1. ಧರ್ಮ
ಮಾನವ ಜನಾಂಗದ ಉದಯವಾದಂದಿನಿಂದ ದೇವರನ್ನು ಪೂಜಿಸುವುದು ಬಾಹ್ಯ ದೃಶ್ಯಗಳ ಹಿಂದಿರುವ ರಹಸ್ಯಗಳನ್ನು ಕಂಡುಹಿಡಿಯುವುದು ಹಾಗೂ ಮೂಲಸತ್ಯವನ್ನು ಅರಿತುಕೊಳ್ಳುವುದು ಅದರ ಅನ್ವೇಷಣೆಯಾಗಿದೆ. ಇಂತಿದು ಧರ್ಮದ ಜನನ. ಪೂಜಕನು ಸ್ವರ್ಗದ ಶಾಶ್ವತಾನಂದವನ್ನಾಗಲಿ ಇಂತಹ ಯಾವುದಾದರೊಂದು ದೃಷ್ಟಿಕೋನವನ್ನಾಗಲಿ ತನ್ನ ಅಂತಿಮ ದ್ಯೇಯವನ್ನಾಗಿ ಇಟ್ಟುಕೊಳ್ಳುವನು. ಈ ಪ್ರಕಾರ ಆಯಾ ಹಿರಿಯ ಧರ್ಮ ಸಂಸ್ಥಾಪಕರ...