57. ಉದಾತ್ತ ಜೀವನ
“ಮಹಾಪುರುಷರ ಜೀವನಗಳು ನಮಗೆ ನೆನಪಿಸಿಕೊಡುತ್ತವೆ. ನಾವೂ ನಮ್ಮ ಜೀವನವನ್ನು ಉದಾತ್ತಗೊಳಿಸಿಕೊಳ್ಳಬಹುದೆಂದು.” ‘ಉದಾತ್ತತೆಯ’ ಅರ್ಥವೇನೆಂದು ತಿಳಿಯದೆಯೇ, ನಾನು ನನ್ನ ಜೀವನವನ್ನು ಉದಾತ್ತಗೊಳಿಸಿಕೊಳ್ಳ- ಬಯಸಿದೆ. ‘ಮಹಾಪುರುಷರು’ ಎಂಬುದರ ಅರ್ಥವನ್ನು ಖಚಿತವಾಗಿ ಅರಿಯದೆಯೇ ನಾನು ಮಹಾಪುರುಷರನ್ನು ಕಾಣಲು ಮತ್ತು ಅವರ ಜೀವನದ ಅಧ್ಯಯನ ಮಾಡಲು ಬಯಸಿದೆ. ನಿಜವಾಗಿ ಮಹಾಪುರುಷರಾಗಿದ್ದವರ ಭೇಟಿಗಾಗಿ ಮತ್ತು...