ್ಕೆ ಬರಲಿಕ್ಕರ. ಸಪ್ಪಳಾಗ್ತಿದ್ದರೆ ಚೆಂದ ಇರ್ತದ. ಅಷ್ಟು ಸಪ್ಪಳ ಮಾಡಲಿಕ್ಕೆ ನನಗೂ ಬರೋದಿಲ್ಲ (ನಗು), ಬೆಳಿಗ್ಗೆ ಒಂದು ತಾಸೊತ್ತು ಮೌನದಲ್ಲಿ ಕೂಡಿಸಿದೆ. ಭಾಷಣಕ್ಕಿಂತ ಅದೇ ಹೆಚ್ಚು ಪರಿಣಾಮಕಾರಿ, ಭಾಷಣಗಳು ನಡ್ದೆ ನಡೀತಿರ್ತಾವ. ಅಭ್ಯಾಸಿಗಳಿಗೆ ಅದೇನು ಸಬ್ಬಕ್ಷ ತೊಗೊಂಡು ಸೆಮಿನಾರ ಮಾಡಿದರು, ಬಹಳ ಚಂದ ಆಯಿತು. ಚಿಂತನ ಶಕ್ತಿಗೆ ಪ್ರಚೋದನೆ ಸಿಕ್ಕಿತು. ಡಲ್ ಆಗಿ ಕೂಡೋ ಬದಲು …ವಿಚಾರ ಮಾಡೋದು, ಚಿಂತನೆ ಮಾಡೋದು, ಅದು ಚಲೋನೇ ಅದ. ಅದರಲ್ಲಿ ನಿಜವಾಗಿ ಯೋಗದ್ದು ತತ್ವ ಏನಂದರೆ, ಏಕ ತತ್ತ್ವ ಚಿಂತನ. ಏಕತತ್ವ ಚಿಂತನವೇ ಯೋಗ, ಮಿಕ್ಕವೆಲ್ಲಾ ಇರ್ತವೆ. ಆಗಲಿ, ಒಂದೇ ಒಂದು ನೀವು ತಗೊಳ್ರಿ, ಅದರಲ್ಲಿ ಪರ್ಫೆಕ್ಕನ್ ಹೊಂದ್ರಿ, ಅದೇ ಯೋಗ, ಅದೇ ಭಗವಂತ, ಸತ್ಯವಂತರಾಗಿರಿ. ಸಾಕು. ಬಾಕಿ ಇನ್ನೇನೂ ಕಮಾಂಡಮೆಂಟ್ಸ್ ಬೇಡ. ಅದೊಂದೇ ಸಾಕು. ‘ಅದೆಲ್ಲಾ ಗೊತ್ತದರಿ ನಮಗಾ..’ ಮತ್ತಿನ್ನೇನು ಹೇಳಬೇಕು? ಇನ್ನೇನೂ ಹೇಳಬೇಕಾಗಿಲ್ಲ. ಅದು ಗೊತ್ತಿದ್ದರೆ ಪ್ರಾಕ್ಟಿಸ್ ಮಾಡ್ರಿ. ಮಾಡಿ ರಿಯಲೈಜ್ ಮಾಡ್ರಿ. ಅದೇ ಭಗವಂತ, ಹೋದ ಹೋದಲ್ಲಿ ವಿಶ್ವಪ್ರೇಮ ಬೆಳೆಸಿಕೊಳ್ರಿ “ಅದು ಗೊತ್ತದ್ರಿ’. ಮತ್ ಇನ್ನೇನು ಬೇಕು? ಅದು ಗೊತ್ತಿದ್ದರೆ ಅದೇ ಭಗವಂತ, ಅದು ಒಂದೇ ಪಡಕೊಳ್ರಿ
