ನನ್ನ ಗುರುದೇವ
(ಇಂಗ್ಲಿಷ್ ಮೂಲದಿಂದ) ‘ಮಹಾಪುರುಷರು ಅಕಸ್ಮಾತ್ತಾಗಿ ಹುಟ್ಟುವುದಿಲ್ಲ’ ಕಾಲದ ಅತ್ಯಾವಶ್ಯಕತೆಗನುಸಾರವಾಗಿ ಉದಯಿಸಿ ತಮ್ಮ ಕಾರ್ಯವನ್ನು ಪೂರೈಸಿ ಹೋಗುವರು. ಹೀಗಿದೆ ನಿಸರ್ಗದ ನಿಯಮ.ಎಂದಿನಿಂದಲೂ ಅಧ್ಯಾತ್ಮದ ನೆಲೆವೀಡಾದ ಭಾರತವು ತನ್ನ ಪುರಾತನ ಯೋಗ ಪದ್ದತಿಯ ಪರಂಪರೆಯನ್ನು ಸಂಪೂರ್ಣ ಮರೆತು ಕತ್ತಲೆಯಲ್ಲಿ ತೊಳಲಾಡುತ್ತಿದ್ದಿತು. ಸೂಕ್ಷ್ಮವಾದ ಅಧ್ಯಾತ್ಮಕತೆಯ ಬದಲು ಜಡವಾದ ಭೌತಿಕತೆಯು ನೆಲೆಸಿದ್ದಿತು.ಅಜ್ಞಾನದ...