ಈಗ ನಾವು ಎರಡನೆಯ ಗ್ರಂಥಿಯನ್ನು ತಲುಪಿದೆವು. ಇದರ ಸುತ್ತಲೂ ಇರುವ ಸ್ಥಿತಿಯು ಜ್ಞಾನದ ಎರಡನೆಯ ಅವಸ್ಥೆ, ಪ್ರೇಮ ಭಕ್ತಿಗಳು ನಮ್ಮನ್ನು ಒಂದು ವೇಳೆ ಅಲ್ಲಿಯವರೆಗೆ ಮುಟ್ಟಿಸಿದರೆ ಜ್ಯೋತಿರ್ಮಯ ದಿವ್ಯದಶೆಗಳ ರೂಪವೂ ಬದಲಾಗುವುದು. ಆ ವಸ್ತುವು ಹಗುರವಾಗಿ ಶ್ರೇಷ್ಟತರ ದಶೆಯು ಪ್ರಾಪ್ತವಾಗುವುದು. ಸಾರಾಂಶವಿಷ್ಟೆ: ಮೊದಲಿನ ಸ್ಥಿತಿಯು ಭಾರವಾಗಿದ್ದಿತು; ಇದು ಆದಕ್ಕಿಂತ ಹಗುರಾಗಿರುವುದು, ಈಗ ಈ ಎರಡನೆಯ ಗ್ರಂಥಿಯಲ್ಲಿ ಏನಿದೆ? ನಾಲ್ಕೂ ಕಡೆಗೂ ಈಶ್ವರೀಯ ದಶೆಯೇ ಕವಿದಿರುವಂತೆ ಅನುಭವವಾಗುವುದು, ಅಂಥ ದಶೆ ಅಥವಾ ದಿವ್ಯಪ್ರಕಾಶ ಇಲ್ಲಿದೆ. ಇಲ್ಲಿ ಸ್ವಲ್ಪ ಸರಳತೆಯ ಅಭಾಸವಾಗುವುದು. ನಾವು ಅದರ ಒಳಕ್ಕೆ ಇನ್ನಷ್ಟೂ ಪ್ರವೇಶಿಸಿದ್ದೇವೆಂದು ಇದರರ್ಥ, ಪ್ರತಿಯೊಂದು ಸ್ವರದಲ್ಲಿ ಲಯಾವಸ್ಥೆ ಮತ್ತು ಸಾರೂಪ್ಯತೆ ಬರುವುದು, ಯಾವುದನ್ನು ಎರಡನೆಯ ಅವಸ್ಥೆಯ ಜ್ಞಾನವೆನ್ನುವರೋ ಆ ದಶೆಯ ಪ್ರಾಪ್ತಿಯೇ ಸಾರೂಪ್ಯತೆ. ಈಗ ನಾವು ಇವರಲ್ಲಿ ಲಯ ಅವಸ್ಥೆಯನ್ನು ಪಡೆದೆವು. ಸಾರೂಪ್ಯತೆಯ ಸಂತೋಷವಾರ್ತೆಯು ಬಂದಿತು. ಅದರಲ್ಲಿ ನಾವು ಸಾಕಷ್ಟು ರಮಿಸಿದಾಗ ಮೂರನೆಯ ಗ್ರಂಥಿಯ ಕಡೆಗೆ ನಮ್ಮ ದೃಷ್ಟಿ ಹೊರಳಿತು,