ಪೂಜ್ಯ-ಬಾಬೂಜಿಯವರ-ಸಂದೇಶಗಳು

1. ಪ್ರಥಮ ಸಂದೇಶ

ಪ್ರಿಯ ಬಂಧುಗಳೇ , ನಾನು ನನ್ನ ಜೀವನದ ಬಹುಭಾಗವನ್ನು ನಿರಂತರ ಸ್ಮರಣೆಗೆ ಮೀಸಲಿಟ್ಟಿದ್ದೇನೆ. ನನ್ನ ಗುರುಗಳಾದ ಫತೇಗಡದ ಮಹಾತ್ಮಾ ಶ್ರೀ   ರಾಮಚಂದ್ರಜಿಯವರ ಪಾವನ ಪಾದ ಸನ್ನಿಧಿಯನ್ನು ಪಡೆದಾಗ ನನ್ನ ವಯಸ್ಸು ಇಪ್ಪತ್ತೆರಡು. ಅವರೇ ನನ್ನನ್ನು ತಮ್ಮ ವಾತ್ಸಲ್ಯ ಮತ್ತು ಅನುಗ್ರಹಗಳ ಮಡಿಲ ಲ್ಲಿ ಎತ್ತಿ ಬೆಳೆಸಿದವರು....

2 ದೈವೀ ಸಾಕ್ಷಾತ್ಕಾರಕ್ಕೆ ಸುಲಭೋಪಾಯ

( ೧೫ – ೧೨ – ೧೯೫ ೭ ರಂದು ಗುಲ್ಬರ್ಗ ಕೇಂದ್ರದಲ್ಲಿ ನೀಡಿದ ಸಂದೇಶ ) ಪ್ರಿಯರೇ , ಮಾನವಕುಲದ ಮೇಲೆ ನನಗಿರುವ ಆಳವಾದ ಮಮತೆಯಿಂದಾಗಿ ಪ್ರತಿಯೊಂದು ಹೃದ ಯವೂ ಶಾಂತಿ , ಸಂತೋಷಗಳಿಂದ ತುಂಬಿ ತುಳುಕಲಿ ಎಂದು ನಾನು ನನ್ನ ಹೃದಯದ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ....

3 ಗುಲಬರ್ಗಾ ಶಾಖೆಯ ಉದ್ಘಾಟನಾ ಸಂದೇಶ

ಆಧ್ಯಾತ್ಮಿಕ ಮಂದಿರವನ್ನು ನೀವು ನಿರ್ಮಿಸಿಕೊಳ್ಳುವಲ್ಲಿ ನೆರವಾಗಲು, ನಾನು ನನ್ನ ಸರಳ ಅಭಿಪ್ರಾಯಗಳನ್ನು ಕೆಲ ಶಬ್ದಗಳಲ್ಲಿ ನಿಮ್ಮ ಮುಂದಿಡುವುದಲ್ಲದೆ, ನನ್ನ ಹೃದಯವನ್ನೇ ನಿಮಗೆ ನೀಡಲು ನನಗೆ ಅತೀವ ಸಂತಸವೆನಿಸುತ್ತದೆ. ನಮ್ಮ “ಮಿಷನ್ನಿ ”ನ ಶಾಖೆಯ ರೂಪದಲ್ಲಿ ಇಲ್ಲಿ ಈಗಾಗಲೇ ಅದರ ತಳಪಾಯವನ್ನು ಹಾಕಲಾಗಿದೆ. ನಮ್ಮ ಅತ್ಯಂತ ಸಮರ್ಥ ಸೋದರರಲ್ಲೊಬ್ಬರಾದ...

4. ನನ್ನ ಗುರುಗಳ ಸಂದೇಶ

(ಸೆಪ್ಟೆಂಬರ ೧೯೬೦) ಇಡೀ ಮಾನವಕುಲದ ಕಲ್ಯಾಣಕ್ಕಾಗಿ ನನ್ನ ಗುರುಗಳ ಸಂದೇಶವನ್ನು ಬಿತ್ತರಿಸಲು ನನಗೆ ತುಂಬ ಸಂತೋಷವಾಗುತ್ತಿದೆ. ಅವರ ಶುಭನಾಮ ಸಮರ್ಥಗುರು ಮಹಾತ್ಮಾ ರಾಮಚಂದ್ರಜಿ. ಅವರು ಫತೇಹ್ಗಡದವರು. ಅವರು ನಮ್ಮ ಸಂಸ್ಥೆಯ ಆದಿಗುರುಗಳು. ಅವರು ತಮ್ಮ ಜೀವನವನ್ನೆಲ್ಲ ಮಾನವತೆಯ ಸೇವೆಯಲ್ಲಿಯೇ ಸವೆಸಿದರು. ಜನರು ಸಾಮಾನ್ಯವಾಗಿ ಒಂದೇ ಜನ್ಮದಲ್ಲಿ ಮುಕ್ತಿಯನ್ನು...

5. ಸಹಜಮಾರ್ಗ ಪದ್ದತಿ

(ಮಿಷನ್ನಿನ, ೧೯೬೩ ರ ವಾರ್ಷಿಕೋತ್ಸವದಲ್ಲಿ ನೀಡಿದ ಸಂದೇಶ) ಇಂದು ನಾನು, ಸಹಜಮಾರ್ಗ ಅಥವಾ ಸಾಕ್ಷಾತ್ಕಾರದ ಸ್ವಾಭಾವಿಕ ಪಥವೆಂದು ಪರಿಚಿತವಾದ ನಮ್ಮ ಪದ್ದತಿಯ ಮಹತ್ವಪೂರ್ಣ ವೈಶಿಷ್ಟ್ಯಗಳಲ್ಲಿ ಕೆಲವೊಂದನ್ನು ನಿಮ್ಮ ಮುಂದಿಡುತ್ತೇನೆ. ದಿನನಿತ್ಯದ ಸಾಮಾನ್ಯ ಪ್ರಾಪಂಚಿಕ ಜೀವನಕ್ಕೆ ಸುಲಭವಾಗಿ ಹೊಂದಿಕೊಳ್ಳುವ ಅತ್ಯಂತ ಸರಳ ಹಾಗೂ ಸ್ವಾಭಾವಿಕ ಪಥದಲ್ಲಿ ಅದು ಮುಂದುವರೆಯುತ್ತದೆ....

6. ಸಹಜಮಾರ್ಗದ ಸಾರ

(ಮೈಸೂರಿನಲ್ಲಿ, ೨-೧೨-೧೯೬೪ ರಂದು ನೀಡಿದ ಸಂದೇಶ) ಮಹಾತ್ಮರು ಜನಿಸುವುದು ಆಕಸ್ಮಿಕವಾಗಿ ಅಲ್ಲ. ಜಗತ್ತು ಅವರಿಗಾಗಿ ಉತ್ಕಟ ನಿರೀಕ್ಷೆಯಿಂದ ಕಾದಿರುವಾಗ ಅವರು ಜನ್ಮ ತಳೆಯುತ್ತಾರೆ. ಪ್ರಕೃತಿಯ ನಿಯಮವೇ ಹೀಗಿದೆ. ಮಾನವ ಜೀವನದಲ್ಲಿ, ಸ್ಥೂಲ ಭೌತಿಕತೆಯು ಅಧ್ಯಾತ್ಮದ ಸ್ಥಾನವನ್ನಾಕ್ರಮಿಸಿಕೊಂಡು, ಯೌಗಿಕ ಪ್ರಾಣಾಹುತಿಯು ಬಳಕೆಯಿಂದ ಬಹುತೇಕ ಮರೆಯಾಗಿಹೋಗಿ, ಅಧ್ಯಾತ್ಮವು ದಿಕ್ಕೆಟ್ಟು ತತ್ತರಿಸುತ್ತಿದ್ದ...

7. ಸಹಜಮಾರ್ಗ- ಒಂದು ಗತಿಶೀಲ ಪದ್ದತಿ

(೨೩–೧೨–೧೯೬೪ ರಂದು ಬೆಂಗಳೂರಿನಲ್ಲಿ ನೀಡಿದ ಸಂದೇಶ)  ಪ್ರಕೃತಿಯ ಗೂಢತೆಯನ್ನು ಅನಾವರಣಗೊಳಿಸುವುದು ಮಾನವನ ನಿರಂತರ ಪ್ರಯತ್ನವಾಗಿದ್ದು, ಅದು ಜ್ಞಾನದ ಎಲ್ಲೆಗಳನ್ನು ವಿಸ್ತರಿಸಿದೆ. ಈ ರೀತಿ, ಪ್ರಕೃತಿಯಲ್ಲಿ ಗೋಚರಿಸುವ ಎಲ್ಲದರಲ್ಲಿಯೂ ಅವನ ಅನ್ವೇಷಣೆ ಮುಂದುವರೆದಿದೆ. ನಾವು ಏನನ್ನಾದರೂ ಅರಸತೊಡಗಿದರೆ, ನಮ್ಮ ಚಿಂತನೆಗೆ ಏನಾದರೊಂದು ವಿಷಯವು ದೊರೆಯುವುದು. ನಾವು ಅದರಾಚೆಗೆ ಮುಂದುವರಿದಾಗ,...

8. ಸಹಜಮಾರ್ಗದ ಪ್ರಭಾವ

(ಡಿಸೆಂಬರ ೧೯೬೫ ರಲ್ಲಿ ಮೈಸೂರಿನಲ್ಲಿ ನೀಡಿದ ಸಂದೇಶ) ಸಾಕ್ಷಾತ್ಕಾರ ಹಾಗೂ ಮುಕ್ತಿಗಾಗಿ ತೀವ್ರಾಸಕ್ತಿಯಿಂದ ಹಂಬಲಿಸುವವರು ನಮ್ಮಲ್ಲಿ ಅನೇಕರಿದ್ದಾರೆ. ಮತ್ತು ಅದು ಅವರ ಕರ್ತವ್ಯವೆಂದು ಭಾವಿಸುತ್ತಾರೆ. ಆದರೆ ಕರ್ತವ್ಯವನ್ನು ಕುರಿತು ಮಾತನಾಡಿದಾಗ ನಾವು ಒಂದು ಬಗೆಯ ಪರಿಮಿತಿಗೊಳಪಟ್ಟಿರುವುದನ್ನು ಕಾಣುತ್ತೇವೆ. ಆ ಪರಿಮಿತಿ ಯಾವುದು ? ಅದು, ಆಲೋಚನೆ ಮತ್ತು...

9. ಸಹಜ ಪಥ

(೧೯, ಡಿಸೆಂಬರ, ೧೯೬೫ ರಂದು ತಿರುಪತಿಯ ಯೋಗಾಶ್ರಮದ ಉದ್ಘಾಟನಾ  ಸಂದರ್ಭದಲ್ಲಿ ನೀಡಿದ ಸಂದೇಶ) ಹೃದಯಾಂತರಾಳದ ಭಾವನೆಗಳೊಂದಿಗೆ, ಪವಿತ್ರ ಭೂಮಿಯಾದ ತಿರುಪತಿಯಲ್ಲಿ, ಶ್ರೀರಾಮಚಂದ್ರ ಮಿಷನ್ನಿನ ಆಶ್ರಮದ ಉದ್ಘಾಟನಾ ಸಮಾರಂಭವನ್ನು ನೆರವೇರಿಸಲು ನಾವೆಲ್ಲ ಸೇರಿದ್ದೇವೆ. ನಮ್ಮ ಅಭ್ಯಾಸಿಗಳ ಮತ್ತು ಹಿತೈಷಿಗಳ ಸಕ್ರಿಯ ಸಹಕಾರ ಹಾಗೂ ನೆರವಿನಿಂದ ಅದು, ಶೀಘ್ರವಾಗಿ ವೃದ್ಧಿಗೊಂಡು,...

10 ಜೀವನದ ಉದ್ದೇಶ

(ವಿಜಯವಾಡದ ಧ್ಯಾನ ಮಂದಿರದ ಉದ್ಘಾಟನಾ ಸಂದರ್ಭ, ೨೫-೫-೧೯೬೭)  ‘ಸತ್ಸಂಗ’ ನಡೆಸಲೋಸುಗ ಒಂದು ಕೊಠಡಿಯನ್ನು ಕಟ್ಟಿಸಿದ್ದಕ್ಕಾಗಿ, ಡಾ. ವಿ. ಪಾರ್ಥಸಾರಥಿಯವರ ಬಗ್ಗೆ ಕೃತಜ್ಞತೆಯ ಭಾವನೆಯೊಂದಿಗೆ, ಇಂದು ನಾನು ನಿಮ್ಮನ್ನುದ್ದೇಶಿಸಿ ಮಾತನಾಡುತ್ತಿದ್ದೇನೆ. ಇದೊಂದು ಉತ್ತಮ ಮಟ್ಟದ ಕೆಲಸವೆಂದು ನನ್ನ ಭಾವನೆ. ಅವರು ಇದುವರೆಗೂ ಮಾಡುತ್ತ ಬಂದಿರುವ ಕಾರ್ಯವು ಸುಲಭವಾಗಿ ಪ್ರಗತಿಯನ್ನು...