11 ಅಭ್ಯಾಸಿ

ಅಭ್ಯಾಸ ಎಂದರೆ ಒಂದು ಉದ್ದೇಶವನ್ನು ಸಾಧಿಸಲು ತಿಳಿದು ಮಾಡುವ ಪ್ರಯತ್ನ. ಯಾರು ತನ್ನ ನಿರ್ಧಿಷ್ಟವಾದ ಗುರಿಯನ್ನು ಸಾಧಿಸಲು ಪ್ರಯತ್ನದಲ್ಲಿದ್ದು ಅದರಲ್ಲಿಯೇ ಮುಳುಗಿರುವನೋ ಅವನೇ ಅಭ್ಯಾಸಿ. ಅಭ್ಯಾಸವೆಂಬುವ ಶಬ್ದವನ್ನು ನಾವು ಚಿಕ್ಕಂದಿನಿಂದಲೇ ಕೇಳುತ್ತಾ ಬಂದಿರುವೆವು. ವಿಶೇಷವಾಗಿ ಶಾಲಾ ಕಾಲೇಜುಗಳಲ್ಲಿ ಓದುವಾಗ ಇದರ ಬಳಕೆ ಆಗುತ್ತಿತ್ತು. ಆಗ ನಮ್ಮೆದುರಿಗೆ ಉತ್ತೀರ್ಣ...

12 ಸಮಾರಂಭಗಳು

ಅಧ್ಯಾತ್ಮಿಕ ಜೀವನದಲ್ಲಿ ಸಮಾರಂಭಗಳು ಒಂದು ವಿಶೇಷವಾದ ಮಹತ್ವವನ್ನು ಪಡೆದಿವೆ. ಇವು ಸಾಮಾನ್ಯವಾಗಿ ಆಚರಿಸುವ ಹಬ್ಬ ಅಥವಾ ಉತ್ಸವಗಳಾಗಿರದೆ ನಮ್ಮ ಜೀವನ ಮತ್ತು ಇರುವಿಕೆಯನ್ನು ಮಾರ್ಪಾಡಿಸುವದಕ್ಕೆ ನಮ್ಮ ಗುರುಗಳು ಮಾಡಿಕೊಟ್ಟಿರುವ ಒಂದು ಸದಾವಕಾಶದ ತರಬೇತಿಯ ದಿನಗಳು. ನಿಜವಾದ ಅರ್ಥದಲ್ಲಿ ಇವು ಹಬ್ಬಗಳಂತೆ ಇದ್ದು ಉದ್ದೇಶ ಬಹಳ ಉಚ್ಚತಮವಾಗಿರುತ್ತದೆ. ಇಲ್ಲಿ...

13 ತರಬೇತಿ

ಸಾಹಿತ್ಯದ ಪ್ರಕಾರ, ತರಬೇತಿಯು ಒಂದು ಕ್ರಿಯೆಯಾಗಿದ್ದು, ಜ್ಞಾನ ಮತ್ತು ನೈಪುಣ್ಯತೆಯನ್ನು ನೀಡುವ ಕಲೆ ಅಥವಾ ವಿಧಾನವಾಗಿದೆ. ಇದು ನಿರ್ಧಿಷ್ಟವಾಗಿದ್ದು ಒಬ್ಬನ ಸಾಮರ್ಥ್ಯ, ಯೋಗ್ಯತೆ ಮತ್ತು ಕಾರ್ಯಾಚರಣೆಯನ್ನು ಸುಧಾರಿಸುವದಾಗಿದೆ. ಇದು ನಮ್ಮ ಜೀವನದ ಪ್ರತಿಯೊಂದು ಮುಖದಲ್ಲೂ ಅತ್ಯಾವಶ್ಯಕವಾಗಿದೆ. ಸಾಮಾನ್ಯ ಮನುಷ್ಯನಿಗೂ ಸಹ ಹೊಟ್ಟೆ ತುಂಬಿಸಿಕೊಳ್ಳಲು ಒಂದು ರೀತಿಯ ತರಬೇತಿಯು...

14 ನೈಜ ಅಭ್ಯಾಸಿ-ಗ್ರಹಿಕೆ ಮತ್ತು ಮಹತ್ವ

ವಾಸ್ತವಿಕವಾಗಿ ನೈಜ ಅಭ್ಯಾಸಿ ಎಂಬುದು ಎರಡು ಶಬ್ದಗಳನ್ನೊಳಗೊಂಡ ಒಂದು ಪದ ಸಮೂಹ. ಅಭ್ಯಾಸಿ ಮತ್ತು ಅದಕ್ಕೆ ಹೊಂದಿದ ವಿಶೇಷಣ. ಇದು ಎಪ್ರಿಲ್ 2001ರಿಂದ ಬಳಕೆಯಲ್ಲಿದೆ. ನಮ್ಮ ಸಮಾರಂಭಗಳ ಆಮಂತ್ರಣ ಪತ್ರಗಳಲ್ಲಿ ಕಾಣಿಸತೊಡಗಿದೆ. ಅಂತಿಮವಾಗಿ ರಾಯಚೂರಿನ ಸೆಮಿನಾರ್‌ನಲ್ಲಿ ಚರ್ಚೆಯ ವಿಷಯವಾಯಿತು. ಇದು ನಮ್ಮೊಂದಿಗೆ ಶಾಶ್ವತವಾಗಿರಲು ಬಂದಂತೆ ಕಾಣಿಸುತ್ತದೆ. ಇದನ್ನು...

15 ಸರಳ ಜೀವನ ಮತ್ತು ಸಹಜ ಮಾರ್ಗದ ಸಹಾಯ

ಇಂದಿನ ಜೀವನವು ಬಿಡುವಿಲ್ಲದ್ದು, ಶೀಘ್ರ ಮತ್ತು ಸ್ಪರ್ಧಾತ್ಮಕ ಹೋರಾಟದಿಂದ ಕೂಡಿದೆ. ಸ್ವಾರ್ಥತೆ, ಪ್ರಾಪಂಚಿಕತೆ, ಭೋಗಾಸಕ್ತ ಪ್ರವೃತ್ತಿಗಳು (ಭೌತಿಕ, ಮಾನಸಿಕ, ಲೈಂಗಿಕ) ಮುಂಚೂಣಿಯಲ್ಲಿವೆ. ಜೀವನವು ಆತಂಕ, ಒತ್ತಡ, ಅಸೂಯೆ, ಆಯಾಸ, ಚಿಂತೆ ಮತ್ತು ಕೋಭೆಗಳಿಂದ ದುಃಖಮಯವಾಗಿ ಅದು ಮಧುಮೇಹ, ರಕ್ತದ ಒತ್ತಡ, ಅಸ್ತಮಾ ಹಾಗು ಕ್ಯಾನ್ಸರ್‌ಗಳಂತಹ ರೋಗಗಳಿಗೆ ಬಲಿಪಶುವಾಗಿದೆ....

16 ಪ್ರಾಣಾಹುತಿ

ಹುಟ್ಟಿದ ತಕ್ಷಣ ಮಗು ಅಳುತ್ತದೆ. ಇದು ಪ್ರಾಣ(ಚೈತನ್ಯ)ದ ಮೊದಲ ಸಂಕೇತವಾಗಿದೆ. ಅದು ಬೇಳವಣಿಗೆ ಹಾಗು ಚಲನೆಯನ್ನು ಪ್ರಚೋದಿಸುತ್ತದೆ. ಮಗು ಸ್ವಾಭಾವಿಕವಾಗಿ ಪರಿಸರವನ್ನು ಅನ್ವೇಷಣೆ(ಅಧ್ಯಯನ) ಮಾಡತೊಡಗುತ್ತದೆ. ಸ್ವಾದ (ರುಚಿ)ದಿಂದ ಆರಂಭವಾಗಿ ದೃಷ್ಟಿ, ಶ್ರವಣ, ಸ್ಪರ್ಶ ಇತ್ಯಾದಿಗಳ ಕಡೆಗೆ ಮುಂದುವರೆಯುತ್ತದೆ. ತಾನು ಏನನ್ನು ಅಧ್ಯಯನ ಮಾಡುತ್ತಿದ್ದೇನೆಂಬುದರ ಅರಿವು ಮಗುವಿಗೆ ಇರುವದಿಲ್ಲ....

17 ಶುದ್ಧತೆ

“ನಾವೆಲ್ಲರೂ ಬೌದ್ಧಿಕವಾಗಿ, ನೈತಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಮಾನವ ಜೀವನದ ಮುಖ್ಯ ಗುರಿಯೊಂದಿಗೆ ಜೋಡಿಸಿದ(ಹೊಂದಿಸಿದ) ಸಹೋದರರಾಗಿದ್ದೇವೆ. ಅದನ್ನು ಹೊರತು ಪಡಿಸಿ ಬೇರೇನೂ ಉಳಿದಿಲ್ಲ. ಆತನ ಕಾರ್ಯ ಮತ್ತು ಪರಿಸರಗಳಲ್ಲಿ ಪರಿಶುದ್ಧತೆ ಮಾತ್ರ ಉಳಿದಿದೆ. ಅದುವೇ ಜನರ ಆಧ್ಯಾತ್ಮಿಕ ಅದೃಷ್ಟವನ್ನು ಅಂತಿಮ ಸತ್ಯದೊಂದಿಗೆ ಹೆಣೆದಿರುತ್ತದೆ”. (ಗುರುಮಹರಾಜರ ಸಂದೇಶ) ಮೇಲಿನ ಸಂದೇಶದ...

18 ಆವರಣದ ಅನಾವರಣ

“ವಸ್ತುತಃ ನಿಜವಾದ ಗುರುವು ಆತನ ಅಂತರಾತ್ಮವೇ ವಿನಃ ಬಾಹ್ಯ ಸ್ವರೂಪವಲ್ಲ. ಆದರೂ ರೂಪವನ್ನು ಸಂಪೂರ್ಣವಾಗಿ ದುರ್ಲಕ್ಷಿಸುವದು ಸಾಧ್ಯವಿಲ್ಲ. ಆದರೆ ಯಾರು ಭೌತಿಕ ರೂಪವೇ ಗುರುವೆಂಬ ಕಲ್ಪನೆಗೆ ಅಂಟಿಕೊಳ್ಳುವರೋ ಅವರು ಸ್ಕೂಲತೆಯ ಜಾಲದಲ್ಲಿ ಸಿಕ್ಕು ಗೊಂದಲದಲ್ಲಿ ಬೀಳುವರು”. ಸತ್ಯೋದಯ-ಪ-82 ಪದ್ಧತಿಯ ಕಾರ್ಯ ವಿಧಾನ :- ಈ ಪದ್ಧತಿಯು ಜೀವನದ...

19 ವೈಮನಸ್ಸು (ಸಂಘರ್ಷಣೆ)

ಶ್ರೀ ಬಾಬೂಜಿ ಮಹರಾಜರ ಹೇಳಿಕೆಯ ಪ್ರಕಾರ “ಯಾವುದೇ ಸಂಸ್ಥೆಯಲ್ಲಿ ವೈಮನಸ್ಸು ಉಂಟಾದರೆ ಹಾಲಿನಲ್ಲಿ ಹುಳಿ ಹಾಕಿದಂತೆ” ಆಧ್ಯಾತ್ಮ ಜೀವನದಲ್ಲಿ ವೈಮನಸ್ಸು ಎಂಬುವದು ಒಂದು ವಿಷಕಾರಿ ಅನಿಲದಂತೆ. ಅದು ಒಬ್ಬನ ಪ್ರಗತಿಯ ಪಥವನ್ನು ತಡೆಯುವದಲ್ಲದೆ, ಪೂರ್ಣ ಕೇಂದ್ರದ ವಾತಾವರಣವನ್ನೇ ಕಲುಷಿತಗೊಳಿಸಿ, ಎಲ್ಲ ಆಧ್ಯಾತ್ಮಿಕ ಸೌಂದರ್ಯವನ್ನು ಕೆಡಿಸುತ್ತದೆ. ವಾಸ್ತವವಾಗಿ, ಶುದ್ಧತೆಯಲ್ಲಿ...

20 ಯೋಗ

ಈ ಆಧುನಿಕ ಯುಗದಲ್ಲಿ ಯೋಗವೆಂದರೆ ಕೇವಲ ಆಸನಗಳನ್ನು ಹಾಕುವದು ಮತ್ತು ಪ್ರಾಣಾಯಾಮ ಮಾಡಿ ಕೆಲವು ರೋಗ ರುಜಿನಗಳನ್ನು ಗುಣಪಡಿಸುವದು ಹಾಗು ದೇಹವನ್ನು ಆರೊಗ್ಯವನ್ನಾಗಿ ಮಾಡುವದು ಅಷ್ಟೇ ಎಂದು ತಿಳಿಯಲಾಗಿದೆ. ಇದೇ ನಮ್ಮ ಟಿವಿಗಳಲ್ಲಿ ಮತ್ತು ಆರೋಗ್ಯ ಶಿಬಿರಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಬಹಳ ಪ್ರಚಲಿತವಾಗಿ ಇನ್ನೂ ಹೆಚ್ಚು...