ನೀನೆ ಮಾನವ ಜೀವನದ ಗುರಿ

1. ಪೂಜ್ಯ ಸದ್ಗುರು ಶ್ರೀ ಬಾಬೂಜಿ ಮಹರಾಜರ ಜೀವನ ಮತ್ತು ಕೆಲಸದ ಬಗ್ಗೆ ಚಿಕ್ಕ ವಿವರಣೆ

ಇಂದು ಈ ಮಹತ್ವವಾದ ಸಮ್ಮೇಳನ (ಸಭೆ) ನಮ್ಮ ಗುರುಗಳ ಜನ್ಮದಿನವನ್ನು ಆಚರಿಸುತ್ತಿದೆ. ನೀವು ನಮ್ಮ ಆಹ್ವಾನಕ್ಕೆ ಸಮಂಜಸವಾದ ರೀತಿಯಲ್ಲಿ ಪ್ರತಿಕ್ರಿಯೆ ತೋರಿದ್ದರಿಂದ ನಾವು ಪುರಸ್ಕೃತರೆಂದು ಭಾವಿಸುತ್ತೇವೆ. ನಮ್ಮ ಆಹ್ವಾನವು ನೈಜ ಅಭ್ಯಾಸಿಗಳಿಗಾಗಿ ಎಂಬುದಾಗಿತ್ತೆಂಬುದನ್ನು ನಿಮ್ಮ ನೆನಪಿಗೆ ತರುವ ಸಲುಗೆಯನ್ನು ನಾನು ತೆಗೆದುಕೊಳ್ಳಲೇ? ನಮ್ಮ ಗುರುಗಳ ಜೀವನ ಮತ್ತು...

2. ಗುರುಗಳ ಧೈಯ

ಅನಾದಿ ಕಾಲದಿಂದ ವಿಶ್ವದಾದ್ಯಂತ ಜನರು ತಮ್ಮದೇ ಆದ ಧಾರ್ಮಿಕ ತತ್ವಗಳನ್ನು ವಿಧೇಯರಾಗಿ ಪರಿಪಾಲಿಸುತ್ತಿದ್ದಾರೆ. ಆದರೆ ಪರಿಣಾಮ ಮಾತ್ರ ನಮ್ಮಲ್ಲಿ ಸ್ವಾರ್ಥತೆ, ಪಕ್ಷಪಾತ, ಅಹಂಕಾರ, ಸಂಕುಚಿತ ಮನೋಭಾವ ಹಾಗೂ ಪ್ರಾಪಂಚಿಕ ಲಾಭ ಮತ್ತು ಸೌಖ್ಯತೆಗಳಲ್ಲಿ ಪರ್ಯವಸನವಾದುದನ್ನು ಕಾಣುತ್ತೇವೆ. ನಮ್ಮ ಜಗತ್ತಿನ ಹಿಂದಿನ ಸಂತರ ತತ್ವಗಳ ಅನುಸರಣೆಯ ಉದ್ದೇಶ ಇದೇ...

3. ಆಧ್ಯಾತ್ಮಿಕ ಮೌಲ್ಯಾಧಾರಿತ ಭವಿಷ್ಯತ್ತಿನ ನಾಗರಿಕತೆ

ಅಂದಾಜು 35 ವರುಷಗಳ ಹಿಂದೆ ಈ ಲೇಖಕನು ಭಾರತದ ಮಹಾನ್ ವ್ಯಕ್ತಿಯು ಬರೆದ ಅದ್ವಿತೀಯ ಮತ್ತು ಚಕಿತಗೊಳಿಸುವ ಸಾಲುಗಳನ್ನು ಓದಿದನು. ಅದು ಹೀಗಿತ್ತು. “ಅಸ್ತಿ-ಭಸ್ಮಗಳ ಮೇಲೆ ಮುಂಬರುವ ಜಗತ್ತಿನ ರಚನೆಯಾಗುವದು. ಭಾರತದಲ್ಲಿ ಆಧ್ಯಾತ್ಮದ ತಳಹದಿಯ ಮೇಲೆ ಒಂದು ವಿಧದ ನಾಗರಿಕತೆಯು ಬೆಳೆದು, ಕ್ರಮೇಣ ಅದು ಪ್ರಪಂಚದ ನಾಗರಿಕತೆಯಾಗುವದು....

4. ಪ್ರಾರ್ಥನೆ

ಪ್ರತಿಯೊಂದು ಧರ್ಮದಲ್ಲಿ ಭಗವಂತನನ್ನು ಪ್ರೀತಿಸುವ ವಿಧಾನವೆಂದರೆ ಪ್ರಾರ್ಥನೆ. ಅದರಲ್ಲಿ ಆತನ ಸ್ತುತಿ ಮತ್ತು ಬೇಡಿಕೆಗಳು ಕೂಡಿರುತ್ತವೆ. ಕೆಲವು ಧರ್ಮಗಳಲ್ಲಿ ಕೇವಲ ಪ್ರಾರ್ಥನೆಯೊಂದೇ ಇರುವದು, ಆದರೆ ಪೂಜೆ ಇರುವದಿಲ್ಲ. ಸಾಮಾನ್ಯವಾಗಿ ಜನರು ಪ್ರಾರ್ಥನೆಯಲ್ಲಿ ಭಗವಂತನ ಸಮ್ಮುಖ ತಮ್ಮ ಇಚ್ಛೆಗಳನ್ನು ಬೇಡಿಕೆಗಳ ರೂಪದಲ್ಲಿ ಇಡುತ್ತಾರೆ. ಇಂತಹ ಬೇಡಿಕೆಗಳಲ್ಲಿ ಆಯುಷ್ಯ, ಆರೋಗ್ಯ,...

5. ನೀನೆ ಮಾನವ ಜೀವನದ ಗುರಿ

ಜೀವನವೆಂದರೆ ದೇಹ, ಆತ್ಮ, ಹೃದಯ, ಮನಸ್ಸು ಮತ್ತು ಇಂದ್ರಿಯಗಳಿಂದ ಕೂಡಿದ ಒಂದು ಸಂಮಿಶ್ರಣ. ಮುಖ್ಯವಾಗಿ, ಪ್ರಾಣಶಕ್ತಿಯೇ ಇದರ ಬುನಾದಿ. ಆತ್ಮಕ್ಕೆ ಇರುವಿಕೆಯ ಭಾವ ಬಂದಾಗಲೇ ಅದು ಜೀವವಾಗುವುದು. ಜೀವದಿಂದಾಗಿದ್ದ ದೇಹ, ಮನಸ್ಸು ಮತ್ತು ಸರ್ವ ಅಂಗಾಂಗಗಳಿಗೆ ಒಂದು ನಿರ್ಧಿಷ್ಟವಾದ ಕಾಲಮಿತಿ ಇದೆ. ಈ ಕಾಲಮಿತಿಯು ಪ್ರತಿಯೊಬ್ಬರಿಗೂ ಬೇರೆ...

6 ನೀನೆ ನಮ್ಮ ಏಕಮಾತ್ರ ಸ್ವಾಮಿ ಮತ್ತು ಇಷ್ಟದೈವ (ಖಾದರೇ ಮುತಲಖ ಔರ ಹಮಾರಾ ಮಾಬೂದ ಹೈ)

ಸೃಷ್ಟಿ ನಿರ್ಮಾಣವಾದದ್ದು ಸೃಷ್ಟಿಕರ್ತನಿಂದ. ಆತನಿಗೆ ದೇವರು, ಭಗವಂತ ಅಥವಾ ಮಾಸ್ಟರ್ ಎಂದು ಕರೆಯುವರು. ಸೃಷ್ಟಿ ಎಂದರೇನು ಎಂಬ ಪ್ರಶ್ನೆ ಮನಸ್ಸಿನಲ್ಲಿ ಬಂದಾಗ ನಮಗೆ ಹೊಳೆಯುವದೇನೆಂದರೆ, ಇಡೀ ಜಗತ್ತು, ನಮ್ಮ ಇಂದ್ರಿಯಗಳಿಗೆ ಗೋಚರವಾಗುವ ಭೂಮಿ, ಆಕಾಶ, ನೀರು, ಖಂಡಗಳು, ದೇಶಗಳು ಮತ್ತು ಅವುಗಳಲ್ಲಿರುವ ಜನ, ಪ್ರಾಣಿಗಳು, ಗಿಡಮರಗಳು, ಸಸ್ಯಗಳು,...

7 ಮಾನವನ ಸೃಷ್ಟಿ

ಸೃಷ್ಟಿಯ ನಿರ್ಮಾಣದ ಕಾಲಕ್ಕೆ ಒಂದು ತರಹದ ಕೋಭೆ ಅಂದರೆ ವೈಚಾರಿಕ ಮಂಥನವುಂಟಾಯಿತು. ಆ ವಿಚಾರದಲ್ಲಿ ಒಂದು ಶಕ್ತಿಯು ಅದರಲ್ಲಿ ಚೇತನವನ್ನುಂಟು ಮಾಡಿತು. ಆ ಚೇತನದಿಂದ ಅದರಲ್ಲಿ ಒಂದು ತರಹದ ಗತಿ ಬಂದಿತು (Motionless Motion) ಇದರಿಂದ ಅದರಲ್ಲಿ ಶಾಖ (Heat) ಉತ್ಪನ್ನವಾಯಿತು ಮತ್ತು ಈ ಶಾಖದಿಂದ ಅದು...

8 ಧ್ಯಾನ

ನಮ್ಮ ಮನಸ್ಸಿನಲ್ಲಿದ್ದ ಒಂದು ನಿರ್ದಿಷ್ಟವಾದ ಗುರಿ ಅಥವಾ ಲಕ್ಷದ ಮೇಲೆ ನಮ್ಮ ವಿಚಾರವನ್ನು ನೆಲೆಸಿರುವಂತೆ ಮಾಡುವ ಪ್ರಕ್ರಿಯವೇ ಧ್ಯಾನ. ವಿಚಾರಗಳನ್ನು ನಾವು ಮಾಡುವೆವೋ ಅಥವಾ ಅವು ತಾವಾಗಿಯೇ ನಮ್ಮಲ್ಲಿ ಬರುತ್ತವೆಯೋ? ಒಂದು ವೇಳೆ ನಾವು ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ವಿಚಾರಗಳು ಹೆಚ್ಚಾಗಿ ತಾವಾಗಿಯೇ ಬರುವವು ಎಂದು ತಿಳಿಯುವದು....

9 ಶುದ್ದೀಕರಣ ವಿಧಾನ

ಶುದ್ದೀಕರಣವೆಂದರೇನು? ಸಾಮಾನ್ಯವಾಗಿ ಶುದ್ದೀಕರಣವೆಂದರೆ ಕೊಳೆಯ ನಿರ್ಮೂಲನೆ ಎಂದು ಅರ್ಥೈಸಲಾಗುತ್ತದೆ. ಪ್ರತಿಯೊಂದು ಧರ್ಮವು ಪ್ರಾರ್ಥನೆ ಅಥವಾ ಪೂಜೆಗೆ ಮೊದಲು ಇದನ್ನು ಪ್ರತಿಪಾದಿಸುತ್ತದೆ. ಶುದ್ದೀಕರಣ ವಿಧಾನದಲ್ಲಿ ಎರಡು ಪ್ರಕಾರಗಳಿವೆ. ಅವೆಂದರೆ ಬಾಹ್ಯ ಮತ್ತು ಅಂತರಂಗ ಶುದ್ದೀಕರಣ. ಸಾಧನೆಯಲ್ಲಿ ಇವೆರಡನ್ನೂ ಕಡ್ಡಾಯಗೊಳಿಸಲಾಗಿದೆ. ಆಧುನಿಕ ಸಂಸ್ಕೃತಿಯಲ್ಲಿ ಅಂತರಂಗ ಶುದ್ದೀಕರಣದ ಬದಲಾಗಿ ಬಹಿರಂಗ ಶುದ್ದೀಕರಣಕ್ಕೆ...

10 ನಿರಂತರ ಸ್ಮರಣೆ

ನಾವೆಲ್ಲರೂ ನಮ್ಮ ಜೀವನದ ಗುರಿಯನ್ನು ನಿರ್ಧರಿಸಿಕೊಂಡು ಶ್ರೀ ಬಾಬೂಜಿ ಮಹಾರಾಜರು ಹೇಳಿಕೊಟ್ಟ ಪದ್ಧತಿಯ ಪ್ರಕಾರ ಸುಮಾರು ವರ್ಷಗಳಿಂದ ಸಾಧನೆಯನ್ನು ಸರಿಯಾಗಿಯೇ ಮಾಡುತ್ತಲಿದ್ದೇವೆ. ಬೆಳಿಗ್ಗೆ ಧ್ಯಾನ, ಸಾಯಂಕಾಲ ಶುದ್ದೀಕರಣ ಮತ್ತು ರಾತ್ರಿ ಪ್ರಾರ್ಥನೆಯನ್ನು ತಪ್ಪದೆ ನಿಯಮಿತವಾಗಿ ಮಾಡುತ್ತಿದ್ದೇವೆ. ವಾರಕ್ಕೆ ಸರಿಯಾಗಿ ಸತ್ಸಂಗಕ್ಕೆ ಕೂಡ ಹೋಗುತ್ತಾ ಇದ್ದೇವೆ. ಇದಲ್ಲದೆ ಎಲ್ಲೆಲ್ಲಿ...