ಸಹಪಥಿಕನ ಕರೆ

ಪೀಠಿಕೆ

ಸನ್ಮಾನ ಸಹೋದರ ರಾಘವೇಂದ್ರ ರಾವ್ ಅವರಿಗೆ ಪೂಜ್ಯ ಗುರುಗಳ ಪ್ರಥಮ ದರ್ಶನವು ೨೨ ಅಕ್ಟೋಬರ ೧೯೫೫ ರಂದು ಷಹಜಹಾನಪುರದ ಗುರುಗಳ ಮನೆಯಲ್ಲಿ ಆಯಿತು. ಇವರು ಪ್ರಥಮ ಭೆಟ್ಟಿಯಲ್ಲಿಯೇ ಗುರುಗಳ ಹಾಗೂ ಅವರ ಸಂಸ್ಥೆಯ ಸಾರತತ್ವವನ್ನೇ ಅರಗಿಸಿಕೊಂಡ ಒಬ್ಬ ಅಭ್ಯಾಸಿಗಳಾಗಿದ್ದಾರೆ. ಬೇರೆ ಶಬ್ದಗಳಲ್ಲಿ ಹೇಳುವದಾದರೆ, ಪ್ರಥಮ ಭೆಟ್ಟಿಯಲ್ಲಿಯೇ ಪೂಜ್ಯ...

ಮುನ್ನುಡಿ

ಅನೇಕ ಯುಗಗಳಿಂದ ಮಾನವನ ಸುಖಶೋಧನೆ ಬಹುಬಗೆಯಾಗಿ ಹಾಗೂ ಛಲ ಬಿಡದೆ ಸಾಗಿದೆ. ಮತ್ತು ತನ್ನ ಎಡೆಬಿಡದ ಯತ್ನಗಳಲ್ಲಿ ಆತನು ಬಹಳಷ್ಟು ನಿರಾಶೆಯನ್ನು ಎದುರಿಸಿದ್ದಾನೆ. ಯಾಕೆಂದರೆ, ಅವನ ಸುಖದ ಶೋಧನೆ ಸುಖದ ವಿಷಯಗಳೆನಿಸಿದ ಅಥವಾ ಅವನು ತಿಳಿದಂತೆ ಸುಖದ ಮೂಲವೆನಿಸಿದ ವಸ್ತುಗಳಿಂದ ಆವೃತ್ತವಾಗಿದ್ದು, ಈ ಶೋಧವನ್ನು ಭಯಾನಕ ಸ್ವಪ್ನಗಳನ್ನಾಗಿಸಿತು....

ಅನುವಾದಕನ ಅರಿಕೆ

ಗುರು ಬಂಧುಗಳಾದ ಶ್ರೀ ರಾಘವೇಂದ್ರ ರಾವ್, ರಾಯಚೂರ, ಅವರು ರಚಿಸಿದ “Call of the Fellow Traveller” ಎಂಬ ಇಂಗ್ಲೀಷ ಗ್ರಂಥವು ೧೯೯೯ ರ ಎಪ್ರಿಲ್‌ ೩೦ ರಂದು ನಮ್ಮ ಪೂಜ್ಯ ಗುರುಗಳಾದ ಮಹಾತ್ಮಾ ಶ್ರೀ ರಾಮಚಂದ್ರಜೀ ಷಹಜಹಾನಪುರ (ಉತ್ತರ ಪ್ರದೇಶ) ಅವರ ಜನ್ಮ ಶತಮಾನೋತ್ಸವದ ಶುಭಸಂದರ್ಭದಲ್ಲಿ...

ಬಾಬೂಜಿ ಮಹಾರಾಜರಿಗೆ ಪ್ರಣಾಮಗಳು

ಪ್ರಿಯ ಸೋದರ, ಸೋದರಿಯರೆ, ಮಹಾಪುರುಷರು ಆಕಸ್ಮಿಕವಾಗಿ ಜನ್ಮತಾಳುವದಿಲ್ಲ. ಹಾಗೂ ಅವರ ಜೀವನ ಧ್ಯೇಯ ಸುಲಭವಾಗಿ ಪೂರ್ಣಗೊಳ್ಳುವದಿಲ್ಲ. ನಮ್ಮ ಶ್ರೇಷ್ಠ ಗುರುಗಳು ಕಾಲದ ಆವಶ್ಯಕತೆಗಳಿಗೆ ಅನುಗುಣವಾಗಿ ಈ ಜೀವನಾದರ್ಶವನ್ನು ಸಫಲಗೊಳಿಸಲು ನಮಗೆ ಒಪ್ಪಿಸಿದ್ದಾರೆ. ನಾವು ಆತನ ಈ ಕಾರ್ಯವನ್ನು ನಿರ್ವಹಿಸುವ ಅದೃಷ್ಟಶಾಲಿಗಳಾಗಿದ್ದು, ಜತೆ ಜತೆಗೆ ಒಂದು ದೊಡ್ಡ ಜವಾಬ್ದಾರಿಯೂ...

ಪ್ರಭಾವಶಾಲಿ ಧ್ಯಾನ

ಹಲವಾರು ಬಗೆಯ ಧ್ಯಾನಗಳನ್ನು ವಿಧಿಸುವ ಹಲವಾರು ಶಿಕ್ಷಕರು ಇದ್ದಾರೆ. ಐದು ನಿಮಿಷಗಳ ಅತೀಂದ್ರಿಯ ಧ್ಯಾನದಿಂದ, ನಾಲ್ಕು ಅಥವಾ ಹೆಚ್ಚು ಗಂಟೆಗಳ ಕೆಲವು ಆಯ್ದ ಶಬ್ದಗಳ ಮಾನಸಿಕ ಪಠಣವನ್ನು ಈ ವಿಧಾನಗಳು ಒಳಗೊಂಡಿವೆ. ಮುಗ್ಧ ಜನರು ಒಂದು ಕಡೆ ಈ ಅಭ್ಯಾಸಗಳನ್ನು ಕಣ್ಣು ಮುಚ್ಚಿ ಅನುಸರಿಸುವದಾದರೆ, ಚತುರ ಶಿಕ್ಷಕನು...

ಜ್ಞಾನಾಸಕ್ತಿ

ಜ್ಞಾನಿ ಆಗುವದಕ್ಕೆ ಆಕಾಂಕ್ಷಿಸುವದು ಮಾನವ ಜೀವಿಗಳ ಸ್ವಾಭಾವಿಕ ಹಂಬಲವಾಗಿದೆ. ಕೆಲವರು ತಮ್ಮನ್ನು ತಾವು ಜ್ಞಾನಿಗಳೆಂದು ಪರಿಗಣಿಸುತ್ತಾರೆ. ಹಾಗೂ ಹೆಚ್ಚಿಗೆ ಜ್ಞಾನಿಗಳಾಗಿ ಬೆಳೆಯಲು ಇಚ್ಚಿಸುತ್ತಾರೆ. ಬೇರೆ ಕೆಲವರು ತಮ್ಮ ಸ್ವಂತದ ಜಾಣತನದಿಂದ ಬೇಸತ್ತು ಒಂದು ತರಹದ ಉಚ್ಚಮಟ್ಟದ ದೈವೀ ಜ್ಞಾನಕ್ಕಾಗಿ ಪರಿತಪಿಸುತ್ತಾರೆ. ಮಾನವಕುಲವನ್ನು ಪೀಡಿಸುವ ಎಲ್ಲ ಕೆಡಕುಗಳನ್ನೂ ಪರಿಹರಿಸುವದು...

ಆಗ ಮತ್ತು ಈಗ

ಶ್ರೀ ರಾಮಚಂದ್ರ ಮಿಶನ್ ಸೇರಿದ ಸ್ವಲ್ಪ ಸಮಯದ ನಂತರ ಸಮಾಜದ ನನ್ನ ಚಿಕ್ಕ ವಲಯದಲ್ಲಿ ನಾನೊಂದು ವಿಶಿಷ್ಟ ಸನ್ನಿವೇಶವನ್ನು ಎದುರಿಸಬೇಕಾಯಿತು. ನಮ್ಮ ಎಲ್ಲ ಸಂಗಡಿಗರಲ್ಲಿ, ನಾನು ಮಾತ್ರ ಒಂದು ಆಧ್ಯಾತ್ಮಿಕ ಸಂಸ್ಥೆಯನ್ನು ಸೇರಿದೆ ಎಂದು ಅರಿತು, ನನ್ನ ಕೆಲವು ಮಿತ್ರರು ಆಶ್ಚರ್ಯ ಚಕಿತರಾದರು. ಒಂದಲ್ಲ ಒಂದು ಸಲ...

ಅಮರತ್ವಕ್ಕೆ ದಾರಿ

ತಮ್ಮ ಮಮತೆಯ ಮಗನ ಮರಣದ ಸಮಯ ಸನ್ನಿಹಿತವಾಗುತ್ತಿರುವ ಭವಿಷ್ಯವಾಣಿಯಿಂದ ಬಾಲಕ ಮಾರ್ಕಂಡೇಯನ ತಂದೆ ತಾಯಿಗಳು ದುಃಖಕ್ಕೀಡಾಗಿದ್ದರು. ಈ ಬಾಲಕನು ಆಗಲೇ ಸರ್ವಶ್ರೇಷ್ಠನಾದ ಒಡೆಯನ ಪೂಜೆಗಾಗಿ ಹೋಗಿದ್ದನು. ಮೃತ್ಯುದೇವತೆ ಬಾಲಕನ ಬಳಿ ಹೋಗಿದ್ದನಾದರೂ, ಪರಮಾತ್ಮನ ಕರುಣೆಯಿಂದ ಆಚ್ಛಾದಿತನಾದ ಆತನನ್ನು ಮುಟ್ಟಲೂ ಸಹ ಆಗಲಿಲ್ಲ. ಮೃತ್ಯು ದೇವತೆ ಬರಿಗೈಯಿಂದ ಹಿಂದಿರುಗಬೇಕಾಯಿತು....

ಭಾರತದಲ್ಲಿ ಬೆಳಗುತ್ತಿರುವ ಹೊಸಬೆಳಕು

ಸುಮಾರು ೨೫೦೦ ವರ್ಷಗಳ ಹಿಂದೆ ಗೌತಮ ಬುದ್ದನೆಂಬ ಒಬ್ಬ ಮಹಾನ್ ವ್ಯಕ್ತಿಯು, ಈ ಭೌತಿಕ ಜೀವನದ ಕಷ್ಟಗಳಿಂದ ಮಾನವರು ಮುಕ್ತರಾಗಿ ನಿರ್ವಾಣಹೊಂದಬಹುದಾದ ಪದ್ಧತಿಗಳ ಅನುಷ್ಠಾನದ ಬಗ್ಗೆ ಬೋಧಿಸಿದನೆಂದು ಇತಿಹಾಸಕಾರರು ನಮಗೆ ಹೇಳುತ್ತಾರೆ. ಈಗಲೂ ಅದೇ ದುಃಖಗಳನ್ನು ಅನುಭವಿಸುತ್ತಿರುವ ಆದರೂ ನಿರ್ಮಾಣಕ್ಕಾಗಿ ಆಶಿಸುತ್ತಿರುವ, ಸಾಧಾರಣವಾಗಿ ಎಲ್ಲ ಬಗೆಯ ಬೌದ್ಧ...

ನಿಜತತ್ವ

ಪ್ರಿಯ ಸೋದರ, ಸೋದರಿಯರೆ, ನಾನು ರಾಯಚೂರಿನಿಂದ ಬಂದಿರುವೆ. ನನ್ನಂತೆ ಅನೇಕ ಸ್ಥಳಗಳಿಂದ ಬಹಳಷ್ಟು ಜನರು ಗುರುಗಳ ದರ್ಶನಕ್ಕಾಗಿ ಬಂದಿರುವರು. ಗುರುಗಳು ನಮ್ಮನ್ನು ಆಕರ್ಷಿಸಿದರು ಮತ್ತು ನಾವು ಇಲ್ಲಿಗೆ ಬಂದೆವು. ಇಲ್ಲಿ ನಾವು ಕೇವಲ ಗುರುಗಳ ದರ್ಶನಕ್ಕಾಗಿ ಬಂದೆವೋ ಅಥವಾ ಹೆಚ್ಚಿಗೆ ಏನಾದರೂ ಬೇಕಾಗಿ ಬಂದೆವೋ ? ಯಾವ...