ಸೋ, ಏಕತತ್ವ ಚಿಂತನ. ಇದೆಲ್ಲಾ ಮಾಡಿಕೊಳ್ಳಲಿಕ್ಕೆ ಆಗೋದಿಲ್ಲಾಂತ ನಾವು ಒಬ್ಬ ಗುರುನ ನೋಡ್ತೇವಿ, ಆ ಗುರು ಪಡಕೊಂಡಂತಹ ಗುರು, ನಮ್ಮ ದೈವವಶಾತ್ ಬಾಬೂಜಿ ಮಹಾರಾಜರು ಸಿಕ್ಕರು. ಆತ ಸಿಕ್ಕ ಮೇಲೆ ಮುಗದೇ ಹೋಯ್ತು ನಮ್ಮ ಕೆಲಸ. ಆತನ ನೆನಸೋದರೊಳಗನೇ, ಆತನ ಚಿಂತನ ಮಾಡೂದರೊಳಗನೇ ಆತನ ಸ್ಮರಣೆ. ನಿರಂತರ ಸ್ಮರಣೆ, ಆ ಸ್ಮರಣೆ ಕೂಡಾ ಎಂತಹದ್ದು? ಸ್ಮರಣೆಗೆ ಬಾರದಂತಹ ಸ್ಮರಣೆ. ಆಗೋವರೆಗೆ ಪುರಸತ್ತು. ಮಾಡಿದ್ದೇ ಮಾಡಿದ್ದು, ಎಂಥ ರೂಪ? ರೂಪ ಇಲ್ಲದ್ದು ರೂಪ ಅದು. ಎಂಥ ಜೀವಿತ? ‘ಲಿವಿಂಗ್ ಡೆಡ್’ ಅಂಥ ಜೀವಿತ. ನೀ ಏನು ಥಿಂಕ್ ಮಾಡಿದ್ರನೂ ಅದಕ್ಕೆ ಮೇಲೆ ಹೋಗತಕ್ಕಂತ, ಅನಂತವಾದಂತಹ ಆ ಮಹಾರಾಯ ನಮಗೋಸ್ಕರ ಮಾನವ ರೂಪ ತೊಗೊಂಡು ಬಂದಾನ. ಅದನ್ನು ನಾವು ಸದುಪಯೋಗ ಮಾಡಿಕೊಂಡು ನಮ್ಮ ಜೀವನ ಸಾರ್ಥಕ ಮಾಡಿಕೋಬೇಕಾಗ್ಯದ. ಅದು ಸಹಜಮಾರ್ಗ ರೂಪದಲ್ಲಿ ನಮಗ ಕೊಟ್ಟು ಹೋಗ್ಯಾನ. ಆತ ಶಾಶ್ವತ, ಆತ ನಿರಂತರ, ಆತ ಅಮರ, ಆತ ಎಲ್ಲಾ, ಅಲ್ಟಿಮೇಟ್! ಕೇವಲ ಆತನೊಬ್ಬನೇ ಸತ್ಯ. ಅದು ನಮಗೋಸ್ಕರ ಆ ರೂಪಧಾರಣ ಮಾಡಿಕೊಂಬಂದಾನ. ಆ ರೂಪ ಏನ ನಮಗ ಕಾಣಿಸವಲ್ಲುʼ. ಆತ ಇದ್ದಾಗ ಕೂಡ ನೋಡಿಲ್ಲ ಎಷ್ಟೋ ಜನ. ಬಾಬೂಜಿ ಮಹಾರಾಜರು ಹೇಳತಿದ್ದರು : ‘ಇನ್ ನನ್ನ ನೋಡಲಿಕ್ಕ ಬರ್ತಾರ ಮಂದಿ, ನನ್ ನೋಡಲ್ಲೆ ಹೋಗಿ ಬಿಡ್ತಾರ’, ಸೋ, ಆತನ ನೋಡಲಿಲ್ಲ ನಾವು. ಈಗ ಆತ ಕಾಣಿಸಲಿಲ್ಲ ಅಂದ್ರ ಆತ ಇಲ್ಲೇ ಇಲ್ಲ ಅಂತ ತಿಳ್ಳತೀವಿ. ಇಲ್ಲಿ ಭ್ರಮೆ, ಭ್ರಮೆಯಲ್ಲಿ ಬೀಳ್ತಿವಿ.
ಆತ ಇಲ್ಲಪ್ಪ, ಇನ್ನ ಏನ ಮಾಡೋಕು? ಇನ್ನೊಬ್ಬನ ಹಿಡೀರಿ. ಮಸ್ತ ಮಂದಿ ಬರ್ತಾರ ಇನ್ನೊಬ್ಬರು. ನಾನು ಗುರು ಅದೀನಿ, ನನ್ನ ರೂಪದ ಮೇಲೆ ಧ್ಯಾನ ಮಾಡ್ರಿ, ನಾನು ಭಗವಂತನ ಪಡಕೊಂಡೀನಿ, ನಾನು ಬಾಬೂಜಿಯಲ್ಲಿ ಒಂದಾಗಿಬಿಟ್ಟೀನಿ, ಅಂತ ಹೇಳೋರು ಎಷ್ಟೋ ಜನ ಇದ್ದಾರ. ಛಲೋ ಅದ, ಒಂದಾದರೆ, ತೊಗೊಳ್ರಿ, ಮುಂದಿನ ಸುದ್ದಿ? ಬಾಬೂಜಿನೇ ಉಳಿಸಬೇಕು ನಿಮ್ಮನ್ನ, ಅಷ್ಟೇ. ಬಾಬೂಜಿ ಮಹಾರಾಜರು ಏನು ತನ್ನ ಸಿದ್ಧಾಂತ ಕೊಟ್ಟೋಗ್ಯಾರ, ಆ ಸಿದ್ಧಾಂತದ ಪ್ರಕಾರ ಅದನ್ನು ನಾವು ಅಳವಡಿಸಿಕೊಂಡಿದ್ದೆವು. ಬಾಬೂಜಿನೇ ನಮ್ಮ ಹೃದಯದಲ್ಲಿ ಹಾನ. ‘ನನ್ನ ನೆನೆಸಿದರೆ ಬಾಬೂಜಿನ ನೆನಸಿದ್ದಂಗ ಆಗ್ತದ’ ಅಂತ ಹೇಳೋರು ಬಂದ್ರ, ನೋಡ್ರಿ! ನೆನಸಿ, ಏನಾದರೂ ಗಡಬಡ ಆದ್ರ ಬಿಟ್ಟುಬಿಡ್ರಿ, ಬಾಬೂಜಿನೇ ಸಾಕಪ್ಪ ನಮಗ, ಇವೆಲ್ಲ ಬ್ಯಾಡಂತ. ಇಲ್ಲ, ಆ ಬಾಬೂಜಿ ನಿಮಗ ಸಿಕ್ಕರಂದ್ರೆ ಛಲೋನೇ ಆಯ್ತು. ಮಾನವನ ಜೀವನದ ಉದ್ದೇಶವೇ ಭಗವಂತನ ಪಡಕೊಂಬುದದ. ಅದೇ ಮುಖ್ಯವಾದದ್ದು. ಓ ನಾಥಾ, ನೀನೇ ಮಾನವಜೀವನದ ಗುರಿ, ಆ ಗುರಿ ಇಟ್ಕಳ್ಳಿ, ಅದೇ ಮುಖ್ಯವಾದದ್ದು ಅಂತ ಇದೆ. ಅದಕ್ಕೋಸ್ಕರ ನಿನ್ನ ಅಭ್ಯಾಸ, ನಿನ್ನ ಚಟುವಟಿಕೆ, ನಿನ್ನ ಇದು… ಅಂತಂದ್ರೆ, ನೀ ರಿಯಲಿ ಜೆನ್ಯುಯಿನ್ ಅಭ್ಯಾಸಿ ಇದಿ. ಆ ಗುರಿ ಅಲ್ಲಿ ಇಲ್ಲ. ಅದಕ್ಕೂ ಸ್ವಲ್ಪ ಕಡಿಮಿ, ನಾಕುಮಂದಿ ಜತೇಲಿ ಕಲಿಬೇಕು, ಸ್ವಲ್ಪ ಹೊತ್ತ ಕಳಿಬೇಕು, ಒಂದು ರುಚಿ, ನಗಚಾಟಿ, ಒಂದು ಛಲೋ ಊಟ, ತಿಂಡಿ, ಹಾಡು, ಒಂದಿಷ್ಟು ವಿಷಯಾದಿಗಳನ್ನು ಪಡಕೊಂಡು ಹೋಗೋಣ, ಇದು ಅಭ್ಯಾಸಲ್ಲ, ಆ ಇಚ್ಛೆಯುಳ್ಳವರು ಜೆನ್ಯುಯಿನ್ ಅಭ್ಯಾಸಿಗಳೇ ಅಲ್ಲ. ಜೆನ್ಯುಯಿನ್ ಅಭ್ಯಾಸಿ, ನಮ್ಮ ಜನಾರ್ದನ ಬರದ್ದಂಗ; ‘ಹೀ ಹೂ ಅಸ್ಟಾಯರ್ ಫಾರ್ ದಿ ಹೈಯಸ್ಟ್’ ಬಾಬೂಜಿ ಮಹಾರಾಜರು ಹೇಳೋಗ್ಯಾರ. ಆ ಆಸ್ಪಿರೇಶನ್ ಇಟ್ಕೂ. ಅದು ಬೇಕು ನನಗ, ಅದೇ ಮಾನವ ಜೀವನದ ಗುರಿ. ಅದೇ ನನ್ನ ಜೀವನದ ಗುರಿ. ಅದೇ ಮುಖ್ಯವಾದದ್ದು. ಅದಕ್ಕೋಸ್ಕರವೇ ನನ್ನ ಎಲ್ಲಾ ಅಭ್ಯಾಸ, ಎಲ್ಲಾ ಪ್ರಾಕ್ಟಿಸು, ಎಲ್ಲಾ ಇದು. ಅದು ಇದ್ದಾಗ, ನೀ ಜೆನ್ಯುಯಿನ್ ಅಭ್ಯಾಸಿ ಇದ್ದಿ. ಆ ಅಭ್ಯಾಸ ತೊಗೊಂಡ ಮ್ಯಾಲ್ಕ ನಿನ್ನ ರೆಸ್ಪಾನ್ಸಿಬಿಲಿಟಿ ಏನಂತ ಅದನ್ನೇ ಮೆಂಟೇನ್ ಮಾಡಿಕೊಂಡಿರೋದು. ಅದು ರೆಸ್ಪಾನ್ಸಿಬಿಲಿಟಿ, ಬಾಬೂಜಿ ಮಹಾರಾಜರು ಕೊಟ್ಟೋಗ್ಯಾರ, ಅದನ್ನ ಮೆಂಟೇನ್ ಮಾಡಿಕೊಂಬೋದು ನಿನ್ ರೆಸ್ಪಾನ್ಸಿಬಿಲಿಟಿ. ಯಾಕ? ಆತನ ತತ್ವದ ಮೇಲೆ ನಡ್ಕೊತೀನಂತ ಕ್ಷೇಮ್ ಮಾಡ್ತಿದ್ವಿ. ಅಂದಮ್ಯಾಲ ಮತ್ತೆ ಅದನ್ನ ಮೆಂಟೇನ್ ಮಾಡಿಕೊಂಡೋಗೋದು ನಿನ್ ರೆಸ್ಪಾನ್ಸಿಬಿಲಿಟಿ ಆಗ್ತದ. ಆತ ನಮಗ ಒಂದು ವಿಷಯ ಕೊಟ್ಟೋಗ್ಯಾನ. ಇದು ಸುಲಭವಾದದ್ದು. ಜೆಸ್ಟ್ ಚಿಂತನ ಶಕ್ತಿನೇ ಉಪಯೋಗ ಮಾಡೋದು. ಏಕತತ್ವ ಚಿಂತನ ಮಾಡೋದು ಅಷ್ಟೇ. ಪ್ರಾಣಾಹುತಿಯಿಂದ ನಿಮ್ಮ ಎಲ್ಲಾ ಸಮಸ್ಯೆ ಪರಿಹಾರಾಗಿ, ನಿಮಗೇನಪಾಂದರೆ, ಸಾಕ್ಷಾತ್ಕಾರಕ್ಕೆ ಹಾದಿ ಓಪನ್ ಆಗಿಬಿಡ್ತದ. ಅಂತಂದ ಹೇಳೋಗ್ಯಾನ. ಅದನ್ನು ಮೆಂಟೇನ್ ಮಾಡಿಕೊಂಬುದು, ಅದನ್ನು ಕೆಡಸಲ್ದಂಗ ಕಾಯಕೊಂಡು ಹೋಗೋದು ನಮ್ಮ ಕರ್ತವ್ಯ. ಬಾಕಿ ಎಷ್ಟೋ ಜವಾಬ್ದಾರಿಗಳಿವೆ, ಅದಕ ನಾವು ಕಲಿಸಬೇಕಾಗಿಲ್ಲ. ಅದು ನಿಮಗೆಲ್ಲಾ ಗೊತ್ತದ. ಒಂದು ಸಮಾಜದಲ್ಲಿರ್ತಿವಿ, ಒಂದು ದೇಶದಲ್ಲಿರ್ತಿವಿ, ಒಂದು ಜಾತಿಯಲ್ಲಿರ್ತಿವಿ, ಫ್ಯಾಮಿಲಿಯಲ್ಲಿರ್ತಿವಿ, ಪ್ರತಿಯೊಂದರಲ್ಲಿ ನಮ್ಮ ನಮ್ಮ ಜವಾಬ್ದಾರಿಗಳು ಇದ್ದೇ ಇರ್ತಾವ. ಅದಕೇನ್ ನಾವು ಪಾಠ ಈ ಸಹಜಮಾರ್ಗದಾಗ, ಈ ಸ್ಕೂಲದಾಗ ಹೇಳಬೇಕಾಗಿಲ್ಲ. ಅದು ಕಲಿಸಬೇಕಾಗಿಲ್ಲ. ನಿಮಗೆಲ್ಲಾ ಗೊತ್ತದಂತನೇ ಲೆಕ್ಕ. ಬಾಬೂಜಿ ಮಹಾರಾಜರು ನಮಗೇನು ಕೊಟ್ಟ ಹೋಗ್ಯಾರ, ಅದರ ಪ್ರತಿ, ಬಾಬೂಜಿ ಪ್ರತಿ, ನಮ್ಮದೇನ್ ಜವಾಬ್ದಾರಿ ಅದ ಅನತಕ್ಕಂತದ್ದೆ ವಿಷಯ. ಅದನ್ನ ಮೆಂಟೇನ್ ಮಾಡಿಕೊಂಡೋಗೋದು, ಅದಕ್ಕೆ ಕೆಡಸಲ್ದಂಗ ಆತನ ತತ್ವದ ಚಿಂತನಲಿಂದ ಆತನ ಪಡಕೊಂಬೋದು, ಅದು ನಮ್ದು ಮೇನ್ ರೆಸ್ಪಾನ್ಸಿಬಿಲಿಟಿ.
ಸೋ, ಅದೆಲ್ಲಾ ಮಸ್ತ ಡಿಸ್ಕಶನ್ ಆಗ್ಯದ. ಎಷ್ಟೋ ಅಭ್ಯಾಸಿಗಳು ಅದೆಲ್ಲಾ ವ್ಯೂಸ್ ಎಕ್ಸಪ್ರೆಸ್ ಮಾಡ್ಯಾರ. ಸಂತೋಷಾಗ್ತದ, ಛಲೋ ಅದ. ಎಲ್ಲಾ ಅಭ್ಯಾಸಿಗಳು ಜೆನ್ಯುಯಿನ್ ಹಾರ (ಇದ್ದಾರ), ಇನ್ ಯಾರೋ ಒಬ್ಬರು ಹೇಳ್ದಂಗ, ಡಿಗ್ರಿ ಇರ್ತದ. ಸೆಂಟ್ ಪರಸೆಂಟ್ ಆಗಲಿ, 90% ಆಗಲಿ. ಆಗಲಿ, 5% ಇದ್ದರೂ ಸಾಕು. ಮುಂದ ಬೆಳಕೋತ ಹೋಗ್ತದ. ಸೋ, ಅದರ ಮೇಲೆಲ್ಲಾ ಚಿಂತೆ ಮಾಡಬೇಕಾಗಿಲ್ಲ. ಒಂದು ನೀವು ಗೋಲ್ ಫಿಕ್ಸ್ ಮಾಡಿಕೊಂಡ್ರಿ, ಬಾಬೂಜಿ ಕೊಟ್ಟಿದ್ದು ಸಹಜಮಾರ್ಗಾನುಸಾರ, ನಾವು ಹೈಯಸ್ಟ್ ಗೋಲ್ ಈ ಲೈಫಲ್ಲಿ, ಈ ಜೀವಿತದಲ್ಲಿ ಪಡಕೊಂಡೇ ತೀರಿವಿ. ಇದೇ ನಮ್ಮ ಜೀವಿತದ್ದು ಲಕ್ಷ, ಇದೇ ನಮ್ಮ ಜೀವಿತದ್ದು ಗುರಿ. ಬಾಕಿ ಎಲ್ಲಾ ಅಪೇಕ್ಷೆಗಳು ನಮ್ಮ ಆತ್ಮೋನತಿಯಲ್ಲಿ ಬಾಧಕಗಳಾಗಿವೆ. ಆತನಿಗೆ ಪ್ರಾರ್ಥನೆ ಮಾಡ್ತಾ, ನೀನೇ ನಮಗೆ ಸಹಾಯಮಾಡು. ನಿನ್ನ ಸಹಾಯವಿಲ್ಲದೆ, ನಿನ್ನನ್ನು ಹೊಂದುವುದು ಅಸಂಭವ ಅಂತ ಕಳಕಳಿಯಿಂದ ಆತನ್ನ ಬೇಡೋದು. ಇದು ನಿನ್ನ ಜೆನ್ಯುಯಿನ್ ಅಭ್ಯಾಸ. ಇದೇ ನಿನ್ನ ರೆಸ್ಪಾನ್ಸಿಬಿಲಿಟಿ. ಎರಡೂ ಒಂದೇ ಆಗಿ ಕೂಡ್ತದ ಕೊನೆಗೆ
ಜೆನ್ಯುನ್ ಮತ್ತು ರೆಸ್ಪಾನ್ಸಿಬಿಲಿಟಿ ಎರಡೂ ಡಿಫರೆಂಟ್ ಅಲ್ಲ. ಜೆನ್ಯುನ್ದ ಮೂಲ ರೆಸ್ಪಾನ್ಸಿಬಿಲಿಟಿದ ಮೂಲ ಅದೇ ಆಗಿದೆ. ಅದಕ ಮೊದಲು ಏಕತತ್ವ ಚಿಂತನ ಅಂತ ಏನ್ ಹೇಳಿದೆ, ಸತ್ಯವಂತರಾಗಿರಿ ಸತ್ಯದ ಮೂಲನೂ ಅದೇ. ವಿಶ್ವಪ್ರೇಮ ಬೆಳೆಸಿಕೊಳ್ಳಿರಿ – ಪ್ರೇಮದ ಮೂಲನೂ ಅದೇ. ಯಾವ ಹಾದಿಯಿಂದ ಹೋದ್ರನೂ ಮತ್ತೆ ಅಲ್ಲೇ ಬರಬೇಕಾಗ್ತದ. ಎಲ್ಲಾದರ ಮೂಲ, ಅಲ್ಟಿಮೇಟ್, ಆತನೇ ಇದ್ದಾನ. ಆತನೇ ನಿಮ್ಮ ಹೃದಯದಲ್ಲಿದ್ದಾನೆ. ಅದನ್ನೇ ಪಡಕೋಬೇಕಾಗ್ಯದ, ಆಗಲಿ, ಎಷ್ಟೋ ಮೆಥೆಡ್ಸ ಅದಾವ, ಎಷ್ಟೋ ಟೆಕ್ನಿಕ್ಸ್ ಅದಾವ. ಸಹಜಮಾರ್ಗದಲ್ಲಿ ಬಲು ಸುಲಭ ಅದ. ನಿಮ್ಮ ಹೃದಯದಲ್ಲೇ ಅದಪ್ಪ. ಆ ಪ್ರಕಾಶದ ಮ್ಯಾಲೆ ಧ್ಯಾನ ಮಾಡಿ. ಆತನ ಸರ್ವವ್ಯಾಪಿತ್ವದ ಮೇಲೆ ಯಾವಾಗಲೂ ನಿರಂತರ ಸ್ಮರಣೆ ಮಾಡಿ ಡಿಜೆಕ್ಕನ್ ತಂದಕೊಂಡು, ಆತ ಸತ್ತೋಗ್ಯಾನ ಏನ ಮಾಡ್ಲಿ ಅಂತ ಗೋಳಾಡಿಕೋತ ಕೂಡಬ್ಯಾಡ್ರಿ. ಆತ ಸತ್ತಿಲ್ಲ. ಆತ ನಮಗೋಸ್ಕರ ಒಂದು ರೂಪ ತಗಂಡು ಬಂದು ತೋರಿಸಿದ, ಅಷ್ಟೆ. ಆತ ಯಾವಾಗಲೂ ಇದ್ದಾನೆ. ಷಹಜಹಾನಪುರದಾಗ ಇರ್ತಿದ್ದ, ಅಮೇರಿಕದಾಗ ಇರ್ತಿದ್ದ, ಅಲ್ಲಿರ್ತಿದ್ದ, ಇಲ್ಲಿರ್ತಿದ್ದ, ಇಲ್ಲಿ ಇಲ್ಲಂತ ನಾವೆಂದೂ ಗೋಳ್ಯಾಡಲಿಲ್ಲ. ಈ ಪ್ರಪಂಚದಾಗಿಲ್ಲಂತ ಗೋಳ್ಯಾಡಬೇಕಾಗಿಲ್ಲ. ಎಲ್ಲಾ ಕಡೆ ಇದ್ದಾನೆ ಆತ. ನಿಮ್ಮ ಹೃದಯದಲ್ಲಿ ಏನಾಗ್ತಾ ಇದೆ, ಆತ ಅಲ್ಲೇ ಕೂತು ನೋಡ್ತಾ ಇದ್ದಾನೆ. ಆತಗ ಎಲ್ಲಾ ಗೊತ್ತಾಗುತ್ತೆ. ಮತ್ತು ತಮ್ಮ ಯೋಗ್ಯತಾನುಸಾರ. ನಿಮ್ಮ ಯೋಗಕ್ಷೇಮ ಆತ ನೋಡ್ಕೊತಾನ. ಆ ವಿಶ್ವಾಸ, ಆ ಭಕ್ತಿ, ಆ ಪ್ರೇಮದಿಂದ ನೀವು ಮುಂದ ನಡೆದರೆ ಆತನ ಪ್ರಾಪ್ತಿ ಸುಲಭ ಆಗಿಹೋಗ್ತದೆ. ಅದಕ್ಕೋಸ್ಕರ ಇಂತಹ ಸೆಮಿನಾರ್ಗಳು, ಎಷ್ಟೋ ನಮ್ಮ ಚಿಂತನ, ನಮ್ಮ ವಿಚಾರಶಕ್ತಿ ಬೆಳವಣಿಗೆಗೆ ಅನುಕೂಲಾಗ್ತವ. ಮತ್ತು ನಮ್ಮ ಸಹಪಥಿಕರು ಥಿಂಕ್ ಮಾಡ್ತಾ ಮಾಡ್ತಾ ಒಬ್ಬರಿಗೊಬ್ಬರು ತಮ್ಮ ಹೃದಯ ಕ್ಲೀನ್ ಮಾಡಿಕೊಂಡು ಒಬ್ಬರಿಗೊಬ್ಬರು ವಿಚಾರ ವಿನಿಮಯ ಮಾಡಿಕೊಂಡ್ರೆ ಎಷ್ಟೋ ಭ್ರಾತೃತ್ವ ಬೆಳಕೋತ ಹೋಗ್ತದ. ಎಷ್ಟೋ ಲಾಭಗಳಾಗ್ತಾವ ಇದರಿಂದ, ಸೋ, ಡಾ. ಶ್ಯಾಮರಾವ್ ಛಲೋ ಮಾಡಿದರು. ಗುಲ್ಬರ್ಗದಾಗೊಂದ ಇಲ್ಲೊಂದ ಸೆಮಿನಾರ್ ಮಾಡಿ, ಛಲೋ ಅದ ಇದು. ಇದು ಪ್ರಿಂಟ್ ಮಾಡ್ತೀರೋ ಇಲ್ಲೊ ? ಮಾಡಿ ಎಲ್ಲಾ ಪಾರ್ಟಿಸಿಪೆಂಟ್ಸ್ಗೆ ಕೊಡ್ರಿ. ಮತ್ತೆ ಬೇರೆ ಇಂಟರೆಸ್ಟೆಡ್ ಪರ್ಸನ್ಸ್ಗೆ ಕೊಡ್ರಿ ಛಲೋ ಅದ. ವೆರಿಗುಡ್. ಇನ್ನೂ ಪ್ರವಚನ ಹೇಳ್ಲಾ?
ಮತ್ತೆ ಸಾಯಂಕಾಲ 4 ಘಂಟೆಗೆ ಕಲ್ತೇ ಕಲಿತೀವಿ ಧ್ಯಾನಕ್ಕ ನಾ ಏನು ಹೇಳೋದು ಧ್ಯಾನದಲ್ಲೇ ಹೇಳೀನಿ. ಬಾಬೂಜಿ ಮಹಾರಾಜರು ಧ್ಯಾನದಲ್ಲೇ ನಿಮಗೆ ಟ್ರಾನ್ಸಮಿಟ್ ಮಾಡ್ತಾರೆ ಅಥವಾ ಕಮ್ಯುನಿಕೇಟ್ ಮಾಡ್ತಾರೆ. ಏನಾದರೂ ಮಾಡ್ತಾರೆ ಅವರು ಧ್ಯಾನದಲ್ಲಿ. ಅದೇ ಮುಖ್ಯ. ಬಾಕಿ ಎಲ್ಲಾ ಸಪ್ಪಳ, ಸಪ್ಪಳಷ್ಟೇ. ಸೋ, ಒಂದ ಹತ್ತ ಮಿನಿಟ ಬಿಡೋದು ಯೋಗ್ಯನಸ್ತದ. ಹನ್ನೆರಡುವರೆಗೆ ಊಟ. ಬಾಬೂಜಿ ನಿಮಗೆಲ್ಲರಿಗೆ ಸದ್ಭುದ್ಧಿ ಕೊಟ್ಟು ಭ್ರಾತೃತ್ವ, ವಿಶ್ವಪ್ರೇಮ ಬೆಳಸಲಿ ಅಂತ ಪ್ರಾರ್ಥಿಸಿ ಈ ಹೊತ್ತಿನ ಸೆಶನ್ ಮುಕ್ತಾಯ ಮಾಡ್ತೀನಿ.