ಜ್ಞಾನ ಪ್ರಕರಣ
ಜ್ಞಾನ ಪ್ರಕರಣ ಸೃಷ್ಟಿ ನಿರ್ಮಾಣದ ಸಮಯ ಬಂದಾಗ ಸಿದ್ಧತೆಗಳಾಗತೊಡಗಿದವು. ಧಾರೆಗಳು ಪ್ರವಹಿಸಿದುವು. ಕಂಪನ ಹುಟ್ಟಿತು; ತೊಡಕುಗಳು ಬೀಳತೊಡಗಿದುವು. ವೇಗವು ಹುಟ್ಟಿಕೊಂಡಿತು. ಮಂಥನ ಕಾರ್ಯವು ಆರಂಭವಾಯಿತು, ಕ್ರಿಯೆ ಪ್ರತಿಕ್ರಿಯೆಗಳಾಗತೊಡಗಿದವು. ಈ ಕ್ರಮವು ಬಹುದಿನಗಳವರೆಗೆ ನಡೆಯಲು, ವಸ್ತುಗಳು ವ್ಯಕ್ತವಾಗಲಾರಂಭಿಸಿದುವು. ಸೃಷ್ಟಿಯು ರಚನೆಯಾಗತೊಡಗಿತು. ಜಡ-ಚೇತನ ಸಮುದಾಯವು ಉತ್ಪನ್ನವಾಗ ತೊಡಗಿತು. ಮೆಲ್ಲ ಮೆಲ್ಲನೆ...