ಆಧ್ಯಾತ್ಮಿಕ ಕ್ಷೇತ್ರದಲ್ಲಿ ಶ್ರೀ ರಾಮಚಂದ್ರಜಿಯವರ ಸಂಶೋಧನಗಳು ಬೆರಗುಗೊಳಿಸುವಂಥವಾಗಿವೆ. Efficacy of Raja yoga in the Light of Sahara Marg ಎಂಬ ಗ್ರಂಥವು ಅಂಥದೊಂದು ಸಂಶೋಧನವನ್ನೊಳಗೊಂಡಿದ್ದು ಅವರ ಅತ್ಯುತ್ತಮ ಕೃತಿಗಳಲ್ಲೊಂದಾಗಿದೆ.ಕನ್ನಡ ಜನತೆಗೆ ಅದರ ಪರಿಚಯವಾಗಲೆಂಬ ದೃಷ್ಟಿಯಿಂದ ಅದನ್ನು ಕನ್ನಡಿಸಿದ್ದೇನೆ. ಮೂಲದ ಅಭಿಪ್ರಾಯವು ಯಥಾವತ್ತಾಗಿ ಮೂಡಿಬರುವಂತೆ ಪ್ರಯತ್ನಿಸಲಾಗಿದೆ. ಎಲ್ಲಿಯಾದರೂ ಸಂದಿಗ್ಧತೆ ,ವಿಪರ್ಯಾಸ ಮುಂತಾದುವೇನಾದರೂ ಕಂಡು ಬಂದಲ್ಲಿ ಮೂಲಗ್ರಂಥವೇ ಪ್ರಮಾಣವೆಂದು ಭಾವಿಸಬೇಕು.
ಗ್ರಂಥದ ಅನುವಾದ ಹಾಗೂ ಮುದ್ರಣ ಕಾರ್ಯದಲ್ಲಿ ನನಗೆ ಒಂದಿಲ್ಲೊಂದು ರೀತಿಯಿಂದ ನೆರವಾದ ಎಲ್ಲ ಬಂಧುಗಳನ್ನು ತುಂಬ ಕೃತಜ್ಞತೆ ಯಿಂದ ಸ್ಮರಿಸುತ್ತೇನೆ.
ಈ ಕೃತಿಯನ್ನು ಶ್ರೀ ಗುರುಗಳ ಚರಣಾಯವಿಂದಗಳಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ಸಮರ್ಪಿಸುತ್ತೇನೆ.
ಕಲ್ಬುರ್ಗಿ
ಶ್ರೀ. ಆ.ಸರ್ನಾಡ
೧೦-೬-೧೯೭೫