ಅಧ್ಯಾಯ-೧
ಪ್ರವೇಶಿಕೆ ದರ್ಶನದ ಪರಿಕಲ್ಪನೆ ‘ದರ್ಶನ’ ಅಥವಾ ತತ್ವಸಾಕ್ಷಾತ್ಕಾರವು ತರ್ಕವನ್ನಾಶ್ರಯಿಸಿದ ವಿಷಯವಲ್ಲ. ಅದು ಆಶ್ರಯಿಸಿರುವುದು ಅಂತರ್ದೃಷ್ಟಿ (ಅಂತರ್ಬೋಧೆ)ಯನ್ನು. ಬಹುತೇಕ ತತ್ವಜ್ಞಾನಿಗಳು ನಂಬುವಂತೆ ಅದು ಸಂಶಯದಿಂದ ಪ್ರಾರಂಭವಾಗುವುದಿಲ್ಲ ಬದಲಿಗೆ, ಅದು ಪ್ರಾರಂಭವಾಗುವುದು ‘ಆಶ್ಚರ್ಯ’ದಿಂದ. ಸಾಮಾನ್ಯವಾಗಿ ತತ್ವಜ್ಞಾನಿಗಳು ಪ್ರತ್ಯಕ್ಷ ಅನುಷ್ಠಾನದ ಜೀವನವನ್ನು ಅಂಗೀಕರಿಸಿ ಅನುಸರಿಸು ವದಕ್ಕೆ ಮುಂಚೆಯೇ ವಿಷಯಗಳ ವಿಶದೀಕರಣದ ಪಯತ್ನ...