ನಿಯಮ – ೫

ಸತ್ಯವಂತರಾಗಿರಿ. ಕಷ್ಟಗಳು ನಿಮ್ಮ ಹಿತಕ್ಕಾಗಿಯೆ ಬಂದ ದೈವೀ ಕೃಪೆಯೆಂದು ತಿಳಿದು ಕೃತಜ್ಞರಾಗಿರಿ. ಸತ್ಯಹೇಳುವುದರ ಅರ್ಥವೇನೆಂದರೆ ನಾವಿದ್ದ ಸ್ಥಿತಿಯಲ್ಲಿ ನಮ್ಮನ್ನು ಪ್ರಕಟಗೊಳಿಸುವುದು. ಈ ಸ್ಥಿತಿಗೆ ಬಂದ ಮನುಷ್ಯನು “ಅದು ಏನಿದೆಯೋ ಇದೆ” ಎಂದು ವಿವಶನಾಗಿ ಹೇಳುವನು. ಶಬ್ದಗಳು ಈ ಸ್ಥಿತಿಯನ್ನು ಹೇಗೂ ವರ್ಣಿಸಲಾರವು. ನಿಜವಾಗಿ ಇದು ಮೂಲದ ಸ್ಥಿತಿ....

ನಿಯಮ-೬ 

ಎಲ್ಲರನ್ನೂ ನಿಮ್ಮ ಸಹೋದರರೆಂದು ತಿಳಿದು ಹಾಗೆ ವರ್ತಿಸಿರಿ.  ಭಕ್ತನು ಯಾವಾಗಲೂ ಭಕ್ತಿಯ ವಲಯದಲ್ಲಿರುವುದೇ ಮಾನವೀಯ ವಿನಯದ ಪರಿಪೂರ್ಣ ಲಕ್ಷಣ. ಮೂಲದಿಂದ ಬಂದ ಎಲ್ಲ ವಸ್ತುಗಳೂ ಒಂದೇ ಉಗಮದಿಂದ ಬಂದುವೆಂದು ತಿಳಿಯಬೇಕು. ಒಂದೇ ತಾಯಿಯಿಂದ ಜನಿಸಿದ ಮಕ್ಕಳೆಲ್ಲರೂ ಹೇಗೆ ಒಂದೇ ರೀತಿಯಿಂದ ಸಂಬಂಧಪಟ್ಟಿರುವರೋ, ಹಾಗೆಯೇ ಪ್ರಪಂಚದ ಸಮಸ್ತ ಜನರೂ ಒಂದೇ...

ನಿಯಮ – ೭

ಯಾರಾದರೂ ಕೇಡು ಮಾಡಿದರೆ ಸೇಡು ಬಗೆಯಬೇಡಿರಿ. ಬದಲು, ದೈವೀ ಕೃಪೆಯೆಂದು ತಿಳಿದು ಧನ್ಯವಾದಗಳನ್ನರ್ಪಿಸಿರಿ. ಆಗುವುದೆಲ್ಲವೂ ನಮ್ಮ ಕರ್ಮಗಳ ಫಲವೆಂದು ಜಗತ್ತಿನ ಸಕಲ ಧರ್ಮಗಳೂ ಸಾರುತ್ತಿವೆ. ಈ ಸಿದ್ಧಾಂತಕ್ಕೆ ವಿರುದ್ಧವಾದ ಫಲವು ಯಾರಿಗೂ ಸಿಗುವುದಿಲ್ಲ. ಹೀಗಿರುವಾಗ, ಘಟಿಸುವುದೆಲ್ಲವೂ ವಾಸ್ತವವಾಗಿ ನಾವೇ ನಿರ್ಮಿಸಿರುವ ದೈವದ ಆಟವೆಂದು ಏಕೆ ತಿಳಿಯಬಾರದು? ನಿಜವಾಗಿಯೂ...

ನಿಯಮ – ೮

ಊಟ ಮಾಡುವಾಗ ದೇವರನ್ನು ನೆನೆಯುತ್ತ ದೊರೆತದ್ದನ್ನು ಪ್ರಸನ್ನತೆಯಿಂದ ಸ್ವೀಕರಿಸಿರಿ. ಶುದ್ಧ ಹಾಗು ಪವಿತ್ರ ಗಳಿಕೆಯ ಕಡೆಗೆ ಲಕ್ಷವಿರಲಿ. ಈ ನಿಯಮದಲ್ಲಿ ಅಡಕವಾದ ತತ್ತ್ವಜ್ಞಾನವು ಭೌತಿಕತೆಯಿಂದ ಆರಂಭವಾಗಿ ನಾವು ಮುಟ್ಟಬೇಕಾದ ಅಂತಿಮ ಸ್ಥಿತಿಯಲ್ಲಿ ಕೊನೆಗಾಣುವುದು. ಪ್ರಸನ್ನತೆಯ ಸ್ಥಿತಿಯು ಕೆಳಗಿನ ಸ್ತರಗಳ ಮೇಲೆಯೂ ತನ್ನ ಪರಿಣಾಮ ಬೀರಿ ಅವನ್ನೆಲ್ಲ ಶುದ್ಧಗೊಳಿಸುವುದು....

ನಿಯಮ – ೯

ಜನರಲ್ಲಿ ಪ್ರೇಮ ಹಾಗು ಪವಿತ್ರ ಭಾವನೆಗಳನ್ನು ಮೂಡಿಸುವ ಹಾಗೆ ನಿಮ್ಮ ಜೀವನ ಮತ್ತು ವ್ಯವಹಾರವನ್ನು ರೂಪಿಸಿಕೊಳ್ಳಿರಿ. ನಮ್ಮ ವಿಚಾರಗಳಿಂದ ನಮಗೆ ಬಲ ದೊರೆಯುತ್ತದೆ. ದೇವ ನಿರ್ಮಿತ ಹಾಗು ಮನಷ್ಯ ನಿರ್ಮಿತ ವಸ್ತುಗಳಲ್ಲಿ ಪೂರ್ಣ ಸಾಮರಸ್ಯ ಉಂಟಾದಾಗಲೇ ಇದು ಸಾಧ್ಯವಾಗುವುದು. ವ್ಯವಹಾರವೆಂಬ ಶಬ್ದಕ್ಕೆ ಬಹಳ ವ್ಯಾಪಕವಾದ ಅರ್ಥವಿದೆ. ಕೇಂದ್ರದ...

ನಿಯಮ – ೧೦

ಮಲಗುವಾಗ ದೇವರು ಎದುರಿನಲ್ಲಿರುವನೆಂದು ತಿಳಿದು, ಮಾಡಿದ ಅಪರಾಧಗಳಿಗಾಗಿ ಪಶ್ಚಾತ್ತಾಪ ಪಡುತ್ತ ದೈನ್ಯದಿಂದ ಕ್ಷಮೆ ಬೇಡಿರಿ. ಮುಂದೆ ಎಂದಿಗೂ ಅಂಥ ಅಪರಾಧ ಮಾಡದಂತೆ ನಿರ್ಧರಿಸಿ ಪ್ರಾರ್ಥನೆ ಮಾಡಿರಿ. ದೇವರನ್ನು ಒಡೆಯನೆಂದೂ ತನ್ನನ್ನು ಆತನ ಸೇವಕನೆಂದೂ ಭಾವಿಸಿ ಯಾವಾಗಲೂ ಆತನ ಸೇವೆ ಮಾಡುತ್ತಿರುವುದರಲ್ಲಿಯೇ ಮಾನವನ ಸೌಜನ್ಯವಿದೆ. ಹೀಗೆ ಮಾಡುವುದರಿಂದ ಮನುಷ್ಯನಲ್ಲಿ...