ಸಾಮಾನ್ಯವಾಗಿ ಜನರು ಹೃದಯವನ್ನು ಕೇವಲ ರಕ್ತ – ಮಾಂಸಗಳಿಂದಾದ ವಸ್ತುವೆಂದು ತಿಳಿಯುವರು. ಹೃದಯದ ಬಗ್ಗೆ ವಿಚಾರ ಬಂದಾಗಲೆಲ್ಲ ಅವರು ರಕ್ತ-ಮಾಂಸಗಳಿಂದಾದ ಹೃದಯವಿರುವ ಸ್ಥಾನವನ್ನೇ ತೋರಿಸುವರು. ಹೃದಯ ಮಂಡಲವನ್ನು ವಿಶಾಲಾರ್ಥದಲ್ಲಿ ನೋಡಲಾದುದಕ್ಕೆ ಇದೊಂದು ತಡೆಯಾಗಿದೆ. ವಾಸ್ತವವಾಗಿ ಒಳ ಹೊರಗಿನ ಪ್ರತಿಯೊಂದು ವಸ್ತುವನ್ನೂ ಒಳಗೊಳ್ಳುವ ಒಂದು ವಿಶಾಲವೃತ್ತವಿದು. ಪರಾಮನಸ್ಸಿನ ಅನಂತರ ಬಂದ ಎಲ್ಲ ವಸ್ತುಗಳೂ ಹೃದಯ ಮಂಡಲಕ್ಕೇ ಸೇರಿದುವಾಗಿವೆ.ಅದರ ಪರಿಮಿತಿಯಲ್ಲಿಯೇ ಎಲ್ಲಚಕ್ರಗಳೂ ಅಡಕವಾಗಿವೆ. ಬೇರೆ ಶಬ್ದಗಳಲ್ಲಿ ಹೇಳಬೇಕಾದರೆ ಅವು ಈ ದೊಡ್ಡ ಕ್ಷೇತ್ರದ ಒಂದು ಭಾಗವೆಂದು ಹೇಳಬಹುದು. ಮಾನವನ ಪ್ರಗತಿಯ ಎಲ್ಲ ಸ್ತರಗಳೂ ಇದರಲ್ಲಿ ಅಡಗಿವೆ. ಪ್ರಜ್ಞಾನವು ಇಲ್ಲಿದೆ;ಸುಷುಪ್ತಿಯು ಇದರ ಒಂದು ಭಾಗವಾಗಿದೆ. ಈ ಕ್ಷೇತ್ರದಲ್ಲಿ ನಾವೆಲ್ಲರೂ ನೀರಲ್ಲಿಯ ಹಂಸಗಳಂತೆ ವಿಹರಿಸುತ್ತಿದ್ದೇವೆ. ದಿವ್ಯಲೋಕದ ಮುಕ್ತಾತ್ಮರೊಂದಿಗೆ ವ್ಯವಹರಿಸುವ ಸ್ಥಿತಿಯು ಇಲ್ಲಿಂದಲೇ ಆರಂಭವಾಗುವುದು.ಈ ವಲಯದಲ್ಲಿ ವ್ಯಷ್ಟಿಮನಸ್ಸು ತನ್ನ ಕಾರ್ಯ ಮಾಡುತ್ತಿರುವುದು. ಇದು ಭಗವಂತನ ಬಹು ಮುಖ್ಯವಾದ ಧಮನಿ. ಇದರ ಮೂಲಕ ಮುಂಬರಿಯದ ಹೊರತು ನಾವು ಆತನನ್ನು ಮುಟ್ಟಲಾರೆವು. ಈ ವಲಯದಲ್ಲಿ ನಾರದನು ವೀಣೆ ನುಡಿಸುತ್ತಿರುವನು. ಬಹು ಸಂಖ್ಯಾತ ಜನರು ತಮ್ಮ ದೇಹವನ್ನಲ್ಲದೆ ಬೇರೆ ಏನನ್ನೂ ಅನುಭವಿಸರು. ಅವರ ವಿಚಾರಗಳು ಇದೇ ವಸ್ತುವಿನ ಮೇಲೆ ನೆಲೆಸಿರುವವು. ದೇಹವೊಂದೇ ಪೋಷಣೆಗೆ ಯೋಗ್ಯವೆಂದು ತಿಳಿದು ಅದನ್ನೇ ಸರ್ವಸ್ವವನ್ನಾಗಿ ಭಾವಿಸುವರು.ತಮ್ಮ ದೇಹವು. ಭಂಗವಾಗುವದೆಂಬ ವಿಚಾರವನ್ನು ಅವರು ಸಹಿಸಲಾರರು. ಅದಕ್ಕೇ ನಾದರೂ ರೋಗ-ರುಜಿನಗಳುಂಟಾದರೆ ತತ್ ಕ್ಷಣ ಡಾಕ್ಟರ್ ರ ಹತ್ತಿರ ಓಡುವರು. ಶರೀರದ ಕಾಳಜಿಯೆ ಅವರ ಮುಖ್ಯ ಗುರಿಯಾಗಿ ಬಿಡುವುದು. ತಮ್ಮಲ್ಲಿ ಮನೆಮಾಡಿ ಕೊಂಡ ವಿಚಾರದಿಂದ ಮುಕ್ತರಾಗಲು ಅವರು ಒಲ್ಲರು.ಅವರು ಯಾವಾಗಲೂ ತಮ್ಮ ಯಜಮಾನ ನಂತಿರುವ ದೇಹದ ಸೇವೆಯನ್ನೇ ಮಾಡುತ್ತಿರುವುದು ಕಂಡುಬರುತ್ತಿದೆ. ಅವರಿಗೆ ಆತ್ಮದ ಬೆಲೆಕಿಂಚಿತ್ತಾದರೂ ಇಲ್ಲ. ಅವರಿಗದು ಗೌಣವಿಚಾರ. ಅಲ್ಲದೆ, ಅವರಿಗೆ ವಿರಾಮವೇ ಸಿಗುವುದಿಲ್ಲ. ಅವರು ತಮ್ಮ ಶರೀರದ ಸುತ್ತಲೂ ಎಷ್ಟು ವೃತ್ತಗಳನ್ನು ಹಾಕಿ ಕೊಂಡಿದ್ದಾರೆ! ಮೊದಲೇ ಅದು ಸ್ಥೂಲವಾಗಿದ್ದಿತು, ಅದನ್ನವರು ಮತ್ತಷ್ಟು ಗಟ್ಟಿ ಹಾಗೂ ಸ್ಥೂಲವಾಗುವಂತೆ ಮಾಡಿದ್ದಾರೆ. ಈಗ ಅವರ ವಿಚಾರಗಳು ಎಲ್ಲಿನೆಲೆಸಿವೆ? ದೇಹದ ಮೇಲೋ ದೇಹದೊಳಗೋ? ನೀವು ಒಂದು ವಸ್ತುವಿನ ಮೇಲೆ ಜೋರು ಕೊಟ್ಟಾಗ ವಿಚಾರಗಳು ನಿಮ್ಮೊಳಗೆ ಧುಮುಕಲಾರಂಭಿಸುವವು. ಅವು ಈ ಮೊದಲೇ ರೂಪುಗೊಂಡ ವಿಚಾರಗಳಿಗೆ ಅನುಗುಣವಾಗಿರುವವು. ಅದರೊಳಗೆ ದೇಹದ ಬಗೆಗೆ ಕಾರ್ಯ ಮಾಡುತ್ತಿರುವ ವಿಚಾರವೇ ಇರುವುದನ್ನು ನೀವು ಕಾಣುವಿರಿ. ಈಗ ದೇಹಕ್ಕಾಗಿ ನೀವು ಕೆಲಸ ಮಾಡಹತ್ತಿರುವಿರಿ. ಇಂಥ ದೇಹದೊಂದಿಗೆ ನೀವು ಸಂಪರ್ಕದಲ್ಲಿದ್ದು ಅದನ್ನು ಮತ್ತಷ್ಟು ಘನೀಭೂತವನ್ನಾಗಿ ಮಾಡುವಿರಿ. ಸಹಜವಾಗಿಯೇ ನಿಮ್ಮ ವಿಚಾರಗಳು ದೇಹವನ್ನು ತಟ್ಟಿ ತಿರುಗಿ ಬಂದಾಗ ಘನೀಭೂತವಾಗುವವು. ಅವುಗಳಲ್ಲಿ ದೇಹದ ಭಾವನೆಯೂ ಒಂದಿಲ್ಲೊಂದು ರೂಪದಲ್ಲಿದ್ದಿತಾದುದರಿಂದ ಒಳಗಡೆ ಕೆಲಮಟ್ಟಿಗೆ ಸ್ಥೂಲತೆಯಿದ್ದಿತು. ಈಗ ಅವು ಪರಸ್ಪರ ಒಂದೇ ಬಗೆಯ ಸಂಬಂಧವನ್ನು ಪಡೆದು ದೇಹದೊಂದಿಗೆ ಸಮರಸವಾಗಿರುವವು. ಈಗ ನಿಮ್ಮನ್ನು, ಒಳಗೆ ಅಕ್ಷ ಹಾಗೂ ದ್ರುವಗಳನ್ನುಳ್ಳ ಒಂದು ಘನವಾದ ಗೋಲವೆಂದೇ ಹೇಳಬಹುದು. ನಿಮಗೆ ದೇಹದ ಹಲವು ಅವಯವಗಳ ಬಗೆಗೆ ಜ್ಞಾನವಿದೆ. ಹೃದಯದ ಮಿಡಿತವನ್ನೂ ಕಾಣುವಿರಿ. ಉಸಿರಾಟವನ್ನು ಅನುಭವಿಸುತ್ತಿರುವಿರಿ. ಇವನ್ನೆಲ್ಲ, ಕಾರ್ಯಮಾಡುತ್ತಿರುವ ಹಲವು ಇಂದ್ರಿಯಗಳಿಗೆ ಹೊಂದಿಸುವಿರಿ. ಈ ಎಲ್ಲ ಭಾಗಗಳೂ ದೇಹದ ಬೇರೆ ಬೇರೆ ಸ್ಥಾನಗಳಲ್ಲಿವೆಯೆಂಬುದನ್ನೂ ನೀವು ಬಲ್ಲಿರಿ. ನಿಮಗೆ ಯಕೃತ್ತು, ಹೃದಯ,ಶ್ವಾಸಕೋಶ ಮೊದಲಾದವುಗಳ ಕಲ್ಪನೆಯಿದೆ. ನೀವು ವಾಸ್ತವವಾಗಿ ದೇಹದ ಪಾತ್ರವನ್ನೇ ಧರಿಸುವಿರಿ. ಅದರೊಂದಿಗೆ ಒಂದಾಗಿಯೂ ವಸ್ತುಗಳ ಘನತ್ವ ಸಹಿತವಾಗಿರುವಿರಿ. ನಿಮ್ಮ ಮನಸ್ಸಿನಲ್ಲಿ ಇದರ ಹೊರತು ಮತ್ತೇನೂ ಇಲ್ಲ. ವಸ್ತುಗಳ ನಿಜವಾದ ಪಾತ್ರವನ್ನು ನೀವು ಅರಿತಿಲ್ಲ. ಈ ನಾಟಕಗಳೆಲ್ಲ ಎಲ್ಲಿ ನಡೆದಿವೆ ಎಂಬುದು ನಿಮಗೆ ತಿಳಿಯದು. ನೀವು ನಿಮ್ಮವೇ ಆದ ಕಲ್ಪನೆಗಳೊಂದಿಗೆ ಹೊಯ್ದಾಡುತ್ತಿರುವಿರೆಂಬುದು ನಿಮಗೆ ಗೊತ್ತಿಲ್ಲ. ನಿಮ್ಮನ್ನು ನೀವೇ ಭ್ರಮೆಗೊಳಿಸಿ ಕ್ಷೋಭೆಯಲ್ಲಿ ಬಿದ್ದಿರುವಿರಿ.ಇವೆಲ್ಲ ಏಕೆ ಸಂಭವಿಸುವುದು? ಇಂಥ ವಿಚಾರಗಳೇಕೆ ಮೂಡುವವು? ಇವು ನಮ್ಮೊಳಗೆ ಬರುವಂತೆ ಯಾರು ಸಹಾಯಮಾಡಿದರು?ಇವೆಲ್ಲವುಗಳ ಸೂತ್ರವು ಯಾರ ಕೈಯಲ್ಲಿದೆ? ಇವುಗಳ ಮೇಲೆ ಯಾರ ಅಧಿಕಾರವಿದೆ? ಅದು ‘ಹೃದಯ’ ವಲ್ಲದೆ ಬೇರಾವುದೂ ಅಲ್ಲ. ಇಂಥ ಪರಿಣಾಮಗಳುಂಟಾಗುವಂತೆ ನೀವೇ ನಿಮ್ಮ ಹೃದಯವನ್ನು ಈ ರೀತಿ ಮಾಡಿಕೊಂಡಿರುವಿರಿ. ಫಲರೂಪವಾಗಿ ಅಶಾಂತಿಯಲ್ಲದೆ ಮತ್ತೇನೂ ಉಂಟಾಗದು. ಇವೆಲ್ಲ ಕಲ್ಪನೆಗಳು ಹೃದಯದ ದೆಸೆಯಿಂದಲೇ ಉಂಟಾದವು ಮತ್ತು ತರುವಾಯ ನಿಮ್ಮ ಕ್ರಿಯೆಗಳೆಲ್ಲ. ಮೊದಲನೆಯ ಮೆಟ್ಟಲಿನಲ್ಲಿ, ಹೃದಯದಿಂದಲೇ ಶಾಸಿತವಾಗಿ ನಿಯಂತ್ರಿತವಾಗುವವು. ಅದರ ನಿರ್ದೆಶವು ಸರಿಯಾಗಿದ್ದರೆ ಅವು ಸರಿಯಾದ ದಾರಿಯನ್ನು ಹಿಡಿಯು ವವು; ಅವಿವೇಕದ್ದಾಗಿದ್ದರೆ ತಪ್ಪು ದಾರಿಯನ್ನು ಹಿಡಿಯುವವು. ಅರ್ಥಾತ್ ಅದು ಅವೆಲ್ಲವುಗಳ ಯಜಮಾನನಾಗಿದೆ; ನಿಯಾಮಾಕ ಶಕ್ತಿಯೂ ಆಗಿದೆ. ಹೀಗಿದೆ ನಿಮ್ಮೊಳಗಿನ ಹೃದಯದ ಸ್ಥಿತಿ. ಅದು ನಾನಾ ರೀತಿಯಿಂದ ನಾನಾ ವರ್ಣಗಳಲ್ಲಿ ಕಾರ್ಯ ಮಾಡುತ್ತಿದೆ ಅದರ ಮೂಲಕ ಭಗವಂತನ ಮುಖ್ಯ ಧಮನಿಯು ಸೃಷ್ಟಿಯ ಸಂಕಲ್ಪದೊಂದಿಗೆ ಕೆಲಸ ಮಾಡು ತ್ತಿದೆ. ನಿಮ್ಮ ಹೃದಯದೊಳಗಿನ ಲಂಬಕದಂತಹ ಬಡಿತವು ಕೇಂದ್ರದ ಅಡಿಯಲ್ಲಿರುವ ಅದೃಶ ಚಲನದ ಪರಿಣಾಮವಲ್ಲದೆ ಬೇರೇನೂ ಅಲ್ಲ. ಆ ಗುಪ್ತ ಚಲನದೊಂದಿಗೆ ನಮ್ಮ ಹೃದಯದ ಸಂಪರ್ಕವಿರುವುದರಿಂದ ತನ್ನ ಸಾಮರ್ಥ್ಯದ ಮಟ್ಟಿಗೆ ಅದು ತನ್ನ ಸ್ಥಳದಲ್ಲಿ ಅದೇ ಕಾರ್ಯವನ್ನು ಮಾಡುತ್ತಿದೆ.ಈ ಪ್ರಕಾರ ಅದರ ಕಾರ್ಯವು ಆ ಅದೃಶ್ಯ ಚಲನದಂತೆಯೇ ಇರುವುದು. ಅಗೋ, ಭಗವಂತನ ಅದೃಶ್ಯ ಚಲನದ ದೃಶ್ಯ ಸ್ವರೂಪ! ಅದು ಸಾಗರದಲ್ಲಿಯ ಒಂದು ಬಿಂದುವಾಗಿದೆ. ಕೇಂದ್ರದಿಂದ ಹೊರಹೊರಟ ಮೂಲಾಂಶವದು ಸೀಮಿತವಾದ ರೂಪದಲ್ಲಿ ಅದು ಮೂಲಶಕ್ತಿಯೇ ಆಗಿದೆ. ಆ ದೊಡ್ಡ ವಸ್ತುವು ಅಪರಿಮಿತ ಶಕ್ತಿಗಳನ್ನು ಹೊಂದಿದೆ. ಈ ಪರಿಮಿತತೆಯಾದರೋ ನಿಮ್ಮ ಸಂಕುಚಿತ ಮನದ ಪರಿಣಾಮವೇ ಆಗಿದೆ. ಮುಖ್ಯ ಧಮನಿಯಿಂದ ಅದೃಶ್ಯ ಚಲನಗಳು ವಿಶ್ವದ ರಚನೆಗಾಗಿ ಅವತರಣ ಮಾಡಿ ವಿಶಾಲ ವೃತ್ತದಲ್ಲಿ ಮಳೆಯ ಧಾರೆಗಳಂತೆ ಹರಡಿಕೊಂಡುವು. ನಿಸ್ಸಂದೇಹವಾಗಿ, ಪರಿಭ್ರಮಿಸುವ ಈ ಚಲನಗಳು ಜಗತ್ತನ್ನು ನಿರ್ಮಿಸಿದುವು; ಮತ್ತು ಸರ್ವಶಕ್ತನಿಂದ ಅದ್ರಶ್ಯ ಚಲನಗಳ ಮೂಲಕ ರಚಿತವಾದ ರೂಪಗಳೆಲ್ಲವೂ ದುಂಡಾಗಿರುವುದನ್ನೇ ಕಾಣುವೆವು. ಜಗತ್ತಿನಲ್ಲಿ ಕಾಣುತ್ತಿರುವ ಹಾಗೆ ಅದ್ಭುತ ಪರಿಣಾಮಗಳನ್ನುಂಟು ಮಾಡಿದ ಶಕ್ತಿಯೊಂದಿಗೆ ನಮ್ಮ ಸಂಬಂಧವಿದೆ ಎಂಬುದು ಇದರಿಂದ ಸ್ಪಷ್ಟವಾಗಿ ಸಿದ್ಧವಾಗುವುದು ಹೀಗೆ, ಎಲ್ಲ ವಸ್ತುಗಳೂ ವಿವಿಧ ರೀತಿಯಲ್ಲಿ ಪರಸ್ಪರವಾಗಿ ಸಂಬಂಧಪಟ್ಟಿದ್ದರೂ ಕೊನೆಗೆ ಒಂದೇ ವಸ್ತುವಿಗೆ ಹೊಂದಿಕೊಂಡಿವೆ. ನಮ್ಮ ಹೃದಯವು ದೊಡ್ಡ ವೃತ್ತದ ಒಂದು ಅಂಗವಾಗಿದೆ. ಆ ವೃತ್ತದ ಸುತ್ತಲೂ ಈ ಪದಾರ್ಥಗಳು ಓಡಾಡುತ್ತಿವೆ. ನಮ್ಮ ಸಂಕಲ್ಪ ಬಲದಿಂದಲೇ ನಾವು ಎಲ್ಲೆಗಳನ್ನು ನಿರ್ಮಿಸಿದ್ದೇವೆ.ಆದುದರಿಂದಲೇ ಮೇಲೆ ವಿವರಿಸಲಾದಂತಹ ಈ ವಸ್ತುಗಳಿಂದ ನಮ್ಮ ಹೃದಯದ ಆಂತರಿಕ ವಲಯವು ಬೇರೆಯಾದಂತೆ ಕಾಣುವೆವು. ಪ್ರತಿಯೊಂದು ವಸ್ತುವೂ ಈ ಕ್ಷೇತ್ರದಲ್ಲಿರುವುದು ವಸ್ತುಗಳು ಮಾರ್ಪಟ್ಟು ತಾವು ಬಂದ ಮೂಲಸ್ಥಾನಕ್ಕೆ ಹಿಂತಿರುಗುವಾಗ ಇಲ್ಲಿ ಪ್ರಳಯವು ಗೋಚರವಾಗುವುದು. ಪದಾರ್ಥಗಳು ಈಗಿನ ರೂಪಕ್ಕೆ ಬರುವ ಮೊದಲು ಪರಿಭ್ರಮಿಸುವ ಚಲನಗಳು ಕೆಲವು ಸ್ಥಾನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿಯೂ ಉಳಿದೆಡೆಗಳಲ್ಲಿ ಕಡಿಮೆ ಪ್ರಮಾಣದಲ್ಲಿಯೂ ಪ್ರಾರಂಭವಾಗುವವು. ನಿಲ್ದಾಣಗಳು ಅರ್ಥಾತ್ ಚಲನಗಳ ಹೆಚ್ಚು ಕಡಿಮೆ ಪ್ರಮಾಣಗಳನ್ನುಳ್ಳ ಸ್ಥಾನಗಳು – ಪ್ರವಾಹದ ವೇಗವನ್ನು ಹೆಚ್ಚಿಸುವ ಕವಾಟ ಗಳಂತೆ ಪ್ರತಿರೋಧವನ್ನು ಹೆಚ್ಚಿಸುವ ಕೆಲಸ ಮಾಡುವವು. ಪ್ರತಿಯೊಂದು ಕವಾಟದಲ್ಲಿ, ತನ್ನ ಕೆಲಸಕ್ಕನುಗುಣವಾದ ಹೆಸರನ್ನುಳ್ಳ ಒಂದೊಂದು ಚಕ್ರವಿದೆ. ಈ ಪ್ರಕಾರ ಅವೆಲ್ಲ ಹೃದಯಮಂಡಲವೆಂಬ ಒಂದೇ ವೃತ್ತದೊಳಗಿವೆ. ಈ ಒಂದೊಂದು ಚಕ್ರದ ಕಾರ್ಯಗಳು ಬೇರೆ ಬೇರೆ ಯಾಗಿವೆ. ಆಧ್ಯಾತ್ಮದಲ್ಲಿ ಮಾನವನ ಪ್ರಗತಿಯ ಘಟ್ಟಗಳು, ಚಕ್ರಗಳೆಂದು. ಕರೆಯಲಾಗುವ ಈ ಉಪವೃತ್ತಗಳಿಗೆ ಸ್ವಲ್ಪ ಮಟ್ಟಿಗೆ ಅಧೀನವಾಗಿರುವವು.
ನಾವು ಹೇಗಾದರೂ ಈ ದೊಡ್ಡ ವೃತ್ತವನ್ನು ದಾಟಿದ್ದಾದರೆ,ಈ ಸೃಷ್ಟಿಗೆ ಕಾರಣವಾದ ಮೊಟ್ಟ ಮೊದಲನೆಯ ಅಥವಾ ಪರಾಮನಸ್ಸನ್ನು ದಾಟುವುದೊಂದೇ ಉಳಿಯುವುದು. ಅದರ ಹಿಂದೆ ಕೇಂದ್ರವಿದೆ; ಅದೇ ಜೀವನದ ನಿಜವಾದ ಗುರಿ ಅದೊಂದು ದೊಡ್ಡದಾದ ಲಂಬಾಕೃತಿಯ ವರ್ತುಳವಾಗಿದೆ. ಕಾರಣವೇನೆಂದರೆ, ಪರಿಭ್ರಮಿಸುವ ಚಲನಗಳು ಆ ರೀತಿ ಚಲಿಸುವವು. ಅದರಡಿಯಲ್ಲಿ ಏನೋ ಇದೆಯೆಂದು ನಮಗೇಕೆನಿಸುವುದು? ಈ ಕ್ಷೇತ್ರದಲ್ಲಿ ಸರ್ವಶಕ್ತನ ಪ್ರವಾಹವು ಹರಿಯುವುದು ಅಥವಾ ತುಂಬಿ ತುಳುಕುವುದೆಂದರೂ ಅಡ್ಡಿಯಿಲ್ಲ. ಅದರಲ್ಲೊಂದು ದೊಡ್ಡ ರಹಸ್ಯವಿದೆ. ನೀವು ಕತ್ತಲೆಯ ಸ್ಥಾನವನ್ನು ಪ್ರವೇಶಿಸಿದಾಗ ಕಾಣುವಂಥ ಹಲವು ಕಣಗಳು ಪರಿಭ್ರಮಿಸುವ ಚಲನಗಳಿಂದಾಗಿ ಅಲ್ಲಿವೆ. ನೀವು ಒಂದು ಕತ್ತಲ ಕೋಣೆ ಯೊಳಗೆ ಹೋದಾಗ ವೃತ್ತಾಕಾರದ ಬೆಳಕಿನ ಥಳಕನ್ನು ಕಾಣುವಿರಿ. ನಿಮಗೆ ದಿನಾಲೂ ಇದರ ಅನುಭವವಿದೆ. ಈ ವೃತ್ತಾಕಾರದ ಕಿಡಿಗಳು ಪವಿತ್ರವಾದ ಭಗವತ್ ಕೇಂದ್ರದಲ್ಲಿರುವವು. ಅವು ವೃತ್ತದಲ್ಲಿರುವ ವಿವಿಧ ಶಕ್ತಿಗಳು ರಾಜಯೋಗದಗುಂಟ ನೀವು ಸಾಗಿದಂತೆಲ್ಲ ಇವು ಕರಗ ತೊಡಗಿ ಕೊನೆಗೆ ಇಲ್ಲದಂತಾಗುವವು. ಈ ವೃತ್ತದ ಮೇಲ್ತುದಿಯನ್ನು ಮುಟ್ಟಿದಾಗ ಅಭ್ಯಾಸಿಯಲ್ಲಿ ಬಗೆ ಬಗೆಯ ಶಕ್ತಿಗಳು ಬರುವವು. ಒಂದೊಂದು ಗ್ರಂಥಿಯು ಬಿಚ್ಚುವು ದೆಂದರೆ ಯಾವುದಾದರೊಂದು ಶಕ್ತಿಯುದಿಸಿದಂತೆ. ರಾಜಯೋಗದ ಸಮರ್ಥ ಗುರುವು ಅವುಗಳನ್ನೆಲ್ಲ ಹದಮಾಡಿ ಸಮಗೊಳಿಸುವನು. ಈ ರೀತಿ ಸಮಗೊಳಿಸಿದ ಶಕ್ತಿಯು ಶಿಷ್ಯನಲ್ಲಿ ತಾನಾಗಿಯೇ ಬರುವುದು. ಇಂಥ ಪ್ರತಿಯೊಂದು ಕಿಡಿಯು, ಮೇಲಿನಿಂದ ಬರುವ ಇಂಥ ಚಲನದ ಪರಿಣಾಮವಾಗಿದೆ. ನೀವು ಈ ಎಲ್ಲ ವಸ್ತುಗಳನ್ನು ಕರಗಿಸಿದಾಗ ಈ ಶಕ್ತಿಯ ತುತ್ತತುದಿಯನ್ನು ಮುಟ್ಟಬಲ್ಲಿರಿ. ಈ ವಸ್ತುಗಳು ಸಂಪೂರ್ಣ ಕರಗಿ ಹೋದಾಗ ನೀವು ಮೊಟ್ಟಮೊದಲು ಈ ಜಗತ್ತಿನಲ್ಲಿ ಬರುವ ಕೊಂಚ ಮುನ್ನ ಎಷ್ಟು ಶಾಂತವಾಗಿದ್ದರೋ ಅಷ್ಟೇ ಶಾಂತಿಯನ್ನು ಅನುಭವಿಸುವಿರಿ. ಎಲ್ಲ ಕಡೆಗೂ ಶಾಂತಿಯು ಪಸರಿಸುವುದು. ಸರಳತೆಯು ಹತ್ತಿರವೇ ನೆಲೆಸಿರುವುದು. ತತ್ಪರಿಣಾಮವಾಗಿ ಸಹಜತೆಯು ತಲೆದೋರುವುದು. ಹೃದಯಮಂಡಲದ ಉಪವೃತ್ತಗಳಲ್ಲಿ ದೇವರು ಕವಾಟಗಳನ್ನು ಕಲ್ಪಿಸಿದ್ದಾನೆ. ಅವು ತಮ್ಮ ಸ್ವರೂಪವನ್ನು ಕಳೆದುಕೊಂಡು ಒಂದು ನಿಲುಗಡೆಗೆ ಬರುವವರೆಗೂ ಶಿಥಿಲವಾಗುತ್ತ ಹೋಗುವವು. ಆಗ ಅವುಗಳಲ್ಲಿ ಯಾವ ಶಕ್ತಿಯೂ ಉಳಿಯುವುದಿಲ್ಲ. ಪ್ರತಿಯೊಂದು ಕಟ್ಟನ್ನೂ ನೀವು ಬಿಚ್ಚುಬಿಡುವಿರಿ. ಗಂಟು ಬಿಚ್ಚುವ ಈ ಕ್ರಿಯೆಯು ಯಾವುದಾದರೊಂದು ಪರಿಣಾಮವನ್ನುಂಟು ಮಾಡುವುದು. ಏಕೆಂದರೆ ಪ್ರತಿಯೊಂದು ಕ್ರಿಯೆಯು ಒಂದು ಪರಿಣಾಮವನ್ನು ಹುಟ್ಟಿಸುವುದು ನಿಸರ್ಗದ ನಿಯಮವಾಗಿದೆ. ಉಪವೃತ್ತದ ಬೇರೆ ಬೇರೆ ಮೂಲೆಗಳಲ್ಲಿ ನೀವು ಅನುಭವಿಸುವ ಕಿರಣಗಳೆಲ್ಲ ಮಾಯವಾಗತೊಡಗುವವು. ಸತ್ಯ ವಸ್ತುವಿನೊಂದಿಗೆ ಜಡ ಪದಾರ್ಥವು ಸಮ್ಮಿಲಿತವಾಗುವದರಿಂದ ನೀವು ಯಾವ ಪ್ರಕಾಶವನ್ನನುಭವಿಸಿದಿರೋ ಅದೀಗ ಮಂದವಾಗ ತೊಡಗುವುದು. ಕೊನೆಗೆ ಅದು ಸಂಪೂರ್ಣ ಮಾಯವಾಗುವುದು. ಈ ವಲಯದಲ್ಲಿ ಕಣ್ಣನ್ನು ಕುಕ್ಕಿಸುವಂಥ. ಪ್ರಕಾಶವುಳ್ಳ ಕೆಲವು ಭಾಗಗಳಿವೆ. ಹಲವು ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ಜನರು ಈ ಪ್ರಕಾಶದ ಮೇಲೆಯೂ ಧ್ಯಾನ ಮಾಡುವರು. ಅವರು ಪ್ರಕಾಶವನ್ನು ಸತ್ಯ ವಸ್ತುವೆಂದು ಭಾವಿಸಿ ಪೂರ್ಣ ಸಂಕಲ್ಪವನ್ನು ಉಪಯೋಗಿಸುತ್ತ ಕುತೂಹಲದಿಂದ ಮುಂದುವರಿಯುತ್ತಾರೆ.ಅದರ ಪರಿಣಾಮವೆಂದರೆ, ಅವರು ಹೆಚ್ಚಿನ ಪ್ರಮಾಣದಲ್ಲಿ ಬೆಳಕು ಒಳಗೆ ಬರಲೆಂದು ಮಾಯೆಯನ್ನು ವಿಸ್ತರಿಸುವರು. ಪ್ರಕಾಶದ ಶಕ್ತಿಯಾದರೂ ಅದನ್ನು ಧರಿಸುವ ಸಾಮರ್ಥ್ಯವು ಬೆಳೆದಂತೆಲ್ಲ ಹೆಚ್ಚುವುದೆಂಬುದರಲ್ಲಿ ಸಂದೇಹವಿಲ್ಲ. ಆದರೆ ನಿಜವಾಗಿ ಹೇಳುವುದಾದರೆ ಅವರು ಸ್ಥೂಲ ರೂಪದಲ್ಲಿ ಮಾಯೆಯ ಬದಿಯಲ್ಲಿಯೇ ಇರುವರು. ನಾನಿಲ್ಲಿ ಪ್ರಕಾಶಕ್ಕೆ ‘ಸ್ಥೂಲ’ ಶಬ್ದವನ್ನು ಬಳಸಿದ್ದೇನೆ ವಿಜ್ಞಾನಿಗಳು ಇದನ್ನು ಆಕ್ಷೇಪಿಸಬಹುದು ಅದರ ನಿಜಸ್ಥಿತಿಯೊಂದಿಗೆ ಹೋಲಿಸಿದಾಗ ಪ್ರಕಾಶವು ಎಷ್ಟೋ ಘನವಾಗಿ ತೋರುವುದು; ಏಕೆಂದರೆ ಅಲ್ಲಿ ಬೆಳಕೂ ಇಲ್ಲ, ಕತ್ತಲೆಯೂ ಇಲ್ಲ. ಇದು ಸಾಮಾನ್ಯವಾಗಿ ತ್ರಿಕುಟಿಯಲ್ಲೂ ಅದರಾಚೆಗೂ ಸಂಭವಿಸುವುದು. ಶರೀರದ ತುತ್ತತುದಿಯ ಭಾಗವೇ ಈ ದೊಡ್ಡ ವೃತ್ತದ ಕೊನೆ.ಇಷ್ಟಿದೆ,ಈ ಮಹಾವೃತ್ತದ ವಲಯ. ಇದರಲ್ಲಿ ಅನೇಕಾನೇಕ ಸಂಗತಿಗಳಿರುವವು. ಅವು ಕೇವಲ ಅನುಭವವೇದ್ಯವಾದುವು.ಯಾವ ಶಬ್ದಗಳೂ ಅವುಗಳನ್ನು ಬಣ್ಣಿಸಲಾರವು. ಇಲ್ಲಿ ನಿಸರ್ಗದ ನಾನಾ ಶಕ್ತಿಗಳು ನೆಲೆಸಿರುವವು. ಅತ್ರಿ ಋಷಿಯು ಇಲ್ಲಿ ತನ್ನ ಕಾರ್ಯಮಾಡುತ್ತಿರುವನು. ಸಾವಿರಾರು ವರ್ಷಗಳು ಕಳೆದಿದ್ದರೂ ಆತನು ಈ ವೃತ್ತದಲ್ಲಿ ಬಹಳ ಮೇಲೆ ಹೋಗಿಲ್ಲ. ಅಗಸ್ತ್ಯ ಋಷಿಯೂ ಇದೇ ವಲಯದಲ್ಲಿ ಕೆಲಸ ಮಾಡುತ್ತಿರುವನು.ಈ ಕ್ಷೇತ್ರವನ್ನು ದಾಟಿದ ವಿಭೂತಿಯಿಂದ ಅವರು ತಮ್ಮ ಕಾರ್ಯಗಳಿಗಾಗಿ ಆದೇಶ ಪಡೆಯುವರು.ಇವರಲ್ಲದೆ ಇದೇ ಕ್ಷೇತ್ರದಲ್ಲಿ ಬೇರೆ ಅನೇಕ ಋಷಿಗಳು ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ನಿಸರ್ಗದ ಒಂದು ರಹಸ್ಯವನ್ನು ಬಹಿರಂಗಪಡಿಸುವೆ; ನಾವು ವಿಷ್ಣುವನ್ನು ನಮ್ಮ ದೇವರೆಂದು ತಿಳಿದು ಪೂಜಿಸುವೆವು ಆತನ ಸಾಮರ್ಥ್ಯವನ್ನು ಕುರಿತು ನಾನಿಂದು ಹೇಳುವೆನು. ಅವನು ಸೃಷ್ಟಿಯ ರಕ್ಷಣೆಗಾಗಿ ವಿವಿಧ ಕಣಗಳನ್ನು ವ್ಯವಸ್ಥಿತಗೊಳಿಸುವನು ಮಾತ್ರ ಆತನ ಕಾರ್ಯಪರಿಮಿತಿ ಈ ಕ್ಷೇತ್ರದೊಳಗಿದೆ ಯಾವ ದೇವತೆಯೂ ಈ ವೃತ್ತವನ್ನು ಎಂದೂ ದಾಟಿಲ್ಲ. ಸಾಧನ,ಸಾಮರ್ಥ್ಯಗಳು ತನ್ನ ಅಂಕಿತದಲ್ಲಿರುವ ಮನುಷ್ಯನಿಗೆ ಮಾತ್ರ ಇದು ಸಾಧ್ಯವಾಗಿ ಆತನು ದೇವತೆಗಳಿಗಿಂತಲೂ ಎಷ್ಟೋ ಮುಂದುವರಿಯುವನು. ನಿಜವಾಗಿಯೂ ನಾವೇ ನಮ್ಮಲ್ಲಿರುವ ಸಾಮರ್ಥ್ಯದಿಂದ ಅವರಿಗೆ ಶಕ್ತಿಯನ್ನು ಕೊಡುವೆವು. ಈ ಹೃದಯಮಂಡಲವನ್ನು ದಾಟಿ ಭಗವಂತನ ಮೊಟ್ಟಮೊದಲನೆಯ ಅಥವಾ ಪರಾಮನಸ್ಸಿನ ವಲಯವನ್ನು ಪ್ರವೇಶಿಸಿದ ವಿಭೂತಿಪುರುಷರಿಗೆ ‘ನಾವು’ ಎಂಬ ಶಬ್ದವನ್ನು ಬಳಸಿದ್ದೇನೆ.ಅಷ್ಟೇ ಅಲ್ಲ,ಈ ವಲಯವನ್ನೂ ದಾಟಿದ ಮಹಾಪುರುಷರಿಗೆ ಈ ಶಬ್ದವು ಅನ್ವಯಿಸುವುದು. ಇಷ್ಟಾದರೂ ನನ್ನ ಮಾತು ಪೂರ್ಣ ಸರಿಯಲ್ಲ, ಭಗವಂತನ ಆದಿಮನವನ್ನು ದಾಟಿ ಬಹಳ ಮೇಲೆ ಹೋದವರಿಗಾಗಿಯೇ ಈ ಶಬ್ದವೆಂದು ನಾನು ಹೇಳಬೇಕು.
ಗುರೂಪದೇಶವನ್ನನುಸರಿಸುವದರಿಂದ ವಿಸ್ತಾರವಾದ ಈ ಹೃದಯ ಮಂಡಲವನ್ನು ದಾಟುವುದು ಸುಲಭವಾಗಿದೆ. ಆದರೆ ಯಾರು ಎಲ್ಲ ಮಂಡಲಗಳನ್ನೂ ದಾಟಿ ಬಹು ಎತ್ತರಕ್ಕೆ ಹೋಗಿರುವನೋ ಮತ್ತು ಯಾರಲ್ಲಿ ಯೌಗಿಕ ಪ್ರಾಣಾಹುತಿಯ ಶಕ್ತಿ ಯಿದೆಯೋ ಆತನೇ ಸಮರ್ಥ ಗುರುವಾಗಲು ಯೋಗ್ಯನೆಂಬುದನ್ನು ನೆನಪಿನಲ್ಲಿಡತಕ್ಕದ್ದು. ನಿಸ್ಸಂದೇಹವಾಗಿ ಶಿಷ್ಯನಲ್ಲಿ ದೃಢಸಂಕಲ್ಪವು ಅಗತ್ಯವಾಗಿರಬೇಕು. ಇದು ಎಷ್ಟು ಕಠಿಣವೆಂದು ತೋರುವದೋ ನಿಜವಾಗಿಯೂ ಅಷ್ಟು ಕಠಿಣವಾಗಿಲ್ಲ. ಅಭ್ಯಾಸಿಗಳು ಸುಲಭವಾದ ವಸ್ತುವನ್ನು ಪಡೆಯಲು ಕ್ಲೇಶಕರ ಸಾಧನಗಳನ್ನು ಅನುಸರಿಸುವರಾದ ಕಾರಣ ಈ ಮಾರ್ಗದಲ್ಲಿ ಅದೊಂದು ಮುಖ್ಯ ತೊಂದರೆಯಾಗಿದೆ.ಈ ವಲಯವನ್ನು ಸೇರುವ ಸೋಪಾನ ಮಾರ್ಗದಲ್ಲಿ ನಾರದನು ಅತ್ಯಂತ ಕೆಳಗಿನ ಮೆಟ್ಟಲಿನಲ್ಲಿದ್ದನು. ಹೃದಯಮಂಡಲದ ಒಂದು ಮೂಲೆಯಲ್ಲಿ ಆತನು ತನ್ನ ವೀಣಾನಾದವನ್ನು ಮಾಡಿದನೆಂಬುದರಲ್ಲಿ ಸಂದೇಹವಿಲ್ಲ. ಅವನು, ಹೃದಯದಲ್ಲಿ ಅನುಭವಕ್ಕೆ ಬರುವ ಶಬ್ದವನ್ನಷ್ಟೇ ಗ್ರಹಿಸುವವನಾಗಿದ್ದನು. ಹೃದಯದಲ್ಲುಂಟಾಗುವ ಕೆಳಮಟ್ಟದ ಧ್ವನಿಯಲ್ಲಿಯೇ ಅವನು ಲೀನನಾಗಿದ್ದನು. ನಾನು ಬೇರೆ ಮಹರ್ಷಿಗಳ ಉದಾಹರಣೆ ಗಳನ್ನು ತೆಗೆದುಕೊಂಡು ಇದನ್ನು ಬೆಳೆಸಬಯಸುವುದಿಲ್ಲ. ಅವರ ನಿಜವಾದ ಸ್ಥಿತಿಯನ್ನು ಬಹಿರಂಗಪಡಿಸಿದರೆ ಜನರು ನನ್ನ ಮೇಲೆ ಅಕ್ರೋಶ ಮಾಡಬಹುದು. ಆದರೆ ಇವನ್ನೆಲ್ಲ ನಾನು ನನ್ನ ಪ್ರತಿನಿಧಿಗೆ-ಅವನು ಯಾರೇ ಆಗಲಿ ಹೇಳಿಕೊಡಬಹುದು. ನಾನಿನ್ನೂ ಅನೇಕ ವಿಷಯಗಳನ್ನು ಪ್ರಕಟಗೊಳಿಸಬೇಕಾಗಿದೆ.ಅವುಗಳಲ್ಲಿ ಹಲವು ನನ್ನ ಜೀವಿತ ಕಾಲದಲ್ಲಿಯೂ ಇನ್ನು ಕೆಲವು ನನ್ನ ಭೌತಿಕ ಶರೀರದ ಪತನಾನಂತರವೂ ಬೆಳಕಿಗೆ ಬರುವವು.
ಹೃದಯ ಮಂಡಲವು ಹೆಚ್ಚು ಕಡಿಮೆ ಅಡಿಯಿಂದ ಮುಡಿಯವರೆಗೂ ಹಬ್ಬಿದೆ. ಸರ್ವಶಕ್ತನ ಸೃಷ್ಟಿಯೆಲ್ಲವೂ ಈ ವೃತ್ತದಲ್ಲಿಯೇ ಇದೆ. ಕಾರ್ಯವು ಮಾತ್ರ ವಿಭಕ್ತವಾಗಿದ್ದು ಬೇರೆ ಬೇರೆ ಇಂದ್ರಿಯಗಳ ಮೂಲಕ ನೆರವೇರುವುದು. ನಾವು ಹೃದಯಮಂಡಲದ ಮಧ್ಯಬಿಂದುವಿನ ಅಡಿಯಲ್ಲಿ ಹೋದರೆ ಬೇರೆ ಬೇರೆ ನಿಯೋಗಿಗಳು ತಮ ತಮಗೊಪ್ಪಿಸಲಾದಂತೆ ಕೆಲಸ ಮಾಡುತ್ತಿರುವುದನ್ನು ಕಾಣುವೆವು. ಇದಕ್ಕೆ ಬೇಕಾಗುವ ಭಗವತ್ ಶಕ್ತಿಯೂ ಅವರಲ್ಲಿದೆ. ಈ ಪ್ರಕಾರ ಹೃದಯಮಂಡಲವು ನಿಸರ್ಗದ ದೊಡ್ಡ ಯಂತ್ರೋಪಕರಣವಾಗಿದೆ.
ನೀವು ಭೌತಿಕ ದ್ರವವನ್ನು ತೆಗೆದುಹಾಕಿ ನಿಮ್ಮಿಂದ ಜನಿಸಿದ ಅರ್ಥಾತ್ ನೀವೇ ನಿರ್ಮಿಸಿದ ಶಕ್ತಿಯನ್ನೆಲ್ಲ ಬರಿದು ಮಾಡಿದಾಗ ಆದಿಯಲ್ಲಿದ್ದ ಸ್ಥಿತಿಯನ್ನು ಹೊಂದುವಿರಿ. ಬೇರೆ ಶಬ್ದಗಳಲ್ಲಿ ಹೇಳುವುದಾದರೆ,ಈ ಪ್ರದೇಶದಲ್ಲಿಯ ನಿಮ್ಮ ಗ್ರಂಥಿಗಳನ್ನು ನೀವು ಬಿಚ್ಚಿದಾಗ ಶಾಂತಿಯು ನೆಲೆಸಿ ಕ್ರಮೇಣ ಪ್ರಬಲವಾಗುವದು. ಅಲ್ಲೀಗ ಮೂಲ ಸ್ಥಿತಿಯು ಬಂದಿರುವದರಿಂದ ಅಲ್ಲಿರುವ ಪ್ರತಿಯೊಂದು ವಸ್ತುವು ಸರಳವಾಗಿಯೂ ಶಾಂತವಾಗಿಯೂ ಕಾಣಿಸುವುದು. ನೀವು ನಿರ್ಮಿಸಿದ ಯಾವುದೂ ಈಗ ಅಲ್ಲಿರುವುದಿಲ್ಲ. ಚುಕ್ಕೆಗಳೂ ಕಣಗಳೂ ಕಾಣದಂತಾಗುವವು. ಮಿಣುಕುವ ಬೆಳಕಾದರೂ ಶೂನ್ಯಕ್ಕೆ ಬರುವವರೆಗೆ ಮಸಕಾಗುತ್ತ ಹೋಗುವುದು. ಈಗ ಅಲ್ಲಿ ಭಾರವಿರುವುದಿಲ್ಲ. ಅಲ್ಲಿರುವ ಸತ್ಯದ ಮಟ್ಟಕ್ಕೆ ಇನ್ನೂ ಬಾರದಿರುವ ಜೀವಿಗೆ ಈ ಸ್ಥಿತಿಯು ಕಲ್ಪನಾತೀತವೆನಿಸುವುದೇನೋ ನಿಜ. ಆತ್ಮವು ಯಾವಾಗಲೂ ತನ್ನ ಸಾಕ್ಷಾತ್ಕಾರಕ್ಕಾಗಿ ಹಂಬಲಿಸುವುದು. ಅದು ಕೇಂದ್ರದೊಂದಿಗೆ ಐಕ್ಯವಾದಾಗಲೇ ಇದು ಸಾಧ್ಯವಾಗುವುದು. ಬಾಹ್ಯ ಪದಾರ್ಥಗಳು (ಈ ವಲಯದಲ್ಲಿಯ ಆವರಣಗಳು)ಈಗ ಇಲ್ಲದಂತಾಗುವವು.ಹೃದಯದ ಈ ದೊಡ್ಡ ಪ್ರದೇಶದಲ್ಲಿ ವಿಶ್ವದ ಶಕ್ತಿಗಳು ವಾಸಮಾಡಿವೆ. ಈ ಕ್ಷೇತ್ರವನ್ನು ದಾಟಿ ನೀವು ನಿಜ ಮನಸ್ಸಿಗೆ ಬರುವ ಮುನ್ನ ನಿಮಗೆ ಅನೇಕ ಶಕ್ತಿಗಳು ಪ್ರಾಪ್ತವಾಗಿ ಭಗವತ್ ಕಾರ್ಯದಲ್ಲಿ ಅವುಗಳ ಉಪಯೋಗವಾಗುವುದು. ಈ ಪುಸ್ತಕದಲ್ಲಿ ನಾನು ಆ ಸಿದ್ಧಿಗಳನ್ನು ವಿವೇಚಿಸುವುದಿಲ್ಲ.
ಹೃದಯ ಮಂಡಲದ ಬಗ್ಗೆ ನಾನು ಮಾಡಿದ ಸಂಶೋಧನೆಯನ್ನು ನಿಮ್ಮೆದುರಿಗಿಡುವೆನು. ರಕ್ತ ಮಾಂಸಗಳಿಂದ ಕೂಡಿದ ಹೃದಯವನ್ನು ನಾನು ೧ನೆಯ ಆಕ್ರತಿಯಲ್ಲಿ ತೋರಿಸಿದಂತೆ ಎರಡು ಭಾಗ ಮಾಡುವೆನು. ‘ಉ’ ಎಂದು ಗುರುತಿಸಲಾದ ವೃತ್ತದ ಮೊದಲನೆಯ ಭಾಗವು ‘ಲ’ ಎಂದು ಗುರುತಿಸಲಾದ ಭಾಗಕ್ಕಿಂತ ಹೆಚ್ಚು ಪ್ರಕಾಶಮಾನವಾಗಿದೆ. ಅಲ್ಲಿ ಮೂರು ಬಿಂದುಗಳಿವೆ. ಒಂದನೆಯದು ಮೇಲ್ಭಾಗದಲ್ಲಿ; ಎರಡನೆಯದು ಕೆಳಭಾಗದಲ್ಲಿ ಮತ್ತು ಮೂರನೆಯದು ಅವೆರಡರ ನಡುವೆ ಮೇಲಿನ ಬಿಂದುವನ್ನು ‘ಅ’ ಎಂದೂ ಕೆಳಗಿನದನ್ನು ‘ಬ’ ಎಂದೂ ೨ನೆಯ ಆಕೃತಿಯಲ್ಲಿ ತೋರಿಸಲಾಗಿದೆ. ೧ನೆಯ ಆಕೃತಿಯ ಚಿತ್ರ
ಅಲ್ಲಿ ನಾನಾ ಬಗೆಯ ವೃತ್ತಿಗಳೂ ಬೀಜಗಳೂ ಸುತ್ತಾಡುತ್ತಿರುವುದನ್ನು ನೀವು ಕಾಣುವಿರಿ.’ಅ’ ಮತ್ತು ‘ಬ’ ಬಿಂದುಗಳ ಮಧ್ಯದಲ್ಲಿ ಒಂದು ಬಿಂದುವಿದೆ.ರಾಜಯೋಗದ ಸ್ವಲ್ಪ ಅಭ್ಯಾಸದ ನಂತರ ಅದರ ಮೇಲೆ ಏಕಾಗ್ರತೆಯಿಂದ ಒತ್ತಡ ಹಾಕಿದ್ದಾದರೆ ಮುಕ್ತಾತ್ಮರೊಂದಿಗೆ ನೀವು ವ್ಯವಹರಿಸಬಹುದು.ನೀವು ಏನಾದರೊಂದು ವಿಚಾರ ಮಾಡಿದರೆ ಅದು ಮೊದಲು’ಅ’ ಬಿಂದುವಿನಲ್ಲಿ ಮೈದೋರುವುದು. ‘ಅ’ ದಲ್ಲಿ ಬಂದ ವಿಷಯವನ್ನು ಕುರಿತು ನೀವು ಮತ್ತೆ ಮತ್ತೆ ಚಿಂತಿಸಿದರೆ ಅದರಂತೆಯೇ ನಿಮ್ಮ ಭವಿಷ್ಯತ್ತನ್ನು ನಿರ್ಮಿಸಿಕೊಳ್ಳುವಿರಿ. ‘ಬ’ಬಿಂದುವಿನ ಮೇಲೆ ನೀವು ವಿಷಯಾದಿಗಳಿಂದ ಮುಕ್ತರಾಗುತ್ತಿರುವುದಾಗಿ ಧ್ಯಾನಮಾಡಿದರೆ ಅದರ ಪರಿಣಾಮ ಅತಿ ಶೀಘ್ರದಲ್ಲಿಯೇ ಕಂಡುಬರುವುದು. ಇದನ್ನು ನೀವು ಪ್ರತ್ಯಕ್ಷಮಾಡಿ ನೋಡದ ಹೊರತು ಕಲ್ಪನೆಯಲ್ಲಿ ಸಹ ತರಲಾರಿರಿ. ನಮ್ಮ ಸಹಜಮಾರ್ಗದ ಪದ್ಧತಿಯಿಂದ ಸಾಧಕರು ಈ ಬಿಂದುಗಳ ಮೇಲೆ ಅಭ್ಯಾಸಮಾಡಿ ಗಮನಾರ್ಹ ಪ್ರಗತಿಯನ್ನು ಹೊಂದಿದ್ದಾರೆ.ಇವೆರಡೂ ಬಿಂದುಗಳ ಮೇಲೆ ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡಿದ್ದಾದರೆ ಶೀಘ್ರವಾಗಿಯೇ ವಾಸನಾದಿಗಳು ಮಾಯವಾಗತೊಡಗುವವು. ‘ಅ’ ಮತ್ತು ‘ಬ’ ಗಳ ನಡುವಿನ ಬಿಂದುವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳದಿದ್ದರೆ ಅನಾಹುತಗಳುಂಟಾಗಬಹುದೆಂಬ ದೃಷ್ಟಿಯಿಂದ ಅದನ್ನು ಗೌಪ್ಯವಾಗಿರಿಸಲಾಗಿದೆ.ಆದುದರಿಂದ ನಾನದನ್ನು ಬಹಿರಂಗಪಡಿಸುವುದೇ ಇಲ್ಲ. ‘ಉ’ ಎಂದು ಗುರುತಿಸಲಾದ ಮೇಲಿನ ಭಾಗವು ಹೃದಯದ ಮೊದಲನೆಯ ಭಾಗವಾಗಿದೆ ಮತ್ತು ‘ಲ’ ಎಂದು ಗುರುತಿಸಲಾದ ಭಾಗವು ಎರಡನೆಯದು. ಮೇಲಿನ ಭಾಗವು ಮಹರ್ಷಿಗಳ ಗಮ್ಯ ಸ್ಥಾನವಾಗಿದೆ. ಸುದೀರ್ಘ ತಪಸ್ಸು ಹಾಗೂ ತ್ಯಾಗದ ನಂತರ ಅವರು ಈ ಸ್ಥಿತಿಗೆ ಬರುವರು. ಇದು ಇಷ್ಟು ಸಮೀಪದಲ್ಲಿಯೇ ಇದ್ದರೂ ಪ್ರತಿಯೊಬ್ಬರಿಗೂ ಲಭ್ಯವಿಲ್ಲ. ಅದಕ್ಕೆ ಅರ್ಹರಾದವರು ಮಾತ್ರ ಪಡೆಯಬಲ್ಲರು. ಕೆಳಗಿನದು ಸಾಮಾನ್ಯ ಜನರ ಸ್ಥಾನ.’ಉ’ ಎಂದು ಗುರುತಿಸಲಾದ ಕ್ಷೇತ್ರದಲ್ಲಿ ಕೆಳದರ್ಜೆಯ ಪ್ರಜ್ಞಾನವಿದೆ. ಈ ಕ್ಷೇತ್ರದಲ್ಲಿ ನೀವು ವಾಸಿಸತೊಡಗಿದ ಮೇಲೆ ನಿಮಗೆ ಅನೇಕ ದೈವೀ ಸಂಗತಿಗಳ ಅರಿವಾಗುವುದು.ಆಕ್ರತಿ ೨
ಯಾವಾಗಲೂ ಪ್ರಾಪಂಚಿಕ ವಿಷಯಗಳಿಂದ ಮತ್ತನಾದ ಮನುಷ್ಯನು ಈ ಕೆಳದರ್ಜೆಯ ಪ್ರಜ್ಞಾನದ ಸ್ಥಿತಿಯನ್ನು ಕೂಡಾ ಮುಟ್ಟಲಾರನು.’ಅ’ಮತ್ತು’ಬ’ ಬಿಂದುಗಳನ್ನೂ ಶುದ್ಧಗೊಳಿಸಿ ಮೇಲಿನ ಕ್ಷೇತ್ರವನ್ನು ಪ್ರವೇಶಿಸಿದರೆ ಹೃದಯ ಮಂಡಲದಲ್ಲಿರುವ ಬೇರೆ ಬಗೆಯ ಪ್ರಜ್ಞಾನದ ಸ್ಥಿತಿಯನ್ನು ಹೊಂದಲು ನೀವು ಅರ್ಹರಾಗುವಿರಿ . ‘ಬ’ ಬಿಂದುವನ್ನು ಪೂರ್ಣ ಶುದ್ಧಗೊಳಿಸಿದವನು ಮುಂದೆ ವಿವರಿಸಲಾಗುವ ಪ್ರಜ್ಞಾನದ ಸ್ಥಿತಿಯಲ್ಲಿ ಪ್ರವೇಶಿಸಿದ ಶುಭ ಸಮಾಚಾರವನ್ನು ಪಡೆಯುವನು. ‘ಅ’ ಮತ್ತು ‘ಬ’ ಬಿಂದುಗಳನ್ನು ನಾನು ಪ್ರತ್ಯಕ್ಷ ಅಳತೆಯಿಂದ ತೋರಿಸುವೆನು.ಹೃದಯವು ದೇಹದ ಎಡ ಭಾಗದಲ್ಲಿ ಅಥವಾ ಎಡ ಪುಪ್ಪುಸದ ಕೆಳಭಾಗದಲ್ಲಿರುವುದು. ಎಡ ಚೂಚುಕದ ಬಲಗಡೆಗೆ ಎರಡು ಬೆರಳಿನ ಅಂತರವನ್ನು ತೆಗೆದುಕೊಳ್ಳಿರಿ. ಆಮೇಲೆ ಮೂರು ಬೆರಳಿನಷ್ಟು ಕೆಳಗಡೆ ಅಳೆಯಿರಿ. ಇದೇ’ಆ’ ಬಿಂದುವಿನ ಸ್ಥಾನ. ಈಗ ‘ಅ’ ಬಿಂದುವಿನಿಂದ ಮತ್ತೆ ಎರಡು ಬೆರಳು ಕೆಳಗಡೆ ಹೋಗಿರಿ.ಎದೆ ಗೂಡಿನ ಕೆಳ ಎಲುವಿನ ತುಸು ಮೇಲ್ಗಡೆಯಲ್ಲಿಯೇ’ಬ’ಬಿಂದುವಿದೆ. ಅಳತೆಯನ್ನು ತಮ್ಮ ತಮ್ಮ ಬೆರಳು ಗಳಿಂದಲೇ ಮಾಡತಕ್ಕದ್ದು. ಶ್ರೇಷ್ಟ ಪ್ರಜ್ಞಾನವೆಂದು ಕರೆಯಲಾದ ಬಿಂದುವಿಗೆ ಬರುವವರೆಗೂ ನಮ್ಮ ಪ್ರಜ್ಞಾನವು ಈ ಕ್ಷೇತ್ರದಲ್ಲಿ ಸಂಚರಿಸುವುದು.ಇದನ್ನು ೩ ನೆಯ ಆಕ್ರತಿ ಯಲ್ಲಿ ತೋರಿಸಲಾಗಿದೆ.
ಹೃದಯದಲ್ಲಿ, ಮೇಲಿನ ಕ್ಷೇತ್ರವು ಬಲಗಡೆ ಇದೆ. ಈ ಭಾಗದಲ್ಲಿ ಅದು ಎಡಗಡೆಗೂ ಕೆಳಗಿನ ಕ್ಷೇತ್ರವು ಬಲ ಗಡೆಗೂಇದೆ.ಇಲ್ಲಿ ‘ಅ೧’ಮತ್ತು’ಬ೧’ ಎಂಬ ಬಿಂದುಗಳು ಹೃದಯದಲ್ಲಿದ್ದ ‘ಅ’ ‘ಬ’ ಬಿಂದುಗಳನ್ನು ಹೋಲು ವವು.
ಆಕ್ರತಿ ೩’ಡ೧’ಎಂದು ತೋರಿಸಲಾದ ಭಾಗದಲ್ಲಿ ಶ್ರೇಷ್ಟತರದ ಪ್ರಜ್ಞಾನವಿದೆ. ಭೇದವಿಷ್ಟೆ:’ಅ೧’ರಲ್ಲಿ ಉದಿಸುವ ವಿಚಾರಗಳು ನೆಲಸಲಾರಂಭಿಸಬೇಕೆಂಬ ದೃಷ್ಟಿಯಿಂದ ‘ಬ೧’ಬಿಂದು ವನ್ನು ಶುದ್ಧಗೊಳಿಸುವುದು ಅಭ್ಯಾಸಿಯನ್ನು ಕೂಡಿದೆ. ಹೃದಯದ ‘ಅ’ ಮತ್ತು’ಬ’ ಬಿಂದುಗಳಲ್ಲಿ ನೀವು ಮಾಡಿರುವಷ್ಟೇ ಪರಿಶುದ್ಧತೆಯು ಇಲ್ಲಿಯೂ ದೊರೆಯುವುದು. ಜನರು ಸಾಮಾನ್ಯವಾಗಿ ಕೆಳಗಿನಕ್ಷೇತ್ರವೆಂದು ಕರೆಯಲಾದ ಬಲಭಾಗದಿಂದ ಹೊರಡುವರು. ಏಕೆಂದರೆ, ಪ್ರಕಾಶ ಮಾನ ಸ್ಥಿತಿಯಲ್ಲಿ ಈ ಭಾಗವನ್ನು ಪ್ರವೇಶಿಸಲು ಅರ್ಹರಾಗುವಷ್ಟು ತಮ್ಮ ಹೃದಯವನ್ನು ಶುದ್ಧೀಕರಿಸಿರುವುದಿಲ್ಲ. ತಮ್ಮಲ್ಲಿರುವ ಎಲ್ಲ ವಸ್ತುಗಳೊಂದಿಗೆ ಅವರು ಈ ಪ್ರದೇಶವನ್ನು ಪ್ರವೇಶಿಸಬಯಸುವರು. ಈ ರೀತಿ ಅವರು ಎಡಭಾಗದಿಂದ ಸಾಗಲು ಯತ್ನಿಸುವುದರ ಮೂಲಕ ಅಶಕ್ಯವಾದುದನ್ನು ಸಾಧಿಸಲು ಯತ್ನಿಸಿದಂತಾಗುವುದನ್ನು ಶಿಷ್ಯನ ಎಲ್ಲ ಸಂಸ್ಕಾರಗಳನ್ನು ಛೇದಸಿ ಆತನನ್ನು ಸರಿಯಾದಮಾರ್ಗದಲ್ಲಿ ನಡೆಸುವುದು ಬಹುಮಟ್ಟಿಗೆ ಯೋಗ್ಯ ಗುರುವನ್ನವಲಂಬಿಸಿದೆ. ಹೃದಯದ ವಿಶಾಲ ವೃತ್ತದ ಒಂದು ಭಾಗವಾದ ವಿಶ್ವವು ಇಲ್ಲಿ ಪ್ರಾರಂಭವಾಗುವುದು. ಈ ಸ್ಥಳದಲ್ಲಿ ಜನರು ಎಷ್ಟೋ ಸಲ ಬೆಳಕಿನ ಮಳೆಗರೆದಂತೆ ಅನುಭವಿಸುವರು.ಆದರೆ ಇದು ನಮ್ಮ ಗುರಿಯಲ್ಲ.ಹೃದಯದ ದೊಡ್ಡ ವರ್ತುಳವನ್ನು ದಾಟುವ ಮೊದಲು ನಾವಿದನ್ನು ಕಡಿದೊಗೆಯಬೇಕು. ಆಕ್ರತಿ ೪
ಅದರಂತೆ ನಾವೀಗ ಮೇಲ್ಗಡೆಯಲ್ಲಿರುವ’ಡ೨’ ಎಂಬ ಭಾಗಕ್ಕೆ ಬರುವೆವು. ೪ನೆಯ ಆಕ್ರತಿಯಲ್ಲಿ ತೋರಿಸಲಾದಂತೆ,ಬಲಗಡೆ ಯಲ್ಲಿ ಕೆಳಗಿನ ಪ್ರದೇಶವಿದೆ.ಇಲ್ಲಿ ಶ್ರೇಷ್ಟತಮವಾದ ಪ್ರಜ್ಞಾನವಿದೆ. ಇದೆಲ್ಲ ಹೃದಯದ’ಬ’ಬಿಂದುವನ್ನೇ ಅವಲಂಬಿಸಿದ್ದು ಅದನ್ನು ಸಂಪೂರ್ಣವಾಗಿ ಶುದ್ಧಗೊಳಿಸಿದ್ದಾದರೆ’ಡ೨’ ಪ್ರದೇಶದಲ್ಲಿರುವ ‘ಡ೨’ ‘ಅ೨’ಬಿಂದುವಿಗೆ ನಿಮ್ಮನ್ನು ಕೊಂಡೊಯ್ಯುವುದು.ಶ್ರೇಷ್ಠತಮ ಪ್ರಜ್ಞಾನದ ಸ್ವಲ್ಪ ಕೆಳಗಡೆ (ಅರ್ಥಾತ ಕಪಾಲದ ಹಿಂದುಗಡೆ) ಮನೋಮಂಡಲವು ಪ್ರಾರಂಭವಾಗುವ ಸ್ಥಾನದಲ್ಲಿ ಮತ್ತೆ ಅಂಥವೇ ಬಿಂದುಗಳನ್ನುಳ್ಳ ಎರಡುಭಾಗಗಳಿವೆ. ಅದರ ಮುಂದೆ ಆಕ್ರತಿಯ ಮೂಲಕ ತೋರಿಸಲಾಗುವ ಬಿಂದುವನ್ನು ಮುಟ್ಟಲು ಅವನ್ನು ಸುಲಭವಾಗಿ ದಾಟಬಹುದು. ಹೃದಯ ಮಂಡಲವನ್ನು ಕುರಿತು ದಿಗ್ದರ್ಶನ ಮಾತ್ರವೇ ಆದರೂ ಸಾಕಷ್ಟು ಚರ್ಚೆ ಮಾಡಿದ್ದೇನೆ.ನಮ್ಮ ಮುನ್ನಡೆಯಲ್ಲಿ ಪ್ರಾಪ್ತವಾಗುವ ಸೂಕ್ಷ್ಮತರ ಸ್ಥಿತಿಗಳ ಬಗ್ಗೆ ಇನ್ನು ಮುಂದೆ ವಿವರಿಸುವೆನು.