31 ‘ಮುಕ್ತಿ’ಯಿಂದ ವಿಮುಕ್ತಿ ‘

(ಪೂಜ್ಯ ಬಾಬೂಜಿ ಮಹಾರಾಜರ ೮೦ ನೇ ವರ್ಧಂತ್ಯುತ್ಸವ,  ಅಹಮದಾಬಾದ್, ೩೦-೪-೧೯೭೯) ಎಲ್ಲ ಕಾಲ ಮತ್ತು ದೇಶಗಳಿಗೆ ಸೇರಿದ, ಭಗವಂತನ ಪ್ರಜೆಗಳ ಹಿತಕ್ಕೋಸ್ಕರ, ಸರ್ವಸಮರ್ಥರಾದ ಸದ್ಗುರುಗಳ ಮಾರ್ಗದಲ್ಲಿ ನಾವು ಗೈಯುತ್ತಿರುವ ಕಾರ್ಯಗಳನ್ನು ಸಮೀಕ್ಷಿಸಲೋಸುಗ ನಾವಿಲ್ಲಿ ಮತ್ತೆ ಸೇರಿದ್ದೇವೆ. ಜಗತ್ತಿನ ನನ್ನೆಲ್ಲ ಸೋದರ ಸೋದರಿಯರು ‘ಲಯಾವಸ್ಥೆ’ಯ ರುಚಿರಹಿತ ಸ್ವಾದವನ್ನು ಸವಿಯಲಿ...

32 ಆಧ್ಯಾತ್ಮಿಕ ಪುನರುಜ್ಜಿವನ

(ಪೂಜ್ಯ ಬಾಬೂಜಿಯವರ ೮೧ ನೇ ಹುಟ್ಟುಹಬ್ಬದ ಸಮಾರಂಭದಲ್ಲಿ, ದೆಹಲಿಯಲ್ಲಿ ನೀಡಿದ ಸಂದೇಶ, ೩೦-೪-೧೯೮೦) ಭಾರತದಲ್ಲಿ, ‘ಯೋಗ’ವೆಂಬುದು ಪ್ರಾಚೀನವಾದುದು. ಆದರೆ ಅದರ ಬೆಳವಣಿಗೆಯು ಕೆಲಕಾಲ ಸ್ಥಗಿತಗೊಂಡಿತು. ಅದಕ್ಕೆ ಕಾರಣವೆಂದರೆ, ಅವರು “ಅಸ್ಥಿಯಿಂದ ರಂಜಕವನ್ನು ಹೊರತೆಗೆಯುವ” (ಅರ್ಥಾತ್ ಅಂತರಂಗದಲ್ಲಿ ಅಂತರ್ಯಾಮಿಯ ಹೊಳಹನ್ನು ಕಂಡುಕೊಳ್ಳುವ) ಕಲೆಯನ್ನು ಮರೆತರು. ಈಗ ಅಂತರ್ಯದಲ್ಲಿ ಭಾರತದೇಶವು...

33 “ಅವನನ್ನು” ಪ್ರೀತಿಸಿರಿ

(೮ ನೇ ಮಾರ್ಚ ೧೯೮೧, ದಕ್ಷಿಣ ಆಫ್ರಿಕಾ ಪ್ರವಾಸದ ಕೊನೆಯಲ್ಲಿ ನೀಡಿದ – ಸಂದೇಶ) ನನ್ನೆಲ್ಲಾ ಸಹವರ್ತಿಗಳನ್ನು ನಾನು ಅಭಿನಂದಿಸುತ್ತೇನೆ. ‘ಅಜ್ಞಾತ’ನ ಕಡೆಗೆ ಮುನ್ನಡೆಯಿರಿ. ಎಲ್ಲರನ್ನೂ ಪ್ರೀತಿಸುವವನನ್ನೇ ಪ್ರೀತಿಸಿರಿ. ಗುರಿಯು ದೂರವೇನಿಲ್ಲ. ಸ್ಮರಣೆಯೇ ಅದನ್ನು ಸಾಧಿಸಲು ಇರುವ ಉಪಕರಣ. ನಿಮ್ಮೆಲ್ಲರಿಗೂ ಶುಭವಾಗಲಿ. * ***

34 ಉಷಃಕಾಲ

(೩೦ ನೇ ಏಪ್ರಿಲ್ ೧೯೮೧, ಪೂಜ್ಯ ಬಾಬೂಜಿಯವರ ೮೨ ನೇ ಹುಟ್ಟುಹಬ್ಬದ  ಸಮಾರಂಭದಲ್ಲಿ, ಮಲೇಶಿಯಾದಲ್ಲಿ ನೀಡಿದ ಸಂದೇಶ) ಪ್ರಿಯ ಸೋದರ ಸೋದರಿಯರೆ, ಸಾಮಾನ್ಯವಾಗಿ ಮಾನವನು ತನಗರಿವಿಲ್ಲದಂತೆಯೇ, ತಾನೇ ನಿರ್ಮಿಸಿಕೊಂಡಿರುವ ಪರಿಸರದ ಮೋಡಿಗೆ ಎಷ್ಟು ಒಳಗಾಗಿದ್ದಾನೆಂದರೆ, ಅವನು ಅದರೊಳಗಿಂದ ಮೇಲೆದ್ದು ಬರುವ ವಿಚಾರವನ್ನೇ ಮಾಡುವುದಿಲ್ಲ. ಆದರೆ ಅದು ಸಾಧ್ಯವಾಗುವಂತೆ...

35 ಪರಿಶುದ್ದತೆಯೊಂದೇ

(೩೦-೧-೧೯೮೨ ರಂದು, ಬಸಂತ ಉತ್ಸವ ಸಂದರ್ಭದಲ್ಲಿ ನೀಡಿದ ಸಂದೇಶ) ನಾವೆಲ್ಲರೂ ಮಾನವ ಜೀವನದ ಮುಖ್ಯ ಗುರಿಯೊಂದಿಗೆ, ಬೌದ್ಧಿಕವಾಗಿ, ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಂಬಂಧ ಹೊಂದಿದ ಸೋದರರು. ಅದು, – ಇದು, – ಎಂಬುದೆಲ್ಲ ಈಗ ಅಳಿದುಹೋಗಿದೆ (ಭೇದಭಾವವೆಲ್ಲ ಅಳಿದು ಬಿಟ್ಟಿದೆ.) ಆ  ಸರ್ವೇಶ್ವರನ ಎಲ್ಲಾ ಕಾರ್ಯ ಮತ್ತು...

36 ಸರಣೆಯೇ ಸೂತ್ರ

(ಪೂಜ್ಯ ಬಾಬೂಜಿಯವರ ೮೩ ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ೩೦-೪-೧೯೮೨ ರಂದು ನೀಡಿದ ಸಂದೇಶ) ಪ್ರಿಯ ಸೋದರ ಸೋದಯರೆ, ದೇಹಧಾರಿಗಳಾದ ಜೀವಿಗಳೆಲ್ಲರಿಗೂ ಸುತ್ತಲೆಲ್ಲ ಸಂಕಟಗಳೇ ತುಂಬಿವೆ. ಹೀಗಿದ್ದರೂ, ನಮ್ಮಲ್ಲಿ ಶರೀರ ವ್ಯಾಮೋಹ ಅಂಟಿಕೊಂಡೇ ಇರುತ್ತದೆ ; ಇದು ನಮ್ಮನ್ನು ಕೊನೆಯವರೆಗೂ ಬಿಡುವುದಿಲ್ಲ. ಅಷ್ಟೇ ಅಲ್ಲ, ನಾವು ಪುನರ್ಜನ್ಮ ಪಡೆಯಲೂ...

37 ಪ್ಯಾರಿಸ್ ಘೋಷಣೆ

(ಪ್ಯಾರಿಸ್‌ನಲ್ಲಿ, ಅಗಸ್ಟ್ ೧೯೮೨ ರಲ್ಲಿ ನೀಡಿದ ಸಂದೇಶ) ನಾವೆಲ್ಲರೂ ಒಂದೇ. ಸಹಜಮಾರ್ಗದ ಉದ್ದೇಶವೇ ಏಕತೆ. ಈ ಪದ್ಧತಿಯ ಸಾಧಕ ಬಾಧಕಗಳನ್ನು ಪರಿಶೀಲಿಸಿದರೆ, ಅನುಶಾಸನದ (ಶಿಸ್ತಿನ) ನಿಜವಾದ ಪರಿಜ್ಞಾನದ ಆವಶ್ಯಕತೆ ಎಷ್ಟಿದೆ ಎಂಬುದು ಗೊತ್ತಾದೀತು. ಇಲ್ಲಿ ಎಲ್ಲವೂ ಸುಸ್ಪಷ್ಟ. ಆದರೂ ಏನೋ ಒಂದು ದೋಷವಿದೆ ಅದನ್ನು ಸುಲಭವಾಗಿ ನಿವಾರಿಸಬಹುದು....