ಪೀಠಿಕೆ
ಸನ್ಮಾನ ಸಹೋದರ ರಾಘವೇಂದ್ರ ರಾವ್ ಅವರಿಗೆ ಪೂಜ್ಯ ಗುರುಗಳ ಪ್ರಥಮ ದರ್ಶನವು ೨೨ ಅಕ್ಟೋಬರ ೧೯೫೫ ರಂದು ಷಹಜಹಾನಪುರದ ಗುರುಗಳ ಮನೆಯಲ್ಲಿ ಆಯಿತು. ಇವರು ಪ್ರಥಮ ಭೆಟ್ಟಿಯಲ್ಲಿಯೇ ಗುರುಗಳ ಹಾಗೂ ಅವರ ಸಂಸ್ಥೆಯ ಸಾರತತ್ವವನ್ನೇ ಅರಗಿಸಿಕೊಂಡ ಒಬ್ಬ ಅಭ್ಯಾಸಿಗಳಾಗಿದ್ದಾರೆ. ಬೇರೆ ಶಬ್ದಗಳಲ್ಲಿ ಹೇಳುವದಾದರೆ, ಪ್ರಥಮ ಭೆಟ್ಟಿಯಲ್ಲಿಯೇ ಪೂಜ್ಯ...