21 ಆಧ್ಯಾತ್ಮಿಕಯಾತ್ರೆ
(ಡಿಸೆಂಬರ ೮, ೧೯೭೧ ಶಹಜಹಾನಪುರದಲ್ಲಿ ರೆಕಾರ್ಡ್ಮಾಡಿದ್ದು.) “ಮಹಾತ್ಮರು ಜನ್ಮವೆತ್ತಿ ಬರುವುದು ಆಕಸ್ಮಿಕವಾಗಿ ಅಲ್ಲ. ಅವರು ಜನ್ಮ ತಾಳುವುದು, ಜಗತ್ತು ಕಾತರದಿಂದ ನಿರೀಕ್ಷಿಸಿ ಕಾಯುತ್ತಿದ್ದಾಗ” – ಹೀಗೆಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಸಂತರು ಆಗಮಿಸುತ್ತಾರೆ, ಮತ್ತು ತಮ್ಮ ಕಾರ್ಯವನ್ನು ಪೂರೈಸಿ ಹಿಂದಿರುಗುತ್ತಾರೆ, – ಹೀಗಿದೆ ಪ್ರಕೃತಿಯ ವ್ಯವಸ್ಥೆ. ಎಂದಿಗೂ...