ಹತ್ತನೆಯ ಗ್ರಂಥಿ
ಈಗ ನಾವು ಹತ್ತನೆಯ ಗ್ರಂಥಿಗೆ ಬಂದೆವು. ಒಂಬತ್ತನೆಯ ಗ್ರಂಥಿಯ ದಶೆಯು ಬದಲಾಗಿ ಅದರ ದಾರಿ ಬೇರೆ ಕಡೆಗೆ ತಿರುಗಿತು. ಸೇವೆಯು ಎಷ್ಟು ಮಟ್ಟಿಗೆ ಮೈಗೂಡಿತೆಂದರೆ ಒಡೆಯನ ಮನೆಯನ್ನು ನಮ್ಮ ಮನೆಯೆಂದು ತಿಳಿಯತೊಡಗಿದೆವು. ಅರ್ಥಾತ್, ನಮ್ಮಲ್ಲಿ ಸ್ವಾಮಿತ್ವದ ಗಂಧವು ಸ್ವಲ್ಪಮಟ್ಟಿಗೆ ಬರತೊಡಗಿತೆಂದು ಹೇಳಲಡ್ಡಿಯಿಲ್ಲ. ಆದರೆ ಇದು ಕೃತ್ರಿಮವೇನಲ್ಲ. ಈ...