27. ಮಾಯೆಯ ಐದು ವೃತ್ತಗಳು

‘ಸತ್ಯೋದಯ’ ‘ಸಹಜಮಾರ್ಗದ ಬೆಳಕಿನಲ್ಲಿ ರಾಜಯೋಗದ ಪ್ರಭಾವ’ ಮತ್ತು ‘ಅನಂತದೆಡೆಗೆ’ (ಎಲ್ಲವೂ ನಮ್ಮ ಗುರುಗಳಿಂದ ರಚಿತವಾದವು) – ಇವುಗಳನ್ನು ಓದಿದ ನಂತರ, ಇವುಗಳಲ್ಲಿ ವರ್ಣಿತವಾದಂತೆ ಕ್ರಮವಾಗಿ ವೃತ್ತಗಳು, ಮಂಡಲಗಳು ಹಾಗೂ ಗ್ರಂಥಿಗಳ ನಡುವಣ ಸಂಬಂಧದ ಬಗ್ಗೆ ಕಲ್ಪನೆ ಮಾಡಲಾರಂಭಿಸುವನು. ಒಬ್ಬ ಆರಂಭಿಕನು ಇನ್ನೂ ಹೆಚ್ಚು ವಿವರಿಸಬೇಕೆಂದು ಲೇಖಕರಿಗೆ ಕೇಳುವುದು...

28. ಪೂಜೆಯ ತಂತ್ರ-ಕೌಶಲ

ಒಬ್ಬ ಅಭ್ಯಾಸಿಯು ಗುರುಗಳಿಗೆ -“ಮೊದಲು ನಾನು ದೇವರನ್ನು ನೋಡಬೇಕು. ಅನಂತರ ನಾನು ಪೂಜೆ ಪ್ರಾರಂಭಿಸುವೆ” -ಎಂದು ಪತ್ರಬರೆದಿದ್ದನು. ಅದಕ್ಕೆ ಪೂಜ್ಯಗುರುಗಳು – “ಯಾವುದು ನಿಮ್ಮ ಎಲ್ಲ ಚಟುವಟಿಕೆಯ ಕೊನೆಯಾಗಿದೆಯೋ, ಅದನ್ನು ನಿಮ್ಮ “ಅನುಭವದಲ್ಲಿ ತಂದುಕೊಳ್ಳಬೇಕೆನ್ನುವಿರಿ. ಇದು, ಒಬ್ಬ ಹುಡುಗನು ಮೊದಲು ಷೇಕ್ಸಪಿಯರ್‌ನನ್ನು, ಮಿಲ್ಟನ್‌ನನ್ನು ಅರ್ಥಮಾಡಿಕೊಳ್ಳುವೆ, ಅನಂತರ ಎ...

29. ಅವನ ಸಂಸ್ಥೆಯಲ್ಲಿ ನಮ್ಮ ಪಾತ್ರ

ಪ್ರಿಯ ಸೋದರ ಸೋದರಿಯರೆ, ಸದ್ಗುರುವಿನ ಕೃಪೆಯಿಂದ ರಾಯಚೂರು ಕೇಂದ್ರದಲ್ಲಿ ಸಂಸ್ಥಾಪಕರ ದಿನವನ್ನು (ವಾರ್ಷಿಕ) ಆಚರಿಸಲು ನಾವೆಲ್ಲರೂ ಸೇರಿದ್ದೇವೆ, ನಾವೆಲ್ಲರೂ ಇಲ್ಲಿ ಸೇರಿರುವ ಸಂಗತಿಯು ನಮ್ಮ ಸದ್ಗುರುಗಳ ಜಾಗ್ರತ ಸಾನ್ನಿಧ್ಯಕ್ಕೆ ನಿಃಸಂದೇಹವಾಗಿ ಪ್ರತ್ಯಕ್ಷ ಪ್ರಮಾಣವಾಗಿದೆ. ಯಾರ ಅಸ್ತಿತ್ವದ ಪ್ರತಿಯೊಂದು ಕಣವೂ ಪರಮ ತತ್ತ್ವದಲ್ಲಿ ಲಯಗೊಂಡಿದೆಯೋ ಅಂತಹ, ಸಹಜ ಮಾರ್ಗದ...

೩೦ ವಿಭೂತಿಪುರುಷ

ದೈವತ್ವ, ಚಿಂತನೆ, ಶಕ್ತಿ, ಕಾರಣ (cause) ಮತ್ತು ತತ್ತ್ವ ಅಥವಾ ಬೇರೆ ಹೆಸರನ್ನು ತೆಗೆದುಕೊಳ್ಳಬಹುದು. ಅದು ಪ್ರತಿಯೊಂದು ಜೀವಿಯಲ್ಲಿಯೂ ಉಂಟು. ಅದು ಮಾನವ ಜೀವಿಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿದೆ. ಆದರೆ ಮಾನವ ಜೀವಿಯು ತನ್ನದೇ ವ್ಯಕ್ತಿತ್ವದಲ್ಲಿ ಅದನ್ನು ಅಡಗಿಸಿ ಇಟ್ಟುಕೊಳ್ಳುತ್ತಾನೆ. ಕೇವಲ ಒಬ್ಬ ವಿಭೂತಿ ಪುರುಷನು (ವಿಶೇಷ ವ್ಯಕ್ತಿಯು)...

31. ಸಾಕ್ಷಾತ್ಕಾರದ ಕೆಲವು ರೂಪಗಳು

ಹೃದಯವು ಅನೇಕ ಇಚ್ಛೆಗಳಿಂದ ತುಂಬಿರುವುದು, ಇಚ್ಛೆಗಳ ನಿರಂತರ ಚಲನೆಯು (ಪ್ರೇರಣೆಯು) ಅದನ್ನು ಉಂಟುಮಾಡುವ, ಹೃದಯದಲ್ಲಿ ಕಾರ್ಯಗೈಯುತ್ತಿರುವ, ಗ್ರಹಿಸಲಾಗದಂತಹ (ಸೂಕ್ಷ್ಮ) ಕಂಪನಗಳ ಒಂದು ಕಲ್ಪನೆಯನ್ನು ಕೊಡುವುದು. ಕೆಲವೊಮ್ಮೆ, ಧ್ಯಾನದ ಸಮಯದಲ್ಲಿ ಹೃದಯದ ಚಲನೆಯೇ ಸ್ವತಃ ಕಂಡುಬರುವುದು. ವಾಸ್ತವವಾಗಿ, ಹೃದಯದಲ್ಲಿದೆಯೆಂದು ಊಹಿಸಲಾದ ದೈವೀ ಪ್ರಕಾಶವೇ ಈ ಅಗೋಚರ ಕಂಪನಗಳು ಅಥವಾ...

32. ಸಹಜಮಾರ್ಗದ ಜನ್ಮಸ್ಥಳ

ನಮ್ಮ ಗುರುಗಳು ಷಾಹಜಹಾನಪುರದ ಈ ಆಶ್ರಮವನ್ನು ಸಹಜಮಾರ್ಗದ ಜನ್ಮಸ್ಥಳವೆಂದು ಕರೆದರು ಹಾಗೂ ತಮ್ಮ ಸಮರ್ಥ ಸದ್ಗುರುವಿನ ಸ್ಮರಣಾರ್ಥ ಅದನ್ನು ಅವರಿಗೆ ಅರ್ಪಿಸಿದರು. ಈಗ, ಇದು ನಮ್ಮ ಗುರುಗಳ ಶಾಶ್ವತ ವಿಶ್ರಾಂತಿಸ್ಥಾನವೂ ಆಗಿದೆ. ಈ ಸ್ಥಾನವನ್ನು ಆಧ್ಯಾತ್ಮಿಕ ಶಕ್ತಿಯಿಂದ ತುಂಬಲಾಗಿದೆ, ಹಾಗೂ ಅದು ಸಾವಿರಾರು ವರ್ಷಗಳ ಕಾಲ ಹಾಗೆಯೇ...

33. ರಾಮಚಂದ್ರಜಿಯವರ ಆತ್ಮಕಥೆ

“……… ಆದರೆ, ಈ ಎಲ್ಲ ವಿಷಯಗಳನ್ನು ನನ್ನ ಪ್ರತಿನಿಧಿಗೆ ಅವರು ಯಾರೇ ಆಗಿರಲಿ, ನಾನು ಪ್ರಕಟಗೊಳಿಸಬಹುದು. ನಾನು ಬಹಳಷ್ಟು ಸಂಗತಿಗಳನ್ನು ಬಹಿರಂಗಗೊಳಿಸಬೇಕಾಗುವುದು. ಅವುಗಳಲ್ಲಿ ಕೆಲವು ನನ್ನ ಜೀವಿತ ಕಾಲದಲ್ಲಿ ಬೆಳಕಿಗೆ ಬರುವವು. , ಉಳಿದವುಗಳು ನನ್ನ ನಂತರ ಅರ್ಥಾತ್ ನಾನು ಭೌತಿಕ ರೂಪದ ಜೀವನದಿಂದ ಕಣ್ಮರೆಯಾದ ನಂತರ...

34. ಧ್ಯಾನ ಹಾಗೂ ಪ್ರಾಣಾಹುತಿಯ ಪಾತ್ರ

ಮಾನವನ ಹಾಗೂ ಜಗತ್ತಿನ ಸೃಷ್ಟಿಕರ್ತನಾದ ಸರ್ವಶಕ್ತ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಜಗತ್ತಿನ ಎಲ್ಲ ಧರ್ಮಗಳೂ ಪ್ರೋತ್ಸಾಹಿಸುತ್ತವೆ. ಮಾನವನು ಮೂಲಭೂತವಾಗಿ ‘ದಿವ್ಯ’ನಾಗಿರುವನೆಂದೂ ಕೂಡ ಅವು ಹೇಳುತ್ತವೆ; ಆದರೆ ನಾವು ನಮ್ಮ ನೈಜ ಸ್ವರೂಪವನ್ನು ಮರೆತಂತೆ ಕಾಣುತ್ತದೆ. ನಾವು ನಮ್ಮ ಅಸಾಮರ್ಥ್ಯವನ್ನು, ಹತಾಶೆಯನ್ನು ಹಾಗೂ ಎಂದೆಂದಿಗೂ ಕೊನೆಗೊಳ್ಳದ ಅಸಂತುಷ್ಟಿಯನ್ನು ಪ್ರತ್ಯಕ್ಷ ಅನುಭವಿಸುತ್ತೇವೆ....

35. ಅಮರ ವ್ಯಕ್ತಿತ್ವ

ಅಮರರಾದಂತಹ ಕೆಲವು ವ್ಯಕ್ತಿಗಳಿದ್ದಾರೆ ಹಾಗೂ ಇನ್ನು ಕೆಲವರು ಅಮರತ್ವವನ್ನು ಪಡೆದರು ಎಂದು ಹಿಂದೂಗಳು ನಂಬುತ್ತಾರೆ. ಪತಂಜಲಿ ಹೇಳುವುದೇನೆಂದರೆ, ಭಗವಂತನು (ಈಶ್ವರ) ಪುರುಷ ವಿಶೇಷನಿದ್ದು, ಅವನು ಕರ್ಮ, ಕರ್ಮಫಲ ಹಾಗೂ ಆಸಕ್ತಿಯಿಂದ ಮುಕ್ತನಿದ್ದಾನೆ. ಕ್ಲೇಶ ಕರ್ಮ ವಿಪಾಕಾಶಯೈರಪರಾಮೃಷ್ಟಃ ಪುರುಷ ವಿಶೇಷ ಈಶ್ವರಃ | [ಯೋ.ಸೂ 1-35] ಪೂಜ್ಯ ಬಾಬೂಜಿ...

36. ಗುರುಗಳ ಜನ್ಮದಿನಾಚರಣೆಗಳು

ಮಹಾ ವ್ಯಕ್ತಿಗಳ ಜನ್ಮ ದಿನಗಳು ಅರ್ಥಪೂರ್ಣ ದಿನಗಳಾಗಿರುತ್ತವೆ. ನಮ್ಮ ಗುರುಗಳಿಗೆ ಇರುವಂತಹ ಮಹತ್ತ್ವವು ವಿಶಿಷ್ಟವಾಗಿ ಸಹಜಮಾರ್ಗ ಪದ್ಧತಿಯ ವಿಚಾರಧಾರೆ, ತತ್ತ್ವದರ್ಶನ ಅಥವಾ ಯೋಗ-ಅಭ್ಯಾಸ ಇವುಗಳಿಂದ ಬಂದುದು. ಷಾಹಜಹಾನಪುರವು ಸಹಜಮಾರ್ಗದ ಹಾಗೂ ಅದರ ಮೂಲಪುರುಷರಾದ ಶ್ರೀ ಬಾಬೂಜಿ ಮಹಾರಾಜರ ಜನ್ಮಸ್ಥಳವಾಗಿದೆ. ಷಾಹಜಹಾನಪುರದಲ್ಲಿಯ ಗುರುಗಳ ಜನ್ಮ ದಿನಾಚರಣೆಯಲ್ಲಿ ಭಾಗವಹಿಸುವ ಮೂಲಕ